ಬೆಂಗಳೂರಿನ ಈ ಪೆಟ್ರೋಲ್ ಬಂಕ್‌‌ವೊಂದರಲ್ಲಿ ನಿಮ್ಮ ವಾಹನಕ್ಕಷ್ಟೇ ಅಲ್ಲರೀ, ನಿಮಗೂ ಕೂಡ ಹೊಟ್ಟೆ ತುಂಬಿಸುವ ಕಾರ್ಯವನ್ನು ಆರಂಭಿಸಿದೆ…!!!

0
1018

ದಿನೇ ದಿನೇ ಬೆಂಗಳೂರಿನಲ್ಲಿ ವಾಹನಗಳು ಹೆಚ್ಚಾಗುತ್ತಿದ್ದು ವಾಹನ ಚಾಲಕರು ಟ್ರಾಫಿಕ್ ನಲ್ಲಿ ಸಿಲುಕಿಕೊಂಡ ಹೆಚ್ಚಿನ ಸಮಯವನ್ನು ಟ್ರಾಫಿಕ್ ನಲ್ಲಿ ಕಳೆಯುವಂತಾಗಿದೆ. ಇದರಿಂದಾಗಿ ವಾಹನ ಚಾಲಕರು ತಮ್ಮ ಉಪಹಾರ ಅಥವಾ ಊಟವನ್ನು ಬಿಟ್ಟುಬಿಡುವಂತಾಗಿದೆ, ಇದು ಅವರ ಆರೋಗ್ಯ ಮತ್ತು ಜೀವನಶೈಲಿಯ ಮೇಲೆ ಪರಿಣಾಮ ಬೀರುತ್ತದೆ. ನಾಗರಿಕರ ಆರೋಗ್ಯದ ಮೇಲೆ ಪರಿಣಾಮ ಬೀರುವ ಅಂತಹ ಪ್ರವೃತ್ತಿಯನ್ನು ಕಡಿಮೆಗೊಳಿಸುವ ಪ್ರಯತ್ನದಲ್ಲಿ, ನಗರದ ಪೆಟ್ರೋಲ್ ಬಂಕ್ ಒಂದರಲ್ಲಿ ಇಂದನವನ್ನು ಗಾಡಿಗಳಿಗೆ ಹಾಕಿಸುವುದರ ಜೊತೆ ಜೊತೆಗೆ ಉಚಿತ ಆಹಾರ ಅನ್ನು ವಿತರಿಸಲಾಗುತ್ತಿದೆ.

ಇಂದಿರಾ ನಗರದಲ್ಲಿ ಶ್ರೀವೆಂಕಟೇಶ್ವರ ಸಮೂಹ ಹೆಸರಿನಲ್ಲಿ ವಿವಿಧ ಉದ್ಯಮವನ್ನು ಮುನ್ನಡೆಸಿಕೊಂಡು ಸಾಗಿರುವ ಇವರು, ತಮ್ಮ ಉದ್ಯಮಗಳಲ್ಲಿ ಒಂದಾದ ಪೆಟ್ರೋಲ್ ಬಂಕ್‍ನಲ್ಲಿ ಇದೀಗ ಹೊಸದೊಂದು ಪ್ರಯೋಗಕ್ಕೆ ಮುಂದಾಗಿದ್ದಾರೆ. ಇದು ದೇಶದಲ್ಲೇ ಪ್ರಥಮ ಅನ್ನುವುದು ಇನ್ನೊಂದು ವಿಶೇಷ.

source: EenaduIndia.com

ಬಂಕ್ ಅಂದರೆ ಕೇವಲ ಇಂಧನ ತುಂಬಿಸುವ ತಾಣ ಅನ್ನುವ ಭಾವನೆಯನ್ನು ಜನರಿಂದ ದೂರ ಮಾಡುವ ಹಾಗೂ ತನ್ನ 50ನೇ ವರ್ಷಾಚರಣೆಯನ್ನು ಒಂದು ಜ್ಞಾಪಕಾರ್ಹ ಕಾರ್ಯದೊಂದಿಗೆ ಆಚರಿಸಲು ಮುಂದಾಗಿರುವ 48 ವರ್ಷ ವಯಸ್ಸಿನ ಬಂಕ್ ಮಾಲೀಕ ಹಾಗೂ ಶ್ರೀವೆಂಕಟೇಶ್ವರ ಸಮೂಹದ ಮಾಲೀಕ ಎಸ್.ಜಿ. ಪ್ರಕಾಶ್‍ರಾವ್ ಸಾಠೆ ಪೆಟ್ರೋಲ್ ಬಂಕ್ ಒಳಗೆ ಕ್ವಿಕ್ಕೀಸ್ ಅನ್ನುವ ಆಹಾರ ಕೇಂದ್ರ ತೆರೆದಿದ್ದಾರೆ. ಗ್ರಾಹಕರು ಪೆಟ್ರೋಲ್ ಹಾಕಿಸಿಕೊಂಡರೆ ಉಚಿತ ಆಹಾರದ ಪೊಟ್ಟಣ ನೀಡುವ ‘FREE FOOD WHILE YOU REFUEL’ ಕಾರ್ಯ ಆರಂಭಿಸಿದ್ದಾರೆ. ವಾರದಿಂದ ಆರಂಭವಾಗಿರುವ ವಿಶೇಷ ಸೇವೆ ಮುಂದಿನ ಒಂದು ತಿಂಗಳು ಪ್ರಾಯೋಗಿಕವಾಗಿ ನಡೆಯಲಿದೆ. ಈ ಸೇವೆಯನ್ನು ಮುಂದೆ ಕೂಡ ಒದಗಿಸುವ ಮಹಾದಾಸೆಯನ್ನು ಹೊಂದಿದ್ದಾರೆ.

source: EenaduIndia.com

ಈ ಪೆಟ್ರೋಲ್ ಬಂಕ್‍ನಲ್ಲಿ ಇಂಧನ ಭರಿಸುವವರಿಗೆ ಅವರು ಭರಿಸುವ ಇಂಧನದ ಮೊತ್ತ ಆಧರಿಸಿ ಒಂದು ತಿಂಡಿ ಅಥವಾ ಊಟ ನೀಡಲಾಗುತ್ತದೆ. 300 ರೂ. ಇಂಧನಕ್ಕೆ ಚಹಾ, ಕಾಫಿ, ಸಮೋಸಾ, 750 ರೂ.ಗೆ ವೆಜ್ ಅಥವಾ ಎಗ್ ಪಫ್ ನೀಡಲಾಗುತ್ತಿದೆ. 2000 ರೂ.ಗಿಂತ ಹೆಚ್ಚಿನ ಮೊತ್ತದ ಇಂಧನ ಭರಿಸಿಕೊಂಡರೆ ವೆಜ್ ಅಥವಾ ಚಿಕನ್ ಬಿರ್ಯಾನಿ ನೀಡಲಾಗುತ್ತಿದೆ. ಇದೇ ರೀತಿ 1000, 1500 ಇತ್ಯಾದಿ ಮೊತ್ತಕ್ಕೂ ತಿಂಡಿ ನೀಡಲಾಗುತ್ತಿದೆ. ಇದಕ್ಕಾಗಿ ಕೇಂದ್ರೀಕೃತ ಅಡುಗೆ ಮನೆ ಸಿದ್ಧಪಡಿಸಿಕೊಂಡಿದ್ದು, ಅಲ್ಲಿ ಹೈಜಿನ್ ಆಗಿ ಆಹಾರ ಸಿದ್ಧವಾಗಿ ಕ್ವಿಕ್ಕೀಸ್‍ಗೆ ರವಾನೆ ಆಗುತ್ತದೆ. ಇಲ್ಲಿ ಬಿಸಿ ಮಾಡಿ ಗ್ರಾಹಕರಿಗೆ ನೀಡುವ ಕಾರ್ಯ ಆಗುತ್ತಿದೆ. ಇಂಧನಕ್ಕಾಗಿ ವಾಹನ ನಿಲ್ಲಿಸಿದ ತಕ್ಷಣ ಅವರಿಷ್ಟದ ಆಹಾರವನ್ನು ಕೆಲವೇ ಕ್ಷಣಗಳಲ್ಲಿ ಪ್ಯಾಕ್‌ ಮಾಡಿ ಕೊಡಲಾಗುತ್ತದೆ.

ಸದ್ಯಕ್ಕೆ ಕ್ವಿಕ್ಕೀಸ್‍ನ್ನು ಬೆಳಗ್ಗೆ 9 ರಿಂದ ರಾತ್ರಿ 9ರವರೆಗೆ ನಡೆಸಲಾಗುತ್ತಿದೆ. ಇದನ್ನು 24 ಗಂಟೆಗೆ ವಿಸ್ತರಿಸುವ ಆಶಯ ಇದೆ. ನಿತ್ಯ 3-4 ಸಾವಿರ ಮಂದಿ ಇಲ್ಲಿಗೆ ಭೇಟಿ ನೀಡುತ್ತಾರೆ. ಇವರ ಮೂಲಕ ನಾವು ಇತರೆ ಗ್ರಾಹಕರನ್ನೂ ತಲುಪುವ ಗುರಿ ಹೊಂದಿದ್ದೇವೆ. ಇದರಲ್ಲಿ ಯಶಸ್ಸು ಕಾಣುವ ದೃಢ ನಂಬಿಕೆ ಇದೆ ಎನ್ನುತ್ತಾರೆ ಪ್ರಕಾಶ್‍ರಾವ್.