ಲಂಡನ್-ನಲ್ಲಿ ಒಂದೆಡೆ ಐಸಿಸ್-ನಿಂದ ಭಯೋತ್ಪಾದನೆ, ಇನ್ನೊಂದೆಡೆ ಅಗ್ನಿ ದುರಂತದಲ್ಲಿ ಮುಸ್ಲಿಂ ಯುವಕರಿಂದ ಪ್ರಾಣ ರಕ್ಷಣೆ!!

0
482

ಮುಸ್ಲಿಂ ಯುವಕರು ಅಂದ್ರೆ ಯಾವಾಗಲೂ ಕೋಮು ಗಲಭೆ, ಹೊಡೆದಾಟ, ಬಡಿದಾಟದ ಸುದ್ದಿಗಳೇ ಹೆಚ್ಚಾಗಿ ವರದಿಯಾಗುತ್ತವೆ. ಇದು ಎಷ್ಟೋ ಜನರಲ್ಲಿ ಕೆಟ್ಟ ಅಭಿಪ್ರಾಯ ಮೂಡಿಸಿದ್ದೂ ಇದೆ. ಇದರ ಮಧ್ಯೆ ಲಂಡನ್ ನಲ್ಲಿ ನೆಡೆದೆ ಅಗ್ನಿ ದುರಂತದಲ್ಲಿ ಸಿಲುಕಿದ ವ್ಯಕ್ತಿಗಳನ್ನು ರಕ್ಷಿಸುವಲ್ಲಿ ಮುಸ್ಲಿಂ ಯುವಕರ ಪಾತ್ರ ದೊಡ್ಡದೆಂದು ಬೆಂಕಿ ದುರಂತದ ಸಂತ್ರಸ್ತೆ ಹೇಳಿದ್ದಾರೆ. ಅದಕ್ಕೆ ಈ ವಿಡಿಯೋ ಸಾಕ್ಷಿ.

ಗ್ರೆನ್‌ಫೆಲ್ ಟವರ್‌ ನಲ್ಲಿ ಸಂಭವಿಸಿದ ಅಗ್ನಿ ದುರಂತದ ಸ್ಥಳದಿಂದ ಕಟ್ಟಡದಲ್ಲಿ ಸಿಲುಕಿದ ವ್ಯಕ್ತಿಗಳನ್ನು ಸುರಕ್ಷಿತವಾಗಿ ಹೊರಗೆ ತರುವಲ್ಲಿ ಮುಸ್ಲಿಂ ಯುವಕರು ವಹಿಸಿದ ಪಾತ್ರದ ಬಗ್ಗೆ ಸಂತ್ರಸ್ತ ಮಹಿಳೆ ಒಬ್ಬರು ಮಾತಡಯುತ್ತಿರುವುದನ್ನು ಈ ವಿಡಿಯೋ ತುಣುಕಿನಲ್ಲಿ ನೋಡಬಹುದು.

“ಮಸೀದಿಯಿಂದ ಪ್ರಾಥನೆ ಮುಗಿಸಿಕೊಂಡು ಬರುತ್ತಿದ್ದು, ಅಗ್ನಿ ದುರಂತದ ಸ್ಥಳದಲ್ಲಿ ಕಟ್ಟಡದಲ್ಲಿ ಸಿಲುಕಿದ ವ್ಯಕ್ತಿಗಳ ಸಂರಕ್ಷಣೆಯಲ್ಲಿ ಈ ಯುವಕರು ನೆರವಾಗಿದ್ದಾರೆ. ಅವರು ಬರದೇ ಇದಿದ್ದರೆ ಬಹಳಷ್ಟು ಜನ ಸಾಯುತ್ತಿದ್ದರು. ಅಷ್ಟೇ ಅಲ್ಲ ಸಂತ್ರಸ್ತ ಜನರಿಗೆ ನೀರಿನ ಬ್ಯಾಗ್ ಮತ್ತು ಸಹಾಯ ಹಸ್ತ ನೀಡಿದ್ದಾರೆ”. ಎಂದು ಆ ಮಹಿಳೆ ಹೇಳಿದ್ದಾರೆ.