ಹೃದಯದ ಕುರಿತ ಈ ಐದು ಎಚ್ಚರಿಕೆಗಳನ್ನು ಎಂದು ನಿರ್ಲಕ್ಷಿಸದಿರಿ…!

0
1960

Kannada News | Health tips in kannada

ಈಗ ಜಗತ್ತಿನಾದ್ಯಂತ ಕಾಡುತ್ತಿರುವ ಸಮಸ್ಯೆ ಎಂದರೆ ಅದು ಅನಾರೋಗ್ಯ , ಚಿಕ್ಕವರು , ದೊಡ್ಡವರು , ವಯಸ್ಸಾದವರು ಹೀಗೆ ಎಲ್ಲ ವಯೋಮಾನದವರಿಗೂ ಇದು ಕಾಡುತ್ತದೆ. ರೋಗ ಬಂದ ಮೇಲೆ ಚಿಕಿತ್ಸೆ ತೆಗೆದುಕೊಳ್ಳುವದಕ್ಕಿಂತ ರೋಗ ಬಾರದೇ ಇರೋ ಹಾಗೆ ತಡೆಯೋದೆ ಬುದ್ದಿವಂತಿಕೆ. ರೋಗ ಬರುವ ಮುನ್ನ ಕೆಲವು ಎಚ್ಚರಿಕೆ ನೀಡುತ್ತವೆ , ಆ ಎಚ್ಚರಿಕೆಯನ್ನು ಸರಿಯಾಗಿ ಅರ್ಥಮಾಡಿಕೊಂಡು ವೈದ್ಯರನ್ನು ತಕ್ಷಣ ಸಂಪರ್ಕಿಸಿದರೆ ಅದರ ಪರಿಣಾಮ ತಗ್ಗಿಸಬಹುದು.

ಈ ೫ ಎಚ್ಚರಿಕೆಗಳು ನಿಮ್ಮ ಹೃದಯದ ಆರೋಗ್ಯದ ಕುರಿತು ತಿಳಿಸುತ್ತೇವೆ.

೧.ಬಲಹೀನತೆ :

ದೇಹದಲ್ಲಿ ಸುಲಭ ರಕ್ತ ಸಂಚಾರ ಒಂದು ದೊಡ್ಡ ಕಾರ್ಯ ನಿರ್ವಹಿಸುತ್ತದೆ , ಇದರಲ್ಲಿರುವ ಹಿಮೋ-ಗ್ಲೋಬಿನ್ ದೇಹದ ವಿವಿಧ ಅಂಗಗಳಿಗೆ ಆಮ್ಲಜನಕವನ್ನು ಪೂರೈಸುತ್ತದೆ. ಒಂದು ವೇಳೆ ನಿಮ್ಮ ಅಪಧಮನಿಗಳು ಕಿರಿದಾದರೆ , ಮಾಂಸಖಂಡಗಳಿಗೆ ಆಮ್ಲಜನಕ ಸರಿಯಾಗಿ ಪೂರೈಕೆ ಆಗದೆ ಸ್ನಾಯುವಿನ ಆಯಾಸ ಉಂಟಾಗುತ್ತದೆ ಇದರಿಂದ ಬಲಹೀನತೆ ಕಾಣಿಸುತ್ತದೆ. ಇದು ಹಾರ್ಟ್ ಅಟ್ಯಾಕ್ ನ ಲಕ್ಷಣಗಳು , ಇದು ನಿಮ್ಮಲ್ಲಿಯು ಕಂಡರೆ ಕೂಡಲೇ ವೈದ್ಯರನ್ನು ಸಂಪರ್ಕಿಸಿ.

೨.ಬಳಲಿಕೆ :

ಒಂದು ವೇಳೆ ಸ್ನಾಯುವಿನ ಆಯಾಸದ ಜೊತೆಗೆ ಆಗಾಗ ಬಳಲಿಕೆ , ಆಯಾಸ ಅಥವಾ ಸುಸ್ತು ನಿಮ್ಮನ್ನು ಕಾಡುತ್ತಿದ್ದರೆ ಅದು ನಿಮ್ಮ ರಕ್ತ ಸಂಚಾರ ಸರಿಯಾಗಿ ಆಗುತಿಲ್ಲವೆಂಬ ಲಕ್ಷಣಗಳು , ಇದು ಕೂಡ ಹಾರ್ಟ್ ಅಟ್ಯಾಕ್ ಪ್ರಥಮ ಲಕ್ಷಣಗಳು. ಒಂದು ವೇಳೆ ನಿಮಗೆ ನಿತ್ಯ ಬಿಡುವಿಲ್ಲದ ಕೆಲಸವಿದ್ದು , ಊಟ ಸರಿಯಾಗಿ ಮಾಡುತ್ತಿಲ್ಲವಾದ್ದರಿಂದ ಸುಸ್ತು ಆದರೆ ಇದು ನಿಮಗೆ ಅನ್ವಹಿಸುವುದಿಲ್ಲ.

೩.ಉಸಿರಾಟದ ತೊಂದರೆ :

ನಿಮಗೆ ಮೆಟ್ಟಿಲುಗಳು ಏರುವ ಅಥವಾ ಇಳಿಯುವ ಸಂದರ್ಭದಲ್ಲಿ ಅಥವಾ ಯಾವಾಗಲೂ ಉಸಿರಾಟದ ತೊಂದರೆ ಕಾಣಿಸಿಕೊಂಡರೆ ಅದು ನಿಮ್ಮ ಶ್ವಾಸಕೋಶಗಳಿಗೆ ಸರಿಯಾಗಿ ಕಾರ್ಯನಿರ್ವಹಿಸುತ್ತಿಲ್ಲ ಎಂದರ್ಥ. ಇದರಿಂದಲೂ ಸಹ ಹೃದಯಕ್ಕೆ ಹಾನಿ ಉಂಟಾಗುತ್ತದೆ. ಶ್ವಾಸಕೋಶ ಸರಿಯಾಗಿ ಕಾರ್ಯನಿರ್ವಹಿಸಲು ಅದಕ್ಕೆ ಸರಿಯಾದ ಆಮ್ಲಜನಕ ಅವಶ್ಯಕತೆ ಇರುತ್ತದೆ , ಇದು ಕೂಡ ಸರಿಯಾದ ರಕ್ತ ಸಂಚಾರದಿಂದ ಆಗುತ್ತದೆ.

೪.ತಲೆತಿರುಗುವಿಕೆ ಮತ್ತು ಅತಿಯಾದ ಬೆವರುವುದು :

ಒಂದು ವೇಳೆ ನಿಮ್ಮ ಮೆದುಳಿಗೆ ರಕ್ತ ಸಂಚಾರ ಕಡಿಮೆಯಾಗಿ , ಆಮ್ಲಜನಕ ಪೂರೈಕೆ ಕಡಿಮೆಯಾದರೆ ನಿಮಗೆ ತಲೆತಿರುಗುವುದು ಅಥವಾ ಸುತ್ತುವದು ಮತ್ತು ಅತಿಯಾದ ಬೆವರು ಬರುತ್ತದೆ.

೫.ಎದೆ ಭಾಗದಲ್ಲಿ ಒತ್ತಡ :


ನಿಮ್ಮ ಹೃದಯ ಹಾಗು ಅಪಧಮನಿಗಳು ಪರಿಸ್ಥಿತಿ ಹದಗೆಟ್ಟಾಗ ಈ ರೀತಿ ಎದೆಯ ಮೇಲೆ ಒತ್ತಡ ಆಗುತ್ತದೆ. ಇದೊಂದು ಗ೦ಭೀರವಾದ ಸಮಸ್ಯೆ , ಈ ರೀತಿ ಕಾಣಿಸಿಕೊಂಡರೆ ನೀವು ಆದಷ್ಟು ಬೇಗ ವೈದ್ಯರನ್ನು ಸಂಪಕಿಸಿ ಸೂಕ್ತ ಚಿಕಿತ್ಸೆ ಪಡೆಯುವುದು ಒಳ್ಳೆಯದು , ಇದರಿಂದ ನೀವು ಹಾರ್ಟ್ ಹಾರ್ಟ್ ಅಟ್ಯಾಕ್ ನಿಂದ ಉಳಿಯುವ ಸಾಧ್ಯತೆಗಳಿರುತ್ತವೆ.

Watch:

MRR ನ್ಯೂಲೈಫ್
ನ್ಯೂ ನಂ 7 , ಎರಡನೇ ಮಹಡಿ, 50 ಅಡಿ ರಸ್ತೆ,
ಹನುಮಂತನಗರ, ಬೆಂಗಳೂರು 50
ದೂರವಾಣಿ ಸಂಖ್ಯೆ: 9071904622 , 8217224840

Also Read: ಹೊಟ್ಟೆಯಲ್ಲಿ ಗ್ಯಾಸ್ ಜಾಸ್ತಿ ಆಗಿ ಟ್ರಬಲ್ ಆಗ್ತಿದ್ರೆ ಈ ಮನೆಮದ್ದುಗಳನ್ನು ಪಾಲಿಸಿ ತತ್ತಕ್ಷಣ ಪರಿಹಾರ ಹೊಂದಿ ..