ಸಾವಿರಾರು ಕೋಟಿ ಒಡತಿಯಾಗಿದ್ದರೂ ಸಾಮಾನ್ಯರಂತೆ ಮೈಸೂರು ಮಾರುಕಟ್ಟೆಗೆ ಭೇಟಿ ನೀಡಿ ಎಲ್ಲರ ಪ್ರಶಂಸೆಗೆ ಪಾತ್ರರಾದ ಸುಧಾ ಮೂರ್ತಿ!!

0
1246

2018ರ ಮೈಸೂರು ದಸರಾಗೆ ಚಾಲನೆ ನೀಡಿದ್ದ ಇನ್ಫೋಸಿಸ್ ಫೌಂಡೇಶನ್ ಮುಖ್ಯಸ್ಥೆ ಸುಧಾಮೂರ್ತಿಯವರು ನಗರದ ದೇವರಾಜ ಮಾರುಕಟ್ಟೆಯಲ್ಲಿ ಮನೆಗೆ ಬೇಕಾದ ಅಗತ್ಯ ವಸ್ತುಗಳನ್ನು ಖರೀದಿಸಲು ಸಾಮಾನ್ಯ ಜನರಂತೆ ಬಂದಿದು, ಅವರ ಸರಳತೆಯ ಮನೋಭಾವ ಎಲ್ಲರಿಗೂ ಮಾದರಿಯಾಗಿದೆ. ಏಕೆಂದರೆ ಸ್ವಲ್ಪ ಹಣವಿದ್ದರೆ ಕೈ ಗೊಂದು ಆಳು ಕಾಲಿಗೊಂದು ಆಳಿಟ್ಟುಕೊಂಡು ರಾಜರಂತೆ ಮೆರೆಯಿವ ಜನರಿಗೆ ಮಾರುಕಟ್ಟೆಯಲ್ಲಿ ಯಾವ ವಸ್ತುಗಳು ಸಿಗುತ್ತೆ ಅಂತಾನು ತಿಳಿದಿರುವುದಿಲ್ಲ ಇಂತಹ ಕಾಲದಲ್ಲಿ ಇನ್ಫೋಸಿಸ್ ಫೌಂಡೇಶನ್ ಮುಖ್ಯಸ್ಥೆ ಯಾಗಿದು ಸಾವಿರಾರು ಕೋಟಿಯ ಒಡತಿಯಾಗಿರುವ ಸುಧಾಮೂರ್ತಿಯವರ ಯೋಚನೆಗಳು ಯಾರ ವಿಚಾರಕ್ಕೂ ನಿಲುಕುತ್ತಿಲ್ಲ ಅಷ್ಟೊಂದು ಸರಳತೆಯಲ್ಲಿ ಎಲ್ಲರಿಗೂ ಮಾದರಿಯಾಗುತ್ತಿದ್ದಾರೆ.

Also read: ಒಂದು ಹೆಣ್ಣು ಈ ರೀತಿಯೆಲ್ಲಾ ಅಪೇಕ್ಷೆ ಪಡುತ್ತಾಳ..?

ಆಗರ್ಭ ಶ್ರೀ ಮಂತರಾದರೂ, ವಿದ್ಯಾವಂತೆಯಾದರು ತಮ್ಮ ಜೀವನದಲ್ಲಿ ಸರಳತೆ ವಿನಯ ಅಳವಡಿಸಿಕೊಂಡು ಬಂದಿರುವ ಅವರು ಇದು ಒಂದೆಯೆಲ್ಲ ಅವರ ಸರಳತೆಯ ಹಲವಾರು ನಿದರ್ಶನಗಳಿವೆ ಕರ್ನಾಟಕ ಶಾಸ್ತ್ರಿಯ ಸಂಗಿತದ ವಿದ್ವಾಂಸರಾದ ಎಮ್ ಬಾಲಮುರಳಿ ಕೃಷ್ಣ ಅವರಿಗೆ ಸನ್ಮಾನಿಸಬೇಕಿದ ಸುಧಾಮೂರ್ತಿ ಅವರು ಪ್ರಶಸ್ತಿಯನ್ನು ಕೊಟ್ಟು ಪಾದಮುಟ್ಟಿ ನಮಸ್ಕರಿಸಿ ಆಶೀರ್ವಾದ ಕೋರಿದರು.

Also read: ಖ್ಯಾತ ಗಾಯಕಿ ಶಕೀರಾರವರ ಜೀವನದ ಕಥೆ ಕೇಳಿದ್ರೆ ನಿಮಗೂ ಜೀವನದಲ್ಲಿ ಕಷ್ಟವನ್ನು ಎದುರಿಸಿ ಗೆಲ್ಲಬಲ್ಲೆ ಅನ್ನೋ ಉತ್ಸಾಹ ಹುಟ್ಟುತ್ತೆ!!

ಕೆಲ ದಿನಗಳ ಹಿಂದೆ ಬೆಂಗಳೂರಿನ ಪ್ರೆಸ್ ಕ್ಲಬ್ ನಲ್ಲಿ ಸಂವಾದ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು. ಈ ಕಾರ್ಯಕ್ರಮದ ಬಳಿಕ ಛಾಯಾಗ್ರಾಹರೊಬ್ಬರು ಸುಧಾಮೂರ್ತಿ ಅವರಿಗೆ ಪುಸ್ತಕವನ್ನು ಕೊಟ್ಟಿದ್ದರು. ಈ ವೇಳೆ ಸುಧಾಮೂರ್ತಿ “ಈ ಪುಸ್ತಕ ನನಗೆ ಉಚಿತವಾಗಿ ನೀಡುತ್ತಿದ್ದೀರಾ” ಎಂದು ಪ್ರಶ್ನಿಸಿದರು. ಇದಕ್ಕೆ ಛಾಯಾಗ್ರಾಹಕರು ಹೌದು ಎಂದು ಉತ್ತರಿಸಿದಾಗ ಸುಧಾಮೂರ್ತಿ,”ನೀವು ಇಷ್ಟು ಕಷ್ಟಪಟ್ಟು ಸಿದ್ಧಪಡಿಸಿದ ಪುಸ್ತಕವನ್ನು ಉಚಿತವಾಗಿ ಪಡೆಯುವುದು ಪುಸ್ತಕಕ್ಕೆ ನಾನು ಮಾಡಿದ ಅವಮಾನವಾಗುತ್ತದೆ.
ಇದು ನನಗೆ ಶೋಭೆ ತರುವುದಿಲ್ಲ. ಎಂದು ಹೇಳಿ ಪುಸ್ತಕದ ಬೆಲೆಯಾದ 4,500 ರೂ. ಅನ್ನು ಛಾಯಾಗ್ರಾಹಕರ ಬ್ಯಾಂಕ್ ಖಾತೆಗೆ ಹಾಕಿ ಎಂದು ತನ್ನ ಸಿಬ್ಬಂದಿಗೆ ಸೂಚಿಸಿದರು.

Also read: ಜೀವನದಲ್ಲಿ ಸೋತಿದ್ದು.. ನೊಂದಿದ್ದು.. ಅವಮಾನ ಪಟ್ಟಿದ್ದು ಸಾಕು.. ಇನ್ನಾದರೂ ಬದಲಾಗಿ.. ನಿಮ್ಮೊಳಗಿರುವ ಅತ್ಮಬಲವನ್ನು ಹೊರಹಾಕಲು ಹೀಗೆ ಮಾಡಿ..

ಇಂತಹ ಸರಳತೆ ಈಗಿನದು ಅಲ್ಲ ಸುಧಾಮೂರ್ತಿಯವರು ಕಾಲೇಜಿನಲ್ಲಿ ಓದುವಾಗ ಟಾಟ ಕಂಪನಿಯಿಂದ ಅವರ ಕಾಲೇಜಿಗೆ ಒಂದು ಪತ್ರ ಬರುತ್ತದೆ. ಅದರಲ್ಲಿ ಟಾಟ ಕಂಪನಿಯಲ್ಲಿ ಕೆಲಸ ಮಾಡಲು ಯುವಕರು ಬೇಕಾಗಿದ್ದಾರೆ ಅಂತೆ ಇರುತ್ತೆ ಇದನ್ನು ಗಮನಿಸಿದ ಸುಧಾ ಮೂರ್ತಿಯವರು ಆಗಿನ ಟಾಟ ಕಂಪನಿಯ ರತನ್ ಟಾಟರವರಿಗೆ ಒಂದು ಪತ್ರ ಬರೆಯುತ್ತಾರೆ. ಅದರಲ್ಲಿ ಹೆಣ್ಣು ಮಕ್ಕಳ ಪರ ದ್ವನಿ ಎತ್ತುತ್ತಾರೆ. ಕೇವಲ ಯುವಕರು ಮಾತ್ರ ಬೇಕಾಗಿದ್ದಾರೆ ಎಂದು ಬರೆದಿರುವ ನಿಮ್ಮ ಪತ್ರವನ್ನು ಖಂಡಿಸುತ್ತೆನೆಂದು ಪತ್ರದಲ್ಲಿ ಬರೆದು ಕಳುಹಿಸುತ್ತಾರೆ. ಇದನ್ನು ಓದಿದ ರತನ್ ಟಾಟ ಸುಧಾಮೂರ್ತಿಯವರ ಆತ್ಮ ವಿಶ್ವಾಸ ಮೆಚ್ಚಿ ಖುದ್ದಾಗಿ ಬಂದು ಸುಧಾ ಮೂರ್ತಿಯವರನ್ನು ಸಂದರ್ಶಿಸಿ ಕೆಲಸಕ್ಕೆ ಆಹ್ವಾನಿಸುತ್ತಾರೆ. ಹೀಗೆ ಇಂತಹ ಹಲವಾರು ಸರಳತೆಯನ್ನು ಮೆರೆಯಿತ್ತಿರುವ ಸುಧಾಮೂರ್ತಿ ಮೊದಲಿನಿಂದಲೂ ಸರಳವಾದ ಮನೋಭಾವವನ್ನು ಹೊಂದಿದ್ದಾರೆ. ಒನ್ನೊಂದು ಮೆಚ್ಚುವ ವಿಷಯ ಅಂದರೆ ಅವರು ಮನಸ್ಸು ಮಾಡಿದರೆ ಕೆಜಿಯಷ್ಟು ವಜ್ರವನ್ನು ಧರಿಸಬಹುದು ಆದರೆ ಸರಳತೆಯಲ್ಲೇ ಬದುಕುವ ಸುಧಾಮೂರ್ತಿ ಬರಿ ಒಂದು ಕರಿಮಣಿ ಸರವನ್ನು ಮಾತ್ರ ದರಿಸಿದ್ದು ಎಷ್ಟೊಂದು ಸರಳತೆಯಲ್ಲಯೇ?