ಮುಂದಿನ ವರ್ಷದ ಮೇ ತಿಂಗಳಿಂದ 1kg ಯ ವ್ಯಾಖ್ಯಾನ ಬದಲಾಗಿದೆಯಂತೆ!!

0
636

ಸದ್ಯ ಚಾಲ್ತಿಯಲ್ಲಿರುವ 1000 ಗ್ರಾಂ. ಒಂದು kg ಅಲ್ಲವಂತೆ..!

ಜನರು ಬಳಸುವ ವಸ್ತುಗಳ ಮಾಪನವನ್ನು 129 ವರ್ಷಗಳ ಹಿಂದೆ ಕಂಡು ಹಿಡಿದು ಹಾಲು-ಎಣ್ಣೆಗೆ ಲೀಟರ್, ಬಟ್ಟೆಗೆ ಮೀಟರ್ ಧಾನ್ಯಗಳಿಗೆ kg ರೂಪದಲ್ಲಿ ಅಳತೆ ಮಾಡುವ ಮಾದರಿಯನ್ನು ಕಂಡು ಹಿಡಿದಿದ್ದರೂ ಅದಕ್ಕೂ ಮುನ್ನ ಎಲ್ಲ ವಸ್ತುಗಳನ್ನು ಅಂದಾಜು ಅಳತೆ ಮೇಲೆ ತೂಗುತ್ತಿದರು ಇದರಿಂದ ವ್ಯಾಪಾರಸ್ಥರಿಗೆ/ಗ್ರಾಹಕರಿಗೆ ದೊಡ್ಡ ಮಟ್ಟದ ಮೋಸ ಕಂಡು ಬರುತ್ತಿತು. ಇದನ್ನು ಕಂಡ ವಿಜ್ಞಾನಿಗಳು ಮಾಪನವನ್ನು ಕಂಡು ಹಿಡಿದಿದ್ದರೂ ಅದರಲ್ಲಿ 1000 ಗ್ರಾಂ ಗೆ ಒಂದು kg ಎಂದು ನಿಗಧಿ ಮಾಡಿರುವ ಮಾಪನ ಈಗ 1000 ಗ್ರಾಂ ಗೆ ಒಂದು kg ಅಲ್ಲವಂತೆ.

Also read: ಅತ್ತ – ಇತ್ತ ಯಾಕಪ್ಪ ನಮ್ಮ ಜೀವನ ಈ ರೀತಿ ಬದಲಾಗಿದೆ ಮತ್ತೆ ಆದಿನಗಳು ಬೇಕು ಅನ್ಸಿದೆ.ಏನು ಅಂತೀರಾ ಈ ಸ್ಟೋರಿ ನೋಡಿ ನಿಮಗೂ ಬೇಕು ಅನ್ಸುತ್ತೆ..!

ಏನಿದು ಸುದ್ದಿ?

ಇದುವರೆಗೆ ಕೆ.ಜಿ ಬಳಕೆಯ ವ್ಯಾಖ್ಯಾನಕ್ಕಾಗಿ ‘ಲೀ ಗ್ರಾಂಡ್​ ಕೆ’ ಎಂದು ಕರೆಯಲ್ಪಡುವ ಪ್ಲಾಟಿನಂ-ಇರಿಡಿಯಂ ಮಿಶ್ರಲೋಹದ ಸಾಧನವನ್ನು ಬಳಸಲಾಗುತ್ತದೆ. 129 ವರ್ಷಗಳಷ್ಟು ಹಳೆಯದಾದ ಸಿಲಿಂಡರ್​ ರೂಪದಲ್ಲಿರುವ ಈ ಸಾಧನ 30 ಮೈಕ್ರೋ ಗ್ರಾಂ. ಕಳೆದುಕೊಂಡಿದ್ದು, ಈ ಕಾರಣದಿಂದ ತೂಕಕ್ಕೆ ಹೊಸ ವ್ಯಾಖ್ಯಾನ ನೀಡಲು ವಿಜ್ಞಾನಿಗಳು ನಿರ್ಧರಿಸಿದ್ದಾರೆ. ಇದಕ್ಕಾಗಿ ನ್ಯಾಷನಲ್ ಇನ್​ಸ್ಟಿಟ್ಯೂಟ್ ಆಫ್ ಸ್ಟಾಂಡರ್ಡ್ಸ್ ಆಂಡ್ ಟೆಕ್ನಾಲಜಿ ವಿಜ್ಞಾನಿಗಳು ಕಿಬಲ್ ಬ್ಯಾಲೆನ್ಸ್ ಎಂಬ ಸಾಧನವನ್ನು ಅಭಿವೃದ್ಧಿಪಡಿಸಿದ್ದು, ಇದು ನಿಖರ ಮೌಲ್ಯ ಪತ್ತೆಗೆ ಇದು ನೆರವಾಗಲಿದೆ.

Also read: ಗಡಿಬಿಡಿಯಲ್ಲಿ ಊಟ ಅಥವಾ ತಿಂಡಿಯನ್ನು ಮಾಡುತ್ತಿದ್ದರೆ, ಅದನ್ನು ಇಂದೇ ನಿಲ್ಲಿಸಿ!!

ಬದಲಾವಣೆ ಹೇಗೆ?

ಹೌದು ಇದೆಲ್ಲ ಕಾರಣದಿಂದ ಸದ್ಯ ಪ್ರಸ್ತುತವಾಗಿರುವ ಕಿಲೋ ಗ್ರಾಂ ಮಾಪನಕ್ಕೆ ಹೊಸ ವ್ಯಾಖ್ಯಾನ ನೀಡಲು ವಿಜ್ಞಾನಿಗಳು ನಿರ್ಧರಿಸಿದ್ದಾರೆ. ಪ್ಯಾರಿಸ್​ನಲ್ಲಿ ನಡೆದಿರುವ ಅಂತಾರಾಷ್ಟ್ರೀಯ ಮಟ್ಟದ ತೂಕ ಮತ್ತು ಅಳತೆಗಳ ಪ್ರಧಾನ ಸಮ್ಮೇಳನದಲ್ಲಿ ಭೌತವಿಜ್ಞಾನಿಗಳು ಈ ತೀರ್ಮಾನಕ್ಕೆ ಬಂದಿದ್ದಾರೆ. ವಿಶ್ವದ 60 ಕ್ಕೂ ಹೆಚ್ಚು ವಿಜ್ಞಾನಿಗಳು ಪಾಲ್ಗೊಂಡಿದ್ದ ಈ ಸಮ್ಮೇಳನದಲ್ಲಿ ಹಳೆಯ ಕಿಲೋ ಗ್ರಾಂ ಪದ್ಧತಿಗೆ ಅಂತ್ಯಹಾಡಲು ತೀರ್ಮಾನಿಸಲಾಗಿದೆ. ಇದರಿಂದ ಸಾಮಾನ್ಯರ ಮೇಲೆ ಯಾವುದೇ ಪರಿಣಾಮ ಬೀರುವುದಿಲ್ಲ ಎಂದು ತಿಳಿಸಲಾಗಿದೆ. ಆದರೆ ವೈಜ್ಞಾನಿಕ ಪ್ರಯೋಗಗಳಲ್ಲಿ ಹೊಸ ಅಳತೆ ಮಾಪನ ಮಹತ್ತರ ಪಾತ್ರವಹಿಸಲಿದೆ ಎನ್ನಲಾಗಿದೆ. ಏಕೆಂದರೆ ವಿಜ್ಞಾನಿಗಳಿಗೆ ನಿಖರ ಮಾಪನದ ಅಗತ್ಯತೆ ಇರುವುದರಿಂದ 1889ರ ಬಳಿಕ ಇದೇ ಮೊದಲ ಬಾರಿಗೆ ಅಳತೆ ಮಾಪನದಲ್ಲಿ ತಿದ್ದುಪಡಿ ತರಲು ಸಂಶೋಧಕರು ನಿರ್ಧರಿಸಿದ್ದಾರೆ.

ಇದರಿಂದ ಆಗುವ ಪ್ರಯೋಜನವೇನು?

ಇಲ್ಲಿ ಕೆ.ಜಿ. ಅಳತೆಯಲ್ಲಿ ಯಾವುದೇ ಬದಲಾವಣೆ ಆಗದಿದ್ದರೂ, ಆಧಾರ ಮಾದರಿಯಲ್ಲಿ ಬದಲಾವಣೆ ತರಲಾಗುತ್ತದೆ. ಈ ಹೊಸ ಅಳತೆ ಮಾಪನವನ್ನು ನಿರ್ಧರಿಸಲು ವಿಜ್ಞಾನಿಗಳು ವಿದ್ಯುತ್ ಪ್ರವಾಹಗಳಿಂದ ಉತ್ಪತಿಯಾಗು ಶಕ್ತಿಯನ್ನು ತೂಕದ ಘಟಕವನ್ನಾಗಿ ಬಳಸಲು ನಿರ್ಧರಿಸಿದ್ದಾರೆ. ಈ ಹೊಸ ವ್ಯಾಖ್ಯಾನಕ್ಕೆ ವಿಜ್ಞಾನಿಗಳು ಒಮ್ಮತದಿಂದ ಮತ ಚಲಾಯಿಸಿದ್ದಾರೆ.ಕಡಿಮೆ ಕೆ.ಜಿ!

ಮೀಟರ್ ಮತ್ತು ಸೆಕೆಂಡ್​ನಲ್ಲಿ?

ಹೊಸ ಸಂಶೋಧನೆಯ ಕಿಲೋ ಗ್ರಾಂ ಬದಲಾವಣೆ ತಂದ ನಂತರ ಕೆಲ ನೈಸರ್ಗಿಕ ವಸ್ತುಗಳನ್ನು ಆಧರಿಸಿ ಕೆಲ ಘಟಕಗಳನ್ನು ಮಾಪನ ಮಾಡಿ ಕೊಳ್ಳಲಾಗುತ್ತದೆ. ಹೀಗಾಗಿ ಮೇ, 2019 ರ ನಂತರ ಸೆಕೆಂಡ್​ಗಳ ಜೊತೆ ಮೀಟರ್​ಗಳ ಮಾನದಂಡಗಳು ಕೂಡ ಬದಲಾವಣೆಯಾಗುವ ಸಾಧ್ಯತೆಯಿದೆ ಎಂದು ಸಂಶೋಧಕರ ತಂಡ ತಿಳಿಸಿದೆ.