ಯುವಪಿಳಿಗೆಗೆ ಮಾರಕವಾದ TikTok ಆ್ಯಪ್ ಬ್ಯಾನ್ ನಂತೆ ಪಬ್ಜಿ ಗೇಮ್ ಗೂ ಬ್ಯಾನ್ ಬಿಸಿ??

0
1120

ಮೊಬೈಲ್-ಗಳು ಹೆಚ್ಚು ಉಪಯೋಗಕಾರಿ ಎನ್ನುವುದು ಹೇಗೆ ಸತ್ಯವೂ ಅಷ್ಟೇ ಅಪಾಯಕಾರಿ ಎನ್ನುವುದು ಕೂಡ ಸತ್ಯವೆನ್ನುವ ವಿಚಾರಗಳನ್ನು ಹಲವು ಸಾಕ್ಷಿಗಳು ಮತ್ತು ಪ್ರಕರಣಗಳು ತಿಳಿಸಿವೆ. ಅದರಂತೆ ಮೊಬೈಲ್-ಗಳು ಒಳ್ಳೆಯವೆ ಆದರು ಅವುಗಳಲ್ಲಿ ಬರುವ ಕೆಲವೊಂದು ಆ್ಯಪ್ ಗಳು ಯುವಜನತೆಯನ್ನು ತನ್ನತ ಹೆಚ್ಚು ಸೆಳೆದು ಜನರಿಗೆ ಹುಚ್ಚುಹಿಡಿಸುತ್ತಿವೆ ಅಂತಹವುಗಳಲ್ಲಿ TikTok, ಪಬ್ಜಿ ಗೇಮ್ ಹೀಗೆ ಹಲವು ಆ್ಯಪ್ ಗಳು ಜನರಿಗೆ ಮಾರಕವಾಗಿವೆ ಎನ್ನುವ ವಿಚಾರ ಸರ್ಕಾರವೇ ಇಂತಹ ಆ್ಯಪ್ ಗಳನ್ನೂ ಬ್ಯಾನ್ ಮಾಡುತ್ತಿದೆ.
ಹೌದು ಕಳೆದ ವಾರವೇ TIKTOK ಆ್ಯಪ್ ಬ್ಯಾನ್ ಮಾಡಿ ಹಲವು ಜನರಿಗೆ ಬೇಸರ ತಂದಿದೆ. ಹಲವಾರು ಹಿನ್ನೆಲೆ ಸೌಂಡ್-ಗಳಿಗೆ ತಮ್ಮ ನಟಯನ್ನು ಮತ್ತು ನೃತ್ಯವನ್ನು ಹೊದಿಸಿ ವೀಡಿಯೊ ಮಾಡಿವ ಈ ಆ್ಯಪ್ ಕರಾಮತ್ತಿಗೆ ಹಲವರು ತುತ್ತಾಗಿದ್ದರು. ಈ ಹಿನ್ನೆಲೆಯಲ್ಲಿ ಬ್ಯಾನ್ ಮಾಡಲಾಗಿದೆ. ಅದರಂತೆ ಯುವ ಜನರನ್ನು ಬಲಿ ತೆಗೆದುಕೊಳ್ಳುತ್ತಿರುವ ಪಬ್ಜಿ ಗೇಮ್ ಕೂಡ ಇದೇ ಗತಿ ಕಾಣುವ ಸುಳಿವು ಸಿಕ್ಕಿವೆ. ಪಬ್‌ಜೀ ಆಡುತ್ತಿದ್ದ ಹಲವರನ್ನು ಇತ್ತೀಚೆಗೆ ಬಂಧಿಸಿದ್ದ ರಾಜ್‌ಕೋಟ್‌ ಪೊಲೀಸರು ಇದೀಗ, ತಮ್ಮ ವ್ಯಾಪ್ತಿಯಲ್ಲಿ ಯಾವುದೇ ಐಪಿ ವಿಳಾಸದಿಂದ ಪಬ್‌ಜೀ ಆಟವನ್ನು ಡೌನ್‌ಲೋಡ್‌ ಮಾಡದಂತೆ ನೋಡಿಕೊಳ್ಳಿ ಎಂದು ಗೂಗಲ್‌ ಸಂಸ್ಥೆಗೆ ಮನವಿ ಮಾಡಿದೆ.

ಪಬ್ಜಿ ಗೇಮ್ ಬ್ಯಾನ್ ?

ಮಹಾರಾಷ್ಟ್ರ ಹೈಕೋರ್ಟ್ ಹೆಸರಿನಲ್ಲಿ ಪ್ರಕಟಣೆಯೊಂದನ್ನು ಬಿಡುಗಡೆ ಮಾಡಿ ‘ಪಬ್ ಜಿ ಆನ್‌ಲೈನ್ ಗೇಮ್ ಸಮಾಜದಲ್ಲಿ ಉಪದ್ರಗಳನ್ನು ಉಂಟುಮಾಡುತ್ತಿದೆ. ವಿದ್ಯಾರ್ಥಿಗಳ ಜೀವನದ ಮೇಲೆ ಪ್ರತಿಕೂಲ ಪರಿಣಾಮಗಳನ್ನು ಉಂಟುಮಾಡುತ್ತಿದೆ. ಈಗಾಗಲೇ ಹಲವು ದೇಶಗಳು ಈ ಆಟದ ವಿರುದ್ಧ ಕ್ರಮ ಕೈಗೊಂಡಿವೆ. ಹಾಗಾಗಿ ರಾಜ್ಯದಲ್ಲಿ ಪಬ್‌ಜಿ ಯನ್ನು ನಿಷೇಧಿಸಲಾಗುತ್ತಿದೆ. ಎಲ್ಲಿಯಾದರೂ ಪಬ್ ಜಿ ಆಟವಾಡುವುದು ಕಂಡುಬಂದರೆ ಗೇಮ್ಸ್ ಕಾರ್ಪೋರೇಶನ್‌ಗೆ ನೋಟೀಸ್ ನೀಡಲಾಗುವುದು-ಕೆ.ಶ್ರೀನಿವಾಸುಲು, ಮಹಾರಾಷ್ಟ್ರ ಹೈಕೋರ್ಟ್’ ಎಂದು ಬರೆಯಲಾಗಿದೆ.

ಮನೋತಜ್ಞರ ಅಭಿಪ್ರಾಯ :

ಮಕ್ಕಳು ಹಾಗೂ ಹರೆಯದವರನ್ನು ವ್ಯಾಪಕವಾಗಿ ಸೆಳೆದಿರುವ ಈ ಆ್ಯಪ್‌-ಗಳಿಂದ ಮಾನಸಿಕ ಸಮಸ್ಯೆಗಳು ಉಂಟಾಗುತ್ತಿವೆ. ಈ ಸಂಬಂಧ ಮನೋವೈದ್ಯರನ್ನು ಭೇಟಿ ಮಾಡುವವರ ಸಂಖ್ಯೆ ಹೆಚ್ಚಿದೆ. ಕಳೆದ ಕೆಲವು ವಾರಗಳಿಂದ ಪಬ್ಜಿ, ಟಿಕ್‌ಟಾಕ್‌ ಸಂಬಂಧ ದೂರುಗಳು ಹೆಚ್ಚಾಗಿವೆ ಎಂಬುದನ್ನು ಮನೋತಜ್ಞರು ಹೇಳಿದ್ದಾರೆ. 14ರಿಂದ 22ವರ್ಷದೊಳಗಿನವರು ಮಾನಸಿಕ ಸಮಸ್ಯೆಯನ್ನು ಮುಂದಿಟ್ಟುಕೊಂಡು ಮನೋತಜ್ಞರನ್ನು ಭೇಟಿ ಮಾಡಿದಾಗ ಇದರ ಮೂಲ ಪಬ್ಜಿ, ಟಿಕ್‌ಟಾಕ್‌ ಎಂಬುದನ್ನು ತಜ್ಞರು ಪತ್ತೆ ಹಚ್ಚಿದ್ದಾರೆ

ಬಲಿ ತೆಗೆದುಕೊಳ್ಳುತ್ತಿರುವ ಪಬ್ಜಿ?

ಪಬ್‌ಜೀ ಆಟಕ್ಕೆ ಮಕ್ಕಳು ಮತ್ತು ಯುವಕರು ದಾಸರಾಗುತ್ತಿರುವ ಜೊತೆಗೆ ಆಟವು, ಅವರ ವರ್ತನೆ ಮೇಲೂ ಕೆಟ್ಟಪರಿಣಾಮಗಳನ್ನು ಬೀರುತ್ತಿದೆ. ಈ ಕಾರಣಕ್ಕಾಗಿಯೇ ಈ ಆಟವನ್ನು ನಿಷೇಧಿಸಬೇಕು ಎಂಬ ಭಾರೀ ಬೇಡಿಕೆ ವ್ಯಕ್ತವಾಗಿದೆ. ಪಬ್‌ಜೀ ಆಡುತ್ತಿದ್ದ ಹಲವರನ್ನು ಇತ್ತೀಚೆಗೆ ಬಂಧಿಸಿದ್ದ ರಾಜ್‌ಕೋಟ್‌ ಪೊಲೀಸರು ಇದೀಗ, ತಮ್ಮ ವ್ಯಾಪ್ತಿಯಲ್ಲಿ ಯಾವುದೇ ಐಪಿ ವಿಳಾಸದಿಂದ ಪಬ್‌ಜೀ ಆಟವನ್ನು ಡೌನ್‌ಲೋಡ್‌ ಮಾಡದಂತೆ ನೋಡಿಕೊಳ್ಳಿ ಎಂದು ಗೂಗಲ್‌ ಸಂಸ್ಥೆಗೆ ಮನವಿ ಮಾಡಿದೆ. ಆದಕಾರಣಕ್ಕೆ ಇತ್ತೀಚೆಗೆ ಕೇಂದ್ರ ಸರ್ಕಾರದ ಸೂಚನೆ ಅನ್ವಯ ಗೂಗಲ್‌ ಮತ್ತು ಆ್ಯಪಲ್‌ ಸಂಸ್ಥೆಗಳು ಟಿಕ್‌ ಟಾಕ್‌ ಆ್ಯಪ್‌ ಡೌನ್‌ಲೋಡ್‌ ಮಾಡಿಕೊಳ್ಳುವ ಸೌಲಭ್ಯ ತೆಗೆದು ಹಾಕಿದ್ದವು. ಅದರಂತೆ ಪಬ್ಜಿ ಬ್ಯಾನ್ ಮಾಡುವುದು ಬಹುತೇಕ ಖಚಿತವಾಗಿದೆ.