ವಿಶೇಷ ಚೇತನನೊಬ್ಬ ಯಾರ ಮುಂದೆಯೂ ಕೈ ಚಾಚದೆ ಮೂರು ಚಕ್ರಗಳ ಸೈಕಲಲ್ಲಿ ಕುಳಿತು Zomato ಫುಡ್ ಡೆಲಿವರಿ ಮಾಡುತ್ತಿರುವ ವಿಡಿಯೋ ಬಾರಿ ವೈರಲ್..

0
542

ದುಡಿಯಿವ ಮನಸ್ಸಿದ್ದರೆ ವ್ಯಕ್ತಿ ಯಾವುದೇ ಪರಿಸ್ಥಿತಿಯಲ್ಲಿದರು ಸ್ವಾಭಿಮಾನಿಯಾಗಿ ದುಡಿಯುತ್ತಾನೆ ಅನ್ನೋದಕ್ಕೆ ಹಲವು ನಿದರ್ಶನಗಳಿವೆ. ಅದರಂತೆ ನಡೆಯಲು ಆಗದೆ, ಕಣ್ಣು ಕಾಣದೆ, ಮಾತನಾಡಲು ಬರದೆ ಇರುವ ಇಂತಹ ಹಲವು ಜನರು ಇಡಿ ದೇಶವೆ ತಿರುಗಿ ನೋಡುವಂತ ಸಾಧನೆ ಮಾಡಿದ್ದಾರೆ. ಇವರ ಸ್ವಾಭಿಮಾನ ನೋಡಿ ಅಂಗವಿಕಲತೆ ಎನ್ನುವ ಪಟ್ಟವೇ ನಾಚಿಕೆಯಿಂದ ದೂರವಾಗಿದೆ. ಇನ್ನೂ ಕೆಲವೊಬ್ಬರು ದೈಹಿಕವಾಗಿ, ಮಾನಸಿಕವಾಗಿ, ಸದೃಡರಾಗಿದ್ದರು ಕೂಡ ಇನ್ನೊಬ್ಬರ ಮೇಲೆ ಜೀವನ ನಡೆಸುತ್ತಾರೆ. ಇನ್ನೂ ಕೆಲವರಂತೂ ಯವಸ್ಸಾದ ತಂದೆ- ತಾಯಿಗಳನ್ನೇ ದುಡಿಸಿಕೊಂಡು ಜೀವನ ಸಾಗಿಸುವ ಜನರು ಗಲ್ಲಿಗೊಬ್ಬರಿದ್ದಾರೆ, ಇವರೆಲ್ಲರೂ ನಾಚುವಂತೆ ವ್ಯಕ್ತಿಯೊಬ್ಬ ಎರಡು ಕಾಲಿಲ್ಲದಿದ್ದರು ಎಲ್ಲರು ಅಚ್ಚರಿ ಎನ್ನುವ ರೀತಿಯಲ್ಲಿ ಬದುಕುತ್ತಿದ್ದಾನೆ. ಅದು ಬಿಕ್ಷೆಬೇಡಿ ಇಲ್ಲ ದೇವಸ್ಥಾನದಲ್ಲಿ ಕೆಲಸಮಾಡಿ ಅಲ್ಲ, ಆನ್ಲೈನ್ ಬುಕಿಂಗ್ ಫುಡ್ ಡೆಲಿವರಿ ಮಾಡುವ ಕಂಪನಿಯಲ್ಲಿ ಡೆಲಿವರಿ ಬಾಯ್ ಆಗಿ ಕೆಲಸ ಮಾಡುತ್ತಿದ್ದಾನೆ. ಇದನ್ನು ನೋಡಿದ ಜನರು ಆತನ ಬಗ್ಗೆ ಮತ್ತು ಕೆಲಸ ನೀಡಿದ ಕಂಪನಿಯ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಹೌದು ಹನಿ ಗೋಯಲ್ ಎಂಬಾತ ಈ ವಿಡಿಯೋವನ್ನು ಟ್ವೀಟ್ ಮಾಡುತ್ತಾ ‘Zomato you keep rocking… ನಮ್ಮ ಜೀವನ ನಿರುಪಯುಕ್ತ ಎಂದು ಕೈಚೆಲ್ಲಿ ಕುಳಿತುಕೊಳ್ಳುವ ಎಲ್ಲರಿಗೂ ಈ ವ್ಯಕ್ತಿ ಒಂದು ಅತ್ಯುತ್ತಮ ನಿದರ್ಶನ. ದಯವಿಟ್ಟು ಈ ವ್ಯಕ್ತಿಯನ್ನು ಫೇಮಸ್ ಮಾಡಿ’ ಎಂದು ಬರೆದಿದ್ದಾರೆ. ಮತ್ತು ಆ ವ್ಯಕ್ತಿಯ ಕೆಲಸವನ್ನು ವಿಡಿಯೋ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಹಾಕಿ ಎಲ್ಲರಿಗೂ ಮನವಿ ಮಾಡಿದ್ದಾರೆ.

ಇನ್ನೂ zomoto ಕಂಪನಿ ನೀಡಿದ ಕಳಸವನ್ನು ತನ್ನ ಮೂರು ಗಾಲಿಯ ಸೈಕಲ್ ಮೇಲೆ ಗ್ರಾಹಕರಿಗೆ ತಲುಪಿಸುವ ಕೆಲಸವನ್ನು ಹನಿ ಗೋಯಲ್ ರಾಜಸ್ಥಾನದ ಬ್ಯಾವರ್ ನಲ್ಲಿ ಕೆಲಸ ಮಾಡುತ್ತಿದ್ದಾನೆ. ಮೂರು ಚಕ್ರಗಳ ಪುಟ್ಟ ಸೈಕಲಲ್ಲಿ ಕುಳಿತ ವಿಶೇಷ ಚೇತನ ವ್ಯಕ್ತಿ ಪುಡ್ ಡೆಲಿವರಿ ಮಾಡುತ್ತಿರುವುದನ್ನು ನೋಡಿದ ಜನರು ಆಶರ್ಯದಿಂದ ಕಣ್ಣು ಮಿಟುಕಿಸದೆ ನೋಡುತ್ತಾರೆ. ಸದ್ಯ ಜಾಲತಾಣದಲ್ಲಿ ಹರಿದಾಡುತ್ತಿರುವ ಈ ವಿಡಿಯೋ ನಿಜಕ್ಕೂ ಸ್ಫೂರ್ತಿ ಯಾಕಂದ್ರೆ, zomoto ವಿಶೇಷ ಚೇತನ ವ್ಯಕ್ತಿಯೊಬ್ಬರಿಗೆ ಸ್ವಂತ ಜೀವನವನ್ನು ನಡೆಸಿಕೊಳ್ಳುವ ಅವಕಾಶವನ್ನು ನೀಡಿದೆ ಆ ವಿಶೇಷ ಚೇತನರಿಗೆ ಡಿಲಿವರಿ ಬಾಯ್ ಆಗಿ ಉದ್ಯೋಗ ನೀಡಿದೆ. ಇದು ಆ ಕಂಪನಿ ಮಾಡಿದ ಒಳ್ಳೆಯ ಕೆಲಸ ಅಂತಾನು ಹೇಳಬಹುದು.

ಸದ್ಯ ಈತ ಸೋಶಿಯಲ್ ಮೆಡಿಯಾದಲ್ಲಿ ಈ ವ್ಯಕ್ತಿ ಎಲ್ಲರಿಂದ ಮೆಚ್ಚುಗೆ ಪಡೆದಿದ್ದಾನೆ. ದೈಹಿಕ ನ್ಯೂನ್ಯತೆ ಅನ್ನೋದು ಜೀವನ ನಡೆಸೋ ಗುರಿ ಇರೋರಿಗೆ ಅಡ್ಡಿ ಅಲ್ಲ ಅಂತ ದುಡಿತಾ ಇರೋ ಡೆಲಿವರಿ ಬಾಯ್ ಗೆ ನೆಟ್ಟಿಗರು ಶಹಬ್ಬಾಶ್ ಎಂದಿದ್ದಾರೆ. ಅಷ್ಟು ಮಾತ್ರ ವಲ್ಲದೆ ಈ ವಿಶೇಷ ಚೇತನರಿಗೆ ಉದ್ಯೋಗಾವಕಾಶ ಕಲ್ಪಿಸಿರುವ zomoto ಕೂಡ ಎಲ್ಲರ ಮೆಚ್ಚುಗೆ ಗಳಿಸಿದೆ. ಇದನ್ನು ನೋಡಿದವರು ಇವರಿಗೆ ಕೆಲಸ ನೀಡಿದ ಕಂಪನಿಗೆ ‘ ಹ್ಯಾಂಡ್ಸ್ ಅಪ್!’ ಮಾಡಬೇಕೋ ಇಲ್ಲ ದೈಹಿಕವಾಗಿ ಸದೃಡನಿಲ್ಲದೆ ತನ್ನ ಕೈಗಳಿಂದ ಸೈಕಲ್ ತುಳಿದು ಸಾಹಸಮಯ ಜೀವನ ಮಾಡುತ್ತಿರುವ ವ್ಯಕ್ತಿಗೆ ‘ ಹ್ಯಾಂಡ್ಸ್ ಅಪ್! ಮಾಡಬೇಕೋ ಎಂದು ಹೇಳುತ್ತಿದ್ದಾರೆ.

Also read: ರಸ್ತೆ ಗುಂಡಿಯಿಂದ ಆದ ಆಕ್ಸಿಡೆಂಟ್-ನಲ್ಲಿ ಮಗನನ್ನು ಕಳೆದುಕೊಂಡ ಮೇಲೆ ಇವರು ಇನ್ಯಾರಿಗೂ ಆ ಪರಿಸ್ಥಿತಿ ಬರಬಾರದೆಂದು ಮಾಡುತ್ತಿರುವ ಕೆಲಸ ನಿಜಕ್ಕೂ ಪ್ರಶಂಸನೀಯ!!