ಬೆಂಗಳೂರಿನ ನಾಗರಿಕರೆ ಎಚ್ಚರ; ವೃದ್ದಾಪ್ಯ ವೇತನ ಕೊಡಿಸೋದಾಗಿ ನಂಬಿಸಿ ಚಿನ್ನಾಭರಣ ದೋಚುತ್ತಿದ್ದಾರೆ ಎಚ್ಚರ.!

0
157

ಕೆಲವರು ಕಳ್ಳತನ ಮಾಡಲೆಂದೇ ಹೊಸ ಹೊಸ ಸಂಚು ರೂಪಿಸಿಕೊಂಡು ಬೆಂಗಳೂರಿನಲ್ಲಿ ಜನರಿಗೆ ಮೋಸ ಮಾಡುತ್ತಿದ್ದಾರೆ. ಈ ಮೊದಲು ರಸ್ತೆಯಲ್ಲಿ ಹೋಗುವರ ಒಡವೆಗಳನ್ನು ಬೈಕ್ ನಲ್ಲಿ ಕಿತ್ತುಕೊಂಡು ಹೋಗುತ್ತಿದ್ದ ಜಾಣ ಕಳ್ಳರು ಈಗ ವೃದ್ಧರನ್ನು ಟಾರ್ಗೆಟ್ ಮಾಡಿಕೊಂಡು ವಂಚನೆಗೆ ಇಳಿದಿದ್ದಾರೆ. ಇದರಲ್ಲಿ ಮುಖ್ಯವಾಗಿ ಸರ್ಕಾರದಿಂದ ಬರುವ ವೃದ್ದಾಪ್ಯ ವೇತನವನ್ನು ಬಂಡವಾಳವಾಗಿಸಿಕೊಂಡು ಕಳ್ಳರು ಮೋಸ ಮಾಡುತ್ತಿದ್ದಾರೆ. ವೃದ್ದಾಪ್ಯ ವೇತನ ಮತ್ತು ಕಳ್ಳರಿಗೂ ಹೇಗೆ ಸಂಬಂಧ ಅನಿಸಬಹುದು. ಹೇಗೆ ವಂಚನೆ ಮಾಡುತ್ತಾರೆ ಎನ್ನುವ ಮಾಹಿತಿ ಇಲ್ಲಿದೆ ನೋಡಿ.

@publictv.in

ಹೌದು ನಿಮ್ಮ ಮನೆಯಲ್ಲಿ ವಯಸ್ಸಾದ ಅಜ್ಜ-ಅಜ್ಜಿಯರು ತಂದೆ-ತಾಯಿಗಳು ಇದ್ದರೆ ಎಚ್ಚರದಿಂದ ಇರುವುದು ಒಳ್ಳೆಯದು ಏಕೆಂದರೆ ಇಂತಹವರನ್ನು ಟಾರ್ಗೆಟ್ ಮಾಡಿಕೊಂಡು ಕಳ್ಳತನ ಮಾಡುತ್ತಿದ್ದು, ರಸ್ತೆಯಲ್ಲಿ ಹೋಗುವಾಗ ನಿಮಗೆ ವಯಸ್ಸು ಎಷ್ಟು ಎಂದು ಕೇಳುತ್ತಾರೆ. 65 ವರ್ಷ ಮೀರಿದೆ ಎಂದು ಹೇಳಿದ್ದಾಗ ನಿಮಗೆ ಸರ್ಕಾರದಿಂದ ವೃದ್ದಾಪ್ಯ ವೇತನ ಬರುತ್ತಾ ಎಂದು ಕೆಳುತ್ತಾರೆ ಇಲ್ಲ ಎಂದು ಹೇಳಿದ್ದಾಗ ನಾವು ನಿಮಗೆ ಉಚಿತವಾಗಿ ಸರ್ಕಾರದಿಂದ ಹಣ ಬರುವಂತೆ ಮಾಡುತ್ತೇವೆ ಎಂದು ಹೇಳಿ ಕರೆದುಕೊಂಡು ಹೋಗುತ್ತಾರೆ. ಅಲ್ಲಿ ಒಂದು ಸ್ಥಳಕ್ಕೆ ಕರೆದುಕೊಂಡು ಹೋಗಿ ಮೈ ಮೇಲೆ ಇರುವ ಒಡವೆಗಳನ್ನು ಬಾಚಿಕೊಂಡು ಪರಾರಿಯಾಗುತ್ತಾರೆ.

@publictv.in

ಇಂತಹ ಪ್ರಕರಣ ಬೆಳಕಿಗೆ ಬಂದಿದ್ದು, ಮಂಜೇಶ್ ಎನ್ನುವ ವ್ಯಕ್ತಿ ವೃದ್ದಾಪ್ಯ ವೇತನ ಕೊಡಿಸೋದಾಗಿ ನಂಬಿಸಿ ಚಿನ್ನಾಭರಣ ದೋಚುತ್ತಿದ್ದಾನೆ. ಸುಮಾರು ಬೆಂಗಳೂರಿನ ಎಲ್ಲಾ ಪೊಲೀಸ್ ಠಾಣೆಗಳಿಗೂ ಈತ ಚಿರಪರಿಚಿತನಾಗಿದ್ದು, ಸೈಲೆಂಟಾಗಿ ಬಂದು ವೃದ್ಧರನ್ನೇ ಟಾರ್ಗೆಟ್ ಮಾಡುತ್ತಿದ್ದಾನೆ. ಆಸ್ಪತ್ರೆ, ಮಂದಿರ-ಮಸೀದಿಗಳೇ ಈತನ ಹಾಟ್ ಫೇವರೇಟ್ ಸ್ಪಾಟ್ ಆಗಿದೆ. ವೃದ್ಧಾಪ್ಯ ವೇತನ ಕೊಡಿಸೋದಾಗಿ ಮೊದಲಿಗೆ ನಂಬಿಸುತ್ತಾನೆ. ಅದಕ್ಕಾಗಿ ನಿಮ್ಮದೊಂದು ಫೋಟೋ ಬೇಕೆಂದು ಸ್ಟುಡಿಯೋಗೆ ಕರೆದುಕೊಂಡು ಹೋಗುತ್ತಾನೆ.
ಈ ವೇಳೆ ಹೀಗೆಲ್ಲ ಒಡವೆ ಹಾಕಿಕೊಂಡರೆ ಓಲ್ಡ್ ಪೆನ್ಷನ್ ಕೊಡಲ್ಲ. ನಿಮ್ಮನ್ನು ಶ್ರೀಮಂತರು ಅಂದುಕೊಂಡು ಬಿಡುತ್ತಾರೆ. ಹೀಗಾಗಿ ಎಲ್ಲಾ ಬಿಚ್ಚಿಡಿ ಎಂದು ಹೇಳುತ್ತಾನೆ. ಹೀಗೆ ಗಿಮಿಕ್ ಮಾಡಿ ಗಮನ ಬೇರೆಡೆ ಸೆಳೆದು ಚಿನ್ನಾಭರಣ ದೋಚಿ ಪರಾರಿಯಾಗುತ್ತಾನೆ. ಭಾನುವಾರವೂ ವೃದ್ಧರೊಬ್ಬರನ್ನ ನಂಬಿಸಿ ಮಂಜೇಶ್ ಚಿನ್ನಾಭರಣ ದೋಚಿದ್ದಾನೆ. ಬೆಂಗಳೂರಿನ ಬಗಲುಗುಂಟೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲೇ ಮಂಜೇಶ್ ತನ್ನ ಕೈ ಚಳಕ ತೋರಿದ್ದಾನೆ. ಆರೋಪಿ ವಂಚನೆಗೊಳಗಾದವರನ್ನ ತನ್ನ ಬೈಕ್ ನಲ್ಲಿ ಕರೆದೊಯ್ತಿರೋ ಸಿಸಿ ಟಿವಿ ದೃಶ್ಯಾವಳಿ ಲಭ್ಯವಾಗಿದೆ.

ಅದಕ್ಕಾಗಿ ನಿಮ್ಮ ಮನೆಯಲ್ಲಿರುವ ವೃದ್ಧರಿಗೆ ಇದರ ಬಗ್ಗೆ ಜಾಗೃತಿ ಹೇಳಿ. ಇಲ್ಲ ಇಂತಹ ವ್ಯಕ್ತಿಗಳು ನಿಮ್ಮ ಕಣ್ಣಿಗೆ ಬಿದ್ದರೆ ಹತ್ತಿರದ ಪೊಲೀಸ್ ಸ್ಟೇಷನ್ ಗೆ ಕರೆದುಕೊಂಡು ಹೋಗಿ. ಈಗಾಗಲೇ ಇಂತಹ ವಂಚನೆಯಲ್ಲಿ ಹಲವು ಅಮಾಯಕರು ಬಲಿಯಾಗಿದ್ದು. ಆದಷ್ಟು ಎಚ್ಚರ ವಹಿಸುವುದು ಒಳ್ಳೆಯದು.

Also read: ಸತತ 35 ವರ್ಷಗಳಿಂದ ತಮ್ಮ ಇಡಿ ಜೀವನವನ್ನೇ ಮುಡಿಪಾಗಿಟ್ಟು, ಸಾವಿರಾರು ಮರಗಳನ್ನು ನೆಟ್ಟು ಬೆಳಸಿದ ಈ ವ್ಯಕ್ತಿಗೆ ಯಾವ ಪ್ರಶಸ್ತಿ ಕೊಡಬೇಕು??