ಇರಾನ್-ನಿಂದ ಭಾರತ ತೈಲ ಆಮದು ಮಾಡಿಕೊಳ್ಳಲು ವಿನಾಯಿತಿ ಕೊಟ್ಟ ಅಮೇರಿಕ; ಇನ್ಮೇಲಾದ್ರು ಪೆಟ್ರೋಲ್ ಬೆಲೆ ಕಡಿಮೆಯಾಗುತ್ತ?

0
427

ಅಮೇರಿಕ ಇರಾನ್‌ ಮೇಲೆ ಮಾಡಿದ ನಿರ್ಬಂಧ ಜಾರಿಯಾದ ನಂತರವೂ ಭಾರತಕ್ಕೆ ತೈಲ ಖರೀದಿ ಮಾಡಲು ಅವಕಾಶ ನೀಡಲು ಅಮೆರಿಕ ಒಪ್ಪಿಕೊಂಡಿದೆ ಎಂದು ವರದಿಯಲ್ಲಿ ತಿಳಿದು ಬಂದಿದೆ. ಇದರಿಂದ ಭಾರತಕ್ಕೆ ತೈಲ ಬಿಕ್ಕಟ್ಟು ಎದುರಿಸುವ ತಲೆನೋವು ಸದ್ಯಕ್ಕೆ ದೂರವಾಗಿದೆ. ಜಪಾನ್, ದಕ್ಷಿಣ ಕೊರಿಯಾ ಭಾರತ ಒಳಗೊಂಡಂತೆ ಎಂಟು ದೇಶಗಳಿಗೆ ಅಮೆರಿಕ ತೈಲ ಖರೀದಿ ಮಾಡಲು ಅನುಮತಿ ನೀಡಿದೆ.


Also read: ಮೋದಿ ಸರ್ಕಾರ ಕೇಂದ್ರದ ಸಂಸ್ಥೆಗಳ ಸ್ವಾತಂತ್ರ್ಯಕ್ಕೆ ಧಕ್ಕೆ ತರುತ್ತಿದೆ, CBI ಆಯ್ತು ಈಗ RBI-ನಲ್ಲಿ ಉಂಟಾಗಿದ್ದ ಭಿನ್ನಪ್ರಾಯಕ್ಕೆ  ಗವರ್ನರ್‌ ಊರ್ಜಿತ್‌ ಪಟೇಲ್‌ ರಾಜೀನಾಮೆ ಸಾಧ್ಯತೆ..!

ಏನಿದು ನಿರ್ಬಂಧ?

ಇರಾನ್‌ನಲ್ಲಿ ಇಸ್ಲಾಮಿಕ್ ಸ್ಟೇಟ್‌ನ ಕಾರ್ಯಚಟುವಟಿಕೆಗಳು ಹೆಚ್ಚಾಗಿದ್ದು, ಅವರನ್ನು ನಿಯಂತ್ರಿಸಲು ಸರ್ಕಾರ ಯಾವುದೇ ಕ್ರಮ ತೆಗೆದುಕೊಳ್ಳುತ್ತಿಲ್ಲ. ಅಲ್ಲದೆ, ಅಣ್ವಸ್ತ್ರ ಚಟುವಟಿಕೆಗಳನ್ನು ಇರಾನ್ ಸ್ಥಗಿತಗೊಳಿಸುತ್ತಿಲ್ಲ. ವಿರೋಧದ ನಡುವೆಯೂ ಇರಾನ್ ಅಣ್ವಸ್ತ್ರ ಪ್ರಯೋಗಗಳನ್ನು ನಡೆಸಿತ್ತು. ಹೀಗಾಗಿ ಇರಾನ್ ಪರಮಾಣು ಒಪ್ಪಂದದಿಂದ ಅಮೆರಿಕ ಹೊರನಡೆದಿತ್ತು. 2015ರಿಂದಲೇ ಆಗಿನ ಅಧ್ಯಕ್ಷ ಬರಾಕ್ ಒಬಾಮ ಸರ್ಕಾರ ಮೊದಲ ಹಂತದ ನಿರ್ಬಂಧ ಜಾರಿ ಮಾಡಿತ್ತು ಅದೇ ನಿರ್ಬಂಧ ಮುಂದುವರೆಯಲಿದ್ದು ವಿಶ್ವದ ಯಾವುದೇ ರಾಷ್ಟ್ರ ಇರಾನ್‌ನೊಂದಿಗೆ ಯಾವುದೇ ತರಹದ ವಾಣಿಜ್ಯ ಸಂಬಂಧ ಹೊಂದಬಾರದು ಎಂಬುದು ಅಮೆರಿಕದ ಆಶಯವಾಗುತ್ತು. ಅಮೆರಿಕದ ಈ ಬಯಕೆ ಇರಾನ್ ತೈಲದ ಮೇಲೆ ಅವಲಂಬಿತವಾಗಿರುವ ಚೀನಾ ಮತ್ತು ಭಾರತದ ಮೇಲೆ ದುಷ್ಪರಿಣಾಮ ಬೀರುವ ಸಾಧ್ಯತೆಯೇ ಇತ್ತು.


Also read: ವರ್ಷಕೊಮ್ಮೆ ದರ್ಶನಕ್ಕೆ ತೆರೆಯುವ ಹಾಸನಾಂಬ ದೇವಾಲಯವು ಈ ವರ್ಷ 7 ದಿನವೂ 24 ಘಂಟೆ ದರ್ಶನಕ್ಕೆ ತೆರೆದಿರುತ್ತದೆ!!

ಅಮೇರಿಕದ ನಿರ್ಬಂಧಕ್ಕೆ ಭಾರತ ಇರಾನ್ ಜತೆ ಒಡನಾಟ ಬೆಳೆಸಲು ಸಾಧ್ಯತೆ ಇತ್ತ?

ಆದರೆ ಅಮೆರಿಕದ ನಿರ್ಬಂಧದ ಹೊರತಾಗಿಯೂ ಇರಾನ್‌ನಿಂದ ತೈಲ ಆಮದು ಮಾಡಿಕೊಳ್ಳುವುದಾಗಿ ಭಾರತ ಸಂಚು ನಡೆಸಿತ್ತು. ಮತ್ತು ಸೌದಿ ಅರೇಬಿಯಾದಿಂದ ತೈಲ ಆಮದು ಮಾಡಿಕೊಳ್ಳಲು ಭಾರತ ಮುಂದಾಗಿತ್ತು ಭಾರತ ಸೌದಿ ಜೊತೆ ಮಾತುಕತೆಯನ್ನೂ ನಡೆಸಿತ್ತು. ಸೌದಿ ಕೂಡ ತೈಲ ರಫ್ತಿಗೆ ಸಕಾರಾತ್ಮಕ ಪ್ರತಿಕ್ರಿಯೆ ನೀಡಿತ್ತು. ಇದರಿಂದ ಅಮೇರಿಕ ಭಾರತದ ಸಂಬಂಧಕ್ಕೆ ಹುಳಿ ಬಿಳ್ಳುವ ಸಾಧ್ಯತೆ ಇತ್ತು. ಏನೆ ಆದರೂ ಈ ಮೊದಲಿನ ಪ್ರಮಾಣದಲ್ಲಿ ಭಾರತ ಇರಾನ್‌ನಿಂದ ತೈಲ ಆಮದು ಮಾಡಿಕೊಳ್ಳಲು ಸಾಧ್ಯವಿಲ್ಲ ಎಂಬುದು ತಜ್ಞರ ಅಭಿಪ್ರಾಯವಾಗಿತ್ತು.


Also read: ನವೆಂಬರ್-ನಲ್ಲಿ ಬ್ಯಾಂಕ್-ಗಳು 11 ದಿನ ರಜೆಯಲ್ಲಿ ಇರುತ್ತವೆ, ಈ ರೀತಿಯಾಗಿ ನೀವು ಪ್ಲಾನ್ ಮಾಡಲಿಲ್ಲ ಅಂದ್ರೆ ಪಜೀತಿ ಅನುಭವಿಸುತ್ತೀರ!

ವಿನಾಯಿತಿ ಹೇಗೆ?

ಇರಾನ್‌ನ ಆರ್ಥಿಕತೆಯ ಎಲ್ಲ ಮಾರ್ಗಗಳನ್ನು ಬಂದ್ ಮಾಡುವ ಗುರಿ ಹೊಂದಿರುವ ಟ್ರಂಪ್ ಆಡಳಿತ, ತೈಲಕ್ಕೆ ಅಧಿಕ ಬೆಲೆ ತೆರದೆ ಆಮದು ಮಾಡಿಕೊಳ್ಳಲು ಕೆಲವು ದೇಶಗಳಿಗೆ ನೀಡಿದ ವಿನಾಯಿತಿ ಕೇವಲ ತಾತ್ಕಾಲಿಕವಾಗಿದ್ದು ಇರಾನ್ ಮೇಲಿನ ನಿರ್ಬಂಧ ಜಾರಿಯಾದ ಬಳಿಕ ಹಂತ ಹಂತವಾಗಿ ಅದರಿಂದ ತೈಲ ಖರೀದಿ ಪ್ರಮಾಣವನ್ನು ಕಡಿಮೆಗೊಳಿಸಬೇಕು. ಆದರೆ, ವಿನಾಯಿತಿಯ ಅಡಿಯಲ್ಲಿ ದೇಶಗಳು ಈಗ ಎಷ್ಟು ಪ್ರಮಾಣದ ತೈಲ ಖರೀದಿ ಮಾಡಲು ಅವಕಾಶ ನೀಡಲಾಗುತ್ತದೆ ಎಂಬ ಬಗ್ಗೆ ಮಾಹಿತಿ ನೀಡಲ.
ಒಟ್ಟಾರೆಯಾಗಿ: ಒಂದು ವೇಳೆ ಅಮೇರಿಕದ ನಿರ್ಬಂಧದಿಂದ ಅಮೇರಿಕ ಭಾರತಕ್ಕೆ ವಿನಾಯತಿ ನೀಡಲಿಲ್ಲ ವೆಂದರೆ ಇರಾನ್ ತೈಲದ ಮೇಲೆ ಅವಲಂಬಿತವಾಗಿರುವ ಚೀನಾ ಮತ್ತು ಭಾರತದ ಮೇಲೆ ದುಷ್ಪರಿಣಾಮ ಸಾಧ್ಯತೆಗೆ ಅನುಮಾನವೇ ಇರಲಿಲ್ಲ. ಏಕೆಂದರೆ ವಿಶ್ವದ ಮೂರನೇ ಅತೀ ಹೆಚ್ಚು ತೈಲ ರಫ್ತು ದೇಶವಾದ ಇರಾನ್, ಚೀನಾ ಮತ್ತು ಭಾರತ ಸೇರಿದಂತೆ ಹಲವು ಪ್ರಮುಖ ರಾಷ್ಟ್ರಗಳಿಗೆ ಕಚ್ಚಾ ತೈಲ ರಫ್ತು ಮಾಡುತ್ತಿದೆ. ಅಮೆರಿಕದ ನಿರ್ಬಂಧದ ಬಳಿಕ ಇರಾನ್ ಜೊತೆಗಿನ ಭಾರತದ ತೈಲ ಸಂಬಂಧದ ಮೇಲೆ ದುಷ್ಟಪರಿಣಾಮ ಬಿರಲಿತ್ತು.