ಡಯಾಬಿಟಿಸ್ ವ್ಯಕ್ತಿಗಳಿಗೆ ಊಟದ ಟೈಮ್ ಟೆಬಲ್

0
5194

Kannada News | Health tips in kannada

ಡಯಾಬಿಟಿಸ್ ವ್ಯಕ್ತಿಗಳಿಗೆ ಊಟದ ಟೈಮ್ ಟೆಬಲ್

ಆರೋಗ್ಯವ೦ತ ಸಕ್ಕರೆ ಕಾಯಲೆಯುಳ್ಳ ವ್ಯಕ್ತಿಗಳಿಗೆ ಬೇಕಾದ ಶಕ್ತಿಯ ಅ೦ಶವು ಅವರ ದೇಹದಾರ್ಡ್ಯತೆ, ತೂಕ , ಅವರು ಮಾಡುವ ಕೆಲಸ ಮತ್ತು ರಕ್ತದಲ್ಲಿರಬಹುದಾದ ಸಕ್ಕರೆ ಅ೦ಶದ ಮೇಲೆ ಆಧಾರವಾಗಿರುತ್ತದೆ. ಹಲವು ಸ೦ಸ್ಥೆಗಳು ( ಅಮೇರಿಕಾದ ಸಕ್ಕರೆ ಕಾಯಿಲೆ ಸ೦ಘ , ಬ್ರಿಟನ್ ಸಕ್ಕರೆ ಕಾಯಿಲೆ ಸ೦ಘ , ಭಾರತ ಹಾಗೂ ಇನ್ನಿತರ ಅ೦ತರ್ರಾಷ್ತ್ರೀಯ ಸಕ್ಕರೆ ಕಾಯಿಲೆ ಸ೦ಘಗಳು ) ಸೇರಿ ನಿರ್ಧರಿಸಿರುವ ಪ್ರಮಾಣವು ಆಯಾ ರಾಷ್ಟ್ರಗಳ ಜನರಿಗೆ ಪ್ರಜೆಗಳಿಗೆ ಅನ್ವಯಿಸುತ್ತದೆ. ಇದಕ್ಕೆ ಕಾರಣವೆ೦ದರೆ ಜನಸ೦ಖ್ಯೆಯ ಸಾಮಾನ್ಯ ತೂಕ , ಸಿಗುವ ಆಹಾರ ಪದಾರ್ಥಗಳು , ಜೀವನಶ್ಯೆಲಿ ಇತ್ಯಾದಿ

ಕೆಲವು ಸಕ್ಕರೆ ಕಾಯಿಲೆಯುಳ್ಳ ಆರೋಗ್ಯವ೦ತ ವ್ಯಕ್ತಿಗಳು ಸಣ್ಣಗೆ ಇರುತ್ತಾರೆ ಮತ್ತು ಕೆಲವರು ಸ್ಥೂಲಕಾಯ ಹೊ೦ದಿರುತ್ತಾರೆ. ಸ್ಥೂಲಕಾಯದವರು ಅಥವಾ ದಡೂತಿ ಶರೀರದವರು ಸ್ವಲ್ಪ ಕಡಿಮೆ ಪ್ರಮಾಣದಲ್ಲಿ ಕಾರ್ಬೋಹ್ಯೆಡ್ರೇಟ್ ಅ೦ಶದ ಆಹಾರ ಪದಾರ್ಥವನ್ನು ಸೇವಿಸಬೇಕು. ಸಣ್ಣಗೆ ಇರುವವರಿಗೂ ಕೂಡ ಕಾರ್ಬೋಹ್ಯೆಡ್ರೇಟ್ ಅವಶ್ಯಕತೆ ಇದೆ.

*ಬೆಳಗ್ಗೆ 6 ರಿಂದ 7 ಗಂಟೆಗೆ:

ಹಾಲು/ಟೀ/ಕಾಫಿ – 1 ಲೋಟ (ಸಕ್ಕರೆ ಇಲ್ಲದೆ)

*ಬೆಳಗ್ಗೆ 8 ರಿಂದ 9 ಗಂಟೆಗೆ:

ಇಡ್ಲಿ – 3/ ದೋಸೆ -2/ ಉಪ್ಪಿಟ್ಟು – 1 ಕಪ್ / ಮಂಡಕ್ಕಿ – 1 ಕಪ್/ ಅವಲಕ್ಕಿ – 1 ಕಪ್/ ರಾಗಿ ಗಂಜಿ – 1 ಕಪ್.

*ಬೆಳಗ್ಗೆ 11 ಗಂಟೆಗೆ:

ನಿಂಬೆ ಜ್ಯೂಸ್ / ಟಮೆಟೊ ಜ್ಯೂಸ್ /(ಸಕ್ಕರೆ ಇಲ್ಲದೆ) – 1 ಕಪ್ / ತರಕಾರಿ ಸಲಾಡ್ – 1 ಕಪ್ / ವೆಜ್ ಸೂಪು – 1 ಕಪ್ / ಮೊಳಕೆ ಕಾಳುಗಳು – ಕಪ್

ಮಧ್ಯಾಹ್ನ 1 ರಿಂದ 2 ಗಂಟೆಗೆ:

ಚಪಾತಿ -2 (ಎಣ್ಣೆ ರಹಿತ), ರಾಗಿ ಮುದ್ದೆ – 1 (150 ಗ್ರಾಂ), ಅನ್ನ – 1 ಕಪ್/ ಸಾಂಬರ್ – 1 ಕಪ್ ವೆಜ್ ಸಲಾಡ್ / ಹಸಿರು ತರಕಾರಿ (ಬೀಟ್ ರೂಟ್, ಕ್ಯಾರೆಟ್, ಆಲೂಗಡ್ಡೆಬಿಟ್ಟು), ಕೆನೆಯಿಲ್ಲದ ಮೊಸರು ½ ಕಪ್ / ಕಾಳುಗಳು (ಮಡಕೆ ಕಾಳು, ಹೆಸರು ಕಾಳು ರಾಜ್ಮಾ/ ಕಡ್ಲೆಕಾಳು – 1 ಕಪ್)

ಸಂಜೆ 4 ರಿಂದ 5 ಗಂಟೆಗೆ:

ಗೋಧಿ ಉಪ್ಪಿಟ್ಟು – 1 ಕಪ್ / ರವಾ ಕಿಚಡಿ – 1ಕಪ್/ ಟೀ/ ಕಾಫಿ/ ಹಾಲು – 1 ಕಪ್ (ಸಕ್ಕರೆ ಇಲ್ಲದೆ)/ ಮಂಡಕ್ಕಿ – 1 ಕಪ್ / ಮೊಳಕೆ ಕಾಳುಗಳು – ಕಪ್.

ರಾತ್ರಿ 8 ರಿಂದ 9 ಗಂಟೆ:

ಚಪಾತಿ- 2, or  ರಾಗಿ ಮುದ್ದೆ – 1, or ಸಾಂಬರ್ – 1 ಕಪ್, or ವೆಜ್ ಸಲಾಡ್ – 1 ಕಪ್ , or  ಮೊಸರು – ½ ಕಪ್ .

ತಿನ್ನಬಾರದಂತಹ ತಿನಿಸುಗಳು

1)ಸಕ್ಕೆರೆ, ಬೆಲ್ಲ , ಜೇನು ತುಪ್ಪ , ಚಾಕಲೇಟ್ , ಕೋಲಾಗಳು , ಜಾಮ್.

2)ಬಾಳೆ ಹಣ್ಣು , ಮಾವಿನ ಹಣ್ಣು , ಅನಾನಸ್ , ಸೀತಾಫಲ , ಸಪೋಟ , ಕಲ್ಲಂಗಡಿ.

3)ಗಿಣ್ಣ , ಬೆಣ್ಣೆ , ಕೆನೆ , ಖೋವ , ತುಪ್ಪ , ತೆಂಗಿನ ಎಣ್ಣೆ , ವನಸ್ಪತಿ , ಡಾಲ್ಡ.

4)ಬೇಕರಿ ತಿಂಡಿಗಳು: ಬ್ರೆಡ್ , ಬನ್ , ಕೇಕ್ , ಬಿಸ್ಕತ್ , ಬೊರ್ನವಿಟಾ , ಹಾರ್ಲಿಕ್ಸ್.

5)ಕರಿದ ತಿಂಡಿಗಳು: ಚಿಪ್ಸ್ , ವಡೆ , ಬೊಂಡ , ಕರಿದ ಮಾಂಸ, ತೆಂಗಿನ ಕಾಯಿ.

6)ಖರ್ಜೂರ , ಗೊಡಂಬಿ , ದ್ರಾಕ್ಷಿ.

7)ಮೈದಾಹಿಟ್ಟಿನ ತಿನಿಸುಗಳು.

ತಿನ್ನಬಹುದಾದಂತಹ ತಿನಿಸುಗಳು:

1)ಸಕ್ಕರೆ ಇಲ್ಲದ ಕಾಫಿ, ಟೀ

2)ಸೂಪ್, ರಸಮ್, ಮಜ್ಜಿಗೆ, (ಕೆನೆ ರಹಿತ)

3)ಹಸಿ ತರಕಾರಿಗಳು (ಆಲೂಗಡ್ಡೆ, ಬೀಟ್ ರೂಟ್, ಕ್ಯಾರೆಟ್ ಬಿಟ್ಟು.)

4)ಟೊಮೊಟೊ ಜ್ಯೂಸ್, ನಿಂಬೆ ಹಣ್ಣಿನ ಜ್ಯೂಸ್.

5)ಮೊಸಂಬಿ, ಪಪ್ಪಾಯಿ, ಕಿತ್ತಳೆ.

6) ಮೀನು, ಮೊಟ್ಟೆಯ ಬಿಳಿ ಭಾಗ, ಕೋಳಿ ಮಾಂಸ (ಚರ್ಮ ರಹಿತ)

*ಸಲಹೆಗಳು*:

*ದಿನಕ್ಕೆ ಒಂದು ಬಾರಿ ಮಾತ್ರ ಅನ್ನ ಉಪಯೋಗಿಸಿ.

*ಇಡೀ ಕಾಳುಗಳು, ಸೊಪ್ಪು ಜಾಸ್ತಿಯಾಗಿ ಸೇವಿಸಿ.

*ಜ್ಯೂಸ್ ಗಳ ಬದಲಿಗೆ ಸಿಪ್ಪೆ ಸಹಿತ ಹಣ್ಣುಗಳನ್ನು ಬಳಸಿ.

*ಎಣ್ಣೆ, ಉಪ್ಪು ಮತ್ತು ತೆಂಗಿನಕಾಯಿ ಅಡಿಗೆಯಲ್ಲಿ ಕಡಿಮೆ ಪ್ರಮಾಣದಲ್ಲಿ ಬಳಸಿ.

*ಸೋಡ, ಬೇಕಿಂಗ್ ಪೌಡರ್ ಯಾವುದೇ ಅಡುಗೆಯಲ್ಲಿ ಕಡಿಮೆ ಮಾಡಿ.

ಎಣ್ಣೆ ದಿವಸಕ್ಕೆ 2-3 ಟೀ ಚಮಚ ಮಾತ್ರ (10 ರಿಂದ 15 ಗ್ರಾಂ)

1 ಕಪ್ – 150 ಎಂ.ಎಲ್

1 ಟೀ ಸ್ಪೂನ್ – 5ಗ್ರಾಂ

1 ಗ್ಲಾಸ್ – 200 ಎಂ.ಎಲ್

ಕಾಳುಗಳು, ದಾನ್ಯಗಳು. ಅನ್ನ (1 ಕಪ್) – 40 ಗ್ರಾಂ

*** ದಿನಕ್ಕೆ 45 ನಿಮಿಷ ಬಿರುಸಿನ ನಡಿಗೆ ಕಡ್ಡಾಯವಾಗಿ ಮಾಡಿ. (ಕನಿಷ್ಠ ವಾರದಲ್ಲಿ 5 ದಿನವಾದರೂ ಮಾಡಿ.)***ಸ

ಈ ರೀತಿಯ ಹಲವಾರು ರೋಗಿಗಳಲ್ಲಿ ಕಂಡುಬಂದಿರುವ ಒಂದು  ಉಪಯುಕ್ತ  ಸತ್ಯವೆಂದರೆ ಸಕ್ಕರೆ ಅಂಶವನ್ನು ಜೀರ್ಣಿಸುವ ಕ್ರಿಯೆಯಲ್ಲಿ ತೊಂದರೆಯಿರುವುದೇ ಮುಖ್ಯ ಕಾರಣ. ಈ ಕಾರಣದಿಂದ ಅಂತಹ ವ್ಯಕ್ತಿಗಳು ತಮ್ಮ ಸಕ್ಕರೆ ಕಾಯಿಲೆಯನ್ನು ನಿಯಂತ್ರಣದಲ್ಲಿಡಬಹುದು.

ಹಾಗೆಯೇ ಕಡಿಮೆ ಪ್ರಮಾಣದ ಕೊಬ್ಬಿನ ಸೇವನೆಯು ಸಕ್ಕರೆ ಅಂಶದ ಮೇಲೆ ಹೆಚ್ಚು ಪರಿಣಾಮ ಬೀರದಿದ್ದರೂ ರಕ್ತನಾಳಗಳ ಸಂಬಂಧಿತ ರೋಗಗಳಿಗೆ ಕಾರಣವಾಗಬಹುದು. ಈ ದೃಷ್ಟಿಯಿಂದ ಕಡಿಮೆ ಅಂಶದ ಸಕ್ಕರೆ ಹಾಗೂ ಕೊಬ್ಬಿನ ಆಹಾರವನ್ನು ಎಲ್ಲಾ ಸಕ್ಕರೆ ರೋಗಿಗಳೂ ಪಾಲಿಸಬೇಕು. ಇನ್ನಿತರ ಸಂಶೋಧನೆಯಿಂದ ತಿಳಿದಿರುವ ಅಂಶವೆಂಅದರೆ ಹೆಚ್ಚು ಪ್ರೋಟೀನ್ ಯುಕ್ತ ಆಹಾರ ಪದಾರ್ಥಗಳು ಶರೀರದ ಆರೋಗ್ಯಕ್ಕೆ ಸಕ್ಕರೆ ಕಾಯಿಲೆಯವರಲ್ಲಿ ಉತ್ತಮ ಫಲಿತಾಂಶ ಕೊಡುತ್ತದೆ. ಆದರೆ ಈ ರೋಗಿಗಳಲ್ಲಿ ಬೇರೆ  ರೀತಿಯ ಮೂತ್ರಪಿಂಡ ಕಾಯಿಲೆಯು  ಇರಬಾರದು ಅಥವಾ ಮೂತ್ರಪಿಂಡ ಸಂಬಂಧಿತ ಕಾಯಿಲೆಯಿಂದ ನರಳುತ್ತಿರಬಾರದು.

ಈ ಕ್ರಮಗಳಿಂದ ದೇಹದ ತೂಕ ಕಡಿಮೆ ಮಾಡುವ ಅವಶ್ಯಕತೆ ತನ್ನಷ್ಟಕ್ಕೆ ಆಹಾರ ಮೂಲಕ ಸ್ವಲ್ಪ ಮಟ್ಟಿಗೆ ಸರಿಹೊಂದಿಕೊಳ್ಳುತ್ತದೆ ಮತ್ತು ಔಷಧಿ ಸೇವಿಸುವ ಪ್ರಮಾಣ ಕಡಿಮೆಯೂ ಆಗಬಹುದು.

ನಿಮ್ಮ ಆಹಾರದ ಮೇಲೆ ನಿಗಾಯಿರಲಿ. ಆದರೆ  ವಿಪರೀತ ಶಿಸ್ತು ಆಹಾರದ ಕಟ್ಟುನಿಟ್ಟೂ ಒಳ್ಳೆಯದೂ ಅಲ್ಲ.

Also Read: ಹಬ್ಬಕ್ಕೂ ಮುನ್ನ ಹರಿವ ವರುಣನ ಹರಿವು..ಯುಗಾದಿಗೂ ಮುನ್ನವೇ ಮಳೆಯಾಗೋ ಸಾಧ್ಯತೆ..