ಎಲ್ಲರೂ ಖುಷಿ ಪಡುವ ವಿಚಾರ!!! ಕಾಡಿನ ರಾಜ ಹುಲಿಗಳ ಸಂಖ್ಯೆಯಲ್ಲಿ ಹೆಚ್ಚಳ!!!

0
1350

`ಜಾಗತಿಕ ಮಟ್ಟದಲ್ಲಿ ಹುಲಿಗಳ ಸಂಖ್ಯೆ ಕಡಿಮೆಯಾಗುತ್ತಿದೆ’ ಎಂಬ ಸುದ್ದಿ ಓದುತ್ತಿದ್ದವರಿಗೆಲ್ಲ `ಮುಂದಿನ ಪೀಳಿಗೆ ಹುಲಿಯ ಚಿತ್ರವನ್ನಷ್ಟೇ ನೋಡಬೇಕಾಗುತ್ತದೆ’ ಎನಿಸುತ್ತಿದ್ದುದು ಸಹಜ. ಹುಲಿಗಳ ಸಂಖ್ಯೆ ಹೆಚ್ಚಿಸುವುದಕ್ಕಾಗಿ ವಿವಿಧ ದೇಶಗಳು ಕೈಗೊಂಡ ದಶಕಗಳ ಪ್ರಯತ್ನ ಫಲ ನೀಡಿದೆ! ಇದೀಗ ವಿಶ್ವಮಟ್ಟದಲ್ಲಿ ಹುಲಿಗಳ ಸಂಖ್ಯೆ ಹೆಚ್ಚಾಗಿದೆ!

Image result for tiger group

ದಶಕಗಳ ಕಾಲ ಹುಲಿಸಂಖ್ಯೆ ಸತತವಾಗಿ ಕಡಿಮೆಯಾಗುತ್ತಿತ್ತು. 2010ರ ಗಣತಿಯ ಪ್ರಕಾರ ಕೇವಲ 3,200 ಹುಲಿಗಳು ಮಾತ್ರವೇ ಇದ್ದವು. 2010ರ ನಂತರ ಹುಲಿಗಳ ಸಂಖ್ಯೆ ಹೆಚ್ಚಿಸುವ ಪ್ರಯತ್ನ ಫಲನೀಡಿದ್ದು, ಈಗ ಅವುಗಳ ಸಂಖ್ಯೆ ಕನಿಷ್ಠ 3,890 ಎಂಬುದು `ವಿಶ್ವ ವನ್ಯಜೀವಿ ನಿದಿ’ ನೀಡಿರುವ ಮಾಹಿತಿಯಿಂದ ಸ್ಪಷ್ಟವಾಗಿದೆ.

ಭಾರತದಲ್ಲಿ ಅತಿಹೆಚ್ಚಿನ ಸಂಖ್ಯೆಯ ಹುಲಿಗಳಿವೆ. ನಂತರದ ಸ್ಥಾನಗಳಲ್ಲಿ ಕ್ರಮವಾಗಿರಷ್ಯಾ, ಇಂಡೋನೇಷಿಯಾ, ಮಲೇಷಿಯಾ, ನೇಪಾಲ್, ಥೈಲ್ಯಾಂಡ್, ಬಾಂಗ್ಲಾದೇಶ, ಭೂತಾನ್ ಮುಂತಾದ ದೇಶUಳಿವೆ. ಚೀನಾ, ಮ್ಯಾನ್ಮಾರ್, ಲಿಯಾ ಹಾಗೂ ವಿಯಟ್ನಾಮ್ ದೇಶಗಳು ತೀರಕಡಿಮೆ ಸಂಖ್ಯೆಯಲ್ಲಿಹುಲಿಗಳನ್ನು ಹೊಂದಿವೆ.

Image result for tiger group
ಹುಲಿಗಳ ಸಂರಕ್ಷಣೆ ಹಾಗೂ ಸಂತತಿ ಹೆಚ್ಚಿಸುವುದಕ್ಕಾಗಿ`ಗ್ಲೋಬಲ್ ಟೈಗರ್ ಫೋರಂ’ ನಿರ್ಮಿಸಲಾಗಿದ್ದು, ಈ ಎಲ್ಲ ರಾಷ್ಟ್ರಗಳೂ ಅದರ ಸದಸ್ಯ ರಾಷ್ಟ್ರಗಳಾಗಿವೆ. ಹುಲಿಗಳ ಸಂಖ್ಯೆಯನ್ನು ದುಪ್ಪಟ್ಟು ಮಾಡಲು `ಟೈಗರ್ ಇನಿಷಿಯೇಟಿವ್’ ಎಂಬ ಅಂತಾರಾಷ್ಟ್ರೀಯ ಮಟ್ಟದ ಕಾರ್ಯಕ್ರಮ ಹಾಕಿಕೊಂಡಿದ್ದು, 2022ರ ಒಳಗಾಗಿ ಹುಲಿಗಳ ಸಂಖ್ಯೆ ಹೆಚ್ಚಿಸುವ ಸಂಕಲ್ಪ ತೊಡಲಾಗಿತ್ತು. ಈ ಪ್ರಯತ್ನ ಫಲ ನೀಡುತ್ತಿದೆ.
ಹುಲಿ ಸಂರಕ್ಷಣೆಗೆ ಇಷ್ಟೆಲ್ಲ ಕಾರ್ಯಕ್ರಮಗಳಿದ್ದರೂ, ಹುಲಿ ಸಂರಕ್ಷಣಾ ಮೀಸಲು ಅರಣ್ಯ ಪ್ರದೇಶಗಳಿದ್ದರೂ ಹುಲಿಗಳ ಜೀವಕ್ಕೆ ಅಪಾಯ ತಪ್ಪಿಲ್ಲ. ವಿಶ್ವ ವನ್ಯಜೀವಿ ನಿಧಿಯು 2000-2014ರ ನಡುವೆ ಸುಮಾರು 1,590 ಹುಲಿಗಳ ಅಕ್ರಮ ವನ್ಯಜೀವಿ ವ್ಯಾಪಾರವನ್ನು ತಡೆಗಟ್ಟಿದೆ. ಮನುಷ್ಯತನ್ನ ಲಾಭಕ್ಕಾಗಿ ವನ್ಯಜೀವಿಗಳನ್ನು ಕೊಲ್ಲುವುದು ನಿಂತg Éಮಾತ್ರ ಅವುಗಳ ಸಂಖ್ಯೆಇನ್ನೂ ಹೆಚ್ಚಾಗುತ್ತದೆ. ಇದರ ಜೊತೆಗೆ ಪ್ರತಿಯೊಂದು ದೇಶವೂ ಗಡಿಯಲ್ಲಿ ಇಂತಹವರನ್ನು ಕಂಡುಹಿಡಿದು, ತಡೆಗಟ್ಟುವುದರಿಂದ ವನ್ಯಜೀವಿಗಳ ಸಂಖ್ಯೆ ಇನ್ನೂ ಹೆಚ್ಚುತ್ತದೆ.