ಈ ರೀತಿಯ ಗುಣಗಳು ಇದ್ದರೆ ಆತನನ್ನು ಬಿಟ್ಟು ಬಿಡಿ..!

0
4623

ಜೀವನ ಸಂಗಾತಿಯ ಆಯ್ಕೆ ಎನ್ನುವುದು ಒಂದು ಅಗ್ನಿಪರೀಕ್ಷೆಯಿದ್ದಂತೆ. ಅದರಲ್ಲೂ ಮಹಿಳೆಯರು ತಮ್ಮ ಜೀವನ ಸಂಗಾತಿಯ ಆಯ್ಕೆ ಮಾಡುವಾಗ ಕೆಲವೊಂದು ವಿಚಾರಗಳನ್ನು ತುಂಬಾ ಗಂಭೀರವಾಗಿ ಪರಿಗಣಿಸುತ್ತಾರೆ. ಹುಡುಗನ ಹಿನ್ನೆಲೆ, ಆತನ ಗುಣ, ವೃತ್ತಿ ಹೀಗೆ ಹಲವಾರು.

Also read: ದಪ್ಪ ಹೆಂಡತಿಯಿಂದ ಜೀವನದಲ್ಲಿ ಖುಷಿ ಜಾಸ್ತಿ ಅಂತೆ; ಹುಡುಗಿ ದಪ್ಪ ಅಂತ ಮದುವೆಗೆ ಒಪ್ಪದೇ ಇರುವ ಹುಡುಗರು ಈ ಮಾಹಿತಿ ಓದಲೇಬೇಕು..

ಹದಿಹರೆಯದಲ್ಲಿ ಹುಡುಗಿಯರು ಒಂದು ಹಂತ ದಾಟಿದ ಬಳಿಕ ಮಹಿಳೆಯರು ತಮ್ಮ ಜೀವನ ಸಂಗಾತಿಯ ಬಗ್ಗೆ ತುಂಬಾ ಯೋಚಿಸುತ್ತಾರೆ. ಆತ ಹೆಚ್ಚು ಸುಂದರವಾಗಿರದಿದ್ದರೂ ಪರವಾಗಿಲ್ಲ. ಆತನಲ್ಲಿ ಕೆಲವೊಂದು ಗುಣಗಳು ಇರಲೇಬೇಕು ಎಂದು ನಿರ್ಧರಿಸಿರುತ್ತಾರೆ. ಹುಡುಗನಲ್ಲಿ ಯಾವ ಗುಣಗಳು ಇದ್ದರೆ ಮಹಿಳೆಯರು ಆತನನ್ನು ನಿರಾಕರಿಸುತ್ತಾರೆ ಕೋಪ ಪದೇ ಪದೇ ಕೋಪ ಮಾಡಿಕೊಳ್ಳುವ ವ್ಯಕ್ತಿ ನಿಮ್ಮ ಜೀವನವನ್ನು ನರಕ ಮಾಡಬಹುದು.

  • ಮೊದಲ ಸಲ ಹುಡುಗನನ್ನು ಭೇಟಿಯಾದಾಗ ನಿಮಗೆ ಈ ಲಕ್ಷಣಗಳು ಕಾಣಿಸಿದರೆ ದೂರ ಹೋಗಿಬಿಡಿ.
  • ಪ್ರತಿಯೊಬ್ಬರ ಮೇಲೆ ಕೋಪ ಮಾಡಿಕೊಂಡು ತನ್ನ ಅಧಿಕಾರ ದರ್ಪ ತೋರಿಸುವ ವ್ಯಕ್ತಿ ನಿಮ್ಮ ಮೇಲೆ ಕೂಡ ತನ್ನ ಅಧಿಕಾರ ದರ್ಪವನ್ನು ತೋರಿಸಬಹುದು. ಆಕ್ರಮಶೀಲತೆ ಪ್ರತಿಯೊಂದು ವಿಷಯದಲ್ಲೂ ತನ್ನ ದೈಹಿಕ ಬಲವನ್ನು ತೋರಿಸುವ ವ್ಯಕ್ತಿಯು ನಾಗರಿಕತೆಯನ್ನು ಹೊಂದಿಲ್ಲವೆಂದರ್ಥ.
  • ಹುಡುಗನು ತನ್ನ ದೈಹಿಕ ಬಲದಿಂದ ಎದುರಿನವರ ಮೇಲೆ ಪ್ರಾಬಲ್ಯ ತೋರಿಸಿದರೆ ನೀವು ತಕ್ಷಣ ಇಲ್ಲವೆಂದು ಹೇಳಿಬಿಡಿ.
  • ಈಗ ಆತ ನಿಮಗೆ ಹೀರೋನಂತೆ ಕಾಣಬಹುದು. ಆದರೆ ಮುಂದೆ ನಿಮ್ಮ ಜೀವನ ನರಕವಾಗಬಹುದು. ಅಹಂಕಾರ ತುಂಬಾ ಸೊಕ್ಕು ಹಾಗೂ ಅಹಂಕಾರವನ್ನು ಹೊಂದಿರುವ ಹುಡುಗ ನಿಮ್ಮ ಮಾತನ್ನು ತಾಳ್ಮೆಯಿಂದ ಕೇಳಲು ತಯಾರಿಲ್ಲ ಮತ್ತು ನಿಮ್ಮ ಬಗ್ಗೆ ಕಾಳಜಿ ವಹಿಸದವನನ್ನು ದೂರವಿಡಿ. ಯಾಕೆಂದರೆ ಇಂತಹ ವ್ಯಕ್ತಿಗಳು ಯಾವತ್ತೂ ತಮ್ಮದೇ ಸರಿ ಎಂದು ಅಂದುಕೊಳ್ಳುತ್ತಾರೆ.
  • ಕೆಟ್ಟ ಚಟ ದಿನದ ಆರಂಭ ಮತ್ತು ಅಂತ್ಯದಲ್ಲಿ ಚಟದೊಂದಿಗೆ ಇರುವ ವ್ಯಕ್ತಿಯನ್ನು ನೀವು ದೂರವಿಡಿ. ಯಾಕೆಂದರೆ ಇಂತಹ ಹುಡುಗನಿಗೆ ನಿಮ್ಮ ಬಗ್ಗೆ ಕಾಳಜಿ ಇರಲ್ಲ. ಆತನ ಚಟ ಆತನ ಹಣವನ್ನು ಮಾತ್ರವಲ್ಲದೆ ನಿಮ್ಮ ಹಣವನ್ನು ಸುಡುವುದು.
  • ನಿಂದನೀಯ ಪ್ರವೃತ್ತಿ ಇತರರನ್ನು ನಿಂದಿಸಿ ತಾನು ಖುಷಿ ಪಡುವಂತಹ ವ್ಯಕ್ತಿಯಿಂದ ದೂರವಿರುವುದು ತುಂಬಾ ಒಳ್ಳೆಯದು. ಕೆಲವೊಂದು ಸಲ ನಿಂದನೆಯು ತುಂಬಾ ಕೆಟ್ಟದಾಗಿರುತ್ತದೆ. ಕೆಲವು ಪುರುಷರು ಭಾವನಾತ್ಮಕವಾಗಿ ನಿಂದಿಸುತ್ತಾರೆ.
  • ನಿಮ್ಮ ಜೀವನವನ್ನು ಆತ ನಿಯಂತ್ರಿಸಲು ಪ್ರಯತ್ನಿಸಿದರೆ ಆಗ ತಕ್ಷಣ ಬೇಡವೆನ್ನಿ. ಅಡಿಯಾಳಾಗಿ ಭಾವಿಸುವುದು ಹೆಚ್ಚಿನ ಶ್ರೀಮಂತಿಕೆಯನ್ನು ಹೊಂದಿರುವ ವ್ಯಕ್ತಿ ಯಾವಾಗಲೂ ನಿಮ್ಮನ್ನು ಅಡಿಯಾಳಾಗಿ ನೋಡಿಕೊಂಡರೆ ಮತ್ತು ನಿಮಗೆ ಜೀವನದಲ್ಲಿ ಸಮಾನ ಸ್ಥಾನಮಾನ ನೀಡದಿದ್ದರೆ ಅಂತಹ ವ್ಯಕ್ತಿ ಎಷ್ಟೇ ಶ್ರೀಮಂತನಾಗಿದ್ದರೂ ದೂರವಿಡಿ.