300 ಕೋಟಿ ಹಗರಣವನ್ನು ಬೆಳಕಿಗೆ ತಂದಿದ್ದಕ್ಕಾಗಿ ಈ KAS ಆಫೀಸರ್-ಗೆ 27 ಬಾರಿ ಟ್ರಾನ್ಸ್ಫರ್ ಆಗಿದೆ; ಇವರಿಗೆ ನ್ಯಾಯ ಸಿಗಬೇಕಲ್ಲವೇ??

0
1262

ದಕ್ಷ ಮತ್ತು ಪ್ರಾಮಾಣಿಕ ಅಧಿಕಾರಿಗಳು ಯಾವ ಸಂದರ್ಭದಲ್ಲಿ ಕೂಡ ವರ್ಗಾವಣೆಯಾಗಲು ತಯಾರಿರಬೇಕು ಎನ್ನುವುದಕ್ಕೆ ಸಾಕ್ಷಿಯಾಗಿರುವ ಕರ್ನಾಟಕ ಆಡಳಿತ ಸೇವೆ(ಕೆಎಎಸ್‌)ನ ಅಧಿಕಾರಿ ಕೆ ಮಥಾಯಿ 10 ವರ್ಷದಲ್ಲಿ ಬರೋಬರಿ 27 ಬಾರಿ ವರ್ಗಾವಣೆಯಾಗಿದ್ದಾರೆ. ಇವರು ನೂರಾರು ಕೋಟಿ ಹಗರಣಗಳನ್ನು ಬಯಲಿಗೆಳದಿದ್ದಾರೆ ಇದೆ ಅವರಿಗೆ ಮುಳುವಾಗಿ ಇಷ್ಟೊಂದು ಬಾರಿ ಟ್ರಾನ್ಸ್ಫರ್-ಗೆ ಗುರಿಯಾಗಿದ್ದಾರೆ. ಈ ಕುರಿತು ಕೆ ಮಥಾಯಿ ಅವರು, ರಾಜ್ಯದ ಮುಖ್ಯ ಕಾರ್ಯದರ್ಶಿ ಹಾಗೂ 9 ಮಂದಿ ಐಎಎಸ್‌ ಅಧಿಕಾರಿಗಳ ವಿರುದ್ಧ ಮಾನವ ಹಕ್ಕುಗಳ ಉಲ್ಲಂಘನೆ ದೂರು ನೀಡಿದ್ದಾರೆ.

ಹೌದು ದಕ್ಷ ಅಧಿಕಾರಿಯಾದ ಮಥಾಯಿ ಅವರು ಮಾನವ ಹಕ್ಕುಗಳ ಉಲ್ಲಂಘನೆ ದೂರು ನೀಡಿದ್ದು ಇದೇ ಮೊದಲ ಬಾರಿಗೆ ಇಂತಹ ಪ್ರಕರಣ ಕರ್ನಾಟಕ ರಾಜ್ಯ ಮಾನವ ಹಕ್ಕುಗಳ ಆಯೋಗದಲ್ಲಿ ದಾಖಲಾಗಿದ್ದು, ದೂರು ನೀಡಿದ 2 ತಿಂಗಳ ಬಳಿಕ ಪ್ರಕರಣ ದಾಖಲಾಗಿದೆ ಎಂದು ತಿಳಿದು ಬಂದಿದೆ. ಮಥಾಯ್‌ ಅವರನ್ನು ಕಳೆದ 10 ವರ್ಷದಲ್ಲಿ ಒಟ್ಟಾರೆ 27 ಬಾರಿ ವರ್ಗಾವಣೆ ಮಾಡಿತ್ತು. ಮಂಡ್ಯ ನಗರಾಭಿವೃದ್ಧಿ ಪ್ರಾಧಿಕಾರದಿಂದ ನಡೆದ 300 ಕೋಟಿ ಅಕ್ರಮ ಭೂಮಿ ಹಗರಣವನ್ನು ಅವರು ಬಯಲಿಗೆಳೆದಿದ್ದರು.
ಅಧಿಕಾರಿಗಳ ದೂರಿನಂತೆ ಸಂವಿಧಾನದ 14, 15 ಮತ್ತು 16 ರ ಪರಿಚ್ಛೇದದ ಅಡಿಯಲ್ಲಿ ಅಧಿಕಾರಿ ಮಥಾಯಿ ಅವರು ಮಾನವ ಹಕ್ಕುಗಳನ್ನು ಉಲ್ಲಂಘಿಸಿದ್ದಕ್ಕಾಗಿ ಪ್ರಕರಣ ದಾಖಲಿಸಿದ್ದಾರೆ. ಅದರಲ್ಲಿ ನನಗೆ 10 ವರ್ಷದಲ್ಲಿ ಈಗಾಗಲೇ 27 ಬಾರಿ ವರ್ಗಾವಣೆ ಮಾಡಲಾಗಿದೆ. ಇದರಲ್ಲಿ 9 ಐಎಎಸ್ ಅಧಿಕಾರಿಗಳು ನನಗೆ ಮಾನಸಿಕ ಕಿರುಕುಳ ನೀಡಿದ್ದು ನಾನು ಮಾನಸಿಕ ಸಂಕಷ್ಟಕ್ಕೆ ಒಳಗಾಗಿದ್ದೇನೆ ಆದಕಾರಣ ನನಗೆ ಸರಿಯಾದ ನ್ಯಾಯ ಮತ್ತು ಪರಿಹಾರವನ್ನು ಒದಗಿಸಲು ದೂರು ದಾಖಲಿಸುತ್ತಿದ್ದೇನೆ.

ಅದರಂತೆ ನನಗೆ ಮಾನಸಿಕ ಒತ್ತಡ ಹೇರಿದ ಐಎಎಸ್ ಅಧಿಕಾರಿಗಳಾದ ಗೌತಮ್ ಬಾಗದಿ, ಅನಿಲ್ ಕುಮಾರ್, ಶಿವಕುಮಾರ್, ಇ.ವಿ.ರಾಮಾನ ರೆಡ್ಡಿ, ವಿಜಯಾ ಭಾಸ್ಕರ್, ಹಿರೇಮತ್, ಶ್ರೀನಿವಾಸ್, ಅಂಜುಮ್ ಪರ್ವೇಜ್, ಎಂ ಲಕ್ಷ್ಮಿನಾರಾಯಣ ಮತ್ತು ಜಿ ಕಲ್ಪಾನಾ ಅವರು ಮಾನಸಿಕ ಕಿರುಕುಳ ನೀಡಲು ಕಾರಣರಾಗಿದ್ದಾರೆ ಎಂದು ಮಥಾಯ್ ಆರೋಪಿಸಿದ್ದಾರೆ. ಮಂಡ್ಯ ನಗರಾಭಿವೃದ್ಧಿ ಪ್ರಾಧಿಕಾರದಿಂದ ನಡೆದ 300 ಕೋಟಿ ಅಕ್ರಮ ಭೂಮಿ ಹಗರಣದ ಬಗ್ಗೆ ನಾನು ವರದಿ ತಯಾರಿಸಿದ್ದು ನನಗೆ ಒತ್ತಡ ಹೇರಲು ಕಾರಣವಾಗಿದೆ. ಅದಕ್ಕಾಗಿಯೇ ನನ್ನ ಪೂರ್ವ ಅನುಮತಿಯಿಲ್ಲದೆ ನಾನು ರಜೆಗೆ ಹೋಗಿದ್ದೇನೆ ಎಂದು DPAR ಸೇವೆಗಳಿಂದ ಸುಳ್ಳು ಆಧಾರದ ಮೇಲೆ ಆರೋಪಿಸಲ್ಪಟ್ಟಿದ್ದೇನೆ. ಇದಕ್ಕೆ ಸಂಬಂಧಪಟ್ಟ ಎಲ್ಲ ಸಾಕ್ಷಿ ಮತ್ತು ದಾಖಲೆಗಳನ್ನು ನನ್ನ ಬಾಲಿ ಇವೆ ಈಗ ಹೊವಿನಹಡಗಲಿಯಲ್ಲಿ ವಿಶೇಷ ಭೂ ಸ್ವಾಧೀನ ಅಧಿಕಾರಿ ಆಗಿ ವರ್ಗಾವಣೆಯಾಗಿದ್ದೆ ಆದರೆ ಮಂಡ್ಯ ಡಿ.ಸಿ. ಚುನಾವಣಾ ವಿಷಯವಾಗಿ ನನಗೆ ಅವಕಾಶ ನೀಡಿಲ್ಲ ಮತ್ತು ಈಗ ನನ್ನ ವೇತನವನ್ನು ತಡೆಹಿಡಿಯಲಾಗಿದೆ ಎಂದು ಕೆ ಮಥಾಯ್ ಹೇಳಿದ್ದಾರೆ.

ಬಿಬಿಎಂಪಿ ಯಲ್ಲಿ 2 ಸಾವಿರ ಕೋಟಿ ರೂ. ಹಗರಣವನ್ನು ಅವರು ಬಹಿರಂಗಪಡಿಸಿದ ಕಾರಣ ಮಥಾಯ್ ಅವರು ವಿಶ್ವಾಸಾರ್ಹ ಅಧಿಕಾರಿ ಅಲ್ಲ ಎಂದು ಹೇಳಲಾಗುತ್ತಿದೆ. ನನ್ನ ವಿರುದ್ದ ವಿಚಾರಣೆ ಮಾಡಲು ಹೇಳಲಾಗುತ್ತಿದೆ. ನನಗೆ ರಾಜಕೀಯ ಬಲವಿಲ್ಲದ ಕಾರಣ ಇದೆಲ್ಲ ನಡೆಯುತ್ತಿದೆ. ಮುಖ್ಯಮಂತ್ರಿ ಕುಮಾರಸ್ವಾಮಿಗಳಿಗೆ ಪತ್ರ ಬರೆದರೂ ಯಾವುದೇ ಪ್ರತಿಕ್ರಿಯೆ ಸಿಕ್ಕಿಲ್ಲ ಅವನ್ನು ಬೇಟಿಯಾಗಲು ಕೂಡ ಸಿಎಂ ಕಾರ್ಯದರ್ಶಿಗಳು ಅನುಮತಿ ನೀಡಿಲ್ಲ, ನಾನು ಭ್ರಷ್ಟಾಚಾರದ ವಿರುದ್ಧ ಹೋರಾಡುತ್ತೇನೆ. ಅದೇ ಕಾರಣಕ್ಕೆ ನನಗೆ 10 ವರ್ಷಗಳಲ್ಲಿ ಸರ್ಕಾರ 27 ಬಾರಿ ವರ್ಗಾಯಿಸಿದೆ. ಎಂದು ಹೇಳಿದ್ದಾರೆ.