ಚಿಕ್ಕ ಮಕ್ಕಳಿಗೆ ಹಲ್ಲು ಹುಳುಕಾಗಿ ನರಕಯಾತನೆ ಪಡುವುದನ್ನ ತಪ್ಪಿಸಬೇಕೆಂದರೆ ಇದನ್ನು ತಪ್ಪದೇ ಓದಿ!!

0
1308

ಚಿಕ್ಕ ಮಕ್ಕಳ ಹಲ್ಲುಗಳು ಸಾಮಾನ್ಯವಾಗಿ ಕೊಳೆಯುತ್ತೇವೆ ಇದರಿಂದ ಮಕ್ಕಳಿಗೆ ವಿಪರೀತವಾದ ನೋವು ಕಂಡು ಬರುತ್ತದೆ. ಸಾಮಾನ್ಯವಾಗಿ ಹಾಲು ಹಲ್ಲುಗಳು 6 ರಿಂದ 7 ವರ್ಷದ ಒಳಗೆ ಬಿಳ್ಳುತ್ತೇವೆ ಈ ವೇಳೆಯಲ್ಲಿ ಹೊಸ ಹಲ್ಲಿನ ಮೇಲೆ ಸೋಂಕು ಅಂಟಿಕೊಂಡು ಹೊಸ ಹಲ್ಲುಗಳು ಕೊಲೆಯುತ್ತೇವೆ. ಇದರಿಂದ ಮಕ್ಕಳ ಹಲ್ಲುಗಳು ಅಷ್ಟೇಅಲ್ಲದೆ ಮುದ್ದಾದ ಮಗುವಿನ ಅಂದವು ಕೂಡ ಕೆಡುತ್ತದೆ. ಏಕೆಂದರೆ ಹಲ್ಲುಗಳು ಪ್ರತಿಯೊಬ್ಬರ ನಗುವಿನ ನಕ್ಷತ್ರಗಳು ಆದಕಾರಣ ಹಲ್ಲುಗಳು ಕ್ಷೆಮವೇ ಮುಖ್ಯವಾಗಿದೆ.

Also read: ನಿಮ್ಮ ಮಕ್ಕಳು ಎತ್ತರವಾಗಿ ಬೆಳೆಯಲು ಈ ಟಿಪ್ಸ್ follow ಮಾಡಿ!!

ಇನ್ನೊಂದು ಮುಖ್ಯವಾದ ವಿಷಯ ಅಂದರೆ ಮಕ್ಕಳು 24 ತಿಂಗಳಲ್ಲಿ ಕೆಲವೊಂದು ಹಲ್ಲುಗಳನ್ನು ಬಿಟ್ಟು ಎಲ್ಲ ಹಲ್ಲುಗಳು ಬಂದಿರುತ್ತೆ ಈ ಸಮಯದಲ್ಲಿ ಮಗು ದಟ್ಟಕಾಲಿಡಲು ಶುರುಮಾಡುತ್ತೆ ಈ ಸಮಯದಲ್ಲಿ ಹೆಚ್ಚಿನ ನೋವುಂಟು ಮಾಡುತ್ತೆ ಆದಕಾರಣ ಮಕ್ಕಳ ಹಲ್ಲಿನ ಆರೈಕೆಯನ್ನು ಮಾಡಲು ನೀವು ಮಾಡಬಹುದಾದ ಕೆಲವು ವಿಷಯಗಳು ಇಲ್ಲಿವೆ ನೋಡಿ.

1. ಮಿತವಾಗಿ ಶುಗರ್ ಬಳಸಿ;

ಹಲ್ಲು ಕೊಳೆಯುವಿಕೆಯ ಪ್ರಮುಖ ಕಾರಣಗಳಲ್ಲಿ ಸಕ್ಕರೆ ಕೂಡ ಒಂದು. ಸಕ್ಕರೆ ಗ್ಲುಕೋಸ್ ಅನ್ನು ಹೊಂದಿರುತ್ತದೆ, ಇದು ಸರಳವಾದ ಕಾರ್ಬೋಹೈಡ್ರೇಟ್ ಅನ್ನು ಹೊಂದಿರುತ್ತದೆ, ಇದು ಬಾಯಿಯಲ್ಲಿ ಬ್ಯಾಕ್ಟೀರಿಯಾದಿಂದ ಸುಲಭವಾಗಿ ವಿಭಜನೆಗೊಳ್ಳುತ್ತದೆ. ಬ್ಯಾಕ್ಟೀರಿಯಾವು ಆಮ್ಲಗಳನ್ನು ಉತ್ಪಾದಿಸಲು ಸಕ್ಕರೆಯನ್ನು ಬಳಸುತ್ತದೆ, ಇದು ಹಲ್ಲುಗಳನ್ನು ಹಾನಿಗೊಳಿಸುತ್ತದೆ. ಆದಕಾರಣ ದಟ್ಟಗಾಲಿಡುವರು ತಿನ್ನುವ ಮಿಠಾಯಿಗಳನ್ನು ಮಿತಿಗೊಳಿಸಬೇಕು ಮತ್ತು ಹಣ್ಣುಗಳು, ತರಕಾರಿಗಳು, ಹಾಲು, ಮೊಸರು, ಕಡಲೆಕಾಯಿ ಬೆಣ್ಣೆ, ಮತ್ತು ಚೀಸ್ ಮುಂತಾದ ಆರೋಗ್ಯಕರ ತಿಂಡಿಗಳನ್ನು ಕೂಡ ಮಿತವಾಗಿ ಕೊಡಬೇಕು.

2. ಹಣ್ಣಿನ ರಸ ಸೇವಿಸುವುದನ್ನು ಮಿತಿಗೊಳಿಸಿ:

ಹಣ್ಣಿನ ರಸ ಹೆಚ್ಚಿನ ಪ್ರಮಾಣದಲ್ಲಿ ಸಕ್ಕರೆಯ ಅಂಶವನ್ನು ಹೊಂದಿರುತ್ತದೆ. ಅದಕ್ಕೆ ಮಕ್ಕಳು ಜ್ಯೂಸ್ ಅಂದ್ರೆ ಅಷ್ಟೊಂದು ಇಷ್ಟ ಪಡೋದು. ಹಾಗಾಗಿ ನಿಮ್ಮ ಮಕ್ಕಳಿಗೆ ಹಣ್ಣಿನ ರಸ ಕೊಡುವುದು ಮಿತಗೊಳಿಸಬೇಕು ದಿನಕ್ಕೆ 4 ರಿಂದ 6 ಸ್ಪೂನ್ ಅಷ್ಟು ಕೊಡಿ. ಮಗು ಸೇವಿಸದ ಸ್ವಲ್ಪ ಸಮಯದ ನಂತರ ನೀರನ್ನು ಕುಡಿಸಿ ಹಣ್ಣಿನ ರಸದಲ್ಲಿರುವ ಸಕ್ಕರೆಯ ಅಂಶ ಸ್ವಚವಾಗುತ್ತೆ.

3. ಕುಡಿಯುವ ನೀರು ಬಾಟಲಿಗಳಲ್ಲಿ ಕೊಡಿ:

ಮಗುವಿಗೆ ನೀರು ಕುಡಿಯಲು ಕೂಡುವ ವಿಧಾನವನ್ನು ಬದಲಾವಣೆ ಮಾಡಿ. ಲೋಟಗಳಲ್ಲಿ ನೀರು ಕುಡಿಯುವುರಿಂದ ತಣ್ಣನೆಯ ನೀರು ಅಥವಾ ಬಿಸಿ ನೀರು ಹಲ್ಲಿನ ಬೇರುಗಳನ್ನು ಸಡಿಲಗೊಳಿಸುತ್ತೆ, ಮತ್ತು ಕೊಳೆತ ಹಲ್ಲಿನಲ್ಲಿ ನೋವು ತರಿಸುತ್ತೆ ಅದಕ್ಕಾಗಿ ಮಗುವಿಗೆ ಬಾಟಲಿಗಳಲ್ಲಿ ನೀರು ಕುಡಿಯುವುದು ರೂಡಿಸಿ, ಮಗು ಮಲಗಿದ್ದಾಗೆ ಬಾಟಲಿಯಲ್ಲಿ ನೀರು ಹಾಕಿ ಮಗ್ಗಲಲ್ಲಿ ಬಾಟಲಿ ಇಟ್ಟು ಅಭ್ಯಾಸ ಮಾಡಿ.

4. ಫ್ಲೋರೈಡ್ ಟೂತ್ ಫೆಸ್ಟ್-ನಿಂದ 2 ಬಾರಿ ಹಲ್ಲುಜ್ಜಿ:

ಫ್ಲೋರೈಡ್ ಬ್ಯಾಕ್ಟೀರಿಯಾದಿಂದ ಉತ್ಪತ್ತಿಯಾಗುವ ಆಮ್ಲಗಳಿಂದ ಹಲ್ಲನ್ನು ಕಾಪಾಡುತ್ತೆ. ಮತ್ತು ಕೆಲವೊಂದು ಹಲ್ಲುಗಳು ಸಾಕಷ್ಟು ಫ್ಲೂರೈಡ್ ಹೊಂದದಿದ್ದರೆ ಹಲ್ಲಿನ ಕೊಳೆಯುವುದು ಸಾಮಾನ್ಯವಾಗಿದೆ. ಆದಕಾರಣ ಫ್ಲೋರೈಡ್ ಬಳಸಿದ್ದರೆ ಹಲ್ಲಿನ ಗುಣಮಟ ಉತ್ತಮವಾಗಿರುತ್ತೆ. ಇಷ್ಟಾದರೂ ತೊಂದರೆ ಕಂಡು ಬಂದರೆ ದಂತ ದಂತವೈದ್ಯರನ್ನು ಭೇಟಿ ಮಾಡುವುದು ಒಳ್ಳೆಯದು.

5. ಹಲ್ಲಿನ ನಡುವೆ ಫ್ಲೋಸ್ ಮಾಡುವುದು:

ಹಲ್ಲು ಉಜ್ಜಿದರೆ ಅಷ್ಟೊಂದು ಸ್ವಚ್ಚವಾಗುವುದಿಲ್ಲ, ಹಲ್ಲಿನ ಮದ್ಯದಲ್ಲಿ ಸಿಕ್ಕಿಕೊಂಡ ಆಹಾರವು ಹಲ್ಲಿನ ಕೊಳೆತಕ್ಕೆ ಕಾರಣವಾಗುತ್ತೆ. ದೀರ್ಘಕಾಲದವರೆಗೆ ಉಳಿದ ಆಹಾರ ಕಣಗಳು ಬಾಯಿಯಲ್ಲಿದ್ದರೆ, ಅವು ಬ್ಯಾಕ್ಟೀರಿಯಾದ ಬೆಳವಣಿಗೆಗೆ ಕಾರಣವಾಗಬಹುದು. ಇದನ್ನು ತೊಡೆದುಹಾಕಲು ಫ್ಲೋಸ್ಸಿಂಗ್ ಒಂದು ಪರಿಣಾಮಕಾರಿ ಮಾರ್ಗವಾಗಿದೆ.

6. ಸ್ನಾಕ್-ಗಳ ಸೇವನೆ ಮಿತಿಯಲ್ಲಿರಲಿ:

ಊಟಗಳ ನಡುವೆ ಅನಾರೋಗ್ಯಕರ ತಿಂಡಿಗಳನ್ನು ಸೇವಿಸಬೇಡಿ, ಸಿಹಿ ಅಥವಾ ಸಿಹಿಯಾಗುವ ಯಾವುದೇ ತಿಂಡಿಗಳು ಮಕ್ಕಳ ಹಲ್ಲಿನ ಮೇಲೆ ಪರಿಣಾಮ ಬಿರುತ್ತೇವೆ. ಆದಕಾರಣ ಇಂತಹ ತಿಂಡಿಗಳ ಸೇವನೆಯನ್ನು ಕಡಿಮೆ ಮಾಡಿ.

7. ದೊಡ್ಡವರು ಬಳಸಿದ ಸ್ಪೂನ್ ನಲ್ಲಿ ತಿನ್ನಿಸಬೇಡಿ:

ಸಾಮಾನ್ಯವಾಗಿ ಊಟದ ಸಮಯದಲ್ಲಿ ಮಕ್ಕಳಿಗೆ ತಾವು ತಿಂದ ಸ್ಪೂನ್ -ಗಳಿಂದ ಆಹಾರ ತಿನ್ನಿಸುತ್ತಾರೆ ಇದರಿಂದಲ್ಲೇ ಮಕ್ಕಳ ಹಲ್ಲು ಕೊಳೆಯುತ್ತೇವೆ. ಏಕೆಂದರೆ ವಯಸ್ಕರ ಬಾಯಿಯಲ್ಲಿ ದೊಡ್ಡ ಪ್ರಮಾಣದ ವಿವಿಧ ಬ್ಯಾಕ್ಟೀರಿಯಾಗಳು ಇರುತ್ತೇವೆ. ಅದನ್ನೇ ಮಕ್ಕಳ ಬಾಯಿಯಲ್ಲಿ ಇಟ್ಟಾಗ ಲಾಲಾರಸದ ಮೂಲಕ ಸುಲಭವಾಗಿ ಬ್ಯಾಕ್ಟೀರಿಯಾಗಳು ತಲುಪಿ ಹಲ್ಲಿನ ಕೊಳೆತಗಳು ಅಷ್ಟೇ ಅಲ್ಲದೆ ಬೇರೊಂದು ತೊಂದರೆಗಳು ಕಂಡು ಬರುತ್ತೇವೆ.

Also read: ಮಕ್ಕಳು ಅಳುವಾಗ ಅಥವಾ ಹಟ ಮಾಡುವಾಗ ಸಮಾಧಾನ ಪಡಿಸಲು ಇರುವ 5 ಅಧ್ಬುತ ಉಪಾಯಗಳು..