ನಿದ್ದೆ ಪ್ರಿಯರಿಗೆ ಸುವರ್ಣಾವಕಾಶ; 9 ಗಂಟೆ ಮಲ್ಕೊಂಡ್ರೆ ಸಿಗುತ್ತೆ ಬರೋಬ್ಬರಿ 1 ಲಕ್ಷ ರೂ. ಸಂಬಳ.!

0
694

ನಿದ್ದೆ ಮಾಡುವುದು ಎಲ್ಲರಿಗೂ ಇಷ್ಟಾನೆ ಹಾಗಂತ ನಿದ್ದೆಯನ್ನೇ ಮಾಡಿದರೆ ಜೀವನಕ್ಕೆ ಏನು ಮಾಡುವುದು ಎನ್ನುವುದು ಎಲ್ಲರಿಗೂ ಪ್ರಶ್ನೆಯಾದರೆ, ಇಲ್ಲೊಂದು ಕಂಪನಿ ಪ್ರತಿನಿತ್ಯ 9 ಘಂಟೆ ನಿದ್ದೆ ಮಾಡಿದರೆ 1 ಲಕ್ಷ ರೂ. ಸಂಬಳವನ್ನು ಕಂಪನಿ ನೀಡುತ್ತೆ, ಇದು ಕೇಳಲು ಹಾಸ್ಯಮಯವಾಗಿದ್ದರು, ಈ ಕುರಿತು ಕಂಪನಿಯೇ ಮಾಹಿತಿ ನೀಡಿದೆ. ಸತತ 100 ದಿನ, ತಲಾ 9 ಗಂಟೆ ನಿದ್ರಿಸಬೇಕು. ಅದಕ್ಕೆ ವೇಕ್‌ಫಿಟ್‌ ನೀಡಿದ ಹಾಸಿಗೆ (ಮ್ಯಾಟ್ರೆಸ್‌) ಬಳಸಬೇಕು. ಇಲ್ಲಿ ಅತ್ಯುತ್ತಮವಾಗಿ ನಿದ್ರಿಸಿದವರಿಗೆ 1 ಲಕ್ಷ ರೂ. ಸಿಗಲಿದೆ ಎಂದು ಕಂಪನಿ ನಿರ್ದೇಶಕ ಚೈತನ್ಯ ರಾಮಲಿಂಗೇ ಗೌಡರು ತಿಳಿಸಿದ್ದಾರೆ.

ನಿದ್ದೆ ಮಾಡಿದರು ಸಂಬಳ?

ಹೌದು ಕೆಲಸದ ವೇಳೆ ನಿದ್ದೆಗೆ ಹೋದರೆ ಏನೆಲ್ಲಾ ಮಾತುಗಳು ಆದರೆ ಇಲ್ಲಿ ನಿದ್ದೆ ಮಾಡುವುದೇ ಕೆಲಸವಾಗಿದ್ದು, ಬೆಂಗಳೂರಿನ Wakefit ಕಂಪನಿ ತನ್ನ ವೆಬ್‍ಸೈಟ್‍ನಲ್ಲಿ ಇಂತಹದೊಂದು ಆಫರ್ ಪ್ರಕಟಿಸಿದ್ದು, ಉದ್ಯೋಗಕ್ಕೆ ಅರ್ಜಿ ಸಲ್ಲಿಸುವಂತೆ ಹೇಳಿದೆ. ಪ್ರತಿ ರಾತ್ರಿ 9 ಗಂಟೆ, ಪ್ರತಿ ವಾರ 100 ದಿನ ಮಲಗುವವರಿಗೆ ಕಂಪನಿ ಒಂದು ಲಕ್ಷ ರೂ. ಸಂಬಳ ನೀಡಲಿದೆ. ಕಂಪನಿ ನಿಯಮಗಳ ಪ್ರಕಾರ ಉದ್ಯೋಗಿ ಪೈಜಾಮಾ ಹಾಕಿಕೊಂಡೆ ಮಲಗಬೇಕು ಇಲ್ಲಿ ಅತ್ಯುತ್ತಮವಾಗಿ ನಿದ್ರಿಸಬೇಕು. ಈ ಕಂಪನಿಯ ಉದ್ದೇಶವೇ ನಿದ್ರೆಯ ಮಹತ್ವದ ಅರಿವನ್ನು ಮೂಡಿಸುವುದು. ಸಮಾಜದಲ್ಲಿ ಈಗ ನಿದ್ರಿಸುವ ಬಗ್ಗೆ ತಪ್ಪು ತಿಳಿವಳಿಕೆಯಿದೆ. ನಿದ್ರೆ ಕಡಿಮೆಯಾಗುತ್ತಿದೆ. ಆದ್ದರಿಂದ ಅನಾರೋಗ್ಯ ಹೆಚ್ಚಾಗುತ್ತಿದೆ. ಕಾರ್ಯಕ್ಷಮತೆ ಕುಗ್ಗುತ್ತಿದೆ ಎಂದು ಅವರು ಹೇಳುತ್ತಾರೆ.

ಆದ್ದರಿಂದಲೇ ಕಂಪನಿ ಇಂತಹ ವಿಶಿಷ್ಟ ಕರೆ ನೀಡಿದೆ. ಈ ಸಂದರ್ಶನದಲ್ಲಿ ಈಗಾಗಲೇ 1500 ಮಂದಿ ಪಾಲ್ಗೊಂಡಿದ್ದಾರೆ. ಬಹುತೇಕರು ತಾವು ಕೆಲಸ ಮಾಡುತ್ತಿರುವ ಕಂಪನಿಯಲ್ಲಿ ಮಲಗಲು ಜಾಗವಿಲ್ಲ. ಸ್ವಲ್ಪ ನಿದ್ರಿಸಲು ಅವಕಾಶ ಕೊಟ್ಟರೆ, ಸಖತ್ತಾಗಿ ಕೆಲಸ ಮಾಡುತ್ತೇವೆ ಎಂದು ತಮ್ಮ ಅಂತರಂಗವನ್ನು ತೆರೆದಿಟ್ಟಿದ್ದಾರೆ. ಅದರಂತೆ ಕಂಪನಿ ಇಂಟರ್ನಿಗಳು ಮಲಗುವ ಮಾದರಿಗಳನ್ನು ಗಮನಿಸುತ್ತದೆ. ಅಲ್ಲದೆ ಕೌನ್ಸಿಲಿಂಗ್ ಸೆಷನ್ಸ್ ಹಾಗೂ ಸ್ಲೀಪ್ ಟ್ರ್ಯಾಕರ್ಸ್‍ಗಳನ್ನು ನೋಡಲಾಗುತ್ತದೆ. ಇದರಿಂದ ಅಭ್ಯರ್ಥಿಗಳು ತಮ್ಮ ಹಾಸಿಗೆಗಳನ್ನು ಬಳಸುವ ಮೊದಲು ಹಾಗೂ ನಂತರ ಅವರು ನಿದ್ರೆಯ ಅನುಭವಗಳನ್ನು ತಿಳಿಯಲು ಇದು ಕಂಪನಿಗೆ ಸಹಾಯ ಮಾಡುತ್ತದೆ. ಕೆಲಸದ ಜೀವನ ಹಾಗೂ ವೈಯಕ್ತಿಕ ಜೀವನವನ್ನು ಬ್ಯಾಲೆನ್ಸ್ ಮಾಡಲು ಈ ರೀತಿಯ ಪ್ರಯೋಗ ಮಾಡಲಾಗಿದೆ ಎಂದು ಚೈತನ್ಯ ರಾಮಲಿಂಗೇಗೌಡ ಹೇಳಿದ್ದಾರೆ.

ಅರ್ಹತೆಗಳೇನಿರಬೇಕು?

ನಿದ್ರೆ ಮಾಡುವ ಕೆಲಸಕ್ಕೆ ಅರ್ಜಿ ಸಲ್ಲಿಸಲು ನೀವು ಬಯಸಿದರೆ, ಕೆಲವು ಅರ್ಹತೆಗಳನ್ನು ನೀವು ಹೊಂದಿರಬೇಕು. ಯಾವಾಗೆಂದರೆ ಆಗ, ಎಲ್ಲಿ ಬೇಕಾದರಲ್ಲಿ ನಿದ್ರೆ ಮಾಡುವ ಶಕ್ತಿಯಿರಬೇಕು. ಕಣ್ಮುಚ್ಚಿದರೆ ಸಾಕು ನಿದ್ರಿಸುವ ಸಾಮರ್ಥ್ಯ ಇರಬೇಕು. ನಿದ್ರಿಸುವ ನಿಮ್ಮ ದಾಖಲೆಯನ್ನು ನೀವೇ ಮುರಿಯುವ ಯೋಗ್ಯತೆಯಿರಬೇಕು. ಇದರ ವಸ್ತ್ರಸಂಹಿತೆ ಪೈಜಾಮ. ಗೆದ್ದವರಿಗೆ 1 ಲಕ್ಷ ರೂ. ಸಿಗುತ್ತದೆ. ನಿದ್ರಾಪ್ರಮಾಣವನ್ನು ಗುರ್ತಿಸುವ ಟ್ರ್ಯಾಕರ್‌ ಸಿಗುತ್ತದೆ. ನಿಮಗೂ ಆಸಕ್ತಿ ಇದ್ದರೆ ಭಾಗವಹಿಸಿ 1 ಲಕ್ಷ ಸಂಬಳ ಪಡೆಯಬಹುದು.

Also read: ಬೆಂಗಳೂರಿನಲ್ಲಿ ಹೆಚ್ಚುತ್ತಿರುವ ಡ್ರಗ್ಸ್ ಹಾವಳಿ, ವಿದೇಶಗಳಿಂದ ಬರುವ ಚಾಕೋಲೇಟ್ ಡಬ್ಬದಲ್ಲಿ ಡ್ರಗ್ಸ್ ಕಂಡ ಪೊಲೀಸರಿಗೇ ಆಶ್ಚರ್ಯ!!!