ಬೇರೆಭಾಷೆಗೆ ಮರುಮಾರಾಟವಾದ ಕನ್ನಡದ 14 ಸಿನಿಮಾಗಳು.. ಯಾವುದೇ ಚಿತ್ರರಂಗಕ್ಕೆ ಕಡಿಮೆಯೆನ್ ಇಲ್ಲ..!!

0
807

ದಿನದಿಂದ ದಿನಕೆ ಹೆಸರು ಮಾಡುತ್ತಿರುವ ಕನ್ನಡ ಚಿತ್ರರಂಗ ಮತ್ತೊಂದು ಸಾಧನೆ ಮಾಡಿ ಪರಭಾಷೆಯ ಯಾವುದೇ ಚಿತ್ರರಂಗಕ್ಕೆ ಕಡಿಮೆಯೆನ್ ಇಲ್ಲ ಎಂದು ತೋರಿಸಿದೆ. ಕನ್ನಡದಲ್ಲಿ ಜನಪ್ರಿಯ ಗಳಿಸಿ ಹೆಚ್ಚು ಹೆಚ್ಚು ಹಣಮಾಡಿದ, ಇತ್ತೀಚಿನ ಕನ್ನಡ ಸಿನಿಮಾಗಳಲ್ಲಿ 14 ಸಿನಿಮಾಗಳು ಬೇರೆ ಬೇರೆ ಭಾಷೆಗಳಲ್ಲಿ ಮರುನಿರ್ದೇಶಿಸಿ ಕನ್ನಡ ಚಿತ್ರ ರಂಗ (ಕೆಎಫ್ಐ) ಮಿಂಚುತ್ತಿದೆ. ಈ ಹಿಂದೆ ಡಬಿಂಗ್ ವಿಚಾರವಾಗಿ ಕರ್ನಾಟಕದ ತುಂಬೆಲ್ಲ ದೊಡ್ಡ ಅಲೆಯೇ ಸೃಷ್ಠಿ ಮಾಡಿತ್ತು ಕನ್ನಡ ಸಿನಿಮಾ, ಧಾರಾವಾಹಿಗಳು ಹೆಚ್ಚಾಗಿ ಬೇರೊಂದು ಭಾಷೆಯಿಂದ ರಿಮೇಕ್ ಆಗಿ ಬರುತ್ತಿವೆ. ಆದ ಕಾರಣ ಪರಭಾಷೆಯ ಯಾವುದೇ ಚಿತ್ರ ಹಾಗೂ ಟಿವಿ ಧಾರಾವಾಹಿಯನ್ನು ಡಬ್ಬಿಂಗ್ ಮಾಡುವುದಕ್ಕೆ ಕರ್ನಾಟಕ ಚಲನಚಿತ್ರೋದ್ಯಮದ ವಿವಿಧ ಕವಲುಗಳು ಹೋರಾಟ ಮಾಡಿದವು.

Also read: ಕಿಚ್ಚ ಸುದೀಪ್-ರವರ ಮೇಲಿನ ಅಭಿಮಾನದಿಂದಾಗಿ ಈ ತಮಿಳಿನವ ಏನು ಮಾಡುತ್ತಿದ್ದಾನೆ ಅಂತ ಗೊತ್ತಾದ್ರೆ, ನಿಮಗೆ ಅವನ ಮೇಲೆ ಗೌರವ ಬರುತ್ತೆ!!

ಏಕೆಂದರೆ ಅರವತ್ತರ ದಶಕದಲ್ಲಿ ‘ಮಾಯಾ ಬಜಾರ್’ ‘ಜಗದೇಕವೀರನ ಕಥೆ’ ಮುಂತಾದ ಚಿತ್ರಗಳು ಕನ್ನಡಕ್ಕೆ ಡಬ್ ಆಗಿ ಬಂದು, ಕನ್ನಡ ಚಿತ್ರಗಳ ಮಾರುಕಟ್ಟೆಯನ್ನು ಕಬಳಿಸುವ ಯತ್ನ ನಡೆಸಿದ ಸಂದರ್ಭದಲ್ಲಿ ಅ.ನ. ಕೃಷ್ಣರಾಯರು, ಮ. ರಾಮಮೂರ್ತಿ ಶುರುಹಚ್ಚಿ ಹುಟ್ಟಿಕೊಂಡ ಡಬ್ಬಿಂಗ್-ವಿರೋಧಿ ಜ್ವಾಲೆ ಹತ್ತಿ ಉರಿಯಿತು. ಇದರ ಪರವಾಗಿ ರಾಜ್​ಕುಮಾರ್ ಬೀದಿಗೆ ಇಳಿದಿದ್ದರು ಹಾಗೆಯೇ ಕರ್ನಾಟಕ ಚಲನಚಿತ್ರ ವಾಣಿಜ್ಯೋದ್ಯಮ ಮಂಡಳಿ, ಕನ್ನಡ ಚಲನಚಿತ್ರ ನಿರ್ಮಾಪಕರ ಸಂಘ ಹಾಗೂ ಕರ್ನಾಟಕ ಟಿವಿ ಆರ್ಟಿಸ್ಟ್ಸ್ ಅಸೋಸಿಯೇಷನ್, ಮತ್ತು ನಾಡಿನ ಬಹುತೇಕ ಕನ್ನಡಪರ ಸಂಘಟನೆಗಳು ವಾಟಾಳ್ ನಾಗರಾಜ್ ನೇತೃತ್ವದಲ್ಲಿ ಡಬ್ಬಿಂಗ್-ವಿರೋಧಿಸಿದವು. ಈ ಎಲ್ಲ ವಿಚಾರವಾಗಿ ನವ ನಿರ್ಮಾಪಕರು ಹೊಸ ಕಥೆಗಳಿಗೆ ಹೆಚ್ಚು ಪ್ರೋತ್ಸಾಹ ನೀಡಿ ಸಿನಿಮಾ ಮಾಡುತ್ತಿರುವುದು ಹೆಮ್ಮೆಯ ವಿಷಯ. ಸ್ವಂತ ಕತೆಯನ್ನು ಬರೆದು ನಿರ್ಮಾಣಮಾಡಿ ನಟಿಸಿ ಹೊರ ತಂದ ಕನ್ನಡ ಸಿನಿಮಾಗಳು ನಿರೀಕ್ಷೆಗೂ ಮಿರಿ ಹಣಗಳಿಸಿ ಜನಪ್ರಿಯತೆ ಪಡೆದು, ಈಗ ಬೇರೆ ಬೇರೆ ಭಾಷೆಯ ಶ್ರೀಮಂತ ಸಿನಿಮಾ ರಂಗಗಳಾದ ತೆಲಗು, ತಮಿಳು, ಹಿಂದಿ, ಮರಾಠಿ ಭಾಷೆಯಲ್ಲಿ ಕನ್ನಡ 14 ಚಲನಚಿತ್ರಗಳು ಮರುಮಾರಾಟವಾಗಿವೆ ಆ ಎಲ್ಲಾ ಸಿನಿಮಾಗಳ ಸಂಪೂರ್ಣ ವಿವರ ಇಲ್ಲಿದೆ ನೋಡಿ.

1. ಲೂಸಿಯಾ – ತಮಿಳಲ್ಲಿ ಎನಾಕುಲ್ ಒರುವಾನ್

Also read: ಈ ಕಾರಣಗಳನ್ನು ಓದಿದರೆ ನಿಮಗೇ ಗೊತ್ತಾಗುತ್ತೆ ನಮ್ಮ ಶಂಕ್ರಣ್ಣ ಯಾಕೆ ಇಂದಿಗೂ ಒಬ್ಬ ಸೂಪರ್ ಸ್ಟಾರ್ ಅಂತ..

ಲೂಸಿಯಾ ಒಂದು ರೋಮಾಂಚಕ, ಮನೋವೈಜ್ಞಾನಿಕ ಸತ್ವವಿರುವ ಕನ್ನಡದ ಚಲನಚಿತ್ರ. ಈ ಚಲನಚಿತ್ರವನ್ನು ಪವನ್ ಕುಮಾರ್ ರಚಿಸಿ ನಿರ್ದೇಶಿಸಿದರು ಸತೀಶ್ ನೀನಾಸಂ, ಶೃತಿ ಹರಿಹರನ್ ಮತ್ತು ಅಚ್ಯುತ್ ಅವರು ಈ ಚಿತ್ರದಲ್ಲಿ ಮುಖ್ಯಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ. ಅಲ್ಲದೆ, ಒಬ್ಬ ವಿಜ್ಞಾನಿಯ ಪಾತ್ರದಲ್ಲಿ ಸ್ವತಹ ನಿರ್ದೇಶಕ ಪವನ್ ಅವರು ಕೆಲವು ಕ್ಷಣಗಳ ಮಟ್ಟಿಗೆ ತೆರೆಯಮೇಲೆ ಕಾಣಿಸಿಕೊಂಡಿದ್ದಾರೆ.
ವಿಶೇಷತೆ:
ಭಾರತೀಯ ಚಿತ್ರೋದ್ಯಮದಲ್ಲಿಯೇ ಮೊದಲಬಾರಿಗೆ ಪ್ರೇಕ್ಷಕರೇ ನಿರ್ಮಿಸಿದ ಚಲನಚಿತ್ರ ರೊಮ್ಯಾಂಟಿಕ್ ಸೈಕಲಾಜಿಕಲ್ ಥ್ರಿಲ್ಲರ್. ಕಥೆಯು ಕ್ರೇಜಿ ಮಾತ್ರೆ ಮತ್ತು ನಿದ್ರಾಹೀನತೆ ಎಂಬ ರೋಗದ ವ್ಯಕ್ತಿಯ ಸುತ್ತ ಹೆಣೆದಿರುವ ಚಿತ್ರ ಎಂಬ ಹೆಗ್ಗಳಿಕೆಯೂ ಈ ಚಿತ್ರಕ್ಕಿದೆ. ಚಿತ್ರ ಬಿಡುಗಡೆಗೂ ಮುನ್ನ ಲಂಡನ್ ನಲ್ಲಿ ನಡೆದ 2012 ರ ಭಾರತೀಯ ಚಲನಚಿತ್ರ ಉತ್ಸವದಲ್ಲಿ ಪ್ರೇಕ್ಷಕರ ಮನ್ನಣೆಗೆ ಒಳಪಡಿಸಿದ ಚಿತ್ರ ಈಗ ತಮಿಳಿನಲ್ಲಿ “ಎನಾಕುಲ್ ಒರುವಾನ್” ಎಂದು ಮರು ನಿರ್ಮಾಣಗೊಂಡಿದೆ. ಈ ಚಿತ್ರದ ನಾಯಕ ನಾಯಕಿಯಾಗಿ ಸಿದ್ದಾರ್ಥ್ ಮತ್ತು ದೀಪಾ ಸನ್ನಿಧಿ ನಟಿಸಿದ್ದಾರೆ.

2. ಯು-ಟರ್ನ್, ತಮಿಳು-ತೆಲುಗು ಯು-ಟರ್ನ್

ಎಂಬುದು ಪವನ್ ಕುಮಾರ್ ಬರೆದು, ನಿರ್ಮಿಸಿ ಮತ್ತು ನಿರ್ದೇಶನದ ಮಾಡಿದ್ದಾರೆ. ಇದು ಪವನ್ ಅವರ ಥ್ರಿಲ್ ಆಗಿದೆ ಈ ಸಿನಿಮಾದಲ್ಲಿ ಶ್ರದ್ಧಾ ಶ್ರೀನಾಥ್ ಪ್ರಮುಖ ಪಾತ್ರದಲ್ಲಿದ್ದಾರೆ. ರೋಜರ್ ನಾರಾಯಣ್, ದಿಲೀಪ್ ರಾಜ್, ಮತ್ತು ರಾಧಿಕಾ ಚೇತನ್ ಮುಖ್ಯಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ.
ವಿಶೇಷತೆ: ಯು-ಟರ್ನ್ 2017 ರಲ್ಲಿ ಕೇರಳದಂತೆ ಮಲೆಯಾಳಂನಲ್ಲಿ ಮರುನಿರ್ಮಾಣ ಮಾಡಲಾಯಿತು. ಈಗ, ಅದೇ ಶೀರ್ಷಿಕೆಯೊಂದಿಗೆ 2018 ರಲ್ಲಿ ಪವನ್ ಕುಮಾರ್ ಅವರು ತಮಿಳು-ತೆಲುಗು ದ್ವಿಭಾಷಾ ಚಿತ್ರಕ್ಕೆ ಮರುನಿರ್ದೇಶನ ಮಾಡಿದ್ದಾರೆ.

3. ಉಗ್ರಂ – ತಮಿಳುನಲ್ಲಿ ‘ಸ್ಕೆಚ್’

ಶ್ರೀಮುರಳಿ ಅಭಿನಯದ ಉಗ್ರಂ ಚಿತ್ರದ ಕಲೆಕ್ಷನ್ ಕನ್ನಡ ಚಿತ್ರೋದ್ಯಮದ ಹುಬ್ಬೇರಿಸಿದೆ. ಪ್ರಶಾಂತ್ ನೀಲ್ ನಿರ್ದೇಶನದ ಕ್ರಿಯಾಶೀಲವಾಗಿದೆ. ಇದು ಸ್ಯಾಂಡಲ್ ವುಡ್’ನಲ್ಲಿ ಬಹಳಷ್ಟು ಮುಖಗಳನ್ನು ಪರಿಚಯಿಸಿದೆ ಈ ಚಿತ್ರದಲ್ಲಿ ತಿಲಕ್ ಶೇಖರ್, ಅತುಲ್ ಕುಲಕರ್ಣಿ, ಅವಿನಾಶ್, ಜೈ ಜಗದೀಶ್, ಹರಿಪ್ರಿಯ ಅವರು ಪ್ರಮುಖ ಪಾತ್ರಗಳಲ್ಲಿ ಅಭಿನಯಿಸಿದ್ದಾರೆ.
ವಿಶೇಷತೆ: ಮುರಳಿಗಾಗಿ ಮರಳಿ ಬರುತ್ತಿದ್ದ ಚಲನಚಿತ್ರ ಉದ್ಯಮದಲ್ಲಿ ಮಹತ್ವಾಕಾಂಕ್ಷೆಯ ಚಿತ್ರನಿರ್ಮಾಪಕರಿಗೆ ಭರವಸೆ ನೀಡಿ 100 ದಿನಗಳ ಪೂರ್ಣಗೊಳಿಸಿ ಕೆಲವು ಚಿತ್ರಮಂದಿರಗಳಲ್ಲಿ ಮರು-ಬಿಡುಗಡೆಯಾಗಿತ್ತು 2018 ರ ತಮಿಳು ಚಿತ್ರ ‘ಸ್ಕೆಚ್’ ಆಗಿ ನಿರ್ಮಾಣಗೊಂಡು ಮೊದಲ ಒಂಬತ್ತು ದಿನಗಳಲ್ಲಿ ಹೆಚ್ಚು ಕಲೆಕ್ಷನ್ ಮಾಡಿದೆ.

4. ಗೋಧಿ ಬಣ್ಣ ಸಾಧಾರಣ ಮೈಕಟ್ಟು- ತಮಿಳಿನಲ್ಲಿ 60 ವಾಯುಡು ಮಾಣಿರಾಮ್

ಈ ಚಿತ್ರದ ಪ್ರಮುಖ ಪಾತ್ರಗಳಲ್ಲಿ ಅನಂತ್ ನಾಗ್, ಶೃತಿ ಹರಿಹರನ್, ಮತ್ತು ರಕ್ಷೀತ್ ಶೆಟ್ಟಿ ಅವರು ಪ್ರಮುಖ ಪಾತ್ರಗಳಲ್ಲಿ ಅಭಿನಯಿಸಿದ್ದು ಬೆಳ್ಳಿ ಪರದೆಯ ಮೇಲೆ ತಂದೆ ಮತ್ತು ಮಗನ ನಡುವಿನ ಸಂಬಂಧವನ್ನು ಪ್ರಸ್ತುತಪಡಿಸಿದೆ. ರಕ್ಷಿತ ಶೆಟ್ಟಿ ಅವರು ಹೇಮಂತ್ ರಾವ್ ಅವರ ಅಸಾಮಾನ್ಯ ಕಥಾವಸ್ತುವನ್ನು ಭಾವನೆಯಾಗಿ ವ್ಯಕ್ತಪಡಿಸಿದ್ದಾರೆ.
ವಿಶೇಷತೆ: ತಮಿಳು, ತೆಲುಗು ಮತ್ತು ಹಿಂದಿ ಚಿತ್ರಗಳಲ್ಲಿ ರಿಮೇಕ್ ಮಾಡುವ ಹಕ್ಕುಗಳನ್ನು ಪ್ರಕಾಶ್ ರಾಜ್ ಪಡೆದು, ಈ ಚಿತ್ರವನ್ನು ತಮಿಳಿನಲ್ಲಿ “60 ವಾಯುಡು ಮಾಣಿರಾಮ್” ಎಂದು ರಿಮೇಕ್ ಮಾಡಲಾಗಿದ್ದು, ಪ್ರಕಾಶ್ GBSM ನಲ್ಲಿ ಅನಂತ್ ನಾಗ್ ಪಾತ್ರವನ್ನು ನಿರ್ವಹಿಸುತ್ತಿದ್ದಾರೆ.

5. ಮಿಸ್ಟರ್‌ ಅಂಡ್‌ ಮಿಸಸ್‌ ರಾಮಾಚಾರಿ – ಮರಾಠಿಯಲ್ಲಿ ‘ಶ್ರೀಮತಿ ಸದಾಚಾರಿ

ಯಶ್‌ ಹಾಗೂ ರಾಧಿಕಾ ಪಂಡಿತ್‌ ಅಭಿನಯದ ‘ಮಿಸ್ಟರ್‌ ಅಂಡ್‌ ಮಿಸಸ್‌ ರಾಮಾಚಾರಿ ಚಿತ್ರ , 2014 ಡಿಸೆಂಬರ್ 25 ರಂದು ತೆರೆ ಕಂಡಿದೆ. ಈ ಸಿನಿಮಾದ ನಿರ್ಮಾಪಕರು ಜಯಣ್ಣ ಹಾಗೂ ಭೋಗೇಂದ್ರ. ನಿರ್ದೇಶಕ ಸಂತೋಷ್‌ ಆನಂದ್‌ರಾಮ್‌. ಇದು ಯಶ್‌ ಹಾಡಿರುವ ಮೊದಲ ಚಿತ್ರ. ಈ ಚಿತ್ರಕ್ಕೆ ವಿ.ಹರಿಕೃಷ್ಣ ಸಂಗೀತ ನೀಡಿದ್ದಾರೆ. ಶ್ರೀನಾಥ್‌, ಮಾಳವಿಕ ಅವಿನಾಶ್‌, ಅಚ್ಯುತಕುಮಾರ್‌, ಸಾಧುಕೋಕಿಲ, ಹೊನ್ನವಳ್ಳಿ ಕೃಷ್ಣ, ಅರುಣಾ ಬಾಲರಾಜ್‌, ಗಿರೀಶ್‌, ರಾಕಲೈನ್‌ ಸುಧಾಕರ್‌, ಮೈಸೂರು ನಾಯ್ಡು, ಅಶೋಕ್‌, ವಿಶಾಲ್‌ ಹೆಗ್ಡೆ ಮುಂತಾದವರು ನಟಿಸಿದ್ದಾರೆ.
ವಿಶೇಷತೆ : ಕುಟುಂಬ ಮನರಂಜನೆ ಇರುವ ಈ ಸಿನಿಮಾ 2016 ರಲ್ಲಿ, ಮರಾಠಿಯಲ್ಲಿ ‘ಶ್ರೀಮತಿ ಸದಾಚಾರಿ’ ಎಂದು ಮರುನಿರ್ಮಾಣವಾಗಿ ಅದೇ ಸಿನಿಮಾ ಹಿಂದಿಗೆ ಡಬ್ ಮಾಡಲಾಗಿದೆ.

6. ಕಿರಿಕ್ ಪಾರ್ಟಿ- ತೆಲುಗುನಲ್ಲಿ ಕಿರಾಕ್ ಪಕ್ಷ

ಈ ಸಿನಿಮಾ ಕನ್ನಡದಲ್ಲಿ ಹೆಚ್ಚು ಹಣ್ಣ ಮಾಡಿರುವ ಸಾಲಿನಲ್ಲಿ ಒಂದಾಗಿದೆ. ರಿಷಬ್ ಶೆಟ್ಟಿ ಅವರ ಒಂದು ಅನ್ಯುನ್ಯ ರೀತಿಯಲ್ಲಿ ವಿವರಿಸಿರುವ ಕಾಲೇಜು ಪ್ರೇಮ ಕಥೆಯು ಬಾಕ್ಸ್ ಆಫೀಸ್ ನಲ್ಲಿ ತನ್ನ ಗುರುತನ್ನು ಮಾಡಿದೆ. ಚಿತ್ರದಲ್ಲಿ ಮುಖ್ಯ ನಾಯಕ ನಾಯಕಿಯಾಗಿ ರಶ್ಮಿಕಾ ಮಂಡಣ್ಣ, ರಕ್ಷಿತ ಶೆಟ್ಟಿ ಮತ್ತು ಸಂಯುಕ್ತ ಹೆಗ್ಡೆ ಅವರ ಅಭಿನಯ ಹೆಚ್ಚು ಹೆಸರು ಮಾಡಿತ್ತು.
ವಿಶೇಷತೆ:
ಮತ್ತು ಮಲ್ಟಿಪ್ಲೆಕ್ಸ್’ಗಳಲ್ಲಿ ಕಿರಿಕ್ ಪಾರ್ಟಿ 365-ದಿನಗಳ ಪೂರ್ಣಗೊಂಡು ಅತಿ ಹೆಚ್ಚು ಹಣ ಗಳಿಸಿದ ಕನ್ನಡ ಚಲನಚಿತ್ರಗಳಲ್ಲಿ ಒಂದಾಗಿದೆ. ಈ ಚಿತ್ರವು ತೆಲುಗು ಭಾಷೆಯಲ್ಲಿ ಕಿರಾಕ್ ಪಕ್ಷವಾಗಿ ಮರುಮಳಿಸಲ್ಪಟ್ಟಿತ್ತು.

7. ವಿಕ್ಟರಿ – ತಲುಗು ಸೆಲ್ಫಿ ರಾಜಾ

2013 ರಲ್ಲಿ ಬಿಡುಗಡೆಯಾದ ವಿಕ್ಟರಿ, ನಂದ ಕಿಶೋರ್ ನಿರ್ದೇಶಿಸಿದ ಹಾಸ್ಯ ಸಿನಿಮಾ, ಎಂ.ಎಸ್.ಶ್ರೀನಾಥ್ ಬರೆದ. ವಿಕ್ಟರಿಯಲ್ಲಿ ನಾಯಕ-ನಾಯಕಿಯಾಗಿ ಶರಣ್ ಮತ್ತು ಅಸ್ಮಿತ ಸೂದ್ ನಟಿಸಿದ್ದಾರೆ. ಅರ್ಜುನ್ ಜನ್ಯ ಸಂಯೋಜಿಸಿದ ‘ಖಾಲಿ ಕ್ವಾರ್ಟರ್’ ಹಾಡಿನ ಮೂಲಕ ಹೆಸರು ಮಾಡಿದ ಚಿತ್ರ. 2016 ರಲ್ಲಿ ತೆಲುಗಿನಲ್ಲಿ ಅಲರಿ ನರೇಶ್ ಅಭಿನಯಿಸಿ ‘ಸೆಲ್ಫಿ ರಾಜಾ’ ಎಂದು ಮರುನಿರ್ಮಾಣ ವಾಗಿದೆ.

8. ಸಿಂಪಲ್ಲಾಗ್ ಒಂದ್ love story- ತೆಲುಗು ಇಡಿ ನಾ ಲವ್ ಸ್ಟೋರಿ:

ಈ ಸಿನಿಮಾವನ್ನು ಸುನೀ ಬರೆದು ನಿರ್ದೇಶಿಸಿದ ಕನ್ನಡ ಚಿತ್ರಗಳಲ್ಲಿ ಸಿಂಪಲ್ಲಾಗ್ ಒಂದ್ love story ಕೂಡ ಒಂದಾಗಿದೆ. ನಾಯಕ- ನಾಯಕಿಯಾಗಿ ರಕ್ಷಿತ್ ಶೆಟ್ಟಿ ಮತ್ತು ಶ್ವೇತಾ ಶ್ರೀವಾತ್ಸವ್ ನಟಿಸಿದರು. ಈ ಸಿನಿಮಾ ಕನ್ನಡ ಪ್ರೇಕ್ಷಕರಿಂದ ಉತ್ತಮ ಪ್ರತಿಕ್ರಿಯೆ ಪಡೆಯಲು ಕಾರಣ ಒಂದು ವಿಶೇಷವಾದ ಪ್ರಣಯ ನಿರೂಪಣೆಯಾಗಿದೆ. ಇದು ತೆಲುಗು ಭಾಷೆಯಲ್ಲಿ “ಇಡಿ ನಾ ಲವ್ ಸ್ಟೋರಿ” ಎಂದು ಮರುನಾಮಕರಣಗೊಂಡಿತು. ಇದು ತರುಣ್ ಮತ್ತು ಓವಿಯ ಪ್ರಮುಖ ಪಾತ್ರಗಳಲ್ಲಿ ಅಭಿನಯಿಸಿದ್ದಾರೆ.

9. ಮುಂಗಾರು ಮಳೆ: ತೆಲುಗು ಭಾಷೆಯಲ್ಲಿ ವಾನಾ

ಮುಂಗಾರು ಮಳೆ ೨೦೦೬ರಲ್ಲಿ ಬಿಡುಗಡೆಯಾದ ಕನ್ನಡ ಚಿತ್ರ. ಯೋಗರಾಜ್ ಭಟ್ ನಿರ್ದೇಶನದ ಚಿತ್ರದಲ್ಲಿ ಗಣೇಶ್, ಸಂಜನಾ ಗಾಂಧಿ ಮತ್ತು ಅನಂತ್ ನಾಗ್ ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ. ಬಿಡುಗಡೆಯಾದ ೫೦೦ ದಿನಗಳ ನಂತರ ಗಲ್ಲಾಪೆಟ್ಟಿಗೆಯಲ್ಲಿ ೧೨೫ ಕೋಟಿ ಗಳಿಕೆ ಚಿತ್ರವು ಎಲ್ಲಾ ಅಪೇಕ್ಷೆಗಳನ್ನೂ ಮೀರಿ ಯಶಸ್ಸುಗಳಿಸಿದ್ದಕ್ಕೆ ಸಾಕ್ಷಿ. ಮುಂಗಾರು ಮಳೆ ಚಿತ್ರವು ರಾಜ್ಯದ ಹಲವೆಡೆ ಯಶಸ್ವಿ ಪ್ರದರ್ಶನಗೊಂಡು ದಾಖಲೆ ನಿರ್ಮಿಸಿದ್ದಲ್ಲದೇ ಶತದಿನೋತ್ಸವವನ್ನು ದಾಟಿ ರಜತ ಮಹೋತ್ಸವವನ್ನು ಆಚರಿಸಿಕೊಂಡಿದೆ. ಬೆಂಗಳೂರಿನ ಪಿವಿಆರ್ ಸಿನೆಮಾಸ್ ಚಿತ್ರಮಂದಿರದಲ್ಲಿ ಸತತವಾಗಿ ಒಂದು ವರ್ಷ ಪ್ರದರ್ಶಿಸಲ್ಪಟ್ಟಿದ್ದು ಸಿನಿಮಾ ರಂಗದಲೇ ದಾಖಲೆಮಾಡಿದೆ. ಈ ಚಿತ್ರವು ತೆಲುಗು ಭಾಷೆಯಲ್ಲಿ ವಾನಾ (2008), ಪ್ರೀಮಿಯರ್ ಕಹಿಣಿ (2009), ರೋಮಿಯೋ – ದಿ ಲವರ್ ಬಾಯ್ (2009) ಮತ್ತು ಮರಾಠಿ ಭಾಷೆಯಲ್ಲಿ ಪ್ರಮಾಯ ನಮ (2017) ಎಂದು ಮರುನಾಮಕರಣಗೊಂಡಿತು.

10. ಉಳಿದವರು ಕಂಡಂತೆ : ತಮಿಳ್ ಮತ್ತು ಮಲೆಯಾಳಂನಲ್ಲಿ ರಿಚೀ

ಉಳಿದವರು ಕಂಡಂತೆ ಒಂದು ಕನ್ನಡ ಚಲನಚಿತ್ರ. ಸಿಂಪಲ್ಲಾಗ್ ಒಂದ್ ಲವ್ ಸ್ಟೋರಿ ಚಿತ್ರದಿಂದ ಪ್ರಸಿದ್ದಿಯಾಗಿರುವ ರಕ್ಷಿತ್ ಶೆಟ್ಟಿಯವರ ಪ್ರಥಮ ನಿರ್ದೇಶನದ ಈ ಚಿತ್ರ ಇದಾಗಿದೆ. ಈ ಚಿತ್ರದಲ್ಲಿ ತಾರಾ, ಕಿಶೋರ್,ಯಜ್ನ ಶೆಟ್ಟಿ ಹಾಗೂ ರಕ್ಷಿತ್ ಶೆಟ್ಟಿಯವರು ಮುಖ್ಯ ಪಾತ್ರದಲ್ಲಿದ್ದಾರೆ. ಕೆ.ಎಫ್ ನಲ್ಲಿ ರಕ್ಷಿತ ಶೆಟ್ಟಿ ಅತ್ಯಂತ ಪ್ರೀತಿಪಾತ್ರ ಚಿತ್ರನಿರ್ಮಾಪಕರಾಗಿದ್ದರೆ, ಟ್ರೈಲರ್ ಬಿಡುಗಡೆಯಾದ 48 ಗಂಟೆಗಳಲ್ಲಿ ಯೂಟ್ಯೂಬ್ನಲ್ಲಿ 44,618 ಜನರು ವೀಕ್ಷಿಸಿರುವ ಕನ್ನಡ ಚಿತ್ರರಂಗದಲ್ಲಿ ದಾಖಲೆಯನ್ನು ಈ ಚಿತ್ರ ಮಾಡಿತು. ಈ ಚಲನಚಿತ್ರವನ್ನು ತಮಿಳ್ ಮತ್ತು ಮಲೆಯಾಳಂನಲ್ಲಿ ನಿವಿನ್ ಪೌಲಿ ನಟಿಸಿದ ರಿಚೀ ಆಗಿ ಮರುನಿರ್ದೇಶಿಸಲಾಗಿದೆ.

11. ರಾಮ ರಾಮ ರೆ- ತೆಲುಗುನಲ್ಲಿ ಅತಗಡಾರ ಶಿವ

ಡಿ. ಸತ್ಯ ಪ್ರಕಾಶ್ ನಿರ್ದೇಶನದ ಕನ್ನಡ ಚಿತ್ರದಲ್ಲಿ ರಾಮ ರಾಮ ರೆ ಕೂಡಾ ಒಂದಾಗಿದೆ. ಜೀವನ, ಮರಣ ಮತ್ತು ಮಾನವ ಮೌಲ್ಯಗಳ ಕಥಾವಸ್ತುವಿನಲ್ಲಿ ಅಪರಾಧಿ ಮತ್ತು ನಿವೃತ್ತ ಪೊಲೀಸ್ ಅಧಿಕಾರಿಯ ಕಥೆಯು ಪ್ರೇಕ್ಷಕರನ್ನು ರುಮಾಚನ ಗೊಳಿಸಿದ ಸಿನಿಮಾ ರಾಮ ರಾಮ ರೆ ಈ ಸಿನಿಮಾದ ನಿರ್ದೇಶಕ ಸತ್ಯ ಪ್ರಕಾಶ್ ಜಯನಗರ 4 ನೇ ಬ್ಲಾಕ್ ಎಂಬ ಸಣ್ಣ ಚಿತ್ರದ ಖ್ಯಾತಿಯೊಂದಿಗೆ ಸತ್ಯ ಪ್ರಕಾಶ್ ಸಿನಿಮಾದಲ್ಲಿ ಹೆಸರು ಮಾಡಿದ್ದಾರೆ. ಈ ಚಿತ್ರವನ್ನು ತೆಲುಗು ಭಾಷೆಯಲ್ಲಿ 2018 ರಲ್ಲಿ ಅತಗಡಾರ ಶಿವ ಎಂದು ಮರುನಾಮಕರಣ ಮಾಡಲಾಯಿತು.

12. ಶಿವಲಿಂಗ- ತಮಿಳುನಲ್ಲಿ ಶಿವಲಿಂಗ

ಶಿವಲಿಂಗ ಶಕ್ತಿ, ಡಿ.ಶಂಕರ್ ಸಿಂಗ್ ನಿರ್ದೇಶನ ಮತ್ತು ನಿರ್ಮಾಪಣ ಮಾಡಿರುವ 1960 ರ ಕನ್ನಡ ಚಲನಚ್ರಿತ್ರ. ಈ ಚಿತ್ರಕ್ಕೆ ಪಿ.ಶ್ಯಾಮಣ್ಣ ಸಂಗೀತ ನಿರ್ದೇಶನ ಮಾಡಿದ್ದಾರೆ. ಉದಯಕುಮಾರ್ ಮತ್ತು ಪ್ರತಿಮಾದೇವಿ ಮುಖ್ಯ ಪಾತ್ರಗಳಲ್ಲಿ ನಟಿಸಿದ್ದಾರೆ. ಈ ಸಿನಿಮಾವನ್ನು ತಮಿಳಿನಲ್ಲಿ ನಿರ್ದೇಶಕ ರಾಘವ ಲಾರೆನ್ಸ್ ನಟಿಸಿದ ಅದೇ ಶೀರ್ಷಿಕೆಯೊಂದಿಗೆ ತಮಿಳು ಚಿತ್ರದಲ್ಲಿ ಮರುನಿರ್ಮಾಣವಾಗಿದೆ. )

13. ಗೋವಿಂದಯ ನಮ- ತೆಲುಗು ನಲ್ಲಿ ಪೊಗುಗಡ್

2012 ರ ಬಿಡುಗಡೆಯಾದ ಹಾಸ್ಯ ಸಿನಿಮಾ, ಗೋವಿಂದಯ ನಮಾ ಪವನ್ ವಾಡೇಯರ್ ನಿರ್ದೇಶನದಡಿಯಲ್ಲಿ ತೆರೆಗೆ ಬಂದು. ಈ ಚಿತ್ರದಲ್ಲಿ ಕೋಮಲ್ ಕುಮಾರ್ ಮತ್ತು ಪರುಲ್ ಯಾದವ್ ಪ್ರಮುಖ ಪಾತ್ರಗಳಲ್ಲಿದ್ದಾರೆ. ಚಿತ್ರವು ಪೊಗುಗಡ್ ಎಂದು ತೆಲುಗು ಭಾಷೆಯಲ್ಲಿ ಮರುನಿರ್ಮಾಣವಾಗಿದೆ.

14. ರಥಾವರ:

ಈ ಸಿನಿಮಾವನ್ನು ಚಂದ್ರಶೇಖರ್ ಬಂಡಿಯಪ್ಪ ಬರೆದು ಕ್ರಿಯಾಶೀಲವಾಗಿ ನಿರ್ದೇಶನದ ಮಾಡಿ 2015 ರ ಜನಪ್ರಿಯ ಚಿತ್ರಗಳಲ್ಲಿ ಒಂದಾಗಿದೆ. ನಾಯಕ ನಾಯಕಿಯಾಗಿ ಶ್ರೀ ಮುರಳಿ ಮತ್ತು ರಚಿತಾ ರಾಮ್ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ಈ ಚಿತ್ರವುವನ್ನು ಮೂಲಗಳ ಪ್ರಕಾರ ತಮಿಳುಗೆ ದಬಿಂಗ್ ಮಾಡಲಾಗುವುದು ಎಂದು ದೃಢಪಡಿಸಿದ್ದಾರೆ. ಚಂದ್ರಶೇಖರ ಬಂಡಿಯಪ್ಪ ಸ್ವತಃ ಈ ಯೋಜನೆಯನ್ನು ನಿರ್ದೇಶಿಸುತ್ತಿದ್ದಾರೆ.