ಸಮಯವನ್ನು ಸದುಪಯೋಗಪಡಿಸಿಕೊಳ್ಳಬೇಕೆಂಬವರಿಗೆ ಕೆಲವು ಸಲಹೆಗಳು

0
823

ಸಮಯವು ಹಣಕ್ಕಿಂತಲೂ ಶ್ರೇಷ್ಠ ಎನ್ನುವುದಿದೆ. ಆಲೋಚಿಸಿ ನೋಡಿದರೆ ಎರಡೂ ಶ್ರೇಷ್ಠ. ಸಮಯವನ್ನು ಸುದುಯೋಗ ಪಡಿಸಿಕೊಂಡರೆ ಮಿಗಿಸ ಬಹುದು ಆದರೆ ಸದುಪಯೋಗಪಡಿಸಿಕೊಳ್ಳುವ ಬುದ್ಧಿಬೇಕು ಅಷ್ಟೆ.

  1. ಸಮಯವು ಅತ್ಯಂತ ಮಹತ್ವವಾದದ್ದು ಎಂಬ ಅರಿವಿರಲಿ.
  2. ಕಳೆದುಹೋದ ಕಾಲ ಮರಲಿ ಬಾರದು ಎಂಬ ಕಟುಸತ್ಯ ತಿಳಿದಿರಲಿ.
  3. ‘’ಯಾವಯಾವ ಸಮಯದಲ್ಲಿ ಏನೇನನ್ನು ಮಾಡಬೇಕೆಂಬ ಕೊಂಡಿರುವೆನೋ ಅದನ್ನು ಮಾಡಿಯೇ ತೀರುತ್ತೇನೆ’’ ಎಂಬ ದೃಢತೆಯಿರಲಿ.
  4. ನಿರ್ದಿಷ್ಟ ಕಾಲದಲ್ಲಿ ನಿರ್ದಿಷ್ಟ ಕಾರ್ಯವನ್ನು ಮಾಡುವ ಅಭ್ಯಾಸವಿದ್ದರೆ ‘’ ಈಗೇನು ಮಾಡಲಿ, ಇನ್ನೇನು ಮಾಡಲಿ’’ ಎಂದು ತಲೆಕೆರೆದುಕೊಳ್ಳುವುದು ತಪ್ಪುತ್ತದೆ, ಸಮಯ ಉಳಿಯುತ್ತದೆ.
  5. ಕೈಗೊಳ್ಳುವ ಪುಟ್ಟ ಕಾರ್ಯದ ವಿಷಯದಲ್ಲೂ ಸ್ಪಷ್ಟ ಕಲ್ಪನೆಯಿರಲಿ.
  6. ಯಾವುದೇ ಕಾರ್ಯವನ್ನು ಉತ್ಸಾಹದಿಂದಲೂ ಎಚ್ಚರಿಕೆಯಿಂದಲೂ ಮಾಡದಿದ್ದರೆ ಸಮಯ ನಷ್ಟವಾಗುತ್ತದೆ ಎಂಬ ಸೂಕ್ಷ್ಮ ತಿಳಿದಿರಲಿ.
  7. ಮಾಡಿದ ಕೆಲಸವೊಂದು ಕೆಟ್ಟುಹೋದಾಗ ತಲೆಗೆ ಕೈಕೊಟ್ಟು ಚಿಂತಿಸುತ್ತ ಕುಳಿತುಕೊಳ್ಳುವದರ ಬದಲು ಅದನ್ನು ಸರಿಪಡಿಸುವುದು ಲಾಭದಾಯಕ.
  8. ಸಮಯೋಚಿತವಾಗಿ ಯೋಚಿಸಬಲ್ಲವನು ಎಲ್ಲ ವಿಷಗಳಲ್ಲೂ ಜಯಶಾಲಿಯಾಗುತ್ತಾನೆ.

ಸಮಯ ಕುರಿತು ಇನ್ನೂ ಕೆಲವು ಅಂಶಗಳು

1)*ಹಗಲು ಗನಸು ಕಾಣುತ್ತ ಆಕಾಶಗೋಪುರ ಕಟ್ಟುವವರ ಸಮಯ ನಿತರ್ಥಕ. ಸದ್ಭಾವನೆಗಳನ್ನು ತಾಳುತ್ತ ಸುಸಂಬದ್ಧವಾಗಿ ಆಲೋಚಿಸುವವರ ಸಮಯ ಸಾರ್ಥಕ.

*ಒಂದೇ ಸಮನೆ ಹರಟೆ ಹೊಡೆಯುವವರ ಸಮಯ ನಿತರ್ಥಕ. ಉಪಯುಕ್ತ ಮಾತುಕತೆಗಳಲ್ಲಿ ತೊಡಗಿರುವವರ ಸಮಯ ಸಾರ್ಥಕ.

*ಜೂಜು-ಜುಗಾರಿ, ಇಸ್ಟೀಟ್-ಲಾಟರಿ ಇವುಗಳಿಗೆ ಬಲಿಬಿದ್ದವರ ಸಮಯ ನಿರರ್ಥಕ. ಉಪಯುಕ್ತ ಕಾರ್ಯಗಳಲ್ಲಿ ನಿರತರಾದವರ ಸಮಯ ಸಾರ್ಥಕ.

2)*ಬುದ್ಧಿ ಚುರಿಕಿಲ್ಲದವರ, ವಿಲಾಸದಲ್ಲಿ ಮೈ ಮರೆಯುವವರ, ಕಾಯಿಲೆಗಳಿಗೆ ಈಡಾದವರ, ಕೋರ್ಟ್ ಕಛೇರಿ ತಿರುಗುವವರ ಸಮಯವೆಲ್ಲ ಇಳಿಜಾರಿನಲ್ಲಿ ಹರಿದುಹೋಗುವ ನೀರಿನಂತೆ ಕಳೆದು ಹೋಗುತ್ತದೆ.

*ಹಣ ಕಳೆದುಹೋದರೆ ಬಾಯ್ಬಾಯಿ ಬಡಿದುಕೊಳ್ಳುವವರೇ ಎಲ್ಲ. ಸಮಯ ನಷ್ಟವಾಯಿತೆಂದು ದುಃಖಿಸುವವನು ಸಾವಿರಕ್ಕೊಬ್ಬನೂ ಇಲ್ಲ!

*ಸಮಯ ಬೇಕೆಂಬುವವರು ತಾವು ಮಾಡುವ ಪ್ರತಿಯೊಂದು ಕೆಲಸವನ್ನೂ ಸ್ವಲ್ಪ ಬೇಗ ಮುಗಿಸಲೆತ್ನಿಸಿ ಸಮಯ ಉಳಿಸಬೇಕು. ಎಂಟು ಗಂಟೆ ನಿದ್ರೆ ಮಾಡುವ ಬದಲು ಏಳೇ ಗಂಟೆ ನಿದ್ರೆ ಮಾಡುವುದರ ಮೂಲಕ, ಇಪ್ಪತ್ತು ನಿಮಿಷ ಕುಳಿತು ಊಟು ಮಾಡುವವರು ಹದಿನೈದೇ ನಿಮಿಷಕ್ಕೆ ಏಳುವುದರ ಮೂಲಕ, ಸ್ನಾನಕ್ಕೆ ಇಪ್ಪತ್ತು ನಿಮಿಷ ಹಿಡಿಯುತ್ತಿದ್ದರೆ ಹತ್ತೇ ನಿಮಿಷದಲ್ಲಿ ಮಾಡಿ ಮಿಗಿಸುವುದರ ಮೂಲಕ ಸಮಯ ಮಿಗಿಸಬಹುದು. ಹಾಗೂ ಸಮಯವನ್ನು ಸದುಪಯೋಗಡಿಸಿಕೊಳ್ಳುವುದು ಹೇಗೆ ಎನ್ನುವುದು ಮಾತ್ರ ತಿಳಿದಿರಬೇಕು.

*ಸಮಯ ಮಿಗಿಸಿ ಏನು ಮಾಡಬೇಕಾಗಿದೆ ಎನ್ನುವ ಮನುಷ್ಯರು ಇದ್ದಾರೆ. ಆದರೆ ಮಿಗಿಸಿದ ಸಮಯವನ್ನು ಸದುಪಯೋಗ ಪಡಿಸಿಕೊಳ್ಳಬೇಕೆನ್ನುವವರು ಮಾತ್ರ ಇಂಥವರಿಂದ ದೂರವಿರಬೇಕು.

*ವಿದ್ಯಾರ್ಥಿಗಳ ಸಮಯ ವ್ಯರ್ಥವಾಗುವ ಸಂದರ್ಭಗಲು ಬಹಳ ಅದ್ದರಿಂದ ಬಿಡುವಿನ ವೇಳೇಯಲ್ಲಿ ಬಹುಬೇಗ ಯೋಚಿಸಿ ಸಮಯವನ್ನು ಸದುಪಯೋಗಪಡಿಸಿಕೊಳ್ಳಲು ವಿದ್ಯಾರ್ಥಿಗಳು ಮೊದಲೇ ಸಿದ್ದರಾಗಿರಬೇಕಾಗುತ್ತದೆ.