ಟಿಕ್ ಟಾಕ್‍ನಲ್ಲಿ ಮೋಹದ ಆಂಟಿ ಬಲೆಗೆ ಬಿದ್ದು ಲಕ್ಷಾಂತರ ಹಣ ಕಳೆದುಕೊಂಡ ವ್ಯಕ್ತಿ.!

0
285

ಟಿಕ್ ಟಾಕ್ ಹುಚ್ಚಿಗೆ ಜನರು ಏನೆಲ್ಲಾ ಮಾಡುತ್ತಿದ್ದಾರೆ ಎನ್ನುವುದು ತಿಳಿದಿರುವ ವಿಚಾರವಾಗಿದ್ದು ಲೈಕ್, ಶೇರ್ ಬರಲೆಂದು ಸಾಹಸ ಮಾಡಲು ಹೋಗಿ ಪ್ರಾಣವನ್ನೇ ಕಳೆದುಕೊಳ್ಳುವ ಸುದ್ದಿ ಕೇಳಿಬರುತ್ತಿತ್ತು. ಇದಕ್ಕೆ ಭಾರಿ ವಿರೋಧ ವ್ಯಕ್ತವಾಗಿ ಟಿಕ್ ಟಾಕ್ ಬ್ಯಾನ್ ಮಾಡಬೇಕು ಎನ್ನುವ ವಿವಾದ ಕೂಡ ಕೇಳಿಬಂದಿತ್ತು. ಈಗ ಮತ್ತೆ ಬೇರೊಂದು ವಿವಾದ ಕೇಳಿ ಬರುತ್ತಿದ್ದು, ಟಿಕ್ ಟಾಕ್-ನಿಂದ ವಂಚನೆಗಳು ನಡೆಯುತ್ತಿವೆ ಎನ್ನುವುದು ಬೆಳಕಿಗೆ ಬಂದಿದೆ. ಇದಕ್ಕೆ ಸಕ್ಷಿಯಾಗುವಂತ ಘಟನೆಯೊಂದು ನಡೆದಿದ್ದು. ಟಿಕ್ ಟಾಕ್‍ನಲ್ಲಿ ಪರಿಚಯವಾದ ಮಹಿಳೆಯೊಬ್ಬಳು ಮದುವೆಯಾಗುತ್ತೇನೆ ಎಂದು ನಂಬಿಸಿ ವ್ಯಕ್ತಿಯಿಂದ ಲಕ್ಷಾಂತರ ಹಣ ಕಿತ್ತ ಸುದ್ದಿ ಭಾರಿ ವೈರಲ್ ಆಗಿದೆ.

Also read: ಬೆಂಗಳೂರಿನ ಮಾರುಕಟ್ಟೆಗಳಲ್ಲಿ ಬ್ರ್ಯಾಂಡೆಂಡ್ ಹೆಸರಿನಲ್ಲಿ ಕಡಿಮೆ ಬೆಲೆಗೆ ಸಿಗುವ ಡೂಪ್ಲಿಕೇಟ್ ವಸ್ತುಗಳನ್ನು ಬಳಸಿದರೆ ಅಪಾಯ ಕಟ್ಟಿಟ್ಟ ಬುತ್ತಿ.!

ಹೌದು ಸಾಮಾಜಿಕ ಜಾಲತಾಣಗಳಲ್ಲಿ ಪ್ರೀತಿ ಹುಟ್ಟಿ ಮೋಸ ಹೋಗುವ ವಿಚಾರ ತಿಳಿದರು ಜನರು ಮತ್ತೆ ಅದೇ ಯಡವಟ್ಟು ಮಾಡಿಕೊಳ್ಳುತ್ತಿದ್ದಾರೆ. ಸದ್ಯ ಇಂತಹ ಎಚ್ಚರಿಕೆ ನೀಡುವಂತ ಪ್ರಕರಣ ಬೆಂಗಳೂರಿನಲ್ಲಿ ನಡೆದಿದ್ದು, ವಿಜಯಲಕ್ಷ್ಮಿ ಎನ್ನುವ ಮಹಿಳೆ ದೊಮ್ಮಲೂರು ನಿವಾಸಿ ಶಿವಕುಮಾರ್ ಎನ್ನುವರಿಂದ 4 ಲಕ್ಷ ವಂಚನೆ ಮಾಡಿದ್ದು ನಡೆದಿದೆ. ವಿಜಯಲಕ್ಷ್ಮಿ ಟಿಕ್ ಟಾಕ್ ಮಾಡಿದಕ್ಕೆ ಶಿವಕುಮಾರ್ ಲೈಕ್ ಮಾಡಿದ್ದ. ಹೀಗೆ ಒಬ್ಬರ ವೀಡಿಯೋಗಳಿಗೆ ಒಬ್ಬರು ಲೈಕ್ ಮಾಡಿಕೊಂಡಿದ್ದರು ಆದರೆ ಇಬ್ಬರ ಸ್ನೇಹ ಇಷ್ಟಕ್ಕೆ ನಿಲ್ಲದೆ. ಫೇಸ್‍ಬುಕ್ ನಲ್ಲಿ ಕೂಡ ಇಬ್ಬರು ಫ್ರೆಂಡ್ ಆಗಿದ್ದರು.

ಈ ಮೂಲಕ ಪರಸ್ಪರ ಪರಿಚಯ ಮಾಡಿಕೊಂಡಿದ್ದರು. ಕೆಲ ದಿನಗಳ ಬಳಿಕ ಶಿವಕುಮಾರ್ ಮೊಬೈಲ್ ನಂಬರ್ ಪಡೆದ ವಿಜಯಲಕ್ಷ್ಮಿ ಚಾಟಿಂಗ್ ಮಾಡಲು ಆರಂಭಿಸಿದ್ದಳು. ಸ್ನೇಹ, ಪ್ರೀತಿಗೆ ತಿರುಗಿ ಶಿವಕುಮಾರ್ ಹಾಗೂ ವಿಜಯಲಕ್ಷ್ಮಿ ಪರಸ್ಪರ ಒಪ್ಪಿ ಒಂದೇ ಮನೆಯಲ್ಲಿ ವಾಸವಿದ್ದರು. ಹೀಗೆ ಸಲುಗೆ ಅತಿಯಾಗಿ ನಿನ್ನನ್ನು ಮದುವೆಯಾಗುತ್ತೇನೆ ಎಂದು ವಿಜಯಲಕ್ಷ್ಮಿ ಶಿವಕುಮಾರ್‍ನನ್ನು ನಂಬಿಸಿದ್ದಳು. ಜೊತೆಗೆ ಆತನಿಂದ ಶಾಪಿಂಗ್, ಬಾಡಿಗೆ ಸೇರಿದಂತೆ ಇತರೆ ಖರ್ಚಿಗೆ ಅಂತ 4 ಲಕ್ಷ ರೂ. ಪಡೆದಿದ್ದಳು. ಹೀಗಾಗಿ ಶಿವಕುಮಾರ್ ಮದುವೆಗೆ ಸಿದ್ಧತೆ ಮಾಡಿಕೊಳ್ಳುತ್ತಿದ್ದಂತೆ ವಿಜಯಲಕ್ಷ್ಮಿ ಮದುವೆಗೆ ನಿರಾಕರಿಸಿ, ಆತನ ಸಹವಾಸ ಬಿಟ್ಟಿದ್ದಳು. ಶಿವಕುಮಾರ್ ಕಳೆದ ಕೆಲವು ದಿನಗಳಿಂದ ವಿಜಯಲಕ್ಷ್ಮಿಗೆ ಹಣ ನೀಡುವುದನ್ನು ನಿಲ್ಲಿಸಿದ್ದ.

Also read: ಪಾಲಕರೇ ನಿಮ್ಮ ಮಕ್ಕಳನ್ನು ಅಡುಗೆ ಮನೆಗೆ ಕಳುಹಿಸುವ ಮುನ್ನ ಎಚ್ಚರ; ಅಮ್ಮನಿಗೆ ಮ್ಯಾಗಿ ಮಾಡಲು ಹೋಗಿ ಶವವಾದ ಬಾಲಕ.!

ಇದಾದ ಬಳಿಕವೂ ವಿಜಯಲಕ್ಷ್ಮಿಯು ಶಿವಕುಮಾರ್ ಗೆ ಕರೆ ಮಾಡಿ, ಹಣ ನೀಡುವಂತೆ ಒತ್ತಾಯಿಸಿದ್ದಳು. ಇದರಿಂದಾಗಿ ಆರೋಪಿಯು ತನ್ನ ಸ್ನೇಹಿತ ಮಧು ಕೊಲ್ಯಾನ್‍ನಿಂದ ಕರೆ ಮಾಡಿಸಿ ಕೊಲೆ ಬೆದರಿಕೆ ಹಾಕಿಸಿದ್ದಾಳೆ. ಈ ಎಲ್ಲ ಬೆಳವಣಿಗೆಯಿಂದ ಬೇಸತ್ತ ಶಿವಕುಮಾರ್ ದೇವರ ಜೀವನ ಹಳ್ಳಿ ಪೊಲೀಸ್ ಠಾಣೆ ಮೆಟ್ಟಿಲೇರಿದ್ದಾನೆ. ಈ ಸಂಬಂಧ ಶಿವಕುಮಾರ್ ಡಿಜೆ ಹಳ್ಳಿ ಠಾಣೆಯಲ್ಲಿ ದೂರು ದಾಖಲಿಸಿದ್ದಾನೆ. ಆರೋಪಿ ವಿಜಯಲಕ್ಷ್ಮಿ ಹಾಗೂ ಮಧು ವಿರುದ್ಧ ಪ್ರಕರಣ ದಾಖಲಿಸಿಕೊಂಡ ಪೊಲೀಸರು, ತನಿಖೆ ನಡೆಸಿದ್ದಾರೆ. ಅದಕ್ಕಾಗಿ ಫೇಸ್ಬುಕ್, Whatsapp, tiktok ಅಂತಹ ಯಾವುದೇ ಜಾಲತಾಣಗಳಿಂದ ಪರಿಚಯವಾಗುವ ಜನರ ಜೊತೆಗೆ ಸ್ನೇಹ ಬೆಳಸುವ ಮುನ್ನ ಎಚ್ಚರದಿಂದ ಇರುವುದು ಒಳ್ಳೆಯದು.