ಜೀವನದಲ್ಲಿ ಹಣ, ಯಶಸ್ಸು, ಅದೃಷ್ಟ, ಅರೋಗ್ಯ ನಿಮ್ಮನ್ನು ಹುಡುಕಿಕೊಂಡು ಬರಬೇಕಾ? ಹಾಗಾದ್ರೆ ಈ ಅದೃಷ್ಟ ಗಿಡಗಳನ್ನು ತಂದು ಮನೆಯಲ್ಲಿಡಿ..

0
1226

ಪ್ರತಿಯೊಬ್ಬರಿಗೂ ಜೀವನದಲ್ಲಿ ನೆಮ್ಮದಿಯ ಜೊತೆಗೆ ಹಣ, ಸಂಪತು, ಆರೋಗ್ಯ, ಮನೆಯಲ್ಲಿ ಸಂತೋಷದ ವಾತಾವರಣ ಇದ್ದರೆ ಸಾಕು ಜೀವನದಲ್ಲಿ ಮತ್ತೆ ಯಾವುದೇ ತಾಪತ್ರೆಗಳು ಇರುವುದಿಲ್ಲ ಎನ್ನುವುದರಿಂದ ಎಲ್ಲರು ಇದ್ದನೆ ಭಾವಿಸುತ್ತಾರೆ. ಆದರೆ ಕೆಲವೊಬ್ಬರಿಗೆ ಈ ಅದೃಷ್ಟ ಒಲಿದರೆ ಇನ್ನೂ ಕೆಲವರಿಗೆ ಇದು ಬರೋದೆ ಇಲ್ಲ, ಇದಕ್ಕೆ ಜ್ಞಾನಿಗಳು ಪೂರ್ವಗ್ರಹಚಾರ ಎಂದು ಕರೆಯುತ್ತಾರೆ. ಅದರಂತೆ ಹಣೆಬರಹವು ನಮಗಿಲ್ಲ ಎನ್ನುವರು ಹೆಚ್ಚಿಗೆ ಇದ್ದಾರೆ. ಇವೇಲವೂಗಳ ನಡುವೆ. ಮನೆಯಲ್ಲಿ ಸಸ್ಯಗಳನ್ನು ನೆಡುವುದು ಜೀವನದಲ್ಲಿ ಸಿಗಲಾರದ ಅದೃಷ್ಟವನ್ನು ತಂದು ಕೊಡುತ್ತೇವೆ ಎನ್ನುವುದು ನಂಬಿಕೆಯಾಗಿದೆ. ಅದರಂತೆ ಅದೃಷ್ಟ ತರುವ ವಾಸ್ತು ಗಿಡಗಳನ್ನು ನಿಮ್ಮ ಮನೆಯಲ್ಲಿಟ್ಟು ನೋಡಿ ಜೀವನದಲ್ಲಿ ಹಣ, ಯಶಸ್ಸು ಹುಡುಕಿಕೊಂಡು ಬರುತ್ತದೆ.

ಮನೆಯಲ್ಲಿಡುವ ಅದೃಷ್ಟದ ಗಿಡಗಳು ಇವು:

1. ಲೋಳೆಸರದ ಗಿಡ ( Aloevera plant)

Also read: ಮನೆಯ ಮುಂದೆ ಗಿಡಗಳನ್ನು ಬೆಳೆಸಿ ಸೊಳ್ಳೆಗಳನ್ನು ಓಡಿಸಿ..!!

ಲೋಳೆಸರದ ಗಿಡವನ್ನು ಅದೃಷ್ಟದ ಗಿಡವಾಗಿ ಕಾಣಲಾಗುತ್ತಿದ್ದು, ಮನೆಯ ಮುಂದಿಟ್ಟಿರೆ ಯಾವುದೇ ದುಷ್ಟ ಶಕ್ತಿಗಳು ಒಳಗೆ ಬರುವುದಿಲ್ಲ ಎಂದು ಹೇಳುತ್ತಾರೆ. ಅದರಂತೆ ವಾಸ್ತು ಗಿಡಗಳ ಪಟ್ಟಿಯಲ್ಲಿ ಅಲೋವೆರಾವು ಧನಾತ್ಮಕ ಶಕ್ತಿಯನ್ನು ಸೆಳೆದುಕೊಳ್ಳುವಂತಹ ತುಂಬಾ ಪ್ರಬಲ ಗಿಡವೆಂದು ಪರಿಗಣಿಸಲಾಗಿದೆ. ಅಲೋವೆರಾದ ಗಿಡದಲ್ಲಿ ಇರುವಂತಹ ದೊಡ್ಡ ರಂಧ್ರಗಳು ದೊಡ್ಡ ಪ್ರಮಾಣದಲ್ಲಿ ಕಾರ್ಬನ್ ಡೈಆಕ್ಸೈಡ್ ನ್ನು ಹೀರಿಕೊಳ್ಳುವಲ್ಲಿ ತುಂಬಾ ಪರಿಣಾಮಕಾರಿಯಾಗಿದೆ ಮತ್ತು ಇದು ಆಮ್ಲಜನಕವನ್ನು ಹೊರಗೆ ಹಾಕುವುದು. ಇದರಿಂದಾಗಿ ಇದು ಗಾಳಿಯ ಶುದ್ಧೀಕರಣಕ್ಕೆ ಅದ್ಭುತವಾಗಿರುವ ಗಿಡವಾಗಿದೆ. ಅಷ್ಟೇ ಅಲ್ಲದೆ ಮನೆಯ ಒಳಗಡೆ ಅಲೋವೆರಾದ ಗಿಡವನ್ನು ಇಡುವುದರಿಂದ ಅದು ಆರೋಗ್ಯ ಮತ್ತು ಸಂಪೂರ್ಣ ಸಮೃದ್ಧಿಗೆ ತುಂಬಾ ಲಾಭಕಾರಿಯಾಗಿದೆ.

2. ತುಳಸಿ (Basil)

Also read: ತಾರಸಿ ತೋಟ ಮಾಡುವುದು ಹೇಗೆ..?? ಮನೆಯಲ್ಲಿ ಜಾಗವಿಲ್ಲದಿದ್ದರೂ ತಾರಸಿಯ ಸ್ವಲ್ಪ ಜಾಗದಲ್ಲೆ ಎಲ್ಲಾ ರೀತಿಯ ಗಿಡಗಳನ್ನು ಹೀಗೆ ಬೆಳೆಸಿ..

ತುಳಸಿಯು ತುಂಬಾ ಪವಿತ್ರ ಹಾಗೂ ಆರೋಗ್ಯವನ್ನು ಉಂಟು ಮಾಡುವಂತಹ ಗಿಡ ಎಂದು ನಂಬಲಾಗಿದೆ. ಹಿಂದೂ ಧರ್ಮದಲ್ಲಿ ತುಳಸಿಯನ್ನು ತುಂಬಾ ಪವಿತ್ರವೆಂದು ಪರಿಗಣಿಸಲಾಗಿದೆ ಮತ್ತು ಪ್ರತಿಯೊಂದು ಹಿಂದೂ ಮನೆಯ ಮುಂದೆಯು ಒಂದು ತುಳಸಿ ಗಿಡ ಇರುತ್ತದೆ. ತುಳಸಿ ಗಿಡವು ಧಾರ್ಮಿಕ ಕಾರಣಗಳಿಂದಾಗಿ ಮಾತ್ರ ತುಂಬಾ ಪ್ರಾಮುಖ್ಯತೆ ಪಡೆದಿಲ್ಲ. ಇದರಲ್ಲಿ ಅದ್ಭುತವಾದ ಆಯುರ್ವೇದ ಮತ್ತು ಚಿಕಿತ್ಸಕ ಗುಣಗಳನ್ನು ಹೊಂದಿದೆ. ವಾಸ್ತು ಪ್ರಕಾರ ತುಳಸಿ ತುಂಬಾ ಪ್ರಾಮುಖ್ಯತೆ ಪಡೆದಿದೆ. ಇದು ಗಾಳಿಯನ್ನು ಶುದ್ಧೀಕರಿಸುವುದು ಮತ್ತು ಇದರಿಂದಾಗಿಯೇ ಇದು ಈ ಪಟ್ಟಿಯಲ್ಲಿ ಅಗ್ರ ಸ್ಥಾನವನ್ನು ಪಡೆದುಕೊಂಡಿರುವುದು. ತುಳಸಿ ಗಿಡವನ್ನು ನೀವು ಮನೆಯ ಉತ್ತರ, ಪೂರ್ವ ಅಥವಾ ಈಶಾನ್ಯ ಭಾಗದಲ್ಲಿ ಇಡಬಹುದು. ಇದರಿಂದ ಅದೃಷ್ಟವೂ ಹುಡಿಕೊಂಡು ಬರುತ್ತದೆ.

3. ಪಾರಿಜಾತ ಗಿಡ (Jasmine)

Also read: ಮನಿ ಪ್ಲಾಂಟ್ ಮನೆಯಲ್ಲಿಟ್ಟರೆ ಏನಾಗುತ್ತದೆ.. ಇಟ್ಟರೂ ಕೂಡ ಅದನ್ನು ಯಾವ ದಿಕ್ಕಿನಲ್ಲಿಡಬೇಕು.. ಇದರಿಂದ ಆಗುವ ಒಳಿತು ಕೆಡಕುಗಳು ಇಲ್ಲಿವೆ ನೋಡಿ

ಪಾರಿಜಾತ ಗಿಡವು ಮನೆಯಲ್ಲಿ ಆಸ್ತಿ ಹಾಗೂ ಪ್ರೀತಿಯನ್ನು ವೃದ್ಧಿಸುತ್ತದೆ ಎಂದು ಹೇಳುತ್ತಾರೆ. ಜಾಸ್ಮೀನ್ ಎಣ್ಣೆಯು ಕಾಮೋತ್ತೇಜಕಕ್ಕೆ ಬಳಸಲಾಗುತ್ತಿದ್ದು, ಈ ಗಿಡದ ಹೂವಿನ ಪರಿಮಳ ಮನಸ್ಸಿಗೆ ಮುದ ನೀಡುವುದರೊಂದಿಗೆ ಶಾಂತಿಯುತ ವಾತಾವರಣವನ್ನು ನಿರ್ಮಿಸುತ್ತದೆ.

4. ಅದೃಷ್ಟದ ಬಿದಿರು (Bamboo)

Also read: ಇವೆಲ್ಲಾ ರಾತ್ರಿಯಲ್ಲು ಸಹ ಸಾಕಷ್ಟು ಆಮ್ಲಜನಕವನ್ನು ಬಿಡುಗಡೆ ಮಾಡುವ ಸಸ್ಯಗಳು – ಮನೆಯಲ್ಲಿದ್ದರೆ ಬಹಳ ಒಳ್ಳೆಯದು!

ಅದೃಷ್ಟದ ಗಿಡಗಳಲ್ಲಿ ವಾಸ್ತುಶಾಸ್ತ್ರದ ಪ್ರಕಾರವಾಗಿ ಅದೃಷ್ಟದ ಬಿದಿರು ತುಂಬಾ ಮುಖ್ಯವಾದ ಗಿಡವಾಗಿದೆ. ಇದು ಮನೆ ಹಾಗೂ ಹಣಕ್ಕೆ ತುಂಬಾ ಒಳ್ಳೆಯದು. ಇದು ಆರೋಗ್ಯ, ಸಂಪತ್ತು ಮತ್ತು ಸಮೃದ್ಧಿಯನ್ನು ತರುವುದು. ಇದರ ಎರಡು ಕೊಂಬೆಯು ದಂಪತಿಗೆ ಪ್ರೀತಿ ಮತ್ತು ಅದೃಷ್ಟ ತರುವುದು. ಮೂರು ಕೊಂಬೆಗಳು ಸಂತೋಷ ಹಾಗೂ ದೀರ್ಘಾಯುಷ್ಯ ತರುವುದು. ಆರು ಕೊಂಬೆಗಳು ಅದೃಷ್ಟ ಮತ್ತು ಸೌಹಾರ್ದತೆ ತರಲಿದೆ. ಅದೇ ಐದು ಕೊಂಬೆಗಳು ಆರೋಗ್ಯವನ್ನು ಕೊಡುವುದು. ಏಳು ಕೊಂಬೆಗಳಿದ್ದರೆ ಆಗ ಸಂಪೂರ್ಣ ಮನೆಗೆ ಉತ್ತಮ ಆರೋಗ್ಯವು ಸಿಗುವುದು. ಈ ಗಿಡವನ್ನು ಮನೆಯ ಪೂರ್ವ ಭಾಗದಲ್ಲಿಟ್ಟರೆ ಒಳ್ಳೆಯದು.

5. ಬೇಸಿಲ್ (Basil)

Also read: ನಿಮ್ಮ ಮನೆಸುತ್ತ ಬೆಳೆಯುವ ಗೋಣಿಸೊಪ್ಪಿನ ಉಪಯೋಗಗಳು ತಿಳಿದರೆ ನೀವು ಯಾವತ್ತೂ ಬಿಸಾಡೋಕೆ ಹೋಗಲ್ಲ.

ಈ ಗಿಡ ಪ್ರೀತಿ, ಆರೋಗ್ಯ, ಆಸ್ತಿ, ಸೌಂದರ್ಯ ಹಾಗೂ ಉತ್ಸಾಹವನ್ನು ಹೆಚ್ಚಿಸುತ್ತದೆ ಎಂದು ಹೇಳುತ್ತಾರೆ. ವೈಜ್ಞಾನಿಕವಾಗಿ ಬೇಸಿಲ್ ಗಿಡದ ಎಲೆಗಳನ್ನು ಸೇವಿಸುವುದರಿಂದ ರಕ್ತ ಪರಿಚಲನೆ ಉತ್ತಮರೀತಿಯಲ್ಲಿ ಆಗುವುದಲ್ಲದೆ, ಯಾವುದೇ ಕೆಲಸವನ್ನು ಮಾಡಬೇಕಾದರೂ ಉತ್ಸಾಹವನ್ನು ಹೆಚ್ಚುಸುತ್ತದೆ. ನಂಜುನಿರೋಧಕ ಮತ್ತು ಸೂಕ್ಷ್ಮಕ್ರಿಮಿಗಳ ಶಮನಕಾರಿ ಮಾಡುತ್ತದೆ.

6. ಗೋಲ್ಡನ್ ಪಾಥೋಸ್ (golden pothos)

Also read: ಕೇದಿಗೆ ಹೂವಿನಲ್ಲಿ ಇಷ್ಟೆಲ್ಲಾ ಆರೋಗ್ಯಕರ ಗುಣಗಳಿವೆ ಗೊತ್ತಾ..!

ಇದನ್ನು ದುಷ್ಟಶಕ್ತಿಗಳ ವಿರುದ್ಧ ಹೋರಾಡುವ ಗಿಡವೆಂದು ಮನೆಯೊಳಗೆ ಇಡುತ್ತಾರೆ. ಹೌದು ಗಾಳಿಯಲ್ಲಿರುವ ದುಷ್ಟಶಕ್ತಿಗಳಾದ ಫಾರ್ಮಲ್ ಡೀಹೈಡ್, ಬೆಂಬೀನ್, ಕ್ಲೈಲಿನ್ ಇವುಗಳ ವಿರುದ್ಧ ಹೋರಾಡಿ ನಿಮ್ಮ ಆರೋಗ್ಯವನ್ನು ರಕ್ಷಿಸುತ್ತದೆ

7. ಮನಿ ಪ್ಲ್ಯಾಂಟ್( money plant)

Also read: ಅಲರ್ಜಿ, ಪಿತ್ತ ಗಂಧೆ, ಕ್ರಿಮಿ ಕೀಟಗಳ ಕಡಿತದ ಉರಿ ನಿವಾರಿಸುವಲ್ಲಿ ಅದ್ಭುತ ಗುಣವುಳ್ಳ ದೊಡ್ಡಪತ್ರೆ.

ಈ ಗಿಡದ ಮಹತ್ವವನ್ನು ನಾಸಾ ಕೂಡ ತಿಳಿಸಿದ್ದು, ಬೇರೆ ಯಾವುದೇ ಗಿಡಕ್ಕಿಂತಲೂ ಚೆನ್ನಾಗಿ ಮನಿಪ್ಲ್ಯಾಂಟ್ ಗಾಳಿಯನ್ನು ಶುದ್ಧೀಕರಿಸುತ್ತದೆ ಎಂದು ಹೇಳಿದ್ದಾರೆ. ಅಷ್ಟೇ ಅಲ್ಲದೆ ಗಾಳಿಯಲ್ಲಿ ಇರುವಂತಹ ಹಾನಿಕಾರಕ ವಿಕಿರಣವನ್ನು ಇದು ತೆಗೆದು ಹಾಕುವ ಕಾರಣದಿಂದಾಗಿ ವಾಸ್ತು ಗುರುಗಳು ಮತ್ತು ವಿಜ್ಞಾನಿಗಳು ಈ ಗಿಡವನ್ನು ಎಲೆಕ್ಟ್ರಾನಿಕ್ ಸಾಧನಗಳಾಗಿರುವಂತಹ ಲ್ಯಾಪ್ ಟಾಪ್, ವೈಫೈ ರೌಟರ್, ಟಿವಿ ಹತ್ತಿರ ಇಡಲು ಸೂಚನೆ ನೀಡಿದ್ದಾರೆ. ಮನಿಪ್ಲ್ಯಾಂಟ್ ಒತ್ತಡ, ಆತಂಕ, ವಾಗ್ವಾದ ಮತ್ತು ನಿದ್ರಾಹೀನತೆ ಕಡಿಮೆ ಮಾಡುವುದು ಎಂದು ಹೇಳಲಾಗುತ್ತದೆ. ಇದನ್ನು ಕೋಣೆಯ ಅಗ್ನೇಯ ಭಾಗದಲ್ಲಿ ಇಡುವುದು ಸೂಕ್ತವಾಗಿದೆ.

8. ಸ್ಪೈಡರ್ ಪ್ಲಾಂಟ್ (spider plant)

Also read: ಆಯುರ್ವೇದದಲ್ಲಿ ಹೇಳಿರುವಂತೆ ಗೋಣಿಸೊಪ್ಪು ಉಪಯೋಗಿಸಿ, ರಕ್ತಾನೂ ಶುದ್ಧಿಯಾಗುತ್ತೆ ಅರೋಗ್ಯನೂ ವೃದ್ಧಿಯಾಗುತ್ತೆ…

ಗಾಳಿಯಲ್ಲಿರುವ ವಿಷಕಾರಿ ಅಂಶವನ್ನು ಹೋಗಲಾಡಿಸಿ, ಮನೆಯೊಳಗೆ ಶುದ್ಧವಾದ ಗಾಳಿಯನ್ನು ಬಿಡುತ್ತದೆ. ಅದರಲ್ಲೂ ಈ ಗಿಡವನ್ನು ಅಡುಗೆ ಮನೆಯ ಸಮೀಪದಲ್ಲಿ ಇಟ್ಟರೆ ಕಾರ್ಬನ್ ಮಾನೋಕ್ಲೈಡ್ ಹೀರಿಕೊಂಡು ಶುದ್ಧುವಾದ ಗಾಳಿಯನ್ನು ನೀಡುತ್ತದೆ. ಹಾಗೆಯೇ ಇದರ ಅದೃಷ ವೆಂದರೆ ಸಂಪತ್ತನ್ನು ಹೊಂದಿಸುವ ವಾಸ್ತು ಇದರಲ್ಲಿದೆ ಎಂದು ಹೇಳಿದ್ದಾರೆ.