ಈ ಪುಟ್ಟ ಹುಡುಗ ಹಿಮಾಚಲ್ ಪ್ರದೇಶದ ಬಸ್ ಆಕ್ಸಿಡೆಂಟ್-ನಲ್ಲಿ ತೋರಿದ ಧೈರ್ಯದ ಬಗ್ಗೆ ತಿಳಿದರೆ ಅಚ್ಚರಿ ಪಡ್ತೀರ!!

0
708

ಹಿಮಾಚಲ ಪ್ರದೇಶದ ನೂರ್‌ಪುರ್‌ನಲ್ಲಿ ನಡೆದ ದುರಂತ ಈಗ ಎಲ್ಲರಿಗೂ ಗೊತ್ತಿರುವ ವಿಚಾರ. ಈ ದುರ್ಘಟನೆಯಲ್ಲಿ 27 ಮಕ್ಕಳು ಸೇರಿದಂತೆ ಒಟ್ಟು 30 ಜನ ಸಾವನ್ನಪಿದ್ದರು. ಈಗ ಈ ದರ್ಘಟನೆಯಲ್ಲಿ ಬಚಾವ್​ ಆದ ರಣಬೀರ್​ ಸಿಂಗ್​​ ದೇಶದ ಚಿತ್ತವನ್ನು ಕದ್ದು ಬಿಟ್ಟಿದ್ದೇನೆ.

ಅಸಲಿಗೆ ಆಗಿದ್ದು ಏನು?

ರಾಮ್‌ ಸಿಂಗ್‌ ಪಠಾಣಿಯಾ ಮೆಮೋರಿಯಲ್‌ ಶಾಲೆಯ ಮಕ್ಕಳು ಹೊತ್ತು ಒಯ್ಯುತ್ತಿದ್ದ ಶಾಲಾ ಬಸ್​ ಕಂದಕ್ಕೆ ಬಿದ್ದಿತು. ಬಸ್ಸು ನೂರ್‌ಪುರ – ಚಂಬಾ ರಸ್ತೆಯಲ್ಲಿ ಗುರ್ಚಾಲ್‌ ಗ್ರಾಮದ ಸಮೀಪ ಅತ್ಯಂತ ಕಳಪೆ ರಸ್ತೆಯಲ್ಲಿ ಸಾಗುವಾಗ, ಬೈಕ್‌ ಒಂದಕ್ಕೆ ಬಸ್ಸು ಡಿಕ್ಕಿ ಹೊಡೆಯಿತು. ಬಸ್ಸನ್ನು ತಿರುವಿನಲ್ಲಿ ಸಾಗಿಸುವಾಗ ನಿಯಂತ್ರಣ ಕಳೆದುಕೊಂಡ. ಪರಿಣಾಮ ಬಸ್​ 200 ಅಡಿ ಆಳದ ಕಂದಕಕ್ಕೆ ಬಿದ್ದಿತು.

ಬಸ್​ ಇನ್ನೇನು ಕಂದಕಕ್ಕೆ ಬೀಳುತ್ತದೆ ಎಂದು ಗೊತ್ತಾದಾಗ ರಣಬೀರ್​ ಹಾಗೂ ಅವನಿ ಮರದ ಸಹಾಯದಿಂದ ಜೋತು ಬಿದ್ದು, ಪ್ರಾಣವನ್ನು ಉಳಿಸಿಕೊಂಡ್ರು. ಆದ್ರೆ ಮರಕ್ಕೆ ನೇತಾಡುತ್ತಿದ್ದ ಅವನಿಯನ್ನು ರಣಬಿರ್​ ಕಷ್ಟ ಪಟ್ಟು ಕಾಪಾಡಿದನು. ಅಲ್ಲದೆ ಕಡಿದಾದ ರಸ್ತೆಯಲ್ಲಿ ಗುಡ್ಡವನ್ನು ಹತ್ತಿ ಅಲ್ಲಿ ಸಾಗುತ್ತಿದ್ದ ಪ್ರಯಾಣಿಕರಲ್ಲಿ ದುರ್ಘಟನೆ ಆದ ಬಗ್ಗೆ ಮಾಹಿತಿ ನೀಡಿದ್ದಾನೆ.

ಈ ವಿಷಯ ಕಿವಿಗೆ ಬೀಳುತ್ತಿದ್ದಂತೆ ಮಕ್ಕಳನ್ನು ಉಳಿಸಲು ನುರಾರು ಜನ ಬಂದರು. ಪರಿಣಾಮ ರಕ್ಷಣಾ ಕಾರ್ಯ ಭರದಿಂದ ಸಾಗಿತು. ಹಲವು ಯುವಕರ ಪರಿಶ್ರಮ ಫಲದಿಂದ ಅದೆಷ್ಟೋ ಜೀವಗಳು ಬಚಾವ್​ ಆದವು. ಇನ್ನು ತಮ್ಮ ಮಕ್ಕಳ ದೇಹದ ಭಾಗಗಳು ಚಿಲ್ಲಾಪಿಲ್ಲಿ ಆಗಿದ್ದನ್ನು ಕಂಡು ಪಾಲಕರು ಕುಸಿದು ಬಿದ್ದರು. ಈ ರಸ್ತೆಯ ಬಗ್ಗೆ ಅದೆಷ್ಟೋ ಬಾರಿ ಅಧಿಕಾರಿಗಳ ಗಮನಕ್ಕೆ ತಂದರೂ ಪ್ರಯೋಜನ ಆಗಿಲ್ಲ ಎಂದು ಗ್ರಾಮಸ್ಥರು ದೂರಿದ್ದಾರೆ..