ನೀವು ಬೈಕ್ ಖರೀದಿ ಮಾಡಬೇಕು ಅಂದ್ರೆ ಏನೆಲ್ಲಾ ವಿಚಾರ ಮಾಡ್ತಿರಾ , ಸಾಮಾನ್ಯವಾಗಿ ಬೈಕ್ ಕಲರ್ , ಮಾಡೆಲ್ , ಬೆಲೆ ಆದರೆ ಎಲ್ಲಕ್ಕಿಂತ್ತಾ ಮುಖ್ಯವಾಗಿ ಮೈಲೇಜ್ ಎಷ್ಟು ಕೊಡುತ್ತೆ ಅನ್ನೋದೇ ಭಾರತೀಯರಿಗೆ ದೊಡ್ಡ ಸವಾಲು.
ನೀವು ಸದ್ಯ ಮಾರುಕಟ್ಟೆಯಲ್ಲಿ ಯಾವುದೇ ಕಂಪನಿಯ ಬೈಕ್ ತೆಗೆದುಕೊಂಡರು ನಿಮಗೆ ಅವು ಬಹಳ ಅಂದ್ರೆ ೮೦ರಿಂದ -೯೦ ಮೈಲೇಜ್ ಮಾತ್ರ ನೀಡಬಹುದು , ನಾವು ಈಗ ನಿಮಗೆ ಒಂದು ಹೊಸ ಮಾದರಿಯ ಬೈಕ್ ಅನ್ನು ತೋರಿಸ್ತೇವೆ , ಅದು ನಿಮಗೆ ಮಾರುಕಟ್ಟೆಯಲ್ಲಿ ಇರುವ ಎಲ್ಲಾ ಬೈಕ್-ಗಳಿಗಿಂತಲೂ ಹಾಗು ನಿಮ್ಮ ಊಹೆಗೂ ಮೀರಿ ಮೈಲೇಜ್ ಕೊಡುತ್ತದೆ , ಎಷ್ಟು ಅಂತೀರಾ ೧೫೩ , ಹೌದು ಅಚ್ಚರಿ ಅನಿಸಿದರೂ ಇದು ನಿಜ.

ಅಷ್ಟಕ್ಕೂ ಆ ಬೈಕ್ ಆದ್ರೂ ಯಾವುದು , ಯಾವ ಕಂಪೆನಿಯದು , ಯಾವ ಇಂಜಿನಿಯರ್ ಅಭಿವೃದ್ಧಿ ಮಾಡಿದ್ದನ್ನೇ ಎಂಬ ಪ್ರಶ್ನೆ ನಿಮನ್ನು ಕಾಡುತ್ತಿರಬೇಕು ಅಲ್ವಾ. ಆ ಬೈಕ್ ಮತ್ತು ಅದರ ಹೈ ಎಕಾನಮಿ ಎಂಜಿನ್ ಅನ್ನು ಅಭಿವೃದ್ಧಿ ಪಡಿಸಿದ್ದು ಯಾವುದೇ ಕಂಪೆನಿಯಾಗಲಿ ಅಥವಾ ಆಟೋಮೊಬೈಲ್ ಇಂಜಿನಿಯರ್ ಆಗಲಿ ಅಲ್ಲ , ಅದನ್ನು ಅಭಿವೃದ್ಧಿ ಪಡಿಸಿದವನು ಕನಿಷ್ಠ 10ನೇ ತರಗತಿಯೂ ಓದಿಲ್ಲ. ಅವನು ಕೇವಲ ೭ ನೇ ಕ್ಲಾಸ್ ವರೆಗಷ್ಟೇ ಓದಿದ್ದು. ಆದರೂ ಅಂತಹ ಸೂಪರ್ ಮೈಲೇಜ್ ಕೊಡುವ ಬೈಕನ್ನು ತಯಾರಿಸಿದ್ದಾನೆ. ಆತನಿಗೆ ಇದಕ್ಕಾಗಿ ೧೭ ವರ್ಷಗಳು ಬೇಕಾದವು.

ಆತನ ಹೆಸರು ವಿವೇಕ್ ಕುಮಾರ್ ಪಟೇಲ್ , ಮನೆಯಲ್ಲಿ ತುಂಬ ಬಡತನದ ಕಾರಣಕ್ಕಾಗಿ ೭ ನೇ ತರಗತಿಗೆ ಶಾಲೆಗೆ ಗುಡ್ ಬೈ ಹೇಳಬೇಕಾಯಿತು , ವಿವೇಕ್ ಬೇರೆ ದಾರಿಯಿಲ್ಲದೆ ಬೈಕ್ ಮೆಕ್ಯಾನಿಕ್ ಆಗಿ ಕೆಲಸ ಮಾಡಲು ಶುರು ಮಾಡಿದ. ಮೊದಲಿನಿಂದಲೂ ಅವನಿಗೆ ಬೈಕ್ ಗಳು ಮತ್ತು ಎಂಜಿನ್ ಬಗ್ಗೆ ತುಂಬಾ ಕುತೂಹಲ. ಕೆಲಸದ ಬಿಡುವಿನಲ್ಲಿ ಎಂಜಿನ್ ಗಳನ್ನು ಮುಂದೆ ಇಟ್ಟುಕೊಂಡು ಏನಾದರೂ ಒಂದು ವಿಚಿತ್ರ ಪ್ರಯೋಗ ಗಳನ್ನು ಮಾಡುತ್ತಿದ್ದ. ಹೀಗೆ ಅವನ ಆಸಕ್ತಿ ೧೭ ವರ್ಷಗಳ ನಂತರ ಪ್ರತಿಫಲ ನೀಡಿತು.

ಈವಾಗ ಅವನು ೧೫೩ ಗಳಷ್ಟು ಅಧಿಕ ಮೈಲೇಜ್ ಕೊಡುವ ಬೈಕ್ ಅನ್ನು ಸಿದ್ಧಪಡಿಸಿದ್ದಾನೆ , ಅವನು ಆ ಬೈಕ್ ಅನ್ನು ಹಲವು ಇಂಜಿನಿಯರಿಂಗ್ ವಿದ್ಯಾರ್ಥಿಗಳಿಗೆ ತೋರಿಸಿದ , ಆಗ ಆತ ಹಲವು ಪ್ರಮುಖ ಯೂನಿವರ್ಸಿಟಿಗಳ ಕಣ್ಣಿಗೆ ಬಿದ್ದ. ವಿವೇಕ್ ತಯಾರಿಸಿದ ಬೈಕ್ ಮಾಡೆಲ್ ಲಕ್ನೋದ Council of Science And Technology (UPCST) , ಅಲಹಾಬಾದಿನ Motilal Nehru National Institute of Technology , ಕಾಟ್ರಾದ Shri Mata Vaishno Devi University Technology Business Incubation Center Society (SMVDU TBIC) , ಪಿಲಾನಿಯ Birla Institute of Technology and Science ವಿಶ್ವವಿದ್ಯಾಲಯಗಳು ಪರಿಶೀಲಿಸಿದವು.

ಆ ಮಾಡೆಲ್ ನೋಡಿ ಕಾಲೇಜು ಪ್ರೊಫೆಸರ್ಗಳೇ ದಂಗಾಗಿದ್ದಾರೆ. ಇದರಿಂದ SMVDU TBIC ವಿವೇಕ್ಗೆ ೭೫ ಲಕ್ಷ ರೂ ನೀಡುವ ಭರವಸೆ ನೀಡಿದೆ. ವಿವೇಕ್ ಸದ್ಯಕ್ಕೆ ತನ್ನ ಬೈಕ್ ಮಾಡೆಲನ್ನು ಪೇಟೆಂಟ್ ತೆಗೆದುಕೊಳ್ಳುವ ಕೆಲಸದಲ್ಲಿ ಮಗ್ನನಾಗಿದ್ದಾನೆ , ಇದಾದ ನಂತರ ಈ ಬೈಕ್ ಮಾರುಕಟ್ಟೆಗೆ ಬರಲಿದೆ , ಈಗಾಗಲೇ ತನ್ನ ಪ್ರಾಜೆಕ್ಟ್ಗೆ ವಿವೇಕ್ ಸ್ಟಾರ್ಟಪ್ ಕಂಪೆನಿಯಾಗಿ ರಿಜಿಸ್ಟರ್ ಮಾಡಿಸಿದ್ದಾನೆ. ವಿವೇಕ್ ಅಂದು ಕೊಂಡ ಹಾಗೆ ಪೇಟೆಂಟ್ ಬೇಗ ಸಿಕ್ಕಿದೆ ಆದ್ರೆ ಈ ಬೈಕ್ ಮಾರುಕಟ್ಟೆಗೆ ಲಗ್ಗೆ ಇಡಲಿದೆ. ಈ ಬೈಕ್ ತಗೊಂಡ್ರೆ ನಿಮಗೆ ಪೆಟ್ರೋಲ್ ಹಾಕಿಸುವ ತೊಂದರೆ ಇಂದ ಬಿಗ್ ರಿಲೀಫ್ ಸಿಗಲಿದೆ.
ಒಟ್ಟಿನಲ್ಲಿ ಕಡಿಮೆ ಒಂದಿನಿಂದಲೂ , ಬಡತನದಲ್ಲಿಯೇ ಇದ್ದು ಕೊಂಡು ವಿವೇಕ್ ಇಂತ ದೊಡ್ಡ ಸಾಧನೆ ಮಾಡಿರುವುದು ತುಂಬ ಗ್ರೇಟ್ ಅಲ್ವಾ…!