ಶಾಸ್ತ್ರದ ಪ್ರಕಾರ ಮಂಗಳಮುಖಿಯರಿಂದ ಮಂಗಳವಾರ ಈ ವಸ್ತುಗಳನ್ನು ಪಡೆದರೆ ಊಹಿಸಲು ಸಾಧ್ಯವಾಗದಷ್ಟು ಹಣ ಸಿಗುತ್ತೆ..?

0
1482

ಸಮಾಜದಲ್ಲಿ ಬೇಡವಾದ ವಸ್ತುಗಳು ಒಂದು ಕಾಲಕ್ಕೆ ಉಪಯೋಗ ಬಂದೆ ಬರುತ್ತೆವೆ. ಹಾಗೆಯೇ ಹುಟ್ಟಿದ ಪ್ರತಿಯೊಂಬ್ಬರಲ್ಲು ಅವರದೆ ಶಕ್ತಿ ಮಹತ್ವ ಇದೆ ಇರುತ್ತೆ. ಇದಕ್ಕೆ ಸಾಕ್ಷಿ ಮಂಗಳಮುಖಿಯರು ಇವರನ್ನು ಅಸಹ್ಯವಾಗಿ ಕಾಣುವ ಜನರು ತಮ್ಮ ಮನೆಯಿಂದ ಸಮಾಜದಿಂದ ಹೊರ ಹಾಕಿದ್ದಾರೆ. ಅಷ್ಟೇ ಅಲ್ಲದೆ ಎಲ್ಲಿವೂ ಕೆಲಸವನ್ನು ನೀಡಲು ನಿರಾಕರಿಸುತ್ತಾರೆ. ಆದರಿಂದ ಭಿಕ್ಷೆಯೇ ಜೀವನಕ್ಕೆ ಆಧಾರವೆಂದು ಬದುಕುತ್ತಿರುವ ತೃತೀಯ ಲಿಂಗಿಗಳು ತಮ್ಮದೇ ಆದ ಶಕ್ತಿಯನ್ನು ಹೊಂದಿದ್ದಾರೆ. ಇವರನ್ನು ಹೊಸ ಅಂಗಡಿ, ಕಂಪನಿ ಪೂಜೆಗೆ ಮತ್ತು ಮಗುವಿನ ನಾಮಕರಣಕ್ಕೆ ಕರೆಯಿಸುತ್ತಾರೆ. ಇದರಿಂದ ಶುಭವಾಗುತ್ತೆ ಅಂತ ಶಾಸ್ತ್ರದಲ್ಲಿ, ಕೆಲವೊಂದು ಪುರಾಣಗಳಲ್ಲಿ ತಿಳಿಸಿದ್ದಾರೆ.

ಮಂಗಳಮುಖಿ ಎಂದರೆ ಯಾರು?

Also read: ನೀವು ಅಪ್ಪಿ ತಪ್ಪಿಯೂ ಮಂಗಳವಾರ ಮಾತ್ರ ಈ ಕೆಲಸಗಳನ್ನು ಮಾಡಿದರೆ ಆರ್ಥಿಕ ನಷ್ಟ ಅನುಭವಿಸೋದು ಖಂಡಿತ..!

ಮಂಗಳಮುಖಿ ಎಂದರೆ ಹೆಣ್ಣು ಅಲ್ಲದ ಗಂಡು ಅಲ್ಲದ ಒಂದು ವ್ಯಕ್ತಿಯ ಮನಃಸ್ಥಿತಿ. ‘ತೃತೀಯ ಲಿಂಗ’ ಅಥವಾ ‘ಮಂಗಳಮುಖಿ’ ಎನ್ನುವ ಪರಿಭಾಷೆಗಳು ಇತ್ತೀಚೆಗೆ ಅಧಿಕೃತವಾಗಿ ಮತ್ತು ಹೆಚ್ಚಾಗಿ ಬಳಕೆಯಾಗುತ್ತಿವೆ. ಈ ಪದಗಳ ಬಳಕೆಗಿಂತ ಮುಂಚೆ ಇಂತಹ ವರನ್ನು ನಪುಂಸಕ, ಚಕ್ಕ, ಕೋಜಾ, ಹಿಜಡಾ, ಹಿಜರಾ, ಚನ್ನಪಟ್ಟಣ, ದ್ವಿಲಿಂಗಿ, ಶಿಖಂಡಿ ಮುಂತಾದ ಪದಗಳು ಬಳಕೆಯಾಗುತ್ತಿದ್ದವು. ಮಂಗಳಮುಖಿ ಅಂದರೆ ಒಂದು ಗಂಡು ಆತ್ಮದ ಒಳಗೆ ಹೆಣ್ಣು ಆತ್ಮ ಇದ್ದ ಹಾಗೆ.

ಆಶೀರ್ವಾದ ಪಡೆದರೆ ಹಣ ಸಿಗುತ್ತಾ?

Also read: ಗೋಪಾಲಪುರದ ಮಾರಮ್ಮನ ಶಕ್ತಿಯ ಬಗ್ಗೆ ಕೇಳಿದರೆ ಖಂಡಿತ ಆಶ್ಚರ್ಯವಾಗುವುದು.. ನಂಬಿದವರಿಗೆ ಎಂದೂ ಕೈಬಿಡದ ಅತ್ಯಂತ ಶಕ್ತಿಯುತ ದೇವರು..

ಪುರಾಣದ ಪ್ರಕಾರ ಈ ತರದ ಮಂಗಳಮುಖಿಯರಲ್ಲಿ ದಿವ್ಯ ಶಕ್ತಿ ಅಡಗಿರುತ್ತದೆ, ಹೀಗೆ ಇವರ ಹತ್ತಿರ ಕೆಲವು ಆಶೀರ್ವಾದವನ್ನು ಪಡೆದರೆ ನಿಮಗೆ ಒಳ್ಳೆಯದಾಗುತ್ತದೆ. ಅದರಲ್ಲೂ ಕೂಡ ಮಕ್ಕಳಿಗೆ ಅವರಿಂದ ಆಶೀರ್ವಾದ ಸಿಕ್ಕರೆ ತುಂಬಾ ಒಳ್ಳೆದಾಗುತ್ತೆ ಎನ್ನುತ್ತದೆ ಪುರಾಣ. ಇದೆ ಕಾರಣಕ್ಕೆ ಕೆಲವೊಂದು ಗುಪ್ತವಾದ ಪುಜೆಗಳನ್ನು ಮಂಗಳಮುಖಿಯರಿಂದ ಮಾಡಿಸುತ್ತಾರೆ. ಅದರಿಂದ ಒಳ್ಳೆಯದು ಆಗಿರುವ ಹಲವಾರು ಉದಾಹರಣೆಗಳಿವೆ.

ಯಾವ ದಿನ ತೃತೀಯ ಲಿಂಗಿಗಳಿಂದ ಹಣ ಪಡೆಯಬೇಕೆ?

Also read: ರಾಶಿಯ ಪ್ರಕಾರ ನಿಮಗೆ ಶುಭ ದಿನ ಯಾವುದು ಗೊತ್ತೇ?? ಇಲ್ಲಿದೆ ನೋಡಿ ಡೀಟೇಲ್ಸ್.. ಒಳ್ಳೆಯ ಕೆಲಸ ಶುರು ಮಾಡುವುದಿದ್ದರೆ ಈ ದಿನದಲ್ಲೇ ಮಾಡಿ

ಮಂಗಳವಾರದಂದು 11, 21, 101 ರೂಪಾಯಿಗಳನ್ನು ತೆಗೆದುಕೊಂಡು ಹೋಗಿ ನಿಮ್ಮ ಹತ್ತಿರ ದಲ್ಲಿ ಇರುವಂತಹ ಮಂಗಳಮುಖಿಯರಿಗೆ ಕೊಟ್ಟು ನಾಳೆ ಬರುತ್ತೇನೆ ಎನ್ನುವ ಶಬ್ದವನ್ನು ಬಳಕೆ ಮಾಡಬೇಕು. ಹೀಗೆ ಬಳಕೆ ಮಾಡಿದ ನಂತರ ಅವರಿಗೆ ಒಂದು ರೂಪಾಯಿ ವಾಪಸ್ ಕೊಡುವಂತೆ ಕೇಳಬೇಕು. ಹಾಗೆಯೇ ಕೊಟ್ಟ ನಂತರ ಅವರಿಂದ ಆಶೀರ್ವಾದವನ್ನು ಪಡೆದುಕೊಂಡು ಬನ್ನಿ. ಇದರಿಂದ ಆಶೀರ್ವಾದ ಸಿಕ್ಕಂತಾಗುತ್ತದೆ. ಹಾಗೂ ನಿಮ್ಮ ಹಣದ ಸಮಸ್ಯೆ ಕೂಡ ನಿವಾರಣೆಯಾಗುತ್ತದೆ.

ಮಂಗಳಮುಖಿಯಿಂದ ತಂದಂತಹ ಒಂದು ರೂಪಾಯಿ ಹಣವನ್ನು ಬಟ್ಟೆಯಲ್ಲಿ ಕಟ್ಟಿ ದೇವರಕೋಣೆಯಲ್ಲಿ ಇಟ್ಟು ಪೂಜೆ ಮಾಡಿದರೆ ನಿಮಗೆ ಹಿಡಿದಂತಹ ದರಿದ್ರ ಬಿಟ್ಟು ಹೋಗುತ್ತದೆ, ಹಾಗೆ ನಿಮಗೆ ಇರುವಂತಹ ಆರ್ಥಿಕ ಸಮಸ್ಯೆ ನಿವಾರಣೆಯಾಗುತ್ತದೆ. ಇನ್ನೊಂದು ವಿಧಾನ ಎಂದರೆ ಮಂಗಳಮುಖಿಯರಿಂದ ಸ್ವಲ್ಪ ಉಪ್ಪನ್ನು ತೆಗೆದುಕೊಂಡು ಬಂದು ಮನೆಯಲ್ಲಿ ಇಡುವುದರಿಂದ ಕೂಡ ನಿಮಗೆ ಆರ್ಥಿಕವಾಗಿ ಮುಂದುವರೆಯುವುದು ತುಂಬಾ ಸಹಾಯವಾಗುತ್ತದೆ. ಹಾಗೂ ನಿಮ್ಮ ಅದೃಷ್ಟವು ಕೂಡ ಬದಲಾಗುತ್ತದೆ.

ಅದೃಷ್ಟ ಹೇಗೆ ಬದಲಾಗುತ್ತೆ?

Also read: ಕೇರಳದ ಜನರು ಬಿಳಿಯ ಸೀರೆ ಉಡುವ ಸಂಪ್ರದಾಯ ಬಂದಿದ್ದು ಹೇಗೆ..?ಕೇರಳದ ಜನರಿಗೆ ಯಾಕೆ ಕೊಲ್ಲೂರ ಮೂಕಾಂಬಿಕೆ ಕುಲದೇವರು ಅನ್ನುವುದರ ಹಿಂದಿನ ರಹಸ್ಯ ಇಲ್ಲಿದೆ ನೋಡಿ…

ಪ್ರತಿಯೊಬ್ಬ ಇರುವ ಹಣದ ಸಮಸ್ಯೆ ಎಷ್ಟೇ ದುಡಿದರು ಕೂಡ ಹಣ ಕೈಗೆ ಸಿಗುತ್ತಿಲ್ಲ ಎಂದು ಪರದಾಡುವುದು ತಪ್ಪುತ್ತೆ ಅದು ಹೇಗೆ ಅಂದರೆ ದೇಹದಲ್ಲಿ ಧನಾತ್ಮಕ ಶಕ್ತಿ ಗಳು ಕೂಡ ಬೇಕಾಗುತ್ತದೆ. ಈ ತರದ ವಿಧಾನವನ್ನು ನೀವು ಪಾಲಿಸಿದರೆ ನಿಮ್ಮ ದೇಹದಲ್ಲಿ ಧನಾತ್ಮಕ ಶಕ್ತಿ ಬಂದು ನಿಮಗೆ ಹಣವು ತಾನಾಗಿಯೇ ಒಲಿದು ಬರುತ್ತದೆ. ಯಾರು ಕೂಡ ಅದೃಷ್ಟ ಇಲ್ಲದೆ ಇದ್ದಲ್ಲಿ ಏನು ಸಾಧಿಸಲು ಆಗುವುದಿಲ್ಲ. ಅದೃಷ್ಟವನ್ನು ಸಾಧಿಸಲು ಮಂಗಳಮುಖಿಯರ ಆಶಿರ್ವಾದದ ಜೊತೆಗೆ ದೇವರ ಕರುಣೆ ಬೇಕಾಗುತ್ತದೆ.