ಮಹಿಳೆಯರೇ ಪುರುಷರನ್ನು ಕಿಡ್ನಾಪ್ ಮಾಡಿ ರೇಪ್ ಮಾಡಲಾಗಿದೆ ಎಲ್ಲಿ ಅಂತೀರಾ ಇಲ್ಲಿ ನೋಡಿ..!

0
2579

ಕಾಲ ಬದಲಾಗಿದೆ ಅನ್ನೋದು ನಿಜವಾಗಲೂ ಸತ್ಯ ಕಣ್ರೀ ಯಾಕೆ ಅಂತೀರಾ ಇಲ್ಲಿನೋಡಿ.

ನಾವು ನಮ್ಮ ಸಮಾಜದಲ್ಲಿ ಸಮಾನತೆಗಾಗಿ ನಾವು ಶ್ರಮಿಸುತ್ತಿರುವಾಗ, ಸಾಮಾನ್ಯವಾಗಿ ನಾವು ಮಹಿಳೆಯರ ಮೇಲೆ ನಡೆದಿರುವ ಅಪರಾಧಗಳನ್ನು ಎತ್ತಿ ತೋರಿಸುತ್ತೇವೆ. ಅತ್ಯಾಚಾರ, ಮಹಿಳೆಯರ ಶೋಷಣೆ, ದೌರ್ಜನ್ಯ, ನಾಪತ್ತೆ, ವರದಕ್ಷಿಣೆ ಪ್ರಕರಣಗಳು ನಮ್ಮ ಗಮನಕ್ಕೆ ಬರುತ್ತವೆ. ಆದರೆ, ಕೆಲವು ಬಾರಿ ಪುರುಷರು ಸಹ ಶೋಷಣೆಗೆ ಬಲಿಪಶುಗಳಾಗಿದ್ದಾರೆಂದು ನಾವು ಮರೆಯುತ್ತೇವೆ. ನಕಲಿ ವರದಕ್ಷಿಣೆ ಪ್ರಕರಣಗಳು, ಕಿರುಕುಳ ಮತ್ತು ಅತ್ಯಾಚಾರ ಇಂತಹ ಘಟನೆಗಳಿಗೆ ಪುರುಷರು ಕೂಡ ಬಲಿಯಾಗುತ್ತಿದ್ದಾರೆ.

ಇದಕ್ಕೆ ಪೂರಕವಾಗಿ ದಕ್ಷಿಣ ಆಫ್ರಿಕಾದಲ್ಲಿ ನಡೆದ ಘಟನೆಯೊಂದು ಇತ್ತೀಚೆಗೆ ಭಾರತದಲ್ಲಿ ಹೆಚ್ಚು ಚರ್ಚೆಗೆ ಗ್ರಾಸವಾಗಿದೆ, ಅದೇನೆಂದರೆ ದಕ್ಷಿಣ ಆಫ್ರಿಕಾದಲ್ಲಿ ಮಹಿಳೆಯರೇ ಪುರುಷರನ್ನು ಕಿಡ್ನಾಪ್ ಮಾಡಿ ರೇಪ್ ಮಾಡಿ ನಗ್ನ ದೇಹವನ್ನು ರಸ್ತೆಯ ಮೇಲೆ ಎಸೆಯಲಾಗಿರುವ ಘಟನೆ ಬೆಳಕಿಗೆ ಬಂದಿದೆ. ಮೂರು ಮಹಿಳೆಯರು 23 ವರ್ಷದ ವ್ಯಕ್ತಿಯನ್ನು ಅಪಹರಿಸಿ ಹಲವು ದಿನಗಳವರೆಗೆ ಅವನ ಮೇಲೆ ಅತ್ಯಾಚಾರ ಮಾಡಿದ್ದಾರೆ. ನಂತರ ಅವನ ನಗ್ನ ದೇಹವನ್ನು ರಸ್ತೆಯ ಮೇಲೆ ಎಸೆಯಲಾಗಿದೆ.

ಈಸ್ಟರ್ನ್ ಪ್ರಿಟೋರಿಯಾದಿಂದ ಶುಕ್ರವಾರದಂದು ಟ್ಯಾಕ್ಸಿ ಯೊಂದರಲ್ಲಿ ಮೂರು ಮಹಿಳೆಯರು ಒಳಗೆ ಕುಳಿತು ಮತ್ತು ಮುಂಭಾಗದ ಸೈಟಿನಲ್ಲಿ ಯುವಕನನ್ನು ಬಲವಂತವಾಗಿ ಕಾರಿನೊಳಗೆ ತಳ್ಳಿ ಅವನಿಗೆ ಉದ್ರೇಕಕಾರಿ ಔಷಧವನ್ನು ನೀಡಿ ಪ್ರಜ್ಞೆ ತಾಪ್ಪಿಸಲಾಗಿತ್ತು. ಎಂದು ದಕ್ಷಿಣ ಆಫ್ರಿಕಾದ ಪೊಲೀಸರು ತಿಳಿಸಿದ್ದಾರೆ. ಹೀಗೆ ಹಲವು ಬಾರಿ ಮೂರು ಮಹಿಳೆಯರು ಆತನ ಮೇಲೆ ಅತ್ಯಾಚಾರ ಎಸಗಿ ನಂತರ ಕಾರಿನಿಂದ ಯುವಕನ ನಗ್ನ ದೇಹವನ್ನು ರಸ್ತೆಯ ಮೇಲೆ ಹೊರಹಾಕಿ ಮಹಿಳೆಯರು ಪರಾರಿಯಾಗಿದ್ದಾರೆ.

ಈ ಪ್ರಕರಣವನ್ನು ದಾಖಲಿಸಿಕೊಂಡಿರುವ ಪೊಲೀಸರು ದೋಷಿಗಳನ್ನು ಬೇಟೆಯಾಡುತ್ತಿದ್ದಾರೆ. ದಕ್ಷಿಣ ಆಫ್ರಿಕಾದಲ್ಲಿ ಮಾತ್ರವಲ್ಲ, ಭಾರತದಲ್ಲಿಯೂ ಕೂಡ ಇಂತಹ ಘಟನೆಗಳು ನಡೆಯಬಹುದು, ಅಂತಹ ಘಟನೆಗಳನ್ನು ಎದುರಿಸಲು ನಾವು ಕಟ್ಟುನಿಟ್ಟಿನ ಕಾನೂನುಗಳನ್ನು ರೂಪಿಸಬೇಕು.