ಪ್ರತಿ ಗೃಹಿಣಿ ಓದಬೇಕಾದಂತಹ ಸೂಪರ್ ಟಿಪ್ಸ್

0
6803

ನಿಮ್ಮ ಮನೆಯನ್ನು ಶುಚಿಯಾಗಿ ಇಟ್ಟುಕೊಳ್ಳಲು ಮಾರುಕಟ್ಟೆಯಲ್ಲಿ ಸಿಗುವ ಅನೇಕ ಸುಗಂಧ ಬೀರುವ ಉಪಕರಣಗಳಿಗೆ  ಮೊರೆ ಹೋಗಬೇಕು ಎಂದೇನಿಲ್ಲ . ಮನೆಯಲ್ಲೇ ಸಿಗುವಂತಹ ಕೆಲವು ವಸ್ತುಗಳಿಂದಲೇ ನಿಮ್ಮ ಮನೆಯನ್ನು ಸುಗಂಧ ರಹಿತವಾಗಿ ಇಟ್ಟುಕೊಳ್ಳಬಹುದು. ನಂಬಿಕೆ ಬರುತ್ತಿಲ್ಲವೇ? ಹಾಗಿದ್ದರೆ ಒಮ್ಮೆ ಮಾಡಿ ನೋಡ.

ನಾವು ವಾಸಿಸುವ ಮನೆ ದೇವಾಲಯವಿದ್ದಂತೆ. ಅದರಲ್ಲೂ ಅಡುಗೆ ಕೋಣೆ ವಾಸನೆ ಬರದಂತೆ ನೋಡಿಕೊಳ್ಳುವುದು ಇದರಲ್ಲಿ ಮುಖ್ಯವಾದುದಾಗಿದೆ. ಆಹಾರ ತಯಾರಿಸಿದ ನಂತರ ಅಡುಗೆ ಮನೆಯನ್ನು ಸ್ವಚ್ಛ ಮಾಡುವ ಕ್ರಿಯೆಯಲ್ಲಿ ನಾವು ಹಿಂದೇಟು ಹಾಕಬಾರದು. ಅಂತೆಯೇ ಅಲ್ಲಿ ಹೊರಸೂಸುವ ವಾಸನೆಯನ್ನು ನಿಗ್ರಹಿಸುವಂತಹ ಕೆಲವೊಂದು ಸ್ವಚ್ಛತಾ ಕಾರ್ಯಗಳನ್ನು ನಾವು ಹಮ್ಮಿಕೊಳ್ಳಬೇಕು. ಇಂತಹ ಕೆಟ್ಟ ವಾಸನೆಯಿಂದ ಮುಕ್ತಿ ಸಿಗಬೇಕಾದರೆ ನೀವು ಈ ಟಿಪ್ಸ್‌ಗಳನ್ನು ಪಾಲಿಸಬಹುದು.

  • ಅಡುಗೆ ಮನೆಯಲ್ಲಿ ಮಸಾಲೆಯುಕ್ತ ಆಹಾರ ತಯಾರಿಸಿದ ಮೇಲೆ, ಮನೆ ತುಂಬಾ ವಾಸನೆ ಹರಡಿ ಕಿರಿ ಕಿರಿ ಉಂಟುಮಾಡುತ್ತಿದ್ದರೆ, ಅದನ್ನು ದೂರ ಮಾಡಲು ಕೆಲವು ಉಪಾಯಗಳು.
  • ಬಳಸಿದ ಪಾತ್ರೆ ವಾಸನೆ ಬರುತ್ತಿದ್ದರೆ, ಕೊಂಚ ಮಜ್ಜಿಗೆ ಹಾಕಿ ತೊಳೆದುಕೊಂಡರೆ ಸಾಕು. ಕೆಟ್ಟ ವಾಸನೆ ದೂರವಾಗುತ್ತದೆ.
  • ಚಕ್ಕೆ, ಲವಂಗವನ್ನು ನಿಂಬೆ ಹಣ್ಣು ಅಥವಾ ಕಿತ್ತಳೆ ಹಣ್ಣಿನ ಸಿಪ್ಪೆಯ ಜತೆ ನೀರಿನಲ್ಲಿ ಕುದಿಸಿ ವಾಸನೆ ಬರುವ ಜಾಗದಲ್ಲಿಟ್ಟರೂ ಸಾಕು.
  • ಬಿಳಿ ವಿನೇಗರ್ ಅನ್ನು ಅಡುಗೆ ಮನೆಯಲ್ಲಿ ಇರಿಸಿಕೊಳ್ಳಿ. ಇದಕ್ಕೆ ತಾಜಾ ದಾಲ್ಚಿನ್ನಿಯನ್ನು ಸೇರಿಸಿ. ಇವೆರಡೂ ನಿಮ್ಮ ಅಡುಗೆ ಮನೆಯ ವಾಸನೆಯನ್ನು ನಿಯಂತ್ರಿಸಲು ಸಹಾಯಕಾರಿಯಾಗಿದೆ.
  • ಸೀದು ಹೋದ ಪಾತ್ರೆಯನ್ನು ಶುಚಿ ಮಾಡಲು ಈರುಳ್ಳಿ ಅಥವಾ ನಿಂಬೆ ಹಣ್ಣನು ಕತ್ತರಿಸಿ ಸಿದ ಪಾತ್ರೆಯೊಳಗೆ ಸ್ವಲ್ಪ್ ನೀರಿನ್ನು ಜಾಕಿ ಕುಡಿಸಿ 10 ನಿಮಿಷದ ಬಳಿಕ ತೊಳೆಯಿರಿ.
  • ಫ್ರಿಡ್ಸ್ ಕೆಟ್ಟ ವಾಸನೆಯನ್ನು ಬೀರುತ್ತಿದೆ ಎಂದಾದಲ್ಲಿ ಲಿಂಬೆ ಬೆರೆತ ನೀರನ್ನು ಫ್ರಿಡ್ಜ್‌ನಲ್ಲಿರಿಸಿ. ಹತ್ತು ನಿಮಿಷಗಳ ಕಾಲ ಈ ಪ್ರಯೋಗವನ್ನು ಮಾಡಿ. ನಿಮ್ಮ ಫ್ರಿಡ್ಜ್‌ನಿಂದ ಹೊರಸೂಸುವ ಕೆಟ್ಟ ವಾಸನೆ ಮಾಯವಾಗುತ್ತದೆ.
  • ಮೀನು ತುಂಡರಿಸಿದ ನಂತರ ನಿಮ್ಮ ಕೈಬೆರಳುಗಳಿಂದ ವಾಸನೆ ಬರುತ್ತದೆ. ಮೀನು ತುಂಡರಿಸಿದ ನಂತರ ನಿಮ್ಮ ಹಸ್ತಗಳನ್ನು ಸಕ್ಕರೆಯಿಂದ ಮಸಾಜ್ ಮಾಡಿಕೊಳ್ಳುವುದಾಗಿದೆ ತದನಂತರ ಸೋಪಿನ ಬಳಕೆಯನ್ನು ಮಾಡಿ. ನಿಮ್ಮ ಹಸ್ತಗಳಿಂದ ಬರುವ ಮೀನಿನ ವಾಸನೆ ಮಾಯವಾಗುತ್ತದೆ.
tips for good health1
source: mrkeenindia.com
 • ಕೋಲಾ ಕುಡಿಯುವುದು ಇಂದಿನ ಫ್ಯಾಷನ್. ಮಕ್ಕಳು ಚ್ಯೂಯಿಂಗ್ ಗಮ್ ತಿಂದು ಟೇಬಲ್, ಬೆಂಚ್, ಶೂನಲ್ಲಿ ಅಂಟಿಸಿದ್ದರೆ ತೆಗೆಯಲು ಅದರ ಮೇಲೆ ಸ್ವಲ್ಪ ಕೋಲಾ ಹಾಕಿ ಸ್ವಲ್ಪ ಹೊತ್ತಿನ ಬಳಿಕ ಕಿತ್ತರೆ ಅವು ಕಿತ್ತು ಬರುತ್ತವೆ. ಅಷ್ಟೇ ಅಲ್ಲ ಮನೆ ಕಿಟಕಿಗಳನ್ನು ಶುದ್ಧ ಮಾಡಲು ಕೂಡ ಕೋಲಾ ಬಳಸಬಹುದು. ಇದರಲ್ಲಿ ಸಿಟ್ರಿಕ್ ಆಸಿಡ್ ಇರುವುದರಿಂದ ಗಾಜು ಬೇಗನೇ ಶುದ್ಧಗೊಳ್ಳುತ್ತದೆ.