ಇನ್ನು ಮುಂದೆ ಹಲ್ಲುಗಳು ಹಳದಿ ಕರೆ ಕಟ್ಟುವುದರ ಚಿಂತೆ ಬೇಡ, ಇಲ್ಲಿದೆ ಅದಕ್ಕೆ ಸೂಕ್ತ ಪರಿಹಾರಗಳು…..!

0
2266

ಸೌಂದರ್ಯ ಎಂದ ಮೇಲೆ ಬರೀ ತ್ವಚೆ, ಕೂದಲಿನ ಸೌಂದರ್ಯ ಮಾತ್ರವಲ್ಲ, ಹಲ್ಲುಗಳ ಸೌಂದರ್ಯ ಕೂಡ ಪ್ರಮುಖವಾಗಿರುತ್ತದೆ. ಸಾಮಾನ್ಯವಾಗಿ ಎಲ್ಲ ವಯಸ್ಸಿನವರಿಗೂ ಹಲ್ಲನ್ನು ಹೇಗೆ ಸ್ವಚ್ಛವಾಗಿ ಹೊಳೆಯುವಂತೆ ಇಟ್ಟುಕೊಳ್ಳುವುದು ಎನ್ನುವುದೇ ಸಮಸ್ಯೆ. ದಿನಕ್ಕೆ 2-3 ಬಾರಿ ಬ್ರಶ್ ಮಾಡಿದರೂ ಸಹ ಕೆಲವರಿಗೆ ಹಲ್ಲುಗಳು ಹಳದಿ ಕರೆ ಕಟ್ಟುವುದು, ಹಲ್ಲಿನ ಹುಳುಕು ತಪ್ಪುವುದಿಲ್ಲ. ಇದು ಅಷ್ಟೇ ಅಲ್ಲ ಹೊಳೆಯುವ ಹಲ್ಲುಗಳು ನಮ್ಮ ಆತ್ಮವಿಶ್ವಾಸವನ್ನು ಹೆಚ್ಚಿಸುವುದರಿಂದ ಆದಷ್ಟು ಹಲ್ಲುಗಳ ಆರೈಕೆಗೆ ಹೆಚ್ಚಿನ ಪ್ರಾಮುಖ್ಯತೆಯನ್ನು ನೀಡಬೇಕಾಗುತ್ತದೆ. ಹೀಗಿರುವಾಗ ನಾವು ನಮ್ಮ ಹಲ್ಲುಗಳನ್ನು ಹೇಗೆ ರಕ್ಷಿಸಬೇಕು ಎಂಬುವುದರ ಬಗ್ಗೆ ಕೆಲವಿ ಟಿಪ್ಸ್ಗಳನ್ನು ಇಲ್ಲಿ ತಿಳಿಸಲಾಗಿದೆ.

ಉಪ್ಪು
ಹಲ್ಲುಗಳ ಹಲವಾರು ಸಮಸ್ಯೆಗಳನ್ನು ನಿವಾರಿಸಲು ಉಪ್ಪು ಅತ್ಯದ್ಭುತ ಉಪಾಯವಾಗಿದೆ. ಹೆಚ್ಚಿನ ಟೂತ್‌ಪೇಸ್ಟ್‌ಗಳು ಉಪ್ಪಿನ ಅಂಶದೊಂದಿಗೆ ಬಂದಿದ್ದು ನಿಮ್ಮ ಹಲ್ಲುಗಳನ್ನು ತೊಳೆಯಲು ಉಪ್ಪನ್ನು ಬಳಸಿಕೊಳ್ಳಿ. ಕಲ್ಲುಪ್ಪನ್ನು ಬಳಸಿಕೊಂಡು ನಿತ್ಯ ಒಂದು ಬಾರಿ ಹಲ್ಲುಜ್ಜಿ. ಮತ್ತು ದಿನಕ್ಕೊಮ್ಮೆ ಉಪ್ಪು ಮತ್ತು ಬೆಳ್ಳುಳ್ಳಿ ಪೇಸ್ಟ್ ನಿಂದ ಬಾಯಿ ಮುಕ್ಕಳಿಸಿ. ಇದರಿಂದ ಒಸಡಿನ ತೊಂದರೆಗಳು ನಿವಾರಣೆಯಾಗುತ್ತದೆ. ಹಲ್ಲು ಕೂಡ ಬಲಿಷ್ಠವಾಗುತ್ತವೆ.

ಬೇಕಿಂಗ್ ಸೋಡಾ

ಬೇಕಿಂಗ್ ಸೋಡಾ ಹಲ್ಲಿನ ಹಳದಿ ಕರೆಯನ್ನು ನಿವಾರಿಸಲು ಬೇಕಿಂಗ್ ಸೋಡಾ ಅತ್ಯದ್ಭುತ ಉತ್ಪನ್ನವಾಗಿದೆ. ನಿಮ್ಮ ಹಲ್ಲನ್ನು ಸ್ವಚ್ಛಮಾಡುವಲ್ಲಿ ಇದು ನೆರವನ್ನು ನೀಡಲಿದೆ. ಕಾಲು ಭಾಗದಷ್ಟು ಸೋಡಾವನ್ನು ತೆಗೆದುಕೊಂಡು ನಿಮ್ಮ ಹಲ್ಲುಗಳನ್ನು ಬ್ರಶ್‌ನಿಂದ ತಿಕ್ಕಿರಿ. ಬೆಚ್ಚಗಿನ ನೀರಿನಿಂದ ಹಲ್ಲನ್ನು ತೊಳೆದುಕೊಳ್ಳಿ. ವಾರದಲ್ಲಿ ಒಂದು ಅಥವಾ ಎರಡು ಬಾರಿ ಇದನ್ನು ಬಳಸಿ. ನೆನಪಿರಲಿ ಅಡುಗೆ ಸೋಡಾದೊಂದಿಗೆ ಉಪ್ಪನ್ನು ಬಳಸಿಕೊಂಡು ಹಲ್ಲುಜ್ಜ ಬಹುದಾಗಿದೆ. ಆದರೆ ಉಪ್ಪು ನಿಮ್ಮ ದವಡೆಯನ್ನು ಸ್ಪರ್ಶಿಸದಂತೆ ನೋಡಿಕೊಳ್ಳಿ.

ಬೇವಿನ ಕಡ್ಡಿ
ಪ್ರತಿದಿನ ಹಸಿಬೇವಿನ ಕಡ್ಡಿಯಿಂದ ಹಲ್ಲನ್ನು ತಿಕ್ಕುವುದರಿಂದ ಹಲ್ಲು ಬಲಗೊಳ್ಳುತ್ತದೆ. ಬಾಯಿ ದುರ್ವಾಸನೆ ನಿವಾರಣೆಯಾಗಿ, ವಸಡಿನ ಹುಣ್ಣು ಗುಣವಾಗುವುದು. ಬೇವಿನ ಕಡ್ಡಿ ಜಗಿಯುವುದರಿಂದ ಹಲ್ಲು ಸದೃಢವಾಗುತ್ತವೆ. ಇದರಿಂದ ಹಲ್ಲು ಹುಳುಕಾಗುವುದು ಕೂಡ ತಪ್ಪುತ್ತದೆ.

Also read: ವಿಠ್ಠಲ ಎಂದರೆ ಹಾರ್ಟ್ ಅಟ್ಯಾಕ್ ಆಗೊಲ್ಲ.. ವೈಜ್ಞಾನಿಕ ವಾಗಿ ಸಾಬೀತಾಗಿದೆ ನೋಡಿ.. ಶೇರ್ ಮಾಡಿ ಎಲ್ಲರಿಗೂ ಉಪಯೋಗವಾಗಲಿ

ಲವಂಗ
ಹಲ್ಲು ನೋವಿಗೆ ಲವಂಗದ ಎಣ್ಣೆ ಉತ್ತಮ ಔಷಧಿ. ನಾಲ್ಕು ಲವಂಗಗಳನ್ನು ನಿಂಬೆರಸದಲ್ಲಿ ಅರೆದು ಹಲ್ಲು ವಸಡುಗಳನ್ನು ತಿಕ್ಕಬೇಕು ಇದರಿಂದ ಹಲ್ಲು ಸದೃಢವಾಗುತ್ತವೆ ಮತ್ತು ನಿಮ್ಮ ಬಾಯಿಯಲ್ಲಿರುವ ಬ್ಯಾಕ್ಟಿರಿಯಾ ಹೊಡೆದೊಡಿಸಿ ಹಲ್ಲನ್ನು ಸುರಕ್ಷಿತವಾಗಿಡಲು. ಲವಂಗ ಹಾಕಿಕೊಂಡು ಮಡಚಿ ನೋವಾದ ಹಲ್ಲಿನ ಮೇಲೆ ಇಟ್ಟುಕೊಂಡು ಆ ಒಂದೇ ಹಲ್ಲಿನಲ್ಲಿ ಜಗಿದು ರಸ ಉಗಿದರೆ ಹಲ್ಲು ನೋವು ಕಡಿಮೆ ಆಗುತ್ತದೆ.

ಬಾಳೆ ಹಣ್ಣು ಸಿಪ್ಪೆ
ನಿಮ್ಮ ಹಳದಿಗಟ್ಟಿದ ಹಲ್ಲನ್ನು ಸ್ವಚ್ಛ ಮಾಡಲು ಬಾಳೆ ಹಣ್ಣಿನ ಸಿಪ್ಪೆಯನ್ನು ನಿಮಗೆ ಬಳಸಬಹುದಾಗಿದೆ. ಸಿಪ್ಪೆಯಲ್ಲಿರುವ ವಿಟಮಿನ್‌ಗಳು ಮತ್ತು ಮಿನರಲ್‌ಗಳು ಹಲ್ಲಿನ ಹಳದಿ ಬಣ್ಣವನ್ನು ಹೋಗಲಾಡಿಸಲು ನೆರವಾಗುತ್ತದೆ. ನಿಯಮತವಾಗಿ ಬಾಳೆಹಣ್ಣಿನ ಸಿಪ್ಪೆಯನ್ನು ಬಳಸುವುದರಿಂದ ಹಲ್ಲಿನ ಹಳದಿ ಬಣ್ಣ ಮಾಯವಾಗುತ್ತದೆ.

ಮೂಲಂಗಿ ಎಲೆ

ಮೂಲಂಗಿ ಎಲೆ ಕೂಡ ಹಲ್ಲಿನ ಆರೋಗ್ಯಕ್ಕೆ ಸಹಕಾರಿ. ಮೂಲಂಗಿ ಎಲೆ ಜಗಿಯುವುದು ಅಥವಾ ಅದರ ಜ್ಯೂಸ್ ಮಾಡಿ ಕುಡಿಯುವುದು ಹಲ್ಲಿಗೆ ಒಳ್ಳೆಯದು. ಎಲೆಯಲ್ಲಿರುವ ಕ್ಯಾಲ್ಶಿಯಂ ಮತ್ತು ವಿಟಮಿನ್ ಸಿ ಅಂಶವು ಕೆಟ್ಟ ಬ್ಯಾಕ್ಟೀರಿಯಾದೊಂದಿಗೆ ಹೋರಾಡಿ ಹಲ್ಲುಗಳನ್ನು ಸಂರಕ್ಷಿಸುತ್ತವೆ. ಅದರಲ್ಲೂ ಎಲೆಯನ್ನು ಹಸಿ ಈರುಳ್ಳಿ ಜೊತೆ ಸಣ್ಣಗೆ ಹೆಚ್ಚಿ ಉಪ್ಪು, ನಿಂಬೆರಸ ಬೆರೆಸಿ ಪಚಡಿ ಮಾಡಿ ತಿನ್ನಬಹುದು. ಇದು ಹಲ್ಲುಗಳ ಜೊತೆಗೆ ಹೊಟ್ಟೆಗೂ ಇದು ಒಳ್ಳೆಯದು.

ಕ್ಯಾಲ್ಸಿಯಂ ಆಹಾರ
ನಮ್ಮ ಹಲ್ಲುಗಳ ದೃಢತೆ ಮತ್ತು ಆರೋಗ್ಯವು ಸಂತುಲಿತ ಆಹಾರ ಮತ್ತು ಪೋಷಕಾಂಶಗಳ ನಿರಂತರ ಪೂರೈಕೆಯನ್ನು ಅವಲಂಬಿಸಿರುತ್ತದೆ. ಅದರಲ್ಲಿ ಕ್ಯಾಲ್ಸಿಯಂ ಜಾಸ್ತಿಯಿರುವ ಆಹಾರ ಅಂದರೆ ಕಾಳು, ಹಣ್ಣು ತರಕಾರಿಗಳು, ಕೋಳಿ ಮೊಟ್ಟೆ ಮತ್ತು ಡೈರಿ ಉತ್ಪನ್ನಳು ಇತ್ಯಾದಿ ಕ್ಯಾಲ್ಸಿಯಂ ಅತ್ಯಧಿಕವಿರುವ ಉತ್ಪನ್ನಗಳನ್ನು ಹೆಚ್ಚು ಹೆಚ್ಚು ಸೇವಿಸಬೇಕು.

Also read: ಬೇಸಿಗೆಯಲ್ಲಿ ಆರೋಗ್ಯದಿಂದಿರಲು ಸೇವಿಸಬೇಕಾದ 5 ಆಹಾರಗಳು ಇಲ್ಲಿವೆ ನೋಡಿ