ರಸ್ತೆ ನಿರ್ಮಿಸಲು ವಿಫಲವಾದ ಸರ್ಕಾರಕ್ಕೆ ಸೆಡ್ಡು ಹೊಡೆದು ತಾವೇ ರಸ್ತೆ ನಿರ್ಮಿಸಿ ಮಾದರಿಯಾಗಿದ್ದಾರೆ ಈ ಗ್ರಾಮಸ್ಥರು!!

0
487

ಕರ್ನಾಟಕದಲ್ಲಿ ಈಗ ಚುನಾವಣಾ ಕಾವು ರಂಗೇರುತ್ತಾ ಇದೆ. ಎಲ್ಲಿ ಹೋದ್ರೂ ಚುನವಾಣೆ ಬಗ್ಗೆ ಚರ್ಚೆ ನಡೆಯುತ್ತಿದೆ. ಅವರು ಕೆಲಸ ಮಾಡಿಲ್ಲ. ಇವರು ಕೆಲಸ ಮಾಡಿಲ್ಲ. ಅವರಿಗೆ ಈ ಬಾರಿ ಓಟು ಹಾಕ ಬೇಕು.. ಈವರಿಗೆ ಹಾಕಬಾರದು ಎಂಬ ಮಾತುಗಳು ಸಾಮಾನ್ಯ. ಆದ್ರೆ, ನಮಗೆ ಬೇಕಾದ ಸೌಲಭ್ಯಗಳನ್ನು ಜನ ಪ್ರತಿನಿಧಿಗಳು ನೀಡಲು ವಿಫಲರಾದ್ರೆ, ಏನು ಮಾಡಬೇಕು ಎಂಬುದಕ್ಕೆ ಬೆಸ್ಟ್​​ ಉದಾಹರಣೆ ಈ ಗ್ರಾಮ..

ಕೋಲಾರ ಜಿಲ್ಲೆಯ ಮುಳಬಾಗಿಲು ತಾಲೂಕಿನ ಪೂಜೇನಹಳ್ಳಿ ತಮ್ಮ ಗ್ರಾಮದ ಚಿತ್ರಣವನ್ನೇ ಬದಲಿಸಿದ್ದಾರೆ. ಕೇಳಿ ಕೇಳಿ ಸುಸ್ತಾಗಿ ಜನ ಪ್ರತಿನಿಧಿಗಳಿಂದ ಆಗದ ಕೆಲಸವನ್ನು ಗ್ರಾಮಸ್ಥರು ಮಾಡಿ ಸೈ ಎನಿಸಿಕೊಂಡಿದ್ದಾರೆ. ಸರ್ಕಾರ ಕೋಟಿ, ಕೋಟಿ ಹಣವನ್ನು ಗ್ರಾಮದ ಅಭ್ಯುದಯಕ್ಕೆ ಮೀಸಲು ಇಡುತ್ತದೆ. ಆದ್ರೆ ಈ ಹಣ ಸದ್ಬಳಿಕೆ ಆಗುತ್ತಲೇ ಇಲ್ಲ. ಈ ಬಗ್ಗೆ ರೊಚಿಗೆದ್ದ ಜೆ.ಓಬೇನಹಳ್ಳಿಯ ಗ್ರಾಮಸ್ಥರು ಹಿಡಿದ ದಾರಿ ಬೇರೆ ಗ್ರಾಮಸ್ಥರಿಗೂ ಮಾದರಿ.

ಜೆ.ಓಬೇನಹಳ್ಳಿಯ ಗ್ರಾಮದವರೆಲ್ಲಾ ಒಗ್ಗೂಡಿ ರಸ್ತೆ ಮಾಡಿದ್ದಾರೆ. ಬೈರಕೂರಿನವರೆಗೆ ಉತ್ತಮ ರಸ್ತೆ, ಅಲ್ಲಿಂದ ಈ ಗ್ರಾಮಗಳಿಗೆ ಇನ್ನು ರಸ್ತೆ ಕಾರ್ಯ ನಡೆದಿರಲಿಲ್ಲ. ಸರ್ಕಾರ ಹಣವನ್ನು ಬಿಡುಗಡೆ ಮಾಡಿದ್ರು, ಪ್ರಭಾವಿಗಳು ಹಾಗೂ ಬೀದಿ ಬದಿಯ ಹೊಲದ ಜಮೀನವರು ರಸ್ತೆ ಮಾಡಲು ತೊಡಕಾಗಿದ್ದರು. ಇನ್ನು ರಸ್ತೆನೇ ಇಲ್ಲ ಅಂದ್ಮೆಲೆ ಸಾರಿಗೆ ಮಾತೇ ಇಲ್ಲ. ಮನವಿ ನೀಡಿದ್ರೂ ಯಾವ ಪ್ರಯೋಜನಕ್ಕೆ ಬಂದಿರಲಿಲ್ಲ. ಇದರಿಂದ ಬೇಸತ್ತ ಗ್ರಾಮಸ್ಥರು ಮನೆಗೊಬ್ಬರಂತೆ ರಸ್ತೆ ನಿರ್ಮಾಣ ಕಾರ್ಯದಲ್ಲಿ ಕೈ ಜೋಡಿಸಿದ್ದಾರೆ.

ಇನ್ನು ರಸ್ತೆಯನ್ನು ಸಮನಾಗಿಸಲು ತಮ್ಮಲ್ಲಿನ ಟ್ರ್ಯಾಕ್ಟರ್​ ಹಾಗೂ ಜೆಸಿಬಿ ಬಳಿಸಿಯೇ 2 ಕಿಮಿ ಸುಸಜ್ಜಿತ ರಸ್ತೆ ನಿರ್ಮಿಸಿದ್ದಾರೆ. ಈ ಕಾರ್ಯಕ್ಕೆ ರಸ್ತೆ ಪಕ್ಕದ ಜಮೀನ ರೈತರೂ ವಿರೋಧ ವ್ಯಕ್ತ ಪಡಿಸಿದ್ರೂ, ಲೆಕ್ಕಿಸಿದೆ ರಸ್ತೆ ಕಾಮಗಾರಿ ಪೂರ್ಣ ಗೊಳಿಸಿದ್ದಾರೆ. ಈ ಮೂಲಕ ನಾವು ಯಾರ ಸಹಾಯಕ್ಕೂ ಕಾಯುವುದಿಲ್ಲ ಎಂದು ತಿಳಿಸಿದ್ದಾರೆ. ಈ ಕಚ್ಚಾ ರಸ್ತೆಗೆ ಜನ ಪ್ರತಿನಿಧಿಗಳು ಡಂಬರ್​​ ಹಾಕಿಸಿದ್ರೆ ಒಳ್ಳೆಯದು ಎಂದು ಗ್ರಾಮಸ್ಥರು ತಿಳಿಸಿದ್ದಾರೆ.