ಈ ಕಳ್ಳರು ನೋಡ್ರಪ್ಪಾ..ಕದ್ದಿದ್ದನ್ನು ವಾಪಾಸ್ ಕೊಟ್ಟು ಒಡವೆಗಳನ್ನು ಜೋಪಾನವಾಗಿ ಬ್ಯಾಂಕ್ ನಲ್ಲಿ ಇಡೀ ಎಂದು ಲೆಟರ್ ಬರೆದಿದ್ದಾರೆ…

0
756

ಏನದ್ರು ಕಳ್ಳರು ಮನೆಯಲ್ಲಿ ವಸ್ತುಗಳನ್ನು ಕದ್ದುಕೊಂಡು ಹೋದ್ರೆ, ಎಳ್ಳು ನೀರು ಬಿಡೋದಷ್ಟೇ ಕೆಲಸ.. ಇಲ್ಲಾಂದ್ರೆ ಪೊಲೀಸ್ ಠಾಣೆಗೆ ದೂರು ನೀಡಿ ದೇವರೆ ಮೊರೆ ಹೋಗೋದು ಕಾಮನ್.. ಆದ್ರೆ ಇಲ್ಲೊಂದು ಇಟ್ರಸ್ಟಿಂಗ್ ಸ್ಟೋರಿ ಇದೆ.. ಆ ಸ್ಟೋರಿ ಕೇಳಿದ್ರೆ, ನೀವು ಅವರ ನಂಬರ್ ಕೊಡಿ ಅವರಿಗೆ ಕಾಲ್ ಮಾಡಿ ಏನು ಮಾಡಿದ್ರಿ ಎಂತ ಕೇಳ್ತೀವಿ ಅಂತಿರಾ..?

ಅಷ್ಟೆಲ್ಲಾ ಯೋಚನೆ ಮಾಡೋಕೆ ಹೋಗಬೇಡಿ.. ನೀವು ಸಹ ನಿರ್ಮಲ ಭಕ್ತಿಯಿಂದ ಕೇಳಿಕೊಂಡ್ರೆ ಸಿಕ್ಕೆ ಸಿಗುತ್ತದೆ ಎನ್ನೋದಕ್ಕೆ ಇಲ್ಲಿದೆ ತಾಜಾ ಉದಾಹರಣೆ..

ಹಾಡುಹಗಲೇ ಮಂಗಳೂರಿನ ಅಡುಮರೋಳಿ ಸಮೀಪದ ಶೇಕರ್ ಕುಂದಾರ್ ಅವರ ಮನೆಯಲ್ಲಿ ಕಳ್ಳರು ತಮ್ಮ ಕೈ ಚಳಕ ತೋರಿಸ್ತಾರೆ. ಇವರ ನಾಜುಕು ಕೆಲಸಕ್ಕೆ 92 ಪವನ್ ಚಿನ್ನ ಮತ್ತು 13 ಸಾವಿರ ಹಣ ಇವರ ಜೇಬು ಸೇರುತ್ತದೆ. ಮನೆಗೆ ಬಂದು ಮನೆಯ ಒಡೆಯರು ನೋಡಿದಾಗ, ಮನೆಯಲ್ಲಿ ಕಳ್ಳತನ ಆದ ಬಗ್ಗೆ ತಿಳಿಯುತ್ತದೆ. ಬಳಿಕ ಪಕ್ಕದ ಕಂಕನಾಡಿ ನಗರ ಪೊಲೀಸ್‍ರಿಗೆ ದೂರು ನೀಡುತ್ತಾರೆ.

ಏನಪ್ಪ ಇಷ್ಟು ವರ್ಷದಿಂದ ಕೂಡಿಸಿಟ್ಟಿದ ಹಣ, ಹೊಟ್ಟೆ ಕಟ್ಟಿ ಮಾಡಿದ್ದ ಬಂಗಾರ, ಮುಂದಿನ ದಿನಗಳಿಗೆ ಇರಿಸಿಕೊಂಡಿದ್ದ ಕಾಂಚಾಣ ಎಲ್ಲ ಕಳ್ಳರ ಹುಂಡಿಗೆ ಹೋಯ್ತಲ್ಲಾ ಎಂದು ದೇವರ ಮುಂದೇ ತಮ್ಮ ದುಖಃವನ್ನು ತೋಡಿಕೊಂಡಿದ್ದಾರೆ. ಈ ಪ್ರಕರಣ ನಡೆದ ಎರಡು ದಿನಗಳ ಬಳಿಕ ಕಳ್ಳರಿಗೆ ಅದ್ಯಾವ ಒಳ್ಳೆಯ ಬುದ್ಧಿ ಬಂದಿದೆ ಏನು ನಾ ಕಾಣೆ.. ಕದ್ದ ಬಂಗಾರವನ್ನು ಪ್ಲಾಸ್ಟಿಕ್‍ನಲ್ಲಿ ಸುತ್ತಿ ಮನೆಯ ಹೊರಗಡೆ ಬೀಸಾಡಿದ್ದಾರೆ. ಮನೆಯ ಹೊರಗಡೆ ಬಿದ್ದ ಗಂಟನ್ನು ಕಂಡು ಮನೆಯ ಮಾಲೀಕರು ಅದನ್ನು ತೆರೆದು ನೋಡಿದಾಗ ಅಚ್ಚರಿ ಎದುರಾಗಿದೆ.

ಹೌದು ಕಳ್ಳರು ಸೋಮವಾರ ಮನೆಯ ಮುಂದೆ ಬೀಸಾಡಿದ್ದ ಚೀಲದಲ್ಲಿ ಕಳೆದುಕೊಂಡಿದ್ದ ಬಂಗಾರ ಸಿಗುತ್ತದೆ. ಮತ್ತು ಆ ಚೀಲದಲ್ಲಿ ಒಂದು ಚೀಟಿ ಇರುತ್ತದೆ. ನಿಮ್ಮ ಮನೆಯಲ್ಲಿ ಕಳ್ಳರು ಬಂಗಾರವನ್ನು ಕದ್ದು ಓಡುತ್ತಿರುವುದನ್ನು ನಾವು ನೋಡಿದೆವು. ತಕ್ಷಣ ನಾವು ಅವರನ್ನು ಹಿಂಬಾಲಿಸಿ ಚಿನ್ನವನ್ನು ಪಡೆಯುವಲ್ಲಿ ಯಶ್ವಿಯಾಗಿದ್ದೇವೆ. ನಾವು ನಿಮಗೆ ನೇರವಾಗಿ ಬಂದು ತಲುಪಿಸಿದ್ರೆ ಮತ್ತೇನು ನೀವೇ ಕಳ್ಳರು ಎಂದು ತಪ್ಪು ತಿಳಿಯಬಾರದು ಎಂದು ಈ ರೀತಿಯಾಗಿ ಮಾಡಿದ್ದಾಗಿ ತಿಳಿಸಿದ್ದಾರೆ.
ಇನ್ನು ಮನೆಯ ಒಡೆತಿ ತಾನು ದೇವರಿಗೆ ಹರಿಕೆ ಹೊತ್ತಿದ್ದು, ಇದರ ಫಲವಾಗಿಯೇ ನನ್ನ ಚಿನ್ನ ಮರಳಿದೆ. ದೇವರಿಗೆ ಹರಿಕೆ ತೀರಿಸ ಬೇಕು ಎಂದು ಹೇಳಿದ್ದಾರೆ.