ಇದು ಪರೀಕ್ಷೆಯ ಸಮಯ, ನಿಮ್ಮ ಮಕ್ಕಳಿಗೆ ಈ ಅಂಶಗಳ ಬಗ್ಗೆ ಮನವರಿಕೆ ಮಾಡಿ; ಅವರು ಧೈರ್ಯ ಹಾಗು ಸ್ಪಷ್ಟ ಮನಸ್ಸಿನಿಂದ ಪರೀಕ್ಷೆ ಎದುರಿಸಲು ಸಹಾಯವಾಗುತ್ತೆ!!

0
849

ವಿದ್ಯಾರ್ಥಿಗಳಿಗೆ ಜನವರಿ ಸರಿದು ಫೆಬ್ರವರಿ ಬರುತ್ತಿದ್ದಂತೆ ಏನೋ ಒಂಥರ ಭಯ, ಗಾಬರಿ, ಗೊಂದಲ, ಚಡಪಡಿಕೆ ಶುರುವಾಗಿ ಬಿಡುತ್ತದೆ. ವಿದ್ಯಾರ್ಥಿಗಳಿಗೆ `ನಿಜವಾದ ಅಗ್ನಿ ಪರೀಕ್ಷೆ’ ಆರಂಭವಾಗುವುದು ಹೆಚ್ಚು-ಕಡಿಮೆ ಈ ಫೆಬ್ರವರಿ-ಮಾರ್ಚ್ ತಿಂಗಳುಗಳಲ್ಲಿಯೇ. ವರ್ಷವಿಡೀ ಓದಿದ ಎಲ್ಲ ವಿಷಯಗಳನ್ನು ನೆನಪಿನಲ್ಲಿಟ್ಟುಕೊಂಡು ಗೊಂದಲಕ್ಕೆ ಒಳಗಾಗದೆ ಪ್ರಶ್ನೆಪತ್ರಿಕೆಯಲ್ಲಿ ಕೊಟ್ಟಿರುವ ಪ್ರಶ್ನೆಗಳಿಗೆಲ್ಲಾ ಸರಿಯಾದ ಉತ್ತರವನ್ನು ಬರೆಯುವುದು ವಿದ್ಯಾರ್ಥಿಗಳ ಪಾಲಿಗೆ ಸವಾಲೆ ಆಗಿರುತ್ತದೆ. ವಿದ್ಯಾರ್ಥಿಗಳಲ್ಲಿ ನಾನಾ ರೀತಿಯ ಮನೋಭಾವನೆಯನ್ನು ಹೊಂದಿರುವ ವಿದ್ಯಾರ್ಥಿಗಳಿರುತ್ತಾರೆ. ಉದಾಹರಣೆಗೆ ಒಬ್ಬ ವಿದ್ಯಾರ್ಥಿ ವರ್ಷವಿಡೀ ಓದಿ ಪರೀಕ್ಷೆಗೆಂದು ತಯಾರಿ ಮಾಡಿಕೊಂಡು ಉತ್ಸಾಹದಿಂದ ಇದ್ದರೆ, ಮತ್ತೊಬ್ಬ ವಿದ್ಯಾರ್ಥಿ ಓದದೆಯೇ ವರ್ಷವಿಡೀ ತರಲೆ ಮಾಡಿಕೊಂಡು ಊರೂರು ಅಲೆದಾಡಿ ಪರೀಕ್ಷಾ ಸಮಯದಲ್ಲಿ ಓದಲು ಅಣಿಯಾಗುತ್ತಾನೆ. ಆದರೆ, ಅವರಲ್ಲಿ ಇಬ್ಬರಿಗೂ ಹೊಂದಾಣಿಕೆಯಾಗುವ ವಿಷಯ ಒಂದೇ. ಅದುವೇ ಪರೀಕ್ಷಾ ಭಯ.!

ಸಮಸ್ಯೆಗಳಿಲ್ಲದ ಮನುಷ್ಯ ಇರುವುದೇ ಇಲ್ಲ, ಒಂದಿಲ್ಲಾ ಒಂದು ಸಮಸ್ಯೆಗೆ ಸಿಲುಕಿರುತ್ತಾನೆ. ಸತಿಪತಿ ಕಲಹ ಸಾಲಣಣಣದ ಬಾದೆ. ಪ್ರೀತಿಯಲ್ಲಿ ಮೋಸ ಹೋಗಿದ್ದರೆ, ಇಷ್ಟಪಟ್ಟವರು ದೂರವಾಗಿದ್ದರೆ ಸಾಲದ ಬಾಧೆ, ಬಿಸಿನೆಸ್-ನಲ್ಲಿ ನಷ್ಟ ಇನ್ನು ಯಾವುದೇ ತರಹದ ಸಮಸ್ಯೆಗಳಿದ್ದರೆ ಅತೀ ಶೀಘ್ರದಲ್ಲಿಯೇ ಶಾಶ್ವತ ಪರಿಹಾರವನ್ನು ನೀಡಿ ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳನ್ನು ಕೇವಲ ಐದೇ ದಿನದಲ್ಲಿಯೇ ನೆರವೇರಿಸಿ ಕೊಡುತ್ತಾರೆ ಇವರ ಸಲಹೆ ಹಾಗೂ ಪರಿಹಾರ ಪಡೆದುಕೊಂಡಂತಹ ಲಕ್ಷಾಂತರ ಜನರುಇಂದಿಗೂ ಸಹ ನೆಮ್ಮದಿಯ ಜೀವನ ನಡೆಸುತ್ತಿದ್ದಾರೆ. ಗೂರೂಜಿಯವರನ್ನು

ಇಂದೇ ಸಂಪರ್ಕಿಸಿ ಶ್ರೀ ಶ್ರೀ ಬಿ.ಎಚ್ ಆಚಾರ್ಯರು 9880445522

ಇದು ಯಾವ ವಿದ್ಯಾರ್ಥಿಗಳನ್ನು ಕಾಡದೆ ಬಿಟ್ಟಿಲ್ಲ, ಬಿಡುವುದು ಇಲ್ಲ.! ಕಾರಣ ಇದನ್ನ ಸೃಷ್ಟಿಸಿಕೊಂಡಿರುವುದು ವಿದ್ಯಾರ್ಥಿಗಳೇ. ಚೆನ್ನಾಗಿ ಓದಿದ ವಿದ್ಯಾರ್ಥಿಗೆ ಎಲ್ಲಿ ಕಂಠಪಾಠ ಮಾಡಿದ್ದೆಲ್ಲವೂ ಗಡಿಬಿಡಿಯಲ್ಲಿ ಮರೆತೋಗಿಬಿಡುತ್ತದೋ ಅನ್ನೋ ಭಯವಾದರೆ, ಓದದೆಯೇ ಇರುವ ವಿದ್ಯಾರ್ಥಿಯನ್ನು ಕೇಳುವುದೇ ಬೇಡ, ಅವರಿಗೆ ಮೈ ನಡುಕ ಶುರುವಾಗಿಬಿಟ್ಟಿರುತ್ತದೆ. ಇಂಥ ಅತಂಕದ ಘಳಿಗೆಯನ್ನು ಇಬ್ಬರೂ ಅನುಭವಿಸುತ್ತಾರೆ. ಆದರೆ ಇಲ್ಲಿ ಓದದೆ ಇರುವ ವಿದ್ಯಾರ್ಥಿ ಸ್ವಲ್ಪ ಜಾಸ್ತಿ ಹೆದರಿಕೊಳ್ಳತ್ತಾನೆ. ಆದರೂ ಅವನ ಮೇಲೆ ಅವನಿಗೆ ನಂಬಿಕೆ ಇರುತ್ತದೆ. ನಾನು ಕೊನೆಕ್ಷಣದಲ್ಲಿ ಪರೀಕ್ಷೆಗೆ ತಯಾರಿ ಮಾಡಿಕೊಂಡರೂ ಎಲ್ಲಾ ಪ್ರಶ್ನೆಗಳಿಗೂ ಉತ್ತರ ಬರೆಯುತ್ತೇನೆ ಅನ್ನೋ ವಿಶ್ವಾಸ ಅವನದ್ದಾಗಿರುತ್ತದೆ.

ಅದೊಂದು ಒಳ್ಳೆಯ ಅಭಿಪ್ರಾಯವೇ ಸರಿ. ಯಾಕೆಂದರೆ ನಮ್ಮ ಪಾಸಿಟಿವ್ ಥಿಂಕಿಂಗ್ ನಮ್ಮಲ್ಲಿ ಧೈರ್ಯವನ್ನು ತುಂಬುತ್ತದೆ. ಈ ರೀತಿಯ ಯೋಚನೆ ನಮ್ಮ ಪರೀಕ್ಷಾ ಫಲಿತಾಂಶದ ಮೇಲೂ ಸಕಾರಾತ್ಮಕ ಪರಿಣಾಮ ಬೀರುತ್ತದೆ. ವಿದ್ಯಾರ್ಥಿಗಳೇ ನೆನಪಿರಲಿ ನೀವು ಅಂದುಕೊಂಡಂತೆ ಎಲ್ಲವೂ ಆಗಬೇಕಾದರೆ ಕೆಲವೊಂದು ತಯಾರಿಗಳನ್ನು ಮಾಡಿಕೊಳ್ಳಬೇಕಾಗುತ್ತದೆ. ಅದುವೇ ಪರೀಕ್ಷಾ ತಯಾರಿ. ಅನುಭವ ಭಯವನ್ನು ಹೋಗಲಾಡಿಸುತ್ತದೆ ಅನ್ನೋ ಮಾತಿದೆ. ಈ ಹಿನ್ನೆಲೆಯಲ್ಲಿ ವಿದ್ಯಾರ್ಥಿಗಳು ಅಂತಿಮ ಪರೀಕ್ಷೆಗೂ ಮುನ್ನ ಪ್ರತಿದಿನ ಒಂದು ಪರೀಕ್ಷೆ ಬರೆಯುವುದನ್ನು ರೂಢಿ ಮಾಡಿಕೊಂಡರೆ ಒಳ್ಳೆಯದು. ಅಂತಿಮ ಪರೀಕ್ಷೆ ಬರೆಯುತ್ತಿದ್ದೆನೆ, ಪರೀಕ್ಷಾ ಕೊಠಡಿಯಲ್ಲೇ ಕುಳಿತಿದ್ದೇನೆ ಎಂದು ಭಾವಿಸಿಕೊಂಡು ಬರೆಯಬೇಕು. ಅದಕ್ಕೆಂದೇ ಒಂದು ವೇಳಾಪಟ್ಟಿ ತಯಾರು ಮಾಡಿಕೊಂಡು, ಇಂತಿಂತಹ ದಿನ ಇಂಥ ವಿಷಯಗಳಿಗೆ ಸಂಬಂಧಿಸಿದ ಪರೀಕ್ಷೆ ಬರೆಯುತ್ತೇನೆ ಎಂದು ಗುರುತು ಮಾಡಿಕೊಳ್ಳಬೇಕು. ಹೀಗೆ ಪ್ರತಿದಿನ ಅಭ್ಯಾಸ ಮಾಡಿದರೆ ಅಂತಿಮ ಪರೀಕ್ಷೆಯ ಭಯ ಸ್ವಲ್ಪವಾದರೂ ಕಡಿಮೆಯಾಗಿ ಅಂತಿಮ ಪರೀಕ್ಷೆ ಎದುರಿಸುವ ವಿಶ್ವಾಸ ಬೆಳೆಯುತ್ತದೆ.

ದಕ್ಷಿಣ ಭಾರತದ ಪ್ರಖ್ಯಾತ ದೈವಶಕ್ತಿ ಜ್ಯೋತಿಷ್ಯರು ದೇಶ, ವಿದೇಶ, ರಾಜ್ಯಾದ್ಯಂತ ಅನೇಕ ಜನರ ಸಮಸ್ಯೆಗಳ ಪರಿಹಾರಕ್ಕೆ ಕಾರಣಕರ್ತರಾಗಿ ಆರಾಧ್ಯ ದೈವರೆಂದೇ ಪ್ರಖ್ಯಾತ ಪಡೆದಿರುವ ಶ್ರೀ ಶ್ರೀ ಬಿ.ಎಚ್ ಆಚಾರ್ಯ ಗೂರೊಜಿಯವರು ನಿಮ್ಮ ಸಮಸ್ಯೆಗಳು ಯಾವುದೇ ಇರಲಿ ಎಷ್ಟೇ ಬಲಿಷ್ಟವಾಗಿರಲಿ ಅತೀ ಶೀಘ್ರದಲ್ಲಿಯೇ ಶಾಶ್ವತ ಪರಿಹಾರವನ್ನು ಮಾಡಿ ಕೇವಲ 5 ದಿನದಲ್ಲಿಯೇ ನಿಮ್ಮ ಸಕಲ ಇಷ್ಟಾರ್ಥ ಕಾರ್ಯಗಳನ್ನು ನೆರವೆರಿಸಿಕೊಡುತ್ತಾರೆ.

ಇಂದೇ ಸಂಪರ್ಕಿಸಿ ಶ್ರೀ ಶ್ರೀ ಬಿ.ಎಚ್ ಆಚಾರ್ಯರು 9880445522

ಎಂತಹವರಿಗೇ ಆಗಲಿ ಪರೀಕ್ಷಾ ಕೊಠಡಿಯಲ್ಲಿ ತುಸು ಆತಂಕ ಸಹಜವಾಗಿಯೇ ಆಗುತ್ತದೆ. ಈ ಆತಂಕ ಕೆಲವು ತಪ್ಪುಗಳಿಗೆ ದಾರಿ ಮಾಡಿಕೊಡಬಹುದು. ಪರೀಕ್ಷಾ ಆತಂಕ ನಿವಾರಣೆಗೆ ಸಾಕಷ್ಟು ಉಪಾಯಗಳಿವೆ. ಮೊದಲನೆಯದಾಗಿ ಪ್ರತಿದಿನ ಪರೀಕ್ಷೆಯ ಅನುಭವವನ್ನು ಪಡೆದುಕೊಳ್ಳುವುದು. ಇದಕ್ಕಾಗಿ ವಿದ್ಯಾರ್ಥಿಗಳು ಮಾಡಬೇಕಾದುದು ಇಷ್ಟೇ. ತಮ್ಮ ಕೋಣೆಯ ಮೇಜಿನ ಮುಂದೆ ಕುಳಿತು ಕಣ್ಣು ಮುಚ್ಚಿ ಸುಮಾರು ಐದು ನಿಮಿಷ ದೀರ್ಘ ಉಸಿರಾಟ ಮಾಡಬೇಕು. ಅನಂತರ ತಾವು ಮನೆಯಿಂದ ಹೊರಟು ಪರೀಕ್ಷಾ ಕೇಂದ್ರ ತಲುಪಿ ಕೊಠಡಿ ಪ್ರವೇಶಿಸಿ, ಉತ್ತರ ಬರೆದು ಪರೀಕ್ಷಾ ಕೊಠಡಿಯಿಂದ ಹೊರಗೆ ಬರುವವರೆಗೆ ಪ್ರತಿಹಂತವನ್ನೂ ಮನಸ್ಸಿನಲ್ಲಿಯೇ ಕಲ್ಪಿಸಿಕೊಳ್ಳುತ್ತಾ ಹೋಗಬೇಕು. ಪರೀಕ್ಷೆಯನ್ನು ಉತ್ತಮವಾಗಿ ಮಾಡಿದ್ದೇನೆಂದು ಕಲ್ಪಿಸಿಕೊಳ್ಳುತ್ತಾ ಹೋಗಬೇಕು.

Image result for indian exam

ಹೀಗೆ ಮಾಡುವುದರಿಂದ ಪರೀಕ್ಷಾ ಕೊಠಡಿ ತೀರ ಪರಿಚಿತವಾಗಿರುತ್ತದೆ. ಅಂತಿಮ ಪರೀಕ್ಷೆ ಬರೆಯುವ ದಿನ ಆ ಕೊಠಡಿ ಹೊಸತು, ಪರೀಕ್ಷೆಯ ವಾತಾವರಣ ಹೊಸತು ಎಂದೆಲ್ಲ ಅನಿಸುವುದಿಲ್ಲ. ಭಯ ಸಹ ಕಾಡುವುದಿಲ್ಲ. ನಮ್ಮಲ್ಲಿ ವಿಶ್ವಾಸವೂ ಹೆಚ್ಚುತ್ತದೆ.ಬಹುಮುಖ್ಯವಾಗಿ ನಿತ್ಯ ಕನಿಷ್ಟ ಏಳು ತಾಸು ನಿದ್ದೆ ಅತ್ಯಾವಶ್ಯಕ. ನಿದ್ದೆ ಕಡಿಮೆಯಾದಲ್ಲಿ ಚುರುಕುತನ ಕಡಿಮೆಯಾಗುತ್ತದೆ. ಹಾಗಾಗಿ ನಿದ್ದೆ ಬಿಟ್ಟು ಓದುವುದು ಒಳ್ಳೆಯದಲ್ಲ.ವಿದ್ಯಾರ್ಥಿಗಳಿಗೆ ಪರೀಕ್ಷಾ ಸಮಯದಲ್ಲಿ ಉತ್ತಮ ಆಹಾರ ಸೇವನೆಯೂ ಅತ್ಯಗತ್ಯ.

ವಿದ್ಯಾರ್ಥಿಗಳ ವಾಸಪ್ರದೇಶದಲ್ಲಿ ರೂಢಿಯಾಗಿರುವ ಆಹಾರವನ್ನು ಸೇವಿಸುವುದೇ ಒಳ್ಳೆಯದು. ಆಹಾರ ಪದ್ಧತಿ ಅಲ್ಲಿಯ ವಾತಾವರಣಕ್ಕೆ ಅನುಕೂಲವಾಗಿರುತ್ತದೆ. ಅದೇ ಆಹಾರಪದ್ಧತಿಯನ್ನು ಅನುಸರಿಸುವುದು ಒಳ್ಳೆಯದು. ಅನ್ಯ ಆಹಾರಗಳ ಆಕರ್ಷಣೆ ಹೆಚ್ಚಾದರೂ ಅವನ್ನು ಪರೀಕ್ಷೆ ಮುಗಿಯುವವರೆಗೆ ಮುಂದೂಡುವುದು ಉತ್ತಮ. ಸಾಧ್ಯವಾದಷ್ಟು ಎಣ್ಣೆಯಲ್ಲಿ ಕರಿದ ಪದಾರ್ಥಗಳಿಂದ ದೂರವಿದ್ದರೆ ಆರೋಗ್ಯ ಉತ್ತಮವಾಗಿರುತ್ತದೆ.ದಿನವಿಡೀ ಪುಸ್ತಕ ಹಿಡಿದು ಕುಳಿತರೆ ಮನಸ್ಸಿಗೆ, ದೇಹಕ್ಕೆ ಆಯಾಸವಾಗುವುದು. ದೇಹಕ್ಕೆ ಒಂತಿಷ್ಟು ಕಸರತ್ತು ಅತ್ಯಗತ್ಯ. ನಗರ ಪ್ರದೇಶದ ವಿದ್ಯಾರ್ಥಿಗಳಾದರೆ ಸ್ವಲ್ಪ ಹೊತ್ತಾದರೂ ಸಮೀಪದ ಉದ್ಯಾನವನಕ್ಕೆ ಹೋಗಿ ಅಲ್ಲಿ ಬಿರುನಡಿಗೆ ಮಾಡುವುದು ಒಳ್ಳೆಯದು.

Image result for indian exam

ಇನ್ನೂ ಗ್ರಾಮೀಣ ಪ್ರದೇಶದ ವಿದ್ಯಾರ್ಥಿಗಳಾದರೆ ಹೊಲ-ಗದ್ದೆ -ತೋಟದ ಕಡೆ ಸ್ವಲ್ಪ ಹೊತ್ತು ಸುತ್ತಾಡಿ ಬಂದರೆ ಮನಸ್ಸು ಲವಲವಿಕೆಯಿಂದ ಇರುವುದು. ಹಸಿರು ವಾತಾವರಣ ಮತ್ತು ದೈಹಿಕ ಕಸರತ್ತು ಮನಸ್ಸಿಗೆ ಮುದ ನೀಡುವುದು, ದೇಹಕ್ಕೆ ಓದುತ್ತ ಕೂರಲು ಶಕ್ತಿ ಕೊಡುವುದು.ಪರೀಕ್ಷಾ ಸಮಯ ಹತ್ತಿರ ಬಂದಂತೆ ಮೊಬೈಲ್, ಟಿವಿ, ಕಂಪ್ಯೂಟರ್‍ನಂತಹ ಮನೋರಂಜನಾತ್ಮಕ ವಸ್ತುಗಳಿಂದ ದೂರವಿದ್ದರೆ ಒಳ್ಳೆಯದು. ಇಂತಹ ಮನೋರಂಜನಾ ವಸ್ತುಗಳು ನಿಮ್ಮ ಬುದ್ಧಿಶಕ್ತಿಯ ಮೇಲೆ ದುಷ್ಪರಿಣಾಮ ಬೀರುವ ಸಾಧ್ಯತೆ ಇರುತ್ತದೆ. ಹಾಗಾಗಿ ನಿಮ್ಮ ಗಮನವೇನಿದ್ದರೂ ಪಠ್ಯಪುಸ್ತಕಗಳ ಕಡೆ ಇರಬೇಕು.ವಿದ್ಯಾರ್ಥಿಗಳು ಓದುವ ಕೋಣೆಯನ್ನು ಸ್ವಚ್ಛವಾಗಿ ಮತ್ತು ಪ್ರಶಾಂತವಾಗಿ ಇಟ್ಟುಕೊಳ್ಳಬೇಕು. ಏಕೆಂದರೆ ಪ್ರಶಾಂತವಾಗಿದ್ದ ಕಡೆ ಓದಿದ ಓದು ಹೆಚ್ಚು ಜ್ಞಾಪಕದಲ್ಲಿ ಉಳಿಯುತ್ತದೆ.

ವಾಕ್ ಸಿದ್ದಿ, ಯಂತ್ರಸಿದ್ದಿ, ಮಂತ್ರಸಿದ್ದಿಯಿಂದ ಪ್ರಖ್ಯಾತಿ ಪಡೆದಿರುವ ಭಾರತದ ಏಕೈಕ
ಜ್ಯೋತಿಷ್ಯರು ಶ್ರೀ ಅಷ್ಠ ಲಕ್ಷ್ಮಿ ಉಪಾಸಕರಾದ ಬಿ. ಎಚ್ ಆಚಾರ್ಯ ಗೂರೂಜಿ ಇವರು ನಿಮ್ಮ ಸಮಸ್ಯೆಗಳಾದ ಮದುವೆ ವಿಳಂಬ, ಸತಿಪತಿ ಕಲಹ, ಶತ್ರುಪೀಡೆ, ಬಿಸಿನೆಸ್-ನಲ್ಲಿ ನಷ್ಠ, ಸಾಲದ ಬಾದೆ, ವಶೀಕರಣ, ಮನಃಶಾಂತಿಯ ಕೊರೆತೆ, ಮಾಟಮಂತ್ರದಂತಹ ಯಾವುದೇ ಬಲಿಷ್ಠವಾದ ಸಮಸ್ಯೆಗಳಿದ್ದರೂ ಕೆಲವೇ ದಿನದಲ್ಲಿಯೇ ಶಾಶ್ವತ ಪರಿಹಾರವನ್ನು ಮಾಡಿ ಕೇವಲ 5 ದಿನದಲ್ಲಿಯೇ ನಿಮ್ಮ ಯಾವುದೇ ಕಠಿಣ ಇಷ್ಟಾರ್ಥ ಕಾರ್ಯಗಳಿದ್ದರೂ ನೆರವೇರಿಸಿ ಕೊಡುತ್ತಾರೆ.

ಇಂದೇ ಸಂಪರ್ಕಿಸಿ ಶ್ರೀ ಶ್ರೀ ಬಿ.ಎಚ್ ಆಚಾರ್ಯರು 9880445522

ಈ ರೀತಿಯ ಕೆಲವೊಂದು ಮಾರ್ಪಾಡುಗಳನ್ನು ವಿದ್ಯಾರ್ಥಿಗಳು ಮಾಡಿಕೊಂಡರೆ ಪರೀಕ್ಷೆಯನ್ನು ಧೈರ್ಯವಾಗಿ ಎದುರಿಸಿ ಉತ್ತಮ ಫಲಿತಾಂಶವನ್ನು ಪಡೆಯಬಹುದು.ಪರೀಕ್ಷಾ ಫಲಿತಾಂಶ ಏನೇ ಬರಲಿ ಸ್ವಾಗತಿಸಿ. ಕಾರಣ ನಿಮ್ಮ ಜೀವನವೇ ಈ ಪರೀಕ್ಷೆಯಲ್ಲಿ ಅಡಗಿಲ್ಲ ಎಂಬ ಸತ್ಯ ನಿಮಗೆ ತಿಳಿದಿರಲಿ. ಈ ಒಂದೇ ಪರೀಕ್ಷೆ ವಿದ್ಯಾರ್ಥಿಗಳ ಭವಿಷ್ಯವನ್ನು ನಿರ್ಧರಿಸುವುದಿಲ್ಲ. ಈ ಪರೀಕ್ಷೆ ನಿಮ್ಮ ವಿದ್ಯಾಭ್ಯಾಸವನ್ನು ಬದಲಾಯಿಸಬಹುದು ಅಷ್ಟೇ. ವಿದ್ಯಾರ್ಥಿಗಳಿಗೆ ಜೀವನದಲ್ಲಿ ಸಾಕಷ್ಟು ಒಳ್ಳೆಯ ಅವಕಾಶಗಳಿರುತ್ತವೆ. ಅವುಗಳನ್ನು ಬಳಸಿಕೊಳ್ಳುವುದು ನಿಮ್ಮ ಕೈಯಲ್ಲಿಯೇ ಇದೆ.