13ರ ವಯಸ್ಸಿನಲ್ಲಿ 135 ಪುಸ್ತಕ ಬರೆದು, 4 ವಿಶ್ವದಾಖಲೆ ನಿರ್ಮಿಸಿದ ಬಾಲಕನಿಗೆ ಲಂಡನ್ ವರ್ಲ್ಡ್ ಯೂನಿವರ್ಸಿಟಿಯಿಂದ ಡಾಕ್ಟರೇಟ್ ಆಫರ್..

0
1095

ಭಾರತದ ದೇಶದಲ್ಲಿ ಈಗಿರುವ ಮಕ್ಕಳ ಸಾಧನೆ ನೋಡಿದರೆ ಮುಂದೊಂದು ದಿನ ಭಾರತದಲ್ಲಿ ವಿಜ್ಞಾನಿಗಳು, ಸಾಹಿತಿಗಳು, ಯುವ ಸಾಧಕರ ಸಂಖ್ಯೆ ಮುಗಿಲ್ಲೆತ್ತರಕ್ಕೆ ಸಾಗುತ್ತೆ ಎನ್ನುವುದರಲ್ಲಿ ಯಾವುದೇ ಅನುಮಾನವಿಲ್ಲ, ಏಕೆಂದರೆ ಇನ್ನೂ ಆಟವಾಡುವ ವಯಸ್ಸಿನಲ್ಲಿರುವ ಮಕ್ಕಳ ಯೋಚನೆ ದೊಡ್ಡ ಸಾಧಕರನ್ನು ಮೀರಿಸುವ ಮಟ್ಟದಲ್ಲಿ ಎದ್ದು ಕಾಣುತ್ತಿದ್ದು, ವಿಶ್ವದಾಖಲೆಯನ್ನು ಮಾಡುತ್ತಿರುವ ಚಿಕ್ಕ ವಯಸ್ಸಿನ ಮಕ್ಕಳ ಬುದ್ಧಿಶಕ್ತಿ ಭಾರತದ ಹೆಸರನ್ನು ಮತ್ತಷ್ಟು ಬೆಳೆಸುತ್ತಿದೆ. ಇದಕ್ಕೆ ಸಾಕ್ಷಿಯಾದ 13 ನೇ ವಯಸ್ಸಿನ ಬಾಲಕ ಈಗಾಗಲೇ 4 ವಿಶ್ವದಾಖಲೆ ಮಾಡಿ ಮಾದರಿಯಾಗಿದ್ದಾನೆ.

Also read: ಇಲ್ಲೊಬ್ಬ ಮಾದರಿ ಟೆಕ್ಕಿ; ಕೃಷಿಯಲ್ಲೇ ಸಾಧನೆ ಮಾಡುತ್ತಿರುವ ಇವರ ಆದಾಯ ಕೇಳಿದ್ರೆ, ಕೃಷಿ ಬಿಟ್ಟು ನಗರಕ್ಕೆ ಬರುವರಿಗೆ ಶಾಕ್ ಆಗುತ್ತೆ..

ಹೌದು ಈಗಿನ ಯುವ ಪೀಳಿಗೆ ಸ್ವಲ್ಪ ಜಾಸ್ತಿನೆ ಮುಂದಿದೆ ಎನ್ನುತ್ತಾರೆ. ಆದರೆ ಈಗಿನ ಪರಿಸ್ಥಿತಿ ನೋಡಿದರೆ ಸ್ವಲ್ಪ ಅಲ್ಲ ಬಹಳಷ್ಟು ಮುಂದಿದೆ ಎನ್ನುವುದು ಈ ಪೋರನ ಸಾಧನೆಯನ್ನು ನೋಡೇ ಅನಿಸುತ್ತೆ. ಹೌದು ಈಗ ಬರಿ 13 ರ ಹರಯಕ್ಕೆ ಕಾಲಿಡುತ್ತಿರುವ ಉತ್ತರ ಪ್ರದೇಶದ 13 ವರ್ಷದ ಪೋರನೊಬ್ಬ ಅವರ ಎತ್ತರಕ್ಕಿಂತ ಹೆಚ್ಚಿನ ಸಾಧನೆ ಮಾಡುತ್ತಿದ್ದಾನೆ. ಈ ಚಿಕ್ಕ ವಯಸ್ಸಿನಲ್ಲಿ ಧರ್ಮ ಹಾಗೂ ಗಣ್ಯರ ಜೀವನಚರಿತ್ರೆ ಕುರಿತು ಸುಮಾರು 135 ಪುಸ್ತಕಗಳನ್ನು ಬರೆದು, 4 ವಿಶ್ವದಾಖಲೆಗಳನ್ನು ಮಾಡಿ ಚಿಕ್ಕ ವಯಸ್ಸಿನಲ್ಲೇ ಅದ್ವಿತೀಯ ಸಾಧನೆಗೈದು ಇಡಿ ಪ್ರಪಂಚಕ್ಕೆ ಮಾದರಿಯಾಗಿದ್ದಾನೆ.

135 ಪುಸ್ತಕ 4 ವಿಶ್ವದಾಖಲೆ?

Also read: ಕೊಳಗೇರಿಯಲ್ಲಿ ಸ್ವಂತ ಮನೆ ಕಟ್ಟುವ ಕನಸು ಕಟ್ಟಿಕೊಂಡಿದ ಬಡ ತಾಯಿಗೆ ಬಂಗಲೆಯನ್ನೇ ಕಟ್ಟಿಸಿದ ಮಗ, ಮಿಲಿಯನ್ ವಹಿವಾಟು ಸಂಸ್ಥೆಯ ಒಡೆಯನಾದ..

ಇಂತಹ ಸಾಧನೆಗೈದ ಬಾಲಕನ ಹೆಸರು ಮೃಗೇಂದ್ರ ರಾಜ್. ಈತ ತನ್ನ 6ನೇ ವಯಸ್ಸಿನಲ್ಲೇ ಪುಸ್ತಕ ಬರೆಯುವ ಹವ್ಯಾಸ ಆರಂಭಿಸಿದ್ದ ಈತ ಮೊದಲು ಕವನ ಸಂಕಲನವನ್ನು ಬರೆದಿದ್ದನು. ಆ ನಂತರ ಕಾಲ ಕಳೆಯುತ್ತಿದ್ದಂತೆ ಬಾಲಕನ ಜೊತೆ ಆತನ ಪುಸ್ತಕ ಬರೆಯುವ ಆಸಕ್ತಿ ಕೂಡ ಹೆಚ್ಚಾಗುತ್ತಾ ಬಂತು. ಈವರೆಗೆ ಮೃಗೇಂದ್ರ ಬರೋಬ್ಬರಿ 135 ಪುಸ್ತಕಗಳನ್ನು ಬರೆದಿದ್ದಾನೆ. `ಆಜ್ ಕಾ ಅಭಿಮನ್ಯು’ ಎಂಬ ಕಾವ್ಯನಾಮದಲ್ಲಿ ಮೃಗೇಂದ್ರ ಪುಸ್ತಕಗಳನ್ನು ಬರೆಯುತ್ತಿದ್ದಾನೆ. ಈ ಬಗ್ಗೆ ಪ್ರತಿಕ್ರಿಯೆ ನೀಡಿದ ಬಾಲಕ, ನಾನು ರಾಮಾಯಣದಲ್ಲಿರುವ 51 ಪಾತ್ರಗಳ ಬಗ್ಗೆ ವಿಶ್ಲೇಷಿಸಿ ಪುಸ್ತಕಗಳನ್ನು ಬರೆದಿದ್ದೇನೆ. ನಾನು ಬರೆದ ಎಲ್ಲಾ ಪುಸ್ತಕಗಳು 25 ರಿಂದ 100 ಪುಟಗಳನ್ನು ಹೊಂದಿದೆ. ನನ್ನ ಈ ಪ್ರತಿಭೆಯನ್ನು ಮೆಚ್ಚಿ ಡಾಕ್ಟರೇಟ್ ಪದವಿ ನೀಡುವುದಾಗಿ ಲಂಡನ್ ವರ್ಲ್ಡ್ ಯೂನಿವರ್ಸಿಟಿ ಆಫ್ ರೆಕಾರ್ಡ್ಸ್ ಆಫರ್ ನೀಡಿತ್ತು ಎಂದು ತಿಳಿಸಿದ್ದಾನೆ.

Also read: ಬರಿಗೈಯಲ್ಲಿ ಪ್ರಾರಂಭ ಮಾಡಿದ ಮೈಸೂರು cycle ಬ್ರ್ಯಾಂಡ್ ಅಗರಬತ್ತಿ ವ್ಯಾಪಾರವನ್ನು ಸಾವಿರಾರು ಕೋಟಿಯ ಕಂಪನಿಯಾಗಿ ಮಾಡಿದ ಕನ್ನಡಿಗನ ಸಾಧನೆ, ನಿಮಗೂ ಸ್ಪೂರ್ತಿಯಾಗುತ್ತೆ..

ಅದರಂತೆ ನನ್ನ ತಾಯಿ ಕೂಡ ಖಾಸಗಿ ಶಾಲೆಯಲ್ಲಿ ಶಿಕ್ಷಕಿಯಾಗಿದ್ದು, ನಾನು ಪುಸ್ತಕಗಳನ್ನು ಬರೆಯುವ ಬಗ್ಗೆ ತೋರಿಸುತ್ತಿದ್ದ ಆಸಕ್ತಿಯನ್ನು ಗುರುತಿಸಿ ನನಗೆ ಬೆಂಬಲಿಸಿದರು. ಜೊತೆಗೆ ನನ್ನ ತಂದೆ ರಾಜ್ಯ ಸಕ್ಕರೆ ಕಾರ್ಖಾನೆ ಹಾಗೂ ಕಬ್ಬು ಅಭಿವೃದ್ಧಿ ಇಲಾಖೆಯಲ್ಲಿ ಉದ್ಯೋಗದಲ್ಲಿದ್ದಾರೆ. ಇವರು ಕೂಡ ಬೆಂಬಲ ನೀಡಿದರು ಎಂದು ಮೃಗೇಂದ್ರ ಹೇಳಿದ್ದು, ಮುಂದೆ ನಾನು ಬರಹಗಾರನಾಗಲು ಇಷ್ಟಪಡುತ್ತೇನೆ. ವಿವಿಧ ವಿಷಯಗಳ ಬಗ್ಗೆ, ಬೇರೆ ಬೇರೆ ಆಯಾಮದಲ್ಲಿ ಇನ್ನೂ ಹಲವಾರು ಪುಸ್ತಕಗಳನ್ನು ಬರೆಯುತ್ತೇನೆ ಎಂದಿದ್ದಾನೆ. ಇನ್ನೂ ಈ ಪೋರನ ಸಾಧನೆಗೆ ಉತ್ತರ ಪ್ರದೇಶ ಸಿಎಂ ಯೋಗಿ ಆಧಿತ್ಯನಾಥ್ ಸೇರಿದಂತೆ ಹಲವು ಗಣ್ಯರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.