ಮೊಬೈಲ್, ಕಂಪ್ಯೂಟರ್ ಬಳಕೆಯಿಂದ ನಿಮ್ಮ ಕಣ್ಣುಗಳು ಆಯಾಸಗೊಳ್ಳುತ್ತಿವೆ, ಮುಂದೆ ಆಗುವ ಅಪಾಯವನ್ನು ತಡೆಯಲು ಈ ವಿಧಾನಗಳನ್ನು ಮಾಡಿ..

0
486

ಇಂದಿನ ಆಧುನಿಕ ಜಗತ್ತಿನ ಎಲ್ಲವೂ ಡಿಜಿಟಲ್ ಆಗಿದ್ದರಿಂದ. ಮೊಬೈಲ್ ಕಂಪ್ಯೂಟರ್ ಪರದೆಗಳನ್ನು ಹತ್ತಾರು ಗಂಟೆಗಟ್ಟಲೆ ನೋಡುತ್ತಲೇ ಬೇಕಾಗುತ್ತೆ ಏಕೆಂದರೆ. ಬೆಳ್ಳಗೆ ಎದ್ದಾಗಿಂದ ಹಿಡಿದು ರಾತ್ರಿ ಮಲಗುವವರೆಗೆ ಮೊಬೈಲ್, ಕಂಪ್ಯೂಟರ್ ಗಳನ್ನು ನೋಡುತ್ತಲೇ ಇರಬೇಕಾಗುತ್ತೆ. ಈಗಿನ ಬಹುತೇಕ ಕೆಲಸಗಳು ಕೂಡ ಡಿಜಿಟಲ್ ಸ್ಕ್ರೀನಿಂಗ್-ನಲ್ಲೆ ನಡೆಯುತ್ತೆ ಹಾಗಾಗಿ ಎಲ್ಲದರಿಂದ ಅರಿವಿಲ್ಲದಂತೆ ಕಣ್ಣಿನ ಸಮಸ್ಯೆಯನ್ನು ಕಂಡುಕೊಳ್ಳಬಹುದು. ಇದರಿಂದ ಕಣ್ಣಿನ ಆಯಾಸ ಮಸುಕಾದ ದೃಷ್ಟಿ,ಸೆಟೆದ ಕುತ್ತಿಗೆ,ತಲೆನೋವು ಅಥವಾ ಭುಜದ ನೋವು ಇತ್ಯಾದಿ ಲಕ್ಷಣಗಳು ಕಾಣಿಸಿಕೊಳ್ಳುತ್ತೇವೆ, ಈ ಲಕ್ಷಣಗಳು ಕಾಣಿಸಿಕೊಳ್ಳಲು ಕಂಪ್ಯೂಟರ್ ವಿಝನ್ ಸಿಂಡ್ರೋಮ್ ಕಣ್ಣಿನ ಮೇಲೆ ಪರಿಣಾಮ ಬೀರಬಹುದು ಎಂದು ಹೇಳಲಾಗಿದೆ.

Also read: ಮೊಬೈಲ್ ಎಷ್ಟೊಂದು ಉಪಯುಕ್ತ ಎನ್ನುವರಿಗೆ ಆಘಾತ; ಹೆಚ್ಚು ಮೊಬೈಲ್ ಬಳಕೆ ಮಾಡಿದರೆ ನಿದ್ರೆ ರೋಗ, ಮತ್ತು ಸಂತಾನೋತ್ಪತ್ತಿ ಕುಂಠಿತಕ್ಕೆ ಕಾರಣವಂತೆ!!

ಹೌದು ಕಂಪ್ಯೂಟರ್ ಪರದೆಯನ್ನು ಹೆಚ್ಚು ಹೊತ್ತು ನೋಡುತಿದ್ದರೆ ಅದು ಕಣ್ಣುಗಳ ಮೇಲಿನ ಒತ್ತಡವನ್ನು ಹೆಚ್ಚಿಸುತ್ತದೆ ಮತ್ತು ಕಣ್ಣಿನ ಸ್ನಾಯುಗಳು ನಿರಂತರವಾಗಿ ಕೆಲಸ ಮಾಡುವುದಕ್ಕೆ ಕಾರಣವಾಗುತ್ತದೆ. ಇದರಿಂದಾಗಿ ಕಣ್ಣಿನ ಮಸೂರದ ನಮ್ಯತೆಯು ಕಡಿಮೆಯಾಗುತ್ತದೆ ಮತ್ತು ಸಿವಿಎಸ್ ಅಪಾಯವನ್ನು ಹೆಚ್ಚಿಸುತ್ತದೆ. ಇದು ಸಿವಿಎಸ್‌ಗೆ ಎರಡು ಪ್ರಮುಖ ಕಾರಣವೆಂದರೆ ಕಣ್ಣುಗಳನ್ನು ಮಿಟುಕಿಸದಿರುವುದು ಮತ್ತು ಅಲ್ಪ ಅಂತರದಲ್ಲಿ ದೃಷ್ಟಿಯ ಕೇಂದ್ರೀಕರಣವು ಕಾರಣವಾಗಿದೆ. ಅಂದರೆ ಸಾಮಾನ್ಯವಾಗಿ ಪ್ರತಿ ನಿಮಿಷಕ್ಕೆ ನಾವು 16-20 ಸಲ ಕಣ್ಣುಗಳನ್ನು ಮಿಟುಕಿಸಿದರೆ ಕಂಪ್ಯೂಟರ್‌ನ ಮುಂದಿದ್ದಾಗ 6-8 ಸಲವಷ್ಟೇ ಈ ಕೆಲಸವನ್ನು ಮಾಡುತ್ತೇವೆ. ಅದಕ್ಕಾಗಿ ಕಣ್ಣುಗಳ ಆಯಾಸವನ್ನು ಮತ್ತು ಸಿವಿಎಸ್‌ನ ಅಪಾಯವನ್ನು ತಗ್ಗಿಸಲು ಕೆಲವು ಸರಳ ವಿಧಾನಗಳನ್ನು ಕಣ್ಣಿನ ಆರೋಗ್ಯವನ್ನು ಕಾಪಾಡಿಕೊಳ್ಳಬಹುದು.

1. ಸೂಕ್ತ ಬೆಳಕಿನ ವ್ಯವಸ್ಥೆಯನ್ನು ಬಳಸಿ:

Also read: ಬೆಂಗಳೂರಿನ ಈ ಮಾರುಕಟ್ಟೆಯಲ್ಲಿ ಕದ್ದ ಮೊಬೈಲ್-ಗಳ ವ್ಯಾಪಾರ ಜೋರ್ ಅಂತೆ; ಇಲ್ಲಿ ಸಿಗುವ ಮೊಬೈಲ್ ಖರೀದಿಸಿದರೆ ಅಪಾಯ ಕಟ್ಟಿಟ್ಟ ಬುತ್ತಿಯಂತೆ.

ನೀವು ಕಂಪ್ಯೂಟರ್‌ನ ಮುಂದೆ ಕೆಲಸ ಮಾಡುತ್ತಿರುವಾಗ ಹೊರಗಿನಿಂದ ಬರುವ ಬೆಳಕು ಒಳಪ್ರವೇಶಿಸದಂತೆ ನೋಡಿಕೊಳ್ಳಬೇಕು. ಇದರ ಜೊತೆ ನಿಮ್ಮ ಕಂಪ್ಯೂಟರ್ ಪರದೆಯ ಬೆಳಕನ್ನು ಸೂಕ್ತವಾಗಿ ಹೊಂದಿಸಿಕೊಳ್ಳಿ. ನಿಮ್ಮ ಸುತ್ತಲಿನ ಬೆಳಕು ಮತ್ತು ಕಂಪ್ಯೂಟರ್ ಪರದೆಯ ಬೆಳಕು ಪರಸ್ಪರ ತಾಳೆಯಾಗುವಂತೆ ಮಾಡುವುದು ಅತ್ಯುತ್ತಮ ಕ್ರಮವಾಗಿದೆ. ಇದಕ್ಕೆ ಕೆಲವು ಪರದೆಗಳನ್ನು ಬಳಕೆ ಮಾಡುವುದು ಉತ್ತಮವಾಗಿದೆ.

2. 20 ನಿಮಿಷಗಳಿಗೊಮ್ಮೆ ವಿಶ್ರಾಂತಿ:

Also read: ಮೊಬೈಲ್​ ಮೂಲಕ ಹಣ ವರ್ಗಾವಣೆ ಮಾಡುವ ಮುನ್ನ ಎಚ್ಚರ; ಹೊಸ ರೀತಿಯಲ್ಲಿ ವಂಚನೆ ಮಾಡುತ್ತಿದ್ದಾರೆ ಸೈಬರ್ ಕಳ್ಳರು..

ಈ ನಿಯಮದ ಅನುಸಾರದಿಂದ. ಇದು ಕಣ್ಣುಗಳ ಆಯಾಸವನ್ನು ಕಡಿಮೆ ಮಾಡಲು ಮತ್ತು ಸಿವಿಎಸ್‌ನ್ನು ತಡೆಯಲು ನೇತ್ರವೈದ್ಯರು ಸಾಮಾನ್ಯವಾಗಿ ನೀಡುವ ಸಲಹೆಯಾಗಿದೆ. ಈ ನಿಯಮದಂತೆ ನೀವು ಪ್ರತಿ 20 ನಿಮಿಷಗಳಿಗೊಮ್ಮೆ 20 ಸೆಕೆಂಡ್‌ಗಳ ಕಾಲ ಕಂಪ್ಯೂಟರ್ ಪರದೆಯನ್ನು ನೋಡುವುದು ಬಿಟ್ಟು ಮತ್ತು ನಿಮ್ಮ ಕಂಪ್ಯೂಟರ್‌ನಿಂದ 20 ಅಡಿ ದೂರದಲ್ಲಿರುವ ವಸ್ತುವನ್ನು ವೀಕ್ಷಿಸಬೇಕು. ಇದರಿಂದ ಕಣ್ಣಿಗೆ ವಿಶ್ರಾಂತಿ ಸಿಗುತ್ತೆ.

3. ಸೂಕ್ತ ವಿರಾಮ ಪಡೆಯಿರಿ:

Also read: ATM ಕಾರ್ಡ್​ ಸುರಕ್ಷಿತಕ್ಕಾಗಿ ಬಂದಿದೆ ಹೊಸ ಮೊಬೈಲ್ app; ಬೇಕಾದ ಸಮಯದಲ್ಲಿ ಕಾರ್ಡ್ Block ಅಥವಾ Unblock ಮಾಡಿಕೊಳ್ಳಬಹುದು..

ನಿರಂತರವಾಗಿ ಕೆಲಸದಲ್ಲಿ ತೊಡಗಿ ಕಂಪ್ಯೂಟರ್ ಪರದೆಯ ಮುಂದೆ ಹೆಚ್ಚಿನ ಸಮಯ ಕಳೆಯುವುದನ್ನು ತಡೆಯುವುದು ಕಣ್ಣಿನ ಆರೋಗ್ಯಕ್ಕೆ ಉತ್ತಮವಾಗಿದೆ. ಪ್ರತಿ ಅರ್ಧ ಅಥವಾ ಒಂದು ಗಂಟೆಗೊಮ್ಮೆ ನಿಮ್ಮ ಕಣ್ಣುಗಳನ್ನು 20 ಸೆಕೆಂಡ್ ಕಾಲ ಮುಚ್ಚಿರಿ. ಇದು ಕಣ್ಣುಗಳ ಆಯಾಸವನ್ನು ತಗ್ಗಿಸುತ್ತದೆ.

4. ಕಣ್ಣಿಗೆ ತಂಪು ನಿಡುವ ವ್ಯಾಯಾಮ ಮಾಡಿ:

Also read: ನಿಮ್ಮ ವಾಹನಗಳನ್ನು ಕಳವು ಮಾಡ್ತಾರೆ ಎಂಬ ಚಿಂತೆ ಬಿಟ್ಟು ಬಿಡಿ; ಕಳ್ಳರಿಗೆ ಚೆಳ್ಳೆಹಣ್ಣು ತಿನಿಸಲು ಬಂದಿದೆ ಮೊಬೈಲ್ ಸಿಮ್ ತಂತ್ರಜ್ಞಾನ..

ಕಣ್ಣಿನ ಕೆಲವು ವ್ಯಾಯಾಮಗಳು ಕಣ್ಣುಗಳ ಮೇಲಿನ ಒತ್ತಡವನ್ನು ಶಮನಿಸಲು ನೆರವಾಗುತ್ತವೆ ಮತ್ತು ಕಂಪ್ಯೂಟರ್ ಸಂಬಂಧಿತ ದೃಷ್ಟಿ ಸಮಸ್ಯೆಗಳನ್ನು ದೂರವಿಡುತ್ತವೆ. ಪ್ರತಿ ದಿನ ಕಣ್ಣುಗುಡ್ಡೆಗಳಿಗೆ ಸೌಮ್ಯ ಮಸಾಜ್ ಮಾಡುವುದರಿಂದ ಅದು ರಕ್ತ ಪರಿಚಲನೆಯನ್ನು ಹೆಚ್ಚಿಸುತ್ತದೆ,ಕಣ್ಣುಗಳ ಸ್ನಾಯುಗಳನ್ನು ಸಡಿಲಗೊಳಿಸುತ್ತದೆ ಮತ್ತು ಕಣ್ಣೀರಿನ ಗ್ರಂಥಿಗಳನ್ನು ಪ್ರಚೋದಿಸುತ್ತದೆ. ಇದು ಕಣ್ಣುಗಳು ಒಣಗುವುದನ್ನು ತಡೆದು ಆಗುವ ಮುಂದೆ ಆಗುವ ಅಪಾಯವನ್ನು ತಡೆಯುತ್ತದೆ.

5. ಆ್ಯಂಟಿ ರಿಫ್ಲೆಕ್ಷನ್ ಕೋಟಿಂಗ್‌ ಬಳಸಿ:

Also read: ಅಂಧ ಪಾಶ್ಚಾತ್ಯ ಅನುಕರಣೆ, ಸದಾ ಮೊಬೈಲ್-ನಲ್ಲಿಯೇ ಕಾಲ ಹರಣ ಮಾಡುತ್ತಿರುವ ಇಂದಿನ ಯುವ ಪೀಳಿಗೆ ಎತ್ತ ಸಾಗಿದೆ??

ಸಾಮಾನ್ಯವಾಗಿ ಈಗ ಬಹುತೇಕರು ಕನ್ನಡಕವನ್ನು ಬಳಸುತ್ತಾರೆ. ಇದಕ್ಕೆ ಆ್ಯಂಟಿ ರಿಫ್ಲೆಕ್ಟಿವ್ ಮಸೂರಗಳು ಉತ್ತಮವಾಗುತ್ತವೆ. ಪರ್ಯಾಯವಾಗಿ ಕಚೇರಿಯ ಗೋಡೆಗಳ ಮತ್ತು ಹೊಳಪಿನ ಮೇಲ್ಮೈಗಳ ಪ್ರತಿಬಿಂಬವನ್ನು ತಡೆಯಲು ನಿಮ್ಮ ಕಂಪ್ಯೂಟರ್ ಪರದೆಗೆ ಆ್ಯಂಟಿ ರಿಫ್ಲೆಕ್ಷನ್ ಕೋಟಿಂಗ್‌ನ್ನು ಅಳವಡಿಸಿ ಕಣ್ಣಿನ ಆರೋಗ್ಯವನ್ನು ಕಾಪಾಡಬಹುದು.