ಈ ವಯಾಗ್ರ ಗಿಡದ ಬೇರು ಕೋಟಿ ಕೋಟಿ ಬೆಲೆಬಾಳುತ್ತೆ ಅಂತೆ; ಇದನ್ನು ನೋಡಿದ್ರೆ ಅಚ್ಚರಿಯಾಗತ್ತಿರ…

0
1347

ಈ ಕಾಲದಲ್ಲಿ ಯಾವ ವಸ್ತುಗಳಿಗೆ ಯಾವಾಗೆ ಬೆಲೆ ಬರುತ್ತೆ! ಗೊತ್ತೇ ಆಗೋದಿಲ್ಲ ಈ ನಂಬಿಕೆ ಹಾಗೂ ಉದಾಹರಣೆಗಳಿಂದ ಕೆಲವೊಂದು ಹಳೆಯ ವಸ್ತುಗಳನ್ನು ಜೋಪಾನವಾಗಿ ಇಟ್ಟಿದ್ದಾರೆ ಕೆಲವೊಂದು ಜನರು. ಮುಂದೊಂದು ದೀನ ಕಸವು ರಸವಾಗಿ ಬೆಲೆ ಪಡೆಯುತ್ತೆ ಅಂತ ವಾಡಿಕೆಯಲ್ಲಿದೆ. ಅದರಲ್ಲಿ ಬೆಟ್ಟ ಗುಡ್ಡಗಳಲ್ಲಿ ಸಿಗುವ ಗಿಡ ಮೂಲಿಕೆಗಳು ಬೇರು, ಗಿಡದ ಎಲೆಗಳು ಔಷಧಿಯ ಗುಣ ಹೊಂದಿರುವುದರಿಂದ ಬಂಗಾರದ ಬೆಲೆಯನ್ನು ಪಡೆಯಿತ್ತಿವೆ ಇದಕ್ಕೆ ಸಾಕ್ಷಿಯಾಗಿ ಲೈಂಗಿಕ ಸಾಮರ್ಥ್ಯ ಹೊಂದಿರುವ ಹಿಮಾಲಯ ವಯಾಗ್ರ ಗಿಡದ ಬೇರಿಗೆ ಲಕ್ಷದಿಂದ ಕೋಟಿಯವರೆ ಮಾರಾಟವಾಗುತ್ತಿದೆ. ಇದು ವಿಶ್ವದ ದುಬಾರಿ ಬೆಲೆಯನ್ನು ಪಡೆದು ಅಚ್ಚರಿ ಮೂಡಿಸಿದೆ.

ಏನಿದು ಹಿಮಾಲಯ ವಯಾಗ್ರ ಗಿಡದ ಬೇರು:

Also read: ದೇವಾಲಯದಲ್ಲಿ ಮಹಿಳೆಯರಿಗೆ ಪ್ರವೇಶಕ್ಕೆ ವಿವಾದಗಳು ನಡಿತ್ತಾನೆ ಇವೆ; ಆದರೆ ಭಾರತದ ಪುರುಷರಿಗೆ ಪ್ರವೇಶವಿಲ್ಲದ 7 ದೇವಸ್ಥಾನಗಳಿವೆ..
ಯರಶಗುಂಬ ಬೇರು ಹಿಮಾಲಯ ಪರ್ವತ ಶ್ರೇಣಿಗಳಲ್ಲಿ ಕಂಡು ಬರುತ್ತದೆ. ಇದನ್ನು ಹಿಮಾಲಯದ ವಯಾಗ್ರ ಎಂದು ಕೂಡ ಕರೆಯಲಾಗುತ್ತದೆ. ಈ ಬೇರು ಲೈಂಗಿಕ ಆಸಕ್ತಿಯನ್ನು ಕೆರಳಿಸುವುದಲ್ಲದೇ, ಕ್ಯಾನ್ಸರ್, ಅಸ್ತಮಾದಂತಹ ರೋಗಗಳನ್ನು ತಡೆಯಲು ಸಹಾಯ ಮಾಡುತ್ತದೆ. ಸದ್ಯ ಒಂದು ಕೆ.ಜಿ ಯರಶಗುಂಬ ಬೇರಿಗೆ 5 ಲಕ್ಷದಿಂದ 1 ಕೋಟಿವರೆಗೆ ಬೆಲೆಯಿದೆ.

ಎಲ್ಲಿ ಸಿಗುತ್ತಿದೆ?

Also read: ಎಷ್ಟೇ ಕೊರೆಯಿವ ಚಳಿ ಇದ್ದರು ಈ ಮನೆಮದ್ದು ಪಾಲಿಸಿ; ಚರ್ಮದ ಬಿರುಕು ಯಾತನೆಯಿಂದ ನಿಮ್ಮ ಚರ್ಮವನ್ನು ರಕ್ಷಿಸಿ..

ಲೈಂಗಿಕ ಸಾಮರ್ಥ್ಯ ಹೆಚ್ಚಿಸುವುದರಿಂದ ಹಲವು ಔಷಧೀಯ ಗುಣಗಳಿರುವ ಈ ಬೇರು ಸದ್ಯ ಪ್ರಾಖ್ಯಾತಿ ಪಡೆದಿದೆ ಈ ಗಿಡ ಮೂಲಿಕೆ ಭಾರತದ ಹಿಮಾಲಯ ಪ್ರದೇಶಗಳು ಸೇರಿದಂತೆ ಚೀನಾ, ನೇಪಾಳ, ಭೂತಾನ್ ಏಷ್ಯಾ ದೇಶಗಳ ಪರ್ವತಗಳಲ್ಲಿ ಈ ಗಿಡ ಮೂಲಿಕೆಗಳು ಹೆಚ್ಚಾಗಿ ಕಂಡು ಬರುತ್ತದೆ. ಇತ್ತೀಚಿನ ದಿನಗಳಲ್ಲಿ ಈ ಬೇರಿನ ಬೇಡಿಕೆ ಹೆಚ್ಚಾಗಿದ್ದು, ಮಾರುಕಟ್ಟೆಯಲ್ಲಿ ಭಾರೀ ಮೊತ್ತಕ್ಕೆ ಮಾರಾಟವಾಗುತ್ತಿದೆ. ಹೀಗಾಗಿ ಚೀನಾ, ನೇಪಾಳ, ಟಿಬೆಟ್​ ದೇಶದ ಜನರು ಈ ಅಮೂಲ್ಯ ಮೂಲಿಕೆ ಹುಡುಕಾಟದಲ್ಲಿ ತೊಡಗಿದ್ದಾರೆ. ಇತ್ತೀಚಿನ ದಿನಗಳಲ್ಲಿ ಹವಾಮಾನದ ವೈಪರಿತ್ಯದಿಂದ ಈ ಗಿಡಗಳು ಕೂಡ ವಿನಾಶಕ್ಕೆ ಒಳಗಾಗುತ್ತಿದೆ. ಇದರಿಂದ ಇದರ ಬೇಡಿಕೆ ಹೆಚ್ಚಾಗಿದ್ದು, ಬೇರು ಹುಡುಕುವುದೇ ಒಂದು ದಂದೆಯಾಗಿ ಕೆಲವರು ಇದನ್ನೇ ತಮ್ಮ ಆದಾಯದ ಮೂಲವನ್ನು ಮಾಡಿಕೊಂಡಿರುವುದರಿಂದ ಯರಶಗುಂಬ ಎಂಬ ಅತ್ಯಮೂಲ್ಯ ಬೇರು ವಿನಾಶದ ಅಂಚಿಗೆ ತಲುಪಿದೆ. ಸಂಶೋಧಕರು ತಿಳಿಸಿದ್ದಾರೆ.


Also read: ನಿಮ್ಮ ಮನೆ ಮತ್ತು ಬೆಡ್ ರೂಮ್-ಗಳಲ್ಲಿ ಬಳಸುವ ಈ ವಸ್ತುಗಳಿಂದ ಕ್ಯಾನ್ಸರ್ ರೋಗ ಬರುತ್ತಿದೆ; ಇಂತಹ ವಸ್ತುಗಳಿಂದ ದೂರವಿರಿ..

ಇದು ಪತ್ತೆಯಾಗಿದು ಹೇಗೆ?

ಈ ಗಿಡ ಮೂಲಿಕೆಯನ್ನು ಮೊದಲ ಬಾರಿ ಪತ್ತೆ ಹಚ್ಚಿದ್ದು ಭಾರತದ ಇಂದರ್ ಸಿಂಗ್ ಎಂಬ ವ್ಯಕ್ತಿ. ಬಳಿಕ ಈ ಔಷಧಿ ಬೇರು ಫೇಮಸ್ಸು ಆಗುತ್ತಿದ್ದಂತೆ ನೇಪಾಳದ ಹುಡುಗರು ಇದಕ್ಕೊಂದು ಮಾರುಕಟ್ಟೆ ಸೃಷ್ಟಿಸಿದರು ಎನ್ನಲಾಗಿದೆ. 3200 ರಿಂದ 3800 ಮೀಟರ್ ಎತ್ತರದ ಪರ್ವತ ಪ್ರದೇಶದಲ್ಲಿ ಬೆಳೆಯುವ ಈ ಗಿಡ ಹಿಮಾಲಯದಲ್ಲಿ ಹೆಚ್ಚಾಗಿ ಹಿಮ ಬೀಳುವ ಸಂದರ್ಭದಲ್ಲಿ ಈ ಗಿಡ ಬೆಳೆಯುತ್ತದೆ.

ಯಾವ ರೋಗಗಳನ್ನು ನಿವಾರಣೆ ಮಾಡುತ್ತೆ?

ಇದೊಂದು ಆಯುರ್ವೇದ ಗಿಡ ಮೂಲಿಕೆಯಾಗಿದು. ದೇಹದಲ್ಲಿ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ ಅಷ್ಟೇ ಅಲ್ಲದೆ ಈ ಗಿಡದ ಬೇರು ಲೈಂಗಿಕ ಸಾಮರ್ಥ್ಯವನ್ನು ಹೆಚ್ಚಿಸುವುದಲ್ಲದೆ, ಇದನ್ನು ಉಸಿರಾಟದ ತೊಂದರೆ, ಮೂತ್ರಪಿಂಡದ ಸಮಸ್ಯೆ ಕ್ಯಾನ್ಸರ್ ಸೇರಿದಂತೆ ಹಲವು ರೋಗಗಳಿಗೆ ಬಳಸಬಹುದು. ಅಷ್ಟೇ ಅಲ್ಲದೆ ವೃದ್ಧಾಪ್ಯವನ್ನು ನಿಧಾನಗೊಳಿಸಿ, ಇಷೆಲ್ಲ ಉಪಯೋಗದಿಂದ ಬೀಜಿಂಗ್ ಒಲಿಂಪಿಕ್ಸ್​ ಸಂದರ್ಭದಲ್ಲಂತೂ ಈ ಗಿಡ ಮೂಲಿಕೆಗೆ ಹೊಸ ಮಾರುಕಟ್ಟೆಯನ್ನು ಸೃಷ್ಟಿಯಾಯಿತು. ಒಲಿಂಪಿಕ್ಸ್ ಸಂದರ್ಭದಲ್ಲಿ ಈ ಮೂಲಿಕೆಯ ಬೆಲೆಯು ಲಕ್ಷ ರೂಗಳಲ್ಲಿ ಮಾರಾಟವಾಗಿತ್ತು. ಆನಂತರ ಯರಶಗುಂಬ ಬೇರು ವಿಶ್ವ ಮಾರುಕಟ್ಟೆಯ ಗಮನ ಸೆಳೆದಿದೆ ಎನ್ನಲಾಗಿದೆ.