ನೀವು ಆದಾಯ ತೆರಿಗೆ ಪಾವತಿಸುತ್ತಿರಾ? ಹಾಗಾದ್ರೆ ಕೂಡಲೇ ಈ ನಿಯಮ ಪಾಲನೆ ಮಾಡಿ ಇಲ್ಲವಾದರೆ ದಂಡ ಕಟ್ಟುವುದರ ಜೊತೆಗೆ ಪಾನ್ ಕಾರ್ಡ್ ರದ್ದಾಗುತ್ತೆ…

0
355

ಸುಪ್ರೀಂ ಕೋರ್ಟ್ ಐಟಿ ರಿಟರ್ನ್ಸ್ ಪಾವತಿ ಮಾಡಲು 2018-19 ಸಾಲಿಗೆ ಆಧಾರ್ ಕಡ್ಡಾಯ ಮಾಡಿ ಆದೇಶ ನೀಡಿದೆ. ಈ ಹಿಂದೆ ದೆಹಲಿ ಹೈಕೋರ್ಟ್ ಐಟಿ ರಿಟರ್ನ್ಸ್ ಸಲ್ಲಿಕೆಗೆ ಆಧಾರ್ ಕಡ್ಡಾಯವಲ್ಲ ಎಂದು ಆದೇಶ ನೀಡಿತ್ತು. ಈ ಆದೇಶವನ್ನು ಪ್ರಶ್ನಿಸಿ ಕೇಂದ್ರ ಸರ್ಕಾರ ಸುಪ್ರೀಂ ಕೋರ್ಟ್ ನಲ್ಲಿ ಮೇಲ್ಮನವಿ ಸಲ್ಲಿಸಿತ್ತು. ಸರ್ಕಾರದ ಅರ್ಜಿಯನ್ನು ವಿಚಾರಣೆ ನಡೆಸಿದ ಸುಪ್ರೀಂ ಕೋರ್ಟ್ ಈ ಆದೇಶವನ್ನು ಹೊರಡಿಸಿದೆ. ಅದರಂತೆ ಆದಾಯ ತೆರಿಗೆ ರಿಟರ್ನ್ಸ್ ಸಲ್ಲಿಸುವಾಗ ಹಾಗೂ ಪಾನ್ ಕಾರ್ಡ್‌ಗೆ ಅರ್ಜಿ ಸಲ್ಲಿಸುವಾಗ ಆಧಾರ್ ಕಾರ್ಡ್‌ ಅನ್ನು ಕಡ್ಡಾಯಗೊಳಿಸುವುದನ್ನು ಸರಕಾರ ಪ್ರಸ್ತಾಪಿಸಿದೆ.

Also read: ದೋಸ್ತಿ ಸರ್ಕಾರದಿಂದ 2019-20 ರ ಬಜೆಟ್ ಮಂಡನೆ; ಯಾವುದಕ್ಕೆ ಎಷ್ಟು ಹಣ? ಸಂಪೂರ್ಣ ಬಜೆಟ್​ ಹೈಲೈಟ್ಸ್​ ಇಲ್ಲಿದೆ..

ಹೌದು ನೀವು ಆದಾಯ ತೆರಿಗೆ ಪಾವತಿಸುತ್ತಿದ್ದರೆ ಪಾನ್ ಕಾರ್ಡ್ ಇರಲೇಬೇಕು. ಇತ್ತೀಚೆಗಷ್ಟೇ ಆದಾಯ ತೆರಿಗೆ ಇಲಾಖೆ ತೆರಿಗೆ ಪಾವತಿಸಲು ಹಾಗೂ ಮರುಪಾವತಿ ವಿವರ ತಿಳಿಯಲು ಮೊಬೈಲ್ ಆ್ಯಪ್ ಬಿಡುಗಡೆ ಮಾಡಿತ್ತು. ಆಧಾರ್‌ ಬಯೋಮೆಟ್ರಿಕ್‌ ಬಳಸಿಕೊಂಡು ಕಾಯಂ ಖಾತೆ ಸಂಖ್ಯೆ (ಪಾನ್‌) ಗಳನ್ನು ನೀಡುವ ಬಗ್ಗೆಯೂ ಪರಿಶೀಲಿಸಲಾಗುತ್ತಿದೆ ಎಂದು ಐಟಿ ಇಲಾಖೆ ಹೇಳಿತ್ತು. ಭಾರತೀಯ ಸರ್ಕಾರವು ಭಾರತೀಯ ಪ್ರಜೆಗಳಿಗೆ ಸೂಚಿಸಿರುವ ಆಧಾರ್ ಮತ್ತು ಪಾನ್ ಲಿಂಕ್ ಮಾಡುವ ಪ್ರಕ್ರಿಯೆಯು ಕಾನೂನಾತ್ಮಕವಾಗಿದೆ ಮತ್ತು ಈ ಪ್ರಕ್ರಿಯೆಗೆ ಕಾನೂನಿನ ಮಾನ್ಯತೆಯನ್ನು ನೀಡಲಾಗುತ್ತಿದೆ ಎಂದು ಸುಪ್ರೀಂಕೋರ್ಟ್ ನ ಈ ಪೀಠವು ತಿಳಿಸಿದೆ. ಆದಾಯ ತೆರಿಗೆ ಕಾಯಿದೆಯ 139 ಎಎ ಸೆಕ್ಷನ್ ಅಡಿಯಲ್ಲಿ ಇದು ಕಾನೂನಾತ್ಮಕವಾಗಿದೆ ಎಂಬುದನ್ನು ಎತ್ತಿ ಹಿಡಿದಿದೆ.

ಈ ನಿಯಮ ಜಾರಿಯಾದದ್ದು ಯಾವಾಗೆ?

Also read: ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ನಿಧಿ ಯೋಜನೆಯಲ್ಲಿ ರೈತರ ಖಾತೆಗೆ ವಾರ್ಷಿಕ 6 ಸಾವಿರ ರೂ. ಯಾರಿಗೆ ಸಿಗುತ್ತೆ? ಯಾರಿಗಿಲ್ಲ?

ಭಾರತ ಸರ್ಕಾರವು 139ಎಎ ಅಡಿಯ ಆದಾಯ ತೆರಿಗೆ ಆಕ್ಟ್ ನಂತೆ ಆಧಾರ್ ಕಾರ್ಡ್ ಮತ್ತು ಪಾನ್ ಕಾರ್ಡ್ ಗಳನ್ನು ಲಿಂಕ್ ಮಾಡುವಂತೆ ಸೂಚಿಸಿತ್ತು ಮತ್ತು ಅದಕ್ಕೆ ಜುಲೈ 31,2017 ನ್ನು ಕೊನೆಯ ದಿನಾಂಕವೆಂದು ಘೋಷಿಸಿತ್ತು. ಆದರೆ ಈ ವಿಚಾರವನ್ನು ಸುಪ್ರೀಂಕೋರ್ಟ್ ನಲ್ಲಿ ಪ್ರಶ್ನಿಸಲಾಗಿತ್ತು. ಇದು ಸುಪ್ರೀಂಕೋರ್ಟ್ ನ ದೊಡ್ಡ ಆಧಾರ್ ಸಂಬಂಧಿತ ಕೇಸ್ ಎಂದು ಪರಿಗಣಿಸಲಾಯಿತು. ಅದರ ನಂತರ ಆಧಾರ್ ಸಂಬಂಧಿತ ಈ ಕೇಸಿನ ವಿಚಾರಣೆಯು ನಡೆಯುತ್ತಲೇ ಇತ್ತು. ಹಾಗಾಗಿ ಸರ್ಕಾರವು ಈ ಅಂತಿಮ ದಿನಾಂಕವನ್ನು ಆಗಾಗ ಬದಲಿಸುತ್ತಲೇ ಬಂದಿತ್ತು. ಆದರೆ ಇದೀಗ ಆಧಾರ್ ಮತ್ತು ಪಾನ್ ಕಾರ್ಡ್ ಲಿಂಕ್ ಮಾಡುವ ಪ್ರಕ್ರಿಯೆಗೆ ಅಂತಿಮ ದಿನಾಂಕವನ್ನು ಪ್ರಕಟಿಸಲಾಗಿದೆ.

ಇದುವರೆಗೆ 111 ಕೋಟಿ ಆಧಾರ್ ಸಂಖ್ಯೆಗಳನ್ನು ನೀಡಲಾಗಿದೆ. ಹೊಸ ಮೊಬೈಲ್ ಸಿಮ್‌ ಕಾರ್ಡ್‌ ಪಡೆಯಲು, ಬ್ಯಾಂಕ್ ಖಾತೆ ತೆರೆಯಲು, ಸಬ್ಸಿಡಿ ವರ್ಗಾವಣೆ, ಬಯೋಮೆಟ್ರಿಕ್ ಆಧರಿತ ಡಿಜಿಟಲ್ ಪಾವತಿ ವ್ಯವಸ್ಥೆಗೂ ವಿಶಿಷ್ಟ ಗುರುತಿನ ಸಂಖ್ಯೆಯನ್ನು (ಆಧಾರ್) ಬಳಸಲಾಗುತ್ತಿದೆ. ಸರಕಾರದ ಅಂದಾಜಿನಂತೆ ಪ್ರತಿವರ್ಷ 2.5 ಕೋಟಿ ಜನರು ಪಾನ್‌ ಕಾರ್ಡ್‌ಗಳಿಗೆ ಅರ್ಜಿ ಸಲ್ಲಿಸುತ್ತಾರೆ. ಈಗಾಗಲೇ ದೇಶದಲ್ಲಿ 25 ಕೋಟಿ ಪಾನ್ ಕಾರ್ಡ್‌ ಹೊಂದಿದವರಿದ್ದಾರೆ.

ಮಾರ್ಚ್ 31,2019 ಕೊನೆಯ ದಿನಾಂಕ:

Also read: BHEL -ನಲ್ಲಿ ಇಂಜಿನಿಯರ್ ಮತ್ತು ಮೇಲ್ವಿಚಾರಕ ಹುದ್ದೆಗಳಿಗೆ ನೇಮಕಾತಿ ಪ್ರಕಟಣೆ..

ಸುಪ್ರೀಂ ಕೋರ್ಟ್ ಆಧಾರ್ ಕಾರ್ಡಿಗೆ ಇರುವ ಸಂವಿಧಾನಿಕ ಮಾನ್ಯತೆಯನ್ನು ಸೆಪ್ಟೆಂಬರ್ ತೀರ್ಪಿನಲ್ಲಿ ಎತ್ತಿ ಹಿಡಿದಿತ್ತು. ಆದರೂ ಬ್ಯಾಂಕ್ ಖಾತೆ, ಮೊಬೈಲ್ ಫೋನ್ ಮತ್ತು ಶಾಲಾ ಪ್ರವೇಶಕ್ಕೆ ಆಧಾರ್ ಕಾರ್ಡ್ ಕಡ್ಡಾಯವಲ್ಲ ಎಂದು ಹೇಳಿತ್ತು. ಆದರೆ ಈಗ ನ್ಯಾಯಾಲಯ ಐಟಿ ರಿಟರ್ನ್ಸ್ ಸಲ್ಲಿಕೆ ಮಾಡಲು ವೈಯಕ್ತಿಕ ಆಧಾರ್ ಸಂಖ್ಯೆಯನ್ನು ಒದಗಿಸುವುದನ್ನು ಕಡ್ಡಾಯ ಮಾಡಿದೆ. ಅದರಂತೆ ಆಧಾರ್ ಕಾರ್ಡನ್ನು ಪಾನ್ ಕಾರ್ಡಿಗೆ ಲಿಂಕ್ ಮಾಡಲು 2019 ಮಾರ್ಚ್ 31 ರವರೆಗೂ ಸಮಯಾವಕಾಶವನ್ನು ನೀಡಿದೆ. 2018 ಏಪ್ರಿಲ್ 1 ರಂದು ಸರ್ಕಾರದ ನೀಡಿದ್ದ ಆದೇಶದ ಅನ್ವಯ ಐಟಿ ರಿಟರ್ನ್ಸ್ ಸಲ್ಲಿಕೆ ವಿಳಂಬವಾದರೆ ಕನಿಷ್ಠ 10 ಸಾವಿರ ರೂ. ಶುಲ್ಕವನ್ನು ವಿಧಿಸಬಹುದಾಗಿದೆ. ಅಲ್ಲದೇ ಆದಾಯ ತೆರಿಗೆ ಇಲಾಖೆ ಐಟಿ ರಿಟರ್ನ್ಸ್ ಸಲ್ಲಿಸದವರಿಗೆ ಸೆಕ್ಷನ್ 142(1) ಅನ್ವಯ ನೋಟಿಸ್ ಕಳುಹಿಸಲು ಅವಕಾಶವಿದೆ.