ಮದುವೆ ಮನೆಯ ರುಚಿ ರುಚಿಯಾದ ಖಾರದ ಸಾರು ತಯಾರಿಸುವ ವಿಧಾನ..

0
983

ಮದುವೆ ಅಥವಾ ಯಾವುದೇ ದೊಡ್ಡ ಕಾರ್ಯಕ್ರಮಗಳಿಂದ ಹಿಡಿದು ಪ್ರತಿನಿತ್ಯವೂ ರುಚಿ ರುಚಿಯಾದ ಸಾರು ಬೇಕೇಬೇಕು. ಖಾರದ ಸಾರನ್ನು ಮದುವೆಯ ಊಟದಲ್ಲಿ ರುಚಿ ನೋಡಿರುತ್ತೀರ, ನಾವು ಈ ತರಹದ ಸಾರನ್ನು ಹೇಗೆ ತಯಾರಿಸುವುದು ತಿಳಿದಿರುವುದಿಲ್ಲ. ಆದರೆ ಖಾರದ ಸಾರು ಮತ್ತೆ ಮತ್ತೆ ಬೇಕು ಅನ್ಸುತ್ತೆ ಇದನ್ನು ಮಾಡವುದು ಮಾತ್ರ ಕಷ್ಟವಾಗಿರುತ್ತೆ ಅದಕ್ಕಾಗಿ ಅಡುಗೆ ಭಟ್ಟರ ಮಾಹಿತಿ ಕೇಳಿದರು ಸರಿಯಾದ ಮಾಹಿತಿ ಸಿಗುವುದಿಲ್ಲ. ಆದಕಾರಣ ನಾವು ನಿಮಗಾಗಿ ಸರಳವಾಗಿ ಖಾರದ ಸಾರು ತಯಾರಿಸುವ ವಿಧಾನವನ್ನು ತಿಳಿಸಲಾಗಿದ್ದು ಮಾಹಿತಿ ಇಲ್ಲಿದೆ ನೋಡಿ.


Also read: ಮಶ್ರೂಮ್ ಪಲಾವ್ ತಯಾರಿಸುವ ವಿಧಾನ..

ಬೇಕಾಗುವ ಪದಾರ್ಥಗಳು:

ಒಂದು ಚಮಚ ಸಾರಿನ ಪುಡಿ, 50 ಗ್ರಾಂ. ಧನಿಯ, 1 ½ ಟೀ ಚಮಚ ಜೀರಿಗೆ, ½ ಟೀ ಚಮಚ ಮೆಂತೆ, ½ ಟೀ ಚಮಚ ಕಾಳು ಮೆಣಸು, ¼ ಚಮಚ ಸಾಸಿವೆ, 25 ಗ್ರಾಂ. ಒಣ ಮೆಣಸಿನ ಕಾಯಿ, 3 ಚಿಟಿಕೆ ಇಂಗು, ಒಂದು ಚಮಚ ಎಣ್ಣೆ, 2 ಕಪ್ ತೊಗರಿ ಬೇಳೆ, ಸ್ವಲ್ಪ ಅರಿಶಿನ, ಒಂದು ಟೊಮ್ಯಾಟೋ, ¼ ಚಮಚ, ಎಣ್ಣೆ – 1 ಚಮಚ, ಹುಣಿಸೆ ರಸ, ಸ್ವಲ್ಪ ಬೆಲ್ಲ, ರುಚಿಗೆ ತಕ್ಕಷ್ಟು ಉಪ್ಪು 3 ಎಸಳು ಕೊತ್ತಂಬರಿ ಸೊಪ್ಪು. ಒಗ್ಗರಣೆಗೆ : ತುಪ್ಪ ಅಥವಾ ಎಣ್ಣೆ – 2 ಚಮಚ, ಸಾಸಿವೆ – 1 ಚಮಚ, ಕರಿಬೇವಿನ ಸೊಪ್ಪು – 5 – 6 ಎಸಳು, ಒಣ ಮೆಣಸಿನ ಕಾಯಿ – 4 ಅಥವಾ 5 ತುಂಡುಗಳು.


Also read: ಹೆಚ್ಚು ರುಚಿಯಾಗಿರುವ ಚಿಕನ್ ಪ್ರೈ ಮಾಡುವ ಸುಲಭ ವಿಧಾನ ನಿಮಗಾಗಿ..

ತಯಾರಿಸುವ ವಿಧಾನ:

ಬಾಣಲೆಗೆ ಎಣ್ಣೆ ಹಾಕಿ. ಎಣ್ಣೆ ಬಿಸಿಯಾದ ನಂತರ ಮೇಲೆ ಹೇಳಿದ ಎಲ್ಲಾ ಸಾಮಗ್ರಿಗಳನ್ನು ಹಾಕಿ (ಇಂಗನ್ನು ಬಿಟ್ಟು) ಕೆಂಪಗಾಗುವಂತೆ ಹುರಿಯಿರಿ. ಬಾಣಲೆ ಕೆಳಗಿಳಿಸಿದ ನಂತರ ಇಂಗನ್ನು ಹಾಕಿ ಒಮ್ಮೆ ಮೊಗೆಚಿ. ಮಸಾಲೆ ತಣ್ಣಗಾದ ನಂತರ ಮಿಕ್ಸಿಗೆ ಹಾಕಿ ನುಣ್ಣಗೆ ಪುಡಿ ಮಾಡಿಕೊಳ್ಳಿ. ಈ ಪುಡಿಯನ್ನು ಕೆಲವು ದಿನಗಳು ಇಟ್ಟು ಉಪಯೋಗಿಸಬಹುದು.
ಸಾರು ಮಾಡುವ ವಿಧಾನ:


Also read: ಚಿಕನ್ ಪ್ರಿಯರಿಗೆ ಇಷ್ಟವಾದ ಚಿಕನ್ ಸ್ಟಿಕ್ ಮಾಡುವ ವಿಧಾನ..

  • ಹುಣಿಸೆ ಹಣ್ಣನ್ನು ನೆನೆಯಲು ಇಡಿ. ಕುಕ್ಕರಿನಲ್ಲಿ ನೀರು ಹಾಕಿ ತೊಗರಿ ಬೇಳೆ, ಟೊಮ್ಯಾಟೋ, ಅರಿಶಿನ ಮತ್ತು ಎಣ್ಣೆ ಹಾಕಿ ಬೇಯಲು ಇಡಿ. 3 ಅಥವಾ 4 ಕೂಗು ಬಂದೊಡನೆ ಕುಕ್ಕರನ್ನು ಇಳಿಸಿ.
  • ಒಂದು ಅಗಲ ಬಾಯಿಯ ಪಾತ್ರೆಗೆ 3 ಚಮಚ ಸಾರಿನ ಪುಡಿ, ಬೆಲ್ಲ ಮತ್ತು ಉಪ್ಪು ಹಾಕಿ. ಕುಕ್ಕರಿನಿಂದ ಬೆಂದ ಟೊಮ್ಯಾಟೋವನ್ನು ತೆಗೆದು ಚೆನ್ನಾಗಿ ಕಿವುಚಿ ಬೆರೆಸಿ. ಹುಣಸೆ ಹಣ್ಣನ್ನು ಕಿವುಚಿ ರಸವನ್ನೂ ಸಹ ಬೆರೆಸಿ. ಈ ಮಿಶ್ರಣಕ್ಕೆ ½ ಲೀಟರ್ ನೀರನ್ನು ಹಾಕಿ.
  • ನಂತರ ಒಗ್ಗರಣೆಗೆ ಹೇಳಿದ ಪದಾರ್ಥಗಳನ್ನೆಲ್ಲ ಹಾಕಿ ಒಗ್ಗರಣೆ ಮಾಡಿ. ಈಗ ಈ ಮಿಶ್ರಣವನ್ನು ಕುದಿಯಲು ಇಡಿ.
  • ಒಂದು ಕುದಿ ಬಂದನಂತರ 10 ನಿಮಿಷ ಸಣ್ಣ ಉರಿಯಲ್ಲಿ ಚೆನ್ನಾಗಿ ಕುದಿಸಿ. ನಂತರ ಬೆಂದ ಬೇಳೆಯನ್ನು ಸ್ಮ್ಯಾಶ್ ಮಾಡಿ ಬೆರೆಸಿ.
  • ಅಳತೆಗೆ ತಕ್ಕಷ್ಟು ನೀರನ್ನು ಹಾಕಿ ಚೆನ್ನಾಗಿ ಕುದಿಸಿದ ನಂತರ ಕೆಳಗಿಳಿಸಿ. ಸಣ್ಣಗೆ ಹೆಚ್ಚಿದ ಕೊತ್ತಂಬರಿ ಸೊಪ್ಪನ್ನು ಹಾಕಿ. ಬಿಸಿ ಬಿಸಿ ಅನ್ನದೊಂದಿಗೆ ಸಾರು, ತುಪ್ಪ ಹಾಕಿಕೊಂಡು ಬಾಳಕದ ಮೆಣಸಿನಕಾಯಿ ನೆಂಜಿಕೊಂಡು ಊಟಮಾಡಲು ಸೊಗಸಾಗಿರುತ್ತದೆ.