ಅಮೃತಬಳ್ಳಿಯಲ್ಲಿ ಅಡಗಿರುವ ಔಷಧೀಯ ಗುಣಗಳು!!!

0
1637

ಅಮೃತಬಳ್ಳಿಗೆ ಮಂಗನ ಬಳ್ಳಿ ಎಂತಲೂ ಕರೆಯುತ್ತಾರೆ. ಅಮೃತಬಳ್ಳಿಯು ಕಹಿ ಒಗರು ರುಚಿಯುಳ್ಳದ್ದಾಗಿದೆ. ಇದು ಅಗ್ನಿವರ್ಧಕ, ಪಾಚಕ, ಪಿತ್ತಶಾಮಕ, ಜ್ವರಹರವು ಆಗಿದೆ.

ಅಮೃತಬಳ್ಳಿಯಿಂದಾಗುವ ಉಪಯೋಗಗಳು

ನವ ಚೈತನ್ಯ, ರೋಗನಿರೋಧಕ ಶಕ್ತಿಗಾಗಿ:
ಅಮೃತಬಳ್ಳಿಯ ಕಾಂಡದ ರಸ ೨ ಚಮಚ, ಜೇನು ೨ ಚಮಚ ಬೆರೆಸಿ, ಸಂಜೆ ಮತ್ತು ಮುಂಜಾನೆ ೯೦ ದಿನಗಳ ವರೆಗೆ ಬಿಡದೆ ಹಾಗೆ ಸೇವಿಸಿದರೆ ಶರೀರದಲ್ಲಿ ರೋಗನಿರೋಧಕ ಶಕ್ತಿ ಉಂಟಾಗಿ ನವ ಚೈತನ್ಯ, ಕಂಡು ಬರುವುದು.

ಹಲವಾರು ರೋಗಗಳ ನಿವಾರಣೆ:
ಅಮೃತಬಳ್ಳಿಯ ಸತ್ವ (ಗುಳವೇಲ್ ಸತ್ವ) ೨ ಗ್ರಾಂ, ತ್ರಿಫಲ(ಅಳತೆ, ತಾರೆ, ನೆಲ್ಲಿಕಾಯಿ) ಚೂರ್ಣ ೫ ಗ್ರಾಂ ಇವೆರಡನ್ನೂ ಜೇನುತುಪ್ಪ ಅಥವಾ ತುಪ್ಪದಲ್ಲಿ ಇಟ್ಟು ಮಾಡಿ, ಸಂಜೆ – ಮುಂಜಾನೆ ದಿನದ ಎರಡು ಬಾರಿ, ೯೦ ದಿನಗಳ ಕಾಲ ಬಿಡದೆ ಹಾಗೆ ಸೇವಿಸಬೇಕು. ದೇಹದಲ್ಲಿ ಅನೇಕ ರೋಗಗಳು ತಮ್ಮಷ್ಟಕ್ಕೆ ತಾವೇ ಇಲ್ಲದಂತಾಗುವುವು. ದೇಹಕ್ಕೆ ನವ ಚೈತನ್ಯ ಬರುವುದು. ರಕ್ತವು ಶುದ್ಧಿಯಾಗಿ ದೇಹಕ್ಕೆ ಕಾಂತಿ, ಚರ್ಮಕ್ಕೆ ಹೊಳಪು, ಮೃದುತ್ವ ಬರುವುದು. ಚರ್ಮರೋಗಗಳೆಲ್ಲ ನೀಗುವುವು. ಇದರ ಪ್ರಯೋಗವನ್ನು ಸಹನೆ ಮತ್ತು ತಾಳ್ಮೆಯಿಂದ ಮಾಡಿಕೊಂಡರೆ ಅಮೃತ ಸಮಾನವಾದ ಫಲವನ್ನು ಪಡೆಯಬಹುದು.
ಸೂಚನೆ:
ಮೇಲೆ ಹೇಳಿರುವ ಅಮೃತಬಳ್ಳಿಯ ಸತ್ವ (ಗುಳವೇಲ್ ಸತ್ವ) ಮತ್ತು ತ್ರಿಫಲ ಚೂರ್ಣ ದ ಮಾತ್ರಗಳು ಆಯುರ್ವೇದ ಔಷಧದ ಅಂಗಡಿಗಳಲ್ಲಿ ಸಿದ್ಧ ರೂಪದಲ್ಲಿ ದೊರಕುತ್ತವೆ.

ಕಾಮಾಲೆ, ಅರಸಿನ ಮುಂಡಿಗೆ, ಜಾಂಡೀಸ್ ನಿವಾರಣೆಗೆ:
ಅಮೃತಬಳ್ಳಿಯ ಕಾಂಡದ ರಸ ಮೂರು ಚಮಚ, ಜೇನು ಒಂದು ಚಮಚ ಮಿಶ್ರ ಮಾಡಿ ಬೆಳೆಗ್ಗೆನೇ ಸೇವಿಸಬೇಕು. ಒಟ್ಟು ೭ ದಿನ ಸೇವಿಸಬೇಕು.
ಪಥ್ಯ: ಸಪ್ಪೆ ಮತ್ತು ಮೃದುವಾದ ಆಹಾರ ಸೇವಿಸಬೇಕು.

ಮೂಲವ್ಯಾಧಿಗೆ:
ಅಮೃತಬಳ್ಳಿಯ ಕಾಂಡದರಸ ೩ ಚಮಚದಷ್ಟು ೧ ಕಪ್ಪು ಮಜ್ಜಿಗೆಯಲ್ಲಿ ಚೆನ್ನಾಗಿ ಬೆರೆಸಿ, ದಿನದಲ್ಲಿ ೨ ಬಾರಿ ಕುಡಿಯಬೇಕು. ಮೂಲ ಶುದ್ಧಿಯಾಗಿ ಮೂಲವ್ಯಾಧಿಯು ನಿವಾರಣೆಯಾಗುವುದು.

ಸಾಧಾರಣ ಜ್ವರ, ಕೆಮ್ಮು, ಶೀತ, ನೆಗಡಿಗಳಿಗೆ:
ಅಮೃತಬಳ್ಳಿಯ ಕಂಡದರಸ ೨ ಚಮಚ, ಜೇನು ೧ ಚಮಚ ಬೆರೆಸಿ ದಿನದಲ್ಲಿ ಮೂರು ಬಾರಿ ಸೇವಿಸಬೇಕು.

ಮಧುಮೇಹಕ್ಕೆ:
ಅಮೃತಬಳ್ಳಿಯ ಕಂಡದರಸ ೩ ಚಮಚ, ಜೇನು ೧ ಚಮಚ ಬೆರೆಸಿ ಬೆಳೆಗ್ಗೆನೇ ಬಾರಿ ಹೊಟ್ಟೆಯಲ್ಲಿ ಕುಡಿಯಬೇಕು.
ಕ್ರಮೇಣ ಮೂತ್ರದಲ್ಲಿರುವ ಸಕ್ಕರೆಯ ಅಂಶವು ಕಮ್ಮಿಯಾಗಿ, ಮಧುಮೇಹವು ಹತೋಟಿಗೆ ಬರುತ್ತದೆ. ದೇಹದ ಆಯಾಸ, ದೌರ್ಭಲ್ಯ, ಸುಸ್ತು, ಕೈ ಕಾಲು ಉರಿ, ನಿಶಕ್ತಿಯು ನಿಗಿ ಶಕ್ತಿಉಂಟಾಗುವುದು.

ಚರ್ಮರೋಗಗಳಿಗೆ:
ಮೇಲಿನಂತೆಯೇ ರಸವನ್ನು ಕೆಲಕಾಲ ಸೇವಿಸಬೇಕು, ಮತ್ತು ಅಮೃತಬಳ್ಳಿಯ ಎಲೆ, ಕಾಂಡಗಳನ್ನು ಜಜ್ಜಿ ಪೇಸ್ಟಿನಂತೆ ಮಾಡಿಕೊಂಡು, ಒಂದು ನಿಂಬೆಹಣ್ಣಿನ ರಸ ಬೆರೆಸಿ ಚರ್ಮಕ್ಕೆ ಲೇಪನ ಮಾಡಬೇಕು.

ಬುದ್ಧಿ ಭ್ರಮಣೆಗೆ:
ಅಮೃತಬಳ್ಳಿಯ ಕಂಡದ ರಸ ೨ ಚಮಚ, ಬ್ರಾಹ್ಮೀ ಒಂದೆಲಗದ ಸೊಪ್ಪಿನ ರಸ ೨ ಚಮಚ ಮಿಶ್ರ ಮಾಡಿ, ದಿನದಲ್ಲಿ ೩ ಬಾರಿ ಸೇವಿಸಬೇಕು. ಇದರಿಂದ ಬುದ್ಧಿ ಭ್ರಮಣೆ, ಹುಚ್ಚು, ಬುದ್ಧಿ ವಿಕಲ್ಪತೇ ನಿವಾರಣೆಯಾಗುವುವು.