ಚಿಕ್ಕದಾದ ಅಡುಗೆಮನೆ ಇದ್ದರೂ ಚೊಕ್ಕವಾಗಿ ಇಟ್ಟುಕೊಳ್ಳುವುದು ಹೇಗೆ??ಇಲ್ಲಿದೆ ಟಿಪ್ಸ್…

0
1529

Kannada News | kannada Useful Tips

ಅಂದದ ಅಡುಗೆಮನೆ, ಶುಭ್ರ, ಸ್ಪಚ್ಛ ಅಡುಗೆ ಮನೆ ಪ್ರತಿ ಮಹಿಳೆಯ ಕನಸು. ಬಗೆಬಗೆಯ, ರುಚಿಕರ ಖಾದ್ಯಗಳನ್ನು ತಯಾರಿಸುವ ಅಡುಗೆ ಮನೆ ಚಿಕ್ಕದಾದರೂ ಚೊಕ್ಕವಾಗಿರಬೇಕು. ಆಹಾರ ತಯಾರಿಸುವ ಕ್ರಮ, ಪರಿಕರಗಳನ್ನು ಬಳಸುವ ವಿಧಾನ, ಮುಖ್ಯವಾಗಿ ವ್ಯವಸ್ಥೆಯಲ್ಲಿ ಸ್ಪಚ್ಛತೆ ಪಾಲಿಸಿದರೆ ಮನೆಯ ವಾತಾವರಣ ಹಿತಕರ ಅನಿಸುವುದಲ್ಲದೆ ಕುಟುಂಬದ ಸದಸ್ಯರ ಆರೋಗ್ಯದ ದೃಷ್ಟಿಯಿಂದಲೂ ಈ ಕ್ರಮ ಪಾಲಿಸುವುದು ಒಳ್ಳೆಯದು ಕೂಡ.

ಆಧುನಿಕತೆಯ ಥಳುಕು, ನಾಜೂಕು ಮನೆಯ ಮೊಗಸಾಲೆ ಅಷ್ಟೇ ಅಲ್ಲ ನಮ್ಮ ಅಡುಗೆಮನೆಗೂ ವಿಸ್ತರಿಸಿದೆ. ಇದರ ಪರಿಣಾಮವೇ ಇಂದು ಜನಪ್ರಿಯವಾಗಿರುವ `ಮಾಡ್ರನ್ ಕಿಚನ್’ ಕಲ್ಪನೆ. ಅಡುಗೆ ಮನೆ ಸುಸಜ್ಜಿತವಾಗಿರಬೇಕು, ಆಧುನಿಕವಾಗಿರಬೇಕೆಂಬ ಅಂಗನೆಯರ ಕನಸು ನವನವೀನ ವಿನ್ಯಾಸದ ಅಡುಗೆಕೋಣೆಗಳ ಸಕಾರಾದಿಂದ ಈಡೇರಿದೆ.ಅಡುಗೆಮನೆ ವ್ಯವಸ್ಥಿತವಾಗಿರಬೇಕೆಂದರೆ ಆಹಾರ ಪದಾರ್ಥಗಳು, ಬೇಳೆಕಾಳುಗಳನ್ನು ಸಂಗ್ರಹಿಸಿಡುವ ಡಬ್ಬಗಳು, ಅಡುಗೆಗೆ ಬಳಸುವ ಪಾತ್ರೆ ಪರಿಕರಗಳನ್ನು ಜೋಡಿಸಿಟ್ಟುಕೊಳ್ಳಲು `ಶೆಲ್ಫ್’ಗಳಿರಬೇಕು. ಆಧುನಿಕ ಮನೆಗಳಲ್ಲ ಈ ಸಾಮಗ್ರಿಗಳನ್ನು ಪ್ರತ್ಯೇಕವಾಗಿ ಜೋಡಿಸಲು ಕಪಾಟುಗಳಿರುತ್ತವೆ (ಕಿಚನ್ ಕ್ಯಾಬಿನೆಟ್). ಅಡುಗೆಮನೆಯ ಅಗತ್ಯತೆಯಲ್ಲಿ ಪ್ರಮುಖವಾದ ಶೆಲ್ಫ್‍ಗಳಲ್ಲಿ ಏನಿರಬೇಕು? ಅವುಗಳ ನಿರ್ವಹಣೆ ಹೇಗೆ….ಇಲ್ಲಿದೆ ಕೆಲ ಟಿಪ್ಸ್…

tips for good health1

  • ಅಡುಗೆಗೆ ಬಳಸುವ ಆಹಾರ ಪದಾರ್ಥಗಳು, ಪಾತ್ರೆಪಗಡಿಗಳನ್ನು ತಕ್ಷಣಕ್ಕೆ ಸಿಗುವಂತೆ ಜೋಡಿಸಿಡಿ.
  • ಒಗ್ಗರಣೆಗೆ ಬಳಸುವ ಪದಾರ್ಥಗಳು, ಬೇಳೆಕಾಳುಗಳು, ಸಕ್ಕರೆ, ಕಾಫಿ/ಟೀ ಪೌಡರ್ ಸಾಧ್ಯವಾದಷ್ಟು ಒಂದೇ ಸಾಲಿನಲ್ಲಿ ಇರಲಿ.
  • ಅಗತ್ಯವಾದ ಡಬ್ಬಿಗಳು ಮಾತ್ರ ಅಡುಗೆ ಕೋಣೆಯಲ್ಲಿ ಸ್ಥಾನ ಪಡೆದಿರಲಿ ಡಬ್ಬಿಗಳ ಆಕಾರ, ಗಾತ್ರ, ವಿನ್ಯಾಸ ಗಮನಿಸಿ ಅದಕ್ಕೆ ಹೊಂದುವಂತೆ ಅವುಗಳನ್ನು ಸಾಲುಸಾಲಾಗಿ ಜೋಡಿಸಿದಲ್ಲಿ ಅಡುಗೆ ಮನೆಯ ಅಂದ ಹೆಚ್ಚುವುದು. ಮನೆಯ ಸ್ವಚ್ಛತೆ, ಶುಭ್ರತೆ ನಿಮ್ಮ ಅಭಿರುಚಿ, ಹವ್ಯಾಸ ತೋರುವುದರಿಂದ ವ್ಯವಸ್ಥೆಯಲ್ಲಿ ಕ್ರಮಬದ್ಧತೆ ಇರಲಿ.
  • ನಿಮ್ಮ ಅಡುಗೆ ಮನೆ ಆಧುನಿಕವಾಗಿದ್ದು ಆಹಾರ ಪದಾರ್ಥಗಳನ್ನು ಸಂಗ್ರಹಿಸಿಲು, ಪರಿಕರಗಳನ್ನು ಇಡಲು ಪ್ರತ್ಯೇಕ ಕಪಾಟುಗಳ(ಕಬೋರ್ಡ್) ವ್ಯವಸ್ಥೆ ಇದ್ದಲ್ಲಿ ಬಳಕೆಗೆ ಅನುಗುಣವಾಗಿ ಹೊಂದಿಸಿಡಿ.
  • ಪ್ಲಾಸಿಕ್ ವಸ್ತುಗಳು ಜನಪ್ರಿಯವಾಗುವ ಮುನ್ನ ಆಹಾರ ಪದಾರ್ಥಗಳನ್ನು ಸಂಗ್ರಹಿಸಲು ಸ್ಟೀಲ್ ಡಬ್ಬಗಳನ್ನು ಬಳಸಲಾಗುತ್ತಿತ್ತು. ಆದರೆ ಇಂದು ಸ್ಟೀಲ್ ಉತ್ಪನ್ನಗಳ ಜಾಗವನ್ನು ಪ್ಲಾಸ್ಟಿಕ್ ವಸ್ತುಗಳು ಆಕ್ರಮಿಸಿಕೊಂಡಿವೆ. ಮಾರುಕಟ್ಟೆಯಲ್ಲಿ ಇಂದು ತರಹೇವಾರಿ ವಿನ್ಯಾಸದ ಪ್ಲಾಸ್ಟಿಕ್ ಡಬ್ಬಿಗಳು ಬಳಕೆದಾರರನ್ನು ಆಕರ್ಷಿಸಿ ಅಡುಗೆ ಕೋಣೆ ಪ್ರವೇಶಿಸಿವೆ. ಅಡುಗೆ ಕೋಣೆಯಲ್ಲಿ ಪ್ಲಾಸ್ಟಿಕ್ ವಸ್ತುಗಳ ಬಳಕಗೆ ಮಿತಿ ಇರಲಿ.
  • ಆಹಾರ ಪದಾರ್ಥಗಳನ್ನು ಸಂಗ್ರಹಿಸಿ, ಶೇಖರಿಸಿಡುವ ಉತ್ಪನ್ನಗಳ ಗುಣಮಟ್ಟ ಹಾಗೂ ಆರೋಗ್ಯದ ಮೇಲೆ ಅವುಗಳಿಂದಾಗುವ ಪರಿಣಾಮಗಳ ಬಗ್ಗೆ ಅರಿತು ನಂತರ ಖರೀದಿಸುವುದು ಒಳ್ಳೆಯದು.

  • ಸಾಧ್ಯವಾದಷ್ಟು ಪಿಂಗಾಣಿ ವಸ್ತುಗಳನ್ನು ಸ್ಟೋರೆಜ್ ವಿಧಾನಗಳಿಗೆ ಬಳಸದಿರಿ. ರಬ್ಬರ್ ಗ್ಯಾಸ್ಕೆಟ್‍ಗಳಿದ್ದು ಕೂಡ ಒಮ್ಮೊಮ್ಮೆ ಪಿಂಗಾಣಿ ಮುಚ್ಚಳಗಳು ಗಟ್ಟಿಯಾಗಿ ಕೂರುವುದಿಲ್ಲ.
  • ಚೌಕಾಕಾರದ ಇಲ್ಲವೇ ಆಯುತಾಕಾರ ವಿನ್ಯಾಸದ ಡಬ್ಬಗಳು ಹೆಚ್ಚು ಜಾಗ ಆಕ್ರಮಿಸಿಕೊಂಡರು, ಆಹಾರ ಪದಾರ್ಥಗಳನ್ನು ಸಂಗ್ರಹಿಸಿಡಲು ಗುಂಡಕಾರದ ವಿನ್ಯಾಸದ ವಸ್ತುಗಳಿಗಿಂತ ಇವುಗಳು ಹೆಚ್ಚು ಉತ್ತಮ ಅನುಕೂಲಕ್ಕೆ ತಕ್ಕಂತೆ ಕಿಚನ್ ಶೆಲ್ಫ್‍ನಲ್ಲಿ ವಸ್ತುಗಳನ್ನು ಸಂಗ್ರಹಿಸಿಡಿ.
  • ಕಿಚನ್ ಶೆಲ್ಫ್‍ನ ಶುಚಿತ್ವಕ್ಕೂ ಗಮನಕೊಡಿ. ಆಹಾರ ಸಾಮಗ್ರಿಗಳು ಖಾಲಿಯಾಗುತ್ತಿದ್ದಂತೆ ಡಬ್ಬಗಳನ್ನು ತೊಳೆದು ಒರೆಸಿಟ್ಟಲ್ಲಿ ಡಬ್ಬಗಳ ಮೇಲೆ ಕಲೆಗಳು ಉಳಿಯಲಾರವು.
  • ಅಡುಗೆಗೆ ಬೇಕಾಗಿರುವ ಪದಾರ್ಥಗಳನ್ನು ಮುಚ್ಚಳಗಟ್ಟಿಯಾಗಿರುವ ಡಬ್ಬಗಳಲ್ಲಿ ಶೇಖರಿಸಿಡಿ. ಡಬ್ಬಗಳ ಮುಚ್ಚಳಗಳು ತೆರೆದಿದ್ದಲ್ಲಿ ಆಹಾರ ಪದಾರ್ಥಗಳು ಕೆಡುವ ಸಾಧ್ಯತೆ ಇರುತ್ತದೆ. ಹಾಗಾಗಿ ಆಹಾರ ಪದಾರ್ಥಗಳನ್ನು ಸಂಗ್ರಹಿಸಿಡುವ ಮುನ್ನ ಡಬ್ಬ ಹಾಗೂ ಮುಚ್ಚಳ ಸರಿ ಇದೆಯೇ ಎಂದು ಖಾತ್ರಿಮಾಡಿಕೊಳ್ಳಿ.ಬಳಸಿದ ನಂತರ ಆಯಾ ಸ್ಥಳಗಳಲ್ಲಿ ಡಬ್ಬಗಳನ್ನು ಇರಿಸಲು ಮರೆಯಬೇಡಿ ಕಿಚನ್ ಶೆಲ್ಫ್‍ಗಳು ಶುಚಿಯಾಗಿ, ಸ್ಪಚ್ಛವಾಗಿರಲು ನಿಯಮಿತ ನಿರ್ವಹಣೆಗೆ ಆದ್ಯತೆ ಕೊಡಿ.

Also Read: ಹೇಗಿದ್ದ ಹೇಗಾದ ಗೊತ್ತಾ ನೈಜೀರಿಯಾದ ಈ `ಚಿನ್ನಾರಿ ಮುತ್ತ`

Watch :