ಮೋದಿ ಸರ್ಕಾರದಲ್ಲಿ ಕರ್ನಾಟಕದ ಮೂವರಿಗೆ ಮಂತ್ರಿ ಸ್ಥಾನ; ಯಾರಿವರು ಅದೃಷ್ಟವಂತರು ಇಲ್ಲಿದೆ ನೋಡಿ ಮಾಹಿತಿ..

0
373

ಲೋಕಸಭಾ ಚುನಾವಣೆಯಲ್ಲಿ ಇತಿಹಾಸ ಬರೆದು ಗೆಲುವು ಸಾಧಿಸಿದ ಮೋದಿ ಸರ್ಕಾರದಲ್ಲಿ ಕರ್ನಾಟಕದಿಂದ ಯಾರಿಗೆ ಸಿಗಲಿದೆ ಮಂತ್ರಿಗಿರಿ ಎನ್ನುವ ಕುತೂಹಲಕ್ಕೆ ಈಗ ತೆರೆಬಿದಿದ್ದು ಕರ್ನಾಟಕದಿಂದ ಬೆಂಗಳೂರು ಉತ್ತರ ಕ್ಷೇತ್ರದಿಂದ ಆಯ್ಕೆಯಾಗಿರುವ ಡಿ.ವಿ.ಸದಾನಂದ ಗೌಡ, ಧಾರವಾಡ ಸಂಸದ ಪ್ರಹ್ಲಾದ ಜೋಷಿ, ರಾಜ್ಯಸಭಾ ಸದಸ್ಯೆ ನಿರ್ಮಲಾ ಸೀತಾರಾಮನ್ ಹಾಗೂ ಬೆಳಗಾವಿ ಸಂಸದ ಸುರೇಶ್ ಅಂಗಡಿ ಅವರಿಗೆ ಮೋದಿ 2.0 ಸರಕಾರದಲ್ಲಿ ಸ್ಥಾನ ಸಿಗುವುದು ಖಚಿತವಾಗಿದ್ದು ಈಗಾಗಲೇ ಇವರಿಗೆ ಮೋದಿ ಬಳಗದಿಂದ ಕರೆ ಬಂದಿದೆ.

Also read: ಕೇಂದ್ರ ಸಂಪುಟದಲ್ಲಿ ಸಚಿವ ಸ್ಥಾನ ಯಾರಿಗುಂಟು? ಯಾರಿಗಿಲ್ಲ? ದೇವೇಗೌಡರಿಗೆ ಟಾಂಗ್ ಕೊಡಲು ಸುಮಲತಾಗೆ ಸಚಿವ ಸ್ಥಾನ ನೀಡುತ್ತಾರ ಮೋದಿ??

ಹೌದು ಕರ್ನಾಟಕದಿಂದ ನಾಲ್ವರಿಗೆ ಸಚಿವ ಸ್ಥಾನ ಪಕ್ಕಾ ಆಗಿದೆ ಎಂದು ಮಾಹಿತಿ ಸಿಕ್ಕಿದ್ದು. ಈ ನಡುವೆ ನೂತನ ಸಚಿವರಾಗಿ ಆಯ್ಕೆಯಾದವರಿಗೆ ಪ್ರಧಾನಿ ಕಾರ್ಯಾಲಯದಿಂದ ಕರೆ ಮಾಡಿ ತಿಳಿಸಲಾಗುತ್ತಿದೆ. ಈಗಾಗಲೇ ಕರ್ನಾಟಕದ ಸದಾನಂದ ಗೌಡ, ಪ್ರಹ್ಲಾದ್ ಜೋಶಿ, ಸುರೇಶ್ ಅಂಗಡಿ ಅವರಿಗೆ ಸಚಿವ ಸ್ಥಾನ ಖಚಿತವಾಗಿದ್ದು ಪ್ರಧಾನಿ ನರೇಂದ್ರ ಮೋದಿ ಅವರ ಸಂಪುಟದಲ್ಲಿ ಕರ್ನಾಟಕದ ಮೂವರಿಗೆ ಕ್ಯಾಬಿನೆಟ್ ಸ್ಥಾನ ಸಿಕ್ಕಿದೆ. ಕಳೆದ ಬಾರಿ ಸಾಂಖ್ಯಿಕ ಖಾತೆಯನ್ನು ನಿರ್ವಹಿಸಿದ್ದ ಡಿವಿ ಸದಾನಂದ ಗೌಡ ಅವರಿಗೆ ಈ ಬಾರಿಯೂ ಮೋದಿ ಕ್ಯಾಬಿನೆಟ್‍ನಲ್ಲಿ ದರ್ಜೆಯ ಮಂತ್ರಿ ಸ್ಥಾನ ನೀಡಿದ್ದಾರೆ.

Also read: ಮಂಡ್ಯದಲ್ಲಿ ನಡೆಯುತ್ತಿರುವ ಅಂಬರೀಶ್ ಅವರ 67ನೇ ಹುಟ್ಟುಹಬ್ಬ, ಹಾಗೂ ಸ್ವಾಭಿಮಾನಿ ಸಮಾವೇಶದಲ್ಲಿ ಐದು ಕ್ವಿಂಟಾಲ್ ಧಾರವಾಡ ಪೇಡಾ ಹಂಚಿದ ಅಭಿಮಾನಿ..

ಧಾರವಾಡದ ಸಂಸದ ಪ್ರಹ್ಲಾದ್ ಜೋಷಿ ಮತ್ತು ಬೆಳಗಾವಿಯ ಸಂಸದ ಸುರೇಶ್ ಅಂಗಡಿ ಅವರಿಗೆ ಕ್ಯಾಬಿನೆಟ್ ಸ್ಥಾನ ಸಿಕ್ಕಿದೆ. ಸದಾನಂದ ಗೌಡ ಒಕ್ಕಲಿಗ, ಪ್ರಹ್ಲಾದ್ ಜೋಷಿ ಬ್ರಾಹ್ಮಣ, ಸುರೇಶ್ ಅಂಗಡಿ ಲಿಂಗಾಯತರಾಗಿದ್ದಾರೆ. ಅಮಿತ್ ಶಾ ಮೂವರಿಗೆ ಕರೆ ಮಾಡಿ ಈ ವಿಚಾರ ತಿಳಿಸಿದ್ದಾರೆ. ಆದರೆ ಖಾತೆ ಯಾವುದು ಎನ್ನುವುದು ತಿಳಿದು ಬಂದಿಲ್ಲ. ಪ್ರಹ್ಲಾದ್ ಜೋಷಿ ಅವರ ಹೆಸರು ಸ್ಪೀಕರ್ ರೇಸ್ ನಲ್ಲಿದೆ ಎಂದು ಮಾಧ್ಯಮಗಳಲ್ಲಿ ವರದಿಯಾಗಿದೆ.

ಪ್ರಧಾನಿ ಕಾರ್ಯಾಲಯದಿಂದ ಕರೆ:

ನೂತನ ಸಚಿವರಾಗಿ ಆಯ್ಕೆಯಾದವರಿಗೆ ಪ್ರಧಾನಿ ಕಾರ್ಯಾಲಯದಿಂದ ಕರೆ ಮಾಡಿ ತಿಳಿಸಲಾಗುತ್ತಿದೆ. ಈಗಾಗಲೇ ಕರ್ನಾಟಕದ ಸದಾನಂದ ಗೌಡ, ಪ್ರಹ್ಲಾದ್ ಜೋಶಿ, ಸುರೇಶ್ ಅಂಗಡಿ ಅವರಿಗೆ ಸಚಿವ ಸ್ಥಾನ ಖಚಿತವಾಗಿದ್ದು ಕರೆ ಮಾಡಿ ತಿಳಿಸಲಾಗಿದೆ ಎಂಬ ಖಚಿತ ಮಾಹಿತಿ ಲಭ್ಯವಾಗಿದೆ. ಜತೆಗೆ ನಿರ್ಮಲಾ ಸೀತಾರಾಮನ್​ ಅವರು ಮತ್ತೊಮ್ಮೆ ಸಚಿವರಾಗಲಿದ್ದಾರೆ. ಅವರು ಕರ್ನಾಟಕದಿಂದ ರಾಜ್ಯಸಭೆಗೆ ಹೋಗಿರುವ ಕಾರಣ, ಕರ್ನಾಟಕಕ್ಕೆ ಒಟ್ಟೂ 4 ಸ್ಥಾನ ಸಿಗಲಿದೆ ಎಂದು ಮೂಲಗಳು ಹೇಳುತ್ತಿವೆ.

ಡಿವಿ ಸದಾನಂದ ಗೌಡ ಹಾಗೂ ನಿರ್ಮಲಾ ಸೀತಾರಾಮನ್ ಅವರು ಹಿಂದಿನ ಎನ್‌ಡಿಎ ಸರಕಾರದಲ್ಲಿಯೂ ಮಂತ್ರಿಯಾಗಿದ್ದವರು. ಜತೆಗೆ, ನಿತಿನ್ ಗಡ್ಕರಿ, ಮನ್‌ಸುಖ್ ಲಾಲ್ ಮಾಂಡವೀಯ, ರವಿಶಂಕರ ಪ್ರಸಾದ್, ಗಿರಿರಾಜ್ ಸಿಂಗ್, ಪೀಯೂಷ್ ಗೋಯಲ್, ಭೂಪೇಂದರ್ ಯಾದವ್, ಧರ್ಮೇಂದ್ರ ಪ್ರಧಾನ್, ಮುಕ್ತಾರ್ ಅಬ್ಬಾಸ್ ನಖ್ವಿ, ಬಬೂಲ್ ಸುಪ್ರಿಯೋ, ಸ್ಮೃತಿ ಇರಾನಿ, ನರೇಂದ್ರ ಸಿಂಗ್ ತೋಮರ್, ರಮೇಶ್ ಪೋಖ್ರಿಯಾಲ್, ನಿರಂಜನ ಜ್ಯೋತಿ, ಅರ್ಜುನ್ ರಾಮ್ ಮೇಘವಾಲ್, ಸಂತೋಷ್ ಗಂಗವಾರ್, ಜಿತೇಂದ್ರ ಸಿಂಗ್, ನಿತ್ಯಾನಂದ ರಾಯ್, ಎಲ್‌ಜೆಪಿ ಮುಖಂಡ ರಾಮವಿಲಾಸ್ ಪಾಸ್ವಾನ್, ಅಕಾಲಿ ದಳದ ಹರಸಿಮ್ರತ್ ಕೌರ್ ಬಾದಲ್ ಮುಂತಾದವರಿಗೆ ಈಗಾಗಲೇ, ಪ್ರಧಾನ ಮಂತ್ರಿಯವರನ್ನು ಸಂಜೆ ಭೇಟಿಯಾಗುವಂತೆ ಕರೆ ಬಂದಿದೆ. ಇವರೆಲ್ಲರಿಗೂ ಮಂತ್ರಿಪದವಿ ಖಾತ್ರಿಯಾಗಿದ್ದು, ಪ್ರಮಾಣ ವಚನ ಸ್ವೀಕರಿಸಲಿದ್ದಾರೆ.