ಜನಸಂಖ್ಯೆ ನಿಯಂತ್ರಣಕ್ಕೆ ಹೊಸ ಸಲಹೆ ತಿಳಿಸಿದ ಯೋಗ ಗುರು ಬಾಬಾ ರಾಮ್‌ದೇವ್; ಮೂರನೇ ಮಗುವಿಗೆ ಮತದಾನದ ಹಕ್ಕು ನಿಷೇಧಿಸುವಂತೆ ಸೂಚನೆ..

0
204

ದೇಶದಲ್ಲಿ ವರ್ಷದಿಂದ ವರ್ಷಕ್ಕೆ ಜನಸಂಖ್ಯೆ ಏರಿಕೆಯಾಗುತ್ತಿದ್ದು, ಪ್ರಪಂಚದಲ್ಲಿ ಚೀನಾ ಬಿಟ್ಟರೆ ಭಾರತವೇ ಎರಡನೇ ಸ್ಥಾನದಲ್ಲಿದೆ ಇದೆ ರೀತಿಯ ಬೆಳವಣಿಗೆ ಮುಂದುವರೆದರೆ ಕೆಲವೇ ವರ್ಷದಲ್ಲಿ ಚೀನಾ ದೇಶವನ್ನು ಹಿಂದೆಹಾಕಲಿದೆ. ಈ ಸಂಬಂಧ ಸರ್ಕಾರ ಎಷ್ಟೇ ಕ್ರಮವನ್ನು ಕೈಗೊಂಡರು ಜನ ಸಂಖ್ಯೆ ಏರುತಲೇ ಇದೆ. ಇದನ್ನು ನಿಯಂತ್ರಣಕ್ಕೆ ತರಲು ಯೋಗ ಗುರು ಬಾಬಾ ರಾಮ್‌ದೇವ್ ಹೊಸ ಉಪಾಯವನ್ನು ತಿಳಿಸಿದ್ದು ಮೂರನೇ ಮಗುವಿಗೆ ಮತದಾನದ ಹಕ್ಕು ನೀಡಬಾರದು ಎಂದು ಯೋಗ ಗುರು ಬಾಬಾ ರಾಮ್ ದೇವ್ ಹೇಳಿದ್ದಾರೆ.

ಹರಿದ್ವಾರದಲ್ಲಿ ಮಾತನಾಡಿದ ಅವರು, ದೇಶದ ಜನಸಂಖ್ಯೆ ಮುಂದಿನ 50 ವರ್ಷಗಳಲ್ಲಿ 150 ಕೋಟಿಗಿಂತ ಹೆಚ್ಚಾಗಬಾರದು. ನಾವು 150 ಕೋಟಿಗಿಂತ ಹೆಚ್ಚಿನ ಜನಸಂಖ್ಯೆಯನ್ನು ನಿಭಾಯಿಸಲು ಸಿದ್ಧರಾಗಿಲ್ಲ. ಹಾಗಾಗಿ ಕೇಂದ್ರ ಸರ್ಕಾರ ಮೂರನೇ ಮಗುವಿಗೆ ಮತ ಚಲಾವಣೆ ಹಕ್ಕು ನೀಡಬಾರದು. ಜತೆಗೆ ಮೂರನೇ ಮಗು ಚುನಾವಣೆಯಲ್ಲಿ ಸ್ಪರ್ಧಿಸಲು ನಿರ್ಬಂಧ ಹೇರಬೇಕು ಮತ್ತು ಸರ್ಕಾರದ ಯಾವುದೇ ಸೌಲಭ್ಯಗಳನ್ನು ನೀಡಬಾರದು. ಎಲ್ಲ ಧರ್ಮ, ಜಾತಿ, ಪಂಗಡಗಳಿಗೂ ಇದು ಅನ್ವಯವಾಗಬೇಕು. ಈ ಮೂಲಕ ಕೇವಲ 2 ಮಕ್ಕಳಾಗುವಂತೆ ನಿಗಾ ವಹಿಸಬೇಕು ಎಂದು ರಾಮ್ದೇವ್ ಸಲಹೆ ನೀಡಿದ್ದಾರೆ.

ಸದ್ಯ ಇರುವ ಪರಿಸ್ಥಿತಿ ನೋಡಿದರೆ ಮುಂದಿನ 50 ವರ್ಷಗಳಲ್ಲಿ ಭಾರತದ ಜನಸಂಖ್ಯೆ 150 ಕೋಟಿ ದಾಟಬಾರದು. ಯಾಕೆಂದರೆ ನಾವು ಅದಕ್ಕಿಂತ ಹೆಚ್ಚಿನ ಜನಸಂಖ್ಯೆಯನ್ನು ಸಹಿಸುವ ಶಕ್ತಿ ಹೊಂದಿಲ್ಲ. ಸರಕಾರ, ಮೂರನೇ ಮಗುವಿಗೆ ಮತದಾನದ ಹಕ್ಕು, ಚುನಾವಣೆಗೆ ಸ್ಪರ್ಧಿಸುವ ಹಕ್ಕು ಮತ್ತು ಸರಕಾರ ನೀಡುವ ಎಲ್ಲ ರೀತಿಯ ಸೌಲಭ್ಯಗಳನ್ನು ಪಡೆಯುವ ಹಕ್ಕನ್ನು ನಿರಾಕರಿಸುವ ಕಾನೂನನ್ನು ಜಾರಿಗೆ ತಂದಾಗ ಮಾತ್ರ ಇದು ಸಾಧ್ಯವಾಗುತ್ತದೆ.

ಈ ಕ್ರಮವನ್ನು ಯಾವುದೇ ಧರ್ಮದವರಾಗಿರಲಿ, ಹೆಚ್ಚು ಮಕ್ಕಳಿಗೆ ಜನ್ಮ ನೀಡುವುದಿಲ್ಲ ಎಂದು ರಾಮ್‌ದೇವ್ ಅಭಿಪ್ರಾಯಿಸಿದ್ದಾರೆ. ಗೋರಕ್ಷಕರು ಮತ್ತು ಗೋಸಾಗಾಟಗಾರರ ಮಧ್ಯೆ ನಡೆಯುವ ಸಂಘರ್ಷವನ್ನು ಕಡಿಮೆ ಮಾಡಲು ಗೋಹತ್ಯೆಯನ್ನು ಸಂಪೂರ್ಣವಾಗಿ ನಿಷೇಧಿಸುವುದೊಂದೇ ಪರಿಹಾರ, ದೇಶದಲ್ಲಿ ಮದ್ಯ ನಿಷೇಧಕ್ಕೆ ಆಗ್ರಹಿಸಿದ ರಾಮ್‌ದೇವ್, ಮುಸ್ಲಿಂ ದೇಶಗಳಲ್ಲಿ ಮದ್ಯಪಾನ ನಿಷೇಧಿಸಲಾಗಿದೆ. ಅಲ್ಲಿ ಅದು ಸಾಧ್ಯವಾಗಿರುವಾಗ ನಮ್ಮ ದೇಶದಲ್ಲಿ ಯಾಕೆ ಸಾಧ್ಯವಿಲ್ಲ? ನಮ್ಮದು ಋಷಿಮುನಿಗಳ ನಾಡು. ಭಾರತದಲ್ಲಿ ಮದ್ಯದ ಮೇಲೆ ಸಂಪೂರ್ಣ ನಿಷೇಧ ಹೇರಬೇಕು ಎಂದು ರಾಮ್‌ದೇವ್ ಆಗ್ರಹಿಸಿದ್ದಾರೆ.

ಈ ಹಿಂದೆವೂ ಕೂಡ ಇದೆ ವಿಷಯವಾಗಿ ಕೇಳಿಕೆ ನೀಡಿ ಎರಡಕ್ಕಿಂತ ಹೆಚ್ಚು ಮಕ್ಕಳನ್ನು ಹೊಂದಿರುವವರ ಮತದಾನದ ಹಕ್ಕನ್ನು ಸರಕಾರ ಕಿತ್ತುಕೊಳ್ಳಬೇಕು ”ಜನಸಂಖ್ಯೆ ಒಂದೇ ಸಮನೆ ಹೆಚ್ಚುತ್ತಿದೆ. ಇದರ ನಿಯಂತ್ರಣಕ್ಕೆ ಸರಕಾರ ಕಠಿಣ ಕ್ರಮಕ್ಕೆ ಮುಂದಾಗಬೇಕು. ಹಿಂದೂ, ಮುಸ್ಲಿಂ ಹೀಗೆ ಯಾವುದೇ ಧರ್ಮವಾದರೂ ಸರಿ, ಇಬ್ಬರು ಮಕ್ಕಳನ್ನು ಹೊಂದಿರುವವರ ಮತದಾನದ ಹಕ್ಕನ್ನು ಸರಕಾರ ಹಿಂಪಡೆಯಬೇಕು. ಅವರ ಮಕ್ಕಳಿಗೆ ಸರಕಾರಿ ಶಾಲೆಗಳಲ್ಲಿ ಪ್ರವೇಶ ನೀಡಬಾರದು. ಸರಕಾರಿ ಆಸ್ಪತ್ರೆಗಳಲ್ಲಿ ಚಿಕಿತ್ಸೆಯ ಸೌಲಭ್ಯ ಒದಗಿಸಬಾರದು. ಹೀಗೆ ಮಾಡಿದಲ್ಲಿ ತನ್ನಿಂದತಾನೇ ಜನಸಂಖ್ಯೆ ನಿಯಂತ್ರಣಕ್ಕೆ ಬರಲಿದೆ,” ಎಂದಿದ್ದಾರೆ. ಕಳೆದ ನವೆಂಬರ್‌ನಲ್ಲಿ ರಾಮ್‌ದೇವ್‌ ಇದೇ ರೀತಿ ಜನಸಂಖ್ಯೆ ನಿಯಂತ್ರಣಕ್ಕೆ ಉಪಾಯಗಳನ್ನು ಹೇಳಿದ್ದರಲ್ಲದೇ ”ನನ್ನಂತಹ ಬ್ರಹ್ಮಚಾರಿಗಳಿಗೆ ವಿಶೇಷ ಸ್ಥಾನ ನೀಡಿ ಗೌರವಿಸಬೇಕು,” ಎಂದಿದ್ದರು.

Also read: ನರೇಂದ್ರ ಮೋದಿಯವರ ಮೇಲಿನ ಅಭಿಮಾನವನ್ನು ತೋರಿಸಲು ಮೇ 23ರಂದು ಜನಿಸಿದ ಮಗುವಿಗೆ `ನರೇಂದ್ರ ಮೋದಿ’ ಎಂದು ಹೆಸರಿಟ್ಟ ಮುಸ್ಲಿಂ ದಂಪತಿ..