ತನ್ನ ಮದುವೆಯ ಉಡುಗೊರೆ ಹಣವೆಲ್ಲವನ್ನು ಹುತಾತ್ಮರಾದ ಯೋಧರಿಗೆ ನೀಡಲು ಸಿದ್ದರಾದ ನವಜೋಡಿ; ಇವರ ನಿರ್ಧಾರ ಇಡಿ ದೇಶಕ್ಕೆ ಮಾದರಿ ಅಲ್ವ??

0
304

ಫೆಬ್ರುವರಿ 14 ರಂದು ಇಡಿ ದೇಶವೇ ಕಣ್ಣಿರಲ್ಲಿ ಕೈ ತೊಳೆಯಿತು, ಇಡಿ ಜಗತ್ತೇ ಆಘಾತಕ್ಕೆ ಒಳಗಾಗಿತ್ತು. ಇದಕ್ಕೆಲ್ಲ ಕಾರಣವೆಂದರೆ ಪುಲ್ವಾಮಾ ದಾಳಿ, ಜೈಷ್ ಮೊಹಮ್ಮದ್ ಉಗ್ರರು ಮಾಡಿದ ಆತ್ಮಹತ್ಯ ದಾಳಿ ಅದು. ಈ ಹಿನ ಕೃತ್ಯಕ್ಕೆ ಭಾರತದ 40 CRPF ಯೋಧರು ವೀರ ಮರಣ ಹೊಂದಿದರು. ಇನ್ನೂ ಹುತಾತ್ಮರಾದ ಯೋಧರ ಸಾಹಯಕ್ಕೆ ಹಲವು ಜನರು ಸಂಘ ಸಂಸ್ಥೆಗಳು ಸರ್ಕಾರ ಹೀಗೆ ಅನೇಕರು ಧನ ಸಹಾಯ ಮಾಡಿದರು. ಅದೇ ದಾಳಿಗೆ ಒಬ್ಬ ಯೋಧ ತನ್ನ ಸಹಚರರನ್ನು ಕಳೆದುಕೊಂಡು ನೋವಿನಲ್ಲಿ ಯೋಧರ ಕುಟುಂಬಕ್ಕೆ ತನ್ನ ಮದುವೆಯ ಹಣವನ್ನೇ ನೀಡುತ್ತಿದ್ದಾರೆ. ಈ ವಿಷಯ ಈಗ ಎಲ್ಲ ಕಡೆಯಲ್ಲಿ ವೈರಲ್ ಆಗಿದ್ದು ಮೆಚ್ಚುಗೆ ವ್ಯಕ್ತವಾಗುತ್ತಿದೆ.

Also read: ಪುಲ್ವಾಮ ದಾಳಿಯಲ್ಲಿ ಹುತಾತ್ಮರಾದ ಯೋಧರ ಕುಟುಂಬಕ್ಕೆ 110 ಕೋಟಿ ರೂ. ಸಹಾಯ ಮಾಡಿದ ಅಂಧ ವಿಜ್ಞಾನಿ..

ಹೌದು ಪುಲ್ವಾಮಾ ದಾಳಿ ಬಳಿಕ ದೇಶದೆಲ್ಲೆಡೆ ದುಃಖ ಹಾಗೂ ಶೋಕದ ವಾತಾವರಣ ನಿರ್ಮಾಣವಾಗಿತ್ತು. ಈ ಘಟನೆಯ ಬಳಿಕ ದಾಳಿಯಲ್ಲಿ ಹುತಾತ್ಮರಾದ ಯೋಧರ ಕುಟುಂಬಕ್ಕೆ ದೇಶದೆಲ್ಲೆಡೆಯಿಂದ ಜನರು ಸಹಾಯಹಸ್ತ ಚಾಚಿದ್ದರು. ಆದರೀಗ CRPF ಉಪ ನಿರೀಕ್ಷಕ ವಿಕಾಸ್ ಖಡ್ಗಾವತ್ ಹುತಾತ್ಮ ಯೋಧರ ಕುಟುಂಬಕ್ಕೆ ಸಹಾಯ ಮಾಡಲು ವಿಭಿನ್ನ ಮಾರ್ಗ ಅನುಸರಿಸಿದ್ದಾರೆ. ಇದಕ್ಕಾಗಿ ತಮ್ಮ ಮದುವೆಗೆ ಉಡುಗೊರೆಯಾಗಿ ಬಂದ ಹಣವನ್ನು ‘ಭಾರತ್ ಕೆ ವೀರ್ ಫಂಡ್’ಗೆ ನೀಡುವುದಾಗಿ ಹೇಳಿದ್ದಾರೆ. ಈ ವಿಷಯವನ್ನು ತಮ್ಮ ಮದುವೆ ಆಮಂತ್ರಣ ಪತ್ರಿಕೆಯಲ್ಲಿ ಮುದ್ರಿಸಿ “ನೀವು ನೀಡುವ ಎಲ್ಲಾ ಉಡುಗೊರೆಗಳನ್ನು CRPF ಫಂಡ್ ಗೆ ನೀಡಲಿದ್ದೇನೆ” ಎಂದೂ ಹೇಳಿಕೊಂಡಿದ್ದಾರೆ.

Also read: ಯಾವುದೇ ದಾಖಲೆ ಇಲ್ಲದೆ ಮಂಡ್ಯ ಯೋಧ ಹುತಾತ್ಮ; ಕುಟುಂಬಕ್ಕೆ ವಿಮೆ ಹಣ ನೀಡಿ ಮಾನವೀಯತೆ ಮೆರೆದ LIC

ಈ ಕುರಿತು ಮಾತನಾಡಿದ ಯೋಧ ನನ್ನ ತಂದೆ ಹಣದ ಕೊಡುಗೆಯನ್ನು ತೆಗೆದುಕೊಳ್ಳುವುದು ಬೇಡ ಎಂದು ನಿರ್ಧರಿಸಿದ್ದರು. ಆದರೆ ಸ್ನೇಹಿತರು ಮತ್ತು ಸಂಬಂಧಿಕರು ಕೊಡುಗೆಯನ್ನು ನೀಡುವುದನ್ನು ತಪ್ಪಿಸಲು ಸಾಧ್ಯವಿಲ್ಲ. ಎಲ್ಲರೂ ಕೊಡುತ್ತಾರೆ ಎಂದು ಅನಿಸಿತು. ಹಾಗಾಗಿ ಕೊಡುಗೆಯಾಗಿ ಬರುವ ಎಲ್ಲ ದುಡ್ಡನ್ನು ಭಾರತ್‌ ಕೆ ವೀರ್‌ ನಿಧಿಗೆ ನೀಡಲು ನಿರ್ಧರಿಸಿದರು ಎಂದು ವಿಕಾಸ್‌ ಇಂಡಿಯಾಟೈಮ್ಸ್‌ಗೆ ಪ್ರತಿಕ್ರಿಯಿಸಿ. ಮದುವೆ ದಿನ ಬರುವ ಅತಿಥಿಗಳಿಗೆ ತಂದಿರುವ ಉಡುಗೊರೆ ಹಾಗೂ ಹಣವನ್ನು ಹಾಕಲು ಬಾಕ್ಸೊಂದನ್ನು ಇಡುತ್ತೇವೆ. ಇದರಲ್ಲಿ ಹಾಕಲಾಗುವ ಎಲ್ಲಾ ಉಡುಗೊರೆ ಹಾಗೂ ಮೊತ್ತವನ್ನು ‘ಭಾರತ್ ಕೆ ವೀರ್ ಫಂಡ್’ಗೆ ಹಸ್ತಾಂತರಿಸಲು ಜಿಲ್ಲಾಧಿಕಾರಿಯ ಕಚೇರಿಗೆ ನೀಡುತ್ತೇವೆ’ ಎಂದು ಹೇಳಿದ್ದಾರೆ. ಇದಕ್ಕೆ ಮನೆಯವರು ಕೂಡ ಸಾತ್ ನೀಡಿದ್ದಾರೆ.

ತಮ್ಮ ಮಗನ ಯೋಚನೆಯನ್ನು ಕೇಳಿದ ವಿಕಾಸ್ ಖಡ್ಘಾವತ್ ತಂದೆ ಮಗನ ದಾನದ ಗುಣದ ಬಗ್ಗೆ ಮಾತನಾಡಿ. ನನ್ನ ಮಗ ಒಬ್ಬ ಅಧಿಕಾರಿ ಆಗಿದ್ದರೆ, ದುಪ್ಪಟ್ಟು ವರದಕ್ಷಿಣೆ ಬರಬೇಕೆಂಬ ಜಯೋಚನೆ ಸಮಾಜದಲ್ಲಿದೆ. ಆದರೆ ನಾನು ಇಂತಹ ಪದ್ಧತಿ ಅನುಸರಿಸುವ ಸಮಾಜಕ್ಕೆ ಹೀಗೆ ಮಾಡಬಾರದೆಂಬ ಸಂದೇಶ ನೀಡುತ್ತೇನೆ. ಯುವ ಜನರು ಇದನ್ನು ಪಾಲಿಸಬೇಕು ಹಾಗೂ ವರದಕ್ಷಿಣೆ ವಿರೋಧಿಸಬೇಕು’ ವಿಕಾಸ್ ಮದುವೆಯ ದಿನ ನಗದು ಮೂಲಕ ಕೊಡುಗೆಯನ್ನು ನೀಡುವಂತೆ ಸಂಬಂಧಿಕರಿಗೆ ಮತ್ತು ಸ್ನೇಹಿತರಿಗೆ ವಿನಂತಿಸಿದ್ದಾರೆ . ನಂತರ ದುಡ್ಡನ್ನು ಜಿಲ್ಲಾಧಿಕಾರಿ ಮೂಲಕ ಭಾರತ್‌ ಕೆ ವೀರ್‌ ನಿಧಿಗೆ ತಲುಪಿಸಲು ಯೋಜನೆ ರೂಪಿಸಿದ್ದಾರೆ. ವಿಕಾಸ್‌ ಅವರ ವಿವಾಹವು ಬಿಕನೇರ್‌ನಲ್ಲಿ ಏಪ್ರಿಲ್‌ 13ರಂದು ನಡೆಯಲಿದೆ. ಏಪ್ರಿಲ್‌ 15ರಂದು ರಿಸೆಪ್ಶನ್‌ ಇರಲಿದೆ. ಎಂದು ಹೇಳಿದ್ದಾರೆ.

ಏನಿದು ಭಾರತ್ ಕೆ ವೀರ್ ಫಂಡ್’?

Also read: ಪುಲ್ವಾಮಾ ದಾಳಿಯಲ್ಲಿ ಹುತಾತ್ಮರಾದ CRPF ಯೋಧರ ಸಾಲ ಮನ್ನಾ ಮಾಡಿದ ಭಾರತೀಯ ಸ್ಟೇಟ್‌ ಬ್ಯಾಂಕ್‌..

ಭಾರತ್ ಕೆ ವೀರ್ ಫಂಡ್’ ಅರೆಸೇನಾ ಪಡೆಯ ಸಿಬ್ಬಂದಿಗಳಿಗಾಗಿ ರೂಪಿಸಲಾಗಿದೆ. ಇದು ಕೇಂದ್ರ ಗೃಹ ಇಲಾಖೆಯ ಸುಪರ್ಧಿಯಲ್ಲಿದೆ. ಯಾವುದೇ ಒಬ್ಬ ವ್ಯಕ್ತಿ ಈ ಫಂಡ್ ಗೆ 15 ಲಕ್ಷ ರೂಪಾಯಿವರೆಗೆ ದಾನ ಮಾಡಬಹುದು. ಫೆಬ್ರವರಿ 14 ರಂದು ನಡೆದ ಪುಲ್ವಾಮಾ ದಾಳಿಯಲ್ಲಿ 40 ಯೋಧರು ಹುತಾತ್ಮರಾಗಿದ್ದರು. ಈ ಘಟನೆಯ ಬಳಿಕ ಈ ಡೊನೇಷನ್ ಫಂಡ್ ಆರಂಭಿಸಲಾಗಿತ್ತು. ಇಲ್ಲಿಗೆ ಬಂದ ಹಣವನ್ನು ಹುತಾತ್ಮ ಯೋಧರ ಕುಟುಂಬ ಸದಸ್ಯರಿಗೆ ದಾನ ಮಾಡಲಾಗಿತ್ತು. ಈಗ ಮತ್ತೊಮ್ಮೆ ಜನರಿಗೆ ಮದುವೆಯ ದಾನ ಮಾಡುವ ಸೌಭಾಗ್ಯ ದೊರೆತ್ತಿದೆ. ಇದೆ ಆಲೋಚನೆಯನ್ನು ದೊಡ್ಡ ದೊಡ್ಡ ವ್ಯಕ್ತಿಗಳ ಮದುವೆಗೆ ಅನ್ವಯಿಸಿದರೆ ದೇಶಕ್ಕೆ ಪ್ರಾಣವನ್ನು ತ್ಯಾಗ ಮಾಡುವ ಯೋಧರ ಕುಟುಂಬಕ್ಕೆ ಅಳಿಲು ಸೇವೆ ಆಗುತ್ತದೆ.