ಆಂಡ್ರಾಯಿಡ್ ಫೋನ್ ‘ಸ್ಲೋ’ ಅಥವಾ ’ಹ್ಯಾಂಗ್’ ಆಗುತ್ತಿದೆಯೇ ಹಾಗಾದರೆ ಈ ೧೦ ಟಿಪ್ಸ್ ಫಾಲೋ ಮಾಡಿ

0
3780

ತೋ ಮೊಬೈಲ್ ಸ್ಲೋ ಆಗ್ತಿದೆಯಪ್ಪಾ ಹ್ಯಾಂಗ ಆಗ್ತಿದೆ ಅಂತ ತೆಲೆ ಕೆಡಿಸಿಕೋಬೇಡಿ. ಈ ಸ್ಟೋರಿ ನೋಡಿ….

ಭಾರತದ ಮಾರುಕಟ್ಟೆಯಲ್ಲಿ ಇಂದು ಆಂಡ್ರಾಯ್ಡ್ ಸ್ಮಾರ್ಟ್‌ಫೋನ್‌ಗಳದ್ದೇ ಅಬ್ಬರ. ಅತ್ಯಂತ ಕಡಿಮೆ ಬೆಲೆಗೆ ದೊರಕುವ ಸ್ಮಾರ್ಟ್ ಫೋನು ಗಳನ್ನು ಕೊಳ್ಳದವರು ಯಾರಿದ್ದಾರೆ ಹೇಳಿ. ಸ್ಮಾರ್ಟ್‌‌ಫೋನ್‌ಗಳನ್ನು ಹಿಡಿದಿರುವ ವಿದ್ಯಾರ್ಥಿ‌‌‌‌ಗಳೇ ಹೆಚ್ಚು ಸಂಖ್ಯೆಯಲ್ಲಿ ಕಾಣುತ್ತಿರುತ್ತಾರೆ. ಹಾಗಾಗಿ ಕಡಿಮೆ ಬೆಲೆಯಲ್ಲಿ ಸ್ಮಾರ್ಟ್‌‌ಫೋನ್‌ ಮಾರುಕಟ್ಟೆಗೆ ಬರುತ್ತಲೇ ಇದೆ. ಇಂತಹ ಆಂಡ್ರಾಯಿಡ್ ಫೋನ್ ಬಳಕೆ ಮಾಡುವ ಜನರಿಗೆ ಕಾಡುವ ಸಮಸ್ಯೆ ಏನೆಂದರೆ ಫೋನ್ ‘ಹ್ಯಾಂಗ್” ಆಗುವುದು.

ಸಾಮಾನ್ಯವಾಗಿ ಫೋನ್ ಹ್ಯಾಂಗ ಆದಾಗ ಯಾವುದೇ ಬಟನ್ ಒತ್ತಿದರೂ ಪ್ರಯೋಜನವಾಗುವುದಿಲ್ಲ. ತುರ್ತಾಗಿ ಕರೆ ಮಾಡಬೆಂದಾಗ ಕಾಲ್ ಹೋಗದೆ ಏರೋದು, ಆ ಸಂದರ್ಭದಲ್ಲಿ ಫೋನ್ ಅನ್ನು ಸ್ವಿಚ್ ಆಫ್ ಮಾಡುವುದು ಅಥವಾ ಫೋನ್ ರೀಸ್ಟಾರ್ಟ್ ಮಾಡುವುದು ಈ ರೀತಿಯಾಗಿ ಅನೇಕ ಸಮಸ್ಯೆಗಳು ತಲೆದೋರುತ್ತವೆ.

ಇಂತಹ ಹಲವಾರು ಸಮಸ್ಯೆಗಳಿಗೆ ಇಲ್ಲಿದೆ ಅತ್ಯಂತ ಸುಲಭವಾದ ಪರಿಹಾರ.

1. ಅನವಶ್ಯಕ ವಾದ ಎಲ್ಲ ಆಪ್‌ಗಳನ್ನು ತೆಗೆದುಹಾಕಿ. ಮೆಮೊರಿಯಲ್ಲಿ ಅನವಶ್ಯಕವಾಗಿ ಕುಳಿತುಕೊಳ್ಳುವ ಎಲ್ಲ ಆಪ್‌ಗಳನ್ನು ನಿಷ್ಕ್ರಿಯ ಮಾಡಿ. ಕೆಲವೊಮ್ಮೆ ಬ್ಯಾಗ್ರೌಂಡ್’ ನಲ್ಲಿ ಅಪ್ಲಿಕೇಷನ್ ಗಳು ರನ್ ಆಗುತ್ತಿರುತ್ತವೆ. ಇವುಗಳನ್ನು ಬಹಳ ಸುಲಭವಾಗಿ ‘ಮೂವ್’ ಮಾಡಬಹುದು. ಹೇಗೆಂದರೆ,’ನ್ಯಾವಿಗೇಷನ್ ಸ್ಕ್ರೀನ್’ ಒತ್ತಿದರೆ ಒಂದು ‘ಲಿಸ್ಟ್’ ಬರುತ್ತದೆ. ಅದರಲ್ಲಿರುವ ಎಲ್ಲ ‘ಅಪ್ಲಿಕೇಶನ್'(APP) ‘ಕ್ಲೋಸ್’ ಮಾಡಬೇಕು.

ಮೂಲ: howtogeek.com

2. ಮೊದಲಿಗೆ Clean Master ಎಂಬ ಆಪ್ ಹಾಕಿಕೊಂಡು ನಿಮ್ಮ ಫೋನನ್ನು ಸ್ವಚ್ಛ ಮಾಡಿ. ಡಿವೈಸ್ನಲ್ಲಿರುವ ಟೆಂಪರರಿ ಫೈಲುಗಳು, ಕುಕೀಸ್, ಹಿಸ್ಟರೀ ಎಲ್ಲಾ ಅಳಸಿ ಹೋಗಿ ನಿಮ್ಮ ಫೋನ್ ಹ್ಯಾಂಗ್ ಆಗದೆ ಇರುತ್ತದೆ.

ಮೂಲ: downloadcleanmaster.com

3. ಆಂಡ್ರಾಯ್ಡ್ ಫೋನ್ ನಲ್ಲಿ ಯಾವುದಾದರೂ ಆಪ್ ಅನ್ನು ಕೇವಲ ಗೂಗಲ್ ಪ್ಲೇ ಸ್ಟೋರ್ ನಿಂದ ಮಾತ್ರ ಡೌನ್ ಲೋಡ್ ಮಾಡಿಕೊಂಡು ಇನ್ಸ್ಟಾಲ್ ಮಾಡಿಕೊಳ್ಳಿ.

4. ಪೋನಿನಲ್ಲಿ ಆಂಟಿ ವೈರಸ್ ಇಲ್ಲವೆ ಕ್ಲೀನಿಂಗ್ ಆಪ್ ಇನ್ಸ್ಟಾಲ್ ಮಾಡಿ ಬೇಡದಿರುವ ಆಪ್ಗಳನ್ನು ಡಿಲೀಟ್ ಮಾಡಿಕೊಳ್ಳಿ.

ಮೂಲ: androidauthority.com

5. ಡಿವೈಸ್ ಮೆಮೊರಿ ಫ್ರೀ ಆಗಿ ಇಟ್ಟುಕೊಂಡಿರಿ. ಫೋನಿನ ಇಂಟರ್ನಲ್ ಮೆಮೊರಿ ಕಡಿಮೆಯಿದ್ದರೂ ಡಿವೈಸ್ ಸರಿಯಾಗಿ ಕೆಲಸಮಾಡುವುದಿಲ್ಲ. ಇಂತಹ ಸಮಯದಲ್ಲಿ ಕೆಲವು ಪೈಲುಗಳನ್ನು ಎಸ್ ಡಿ ಕಾರ್ಡ್ಗೆ ವರ್ಗಾಯಿಸಿಕೊಳ್ಳುವುದು ಉತ್ತಮ.

ಮೂಲ: techwelkin.com

6. ಫೋನನ್ನು ವಾರಕ್ಕೆ ಒಮ್ಮೆಯಾದರೂ ರೀಸ್ಟಾರ್ಟ್ ಮಾಡಿ ಇದರಿಂದ ಫೊನ್ ಚೆನ್ನಾಗಿ ಕೆಲಸಮಾಡುತ್ತದೆ. ಅಥವಾ ಫೋನನ್ನು ವಾರಕ್ಕೆ ಒಮ್ಮೆ ಮೆಮೊರಿ ಕಾರ್ಡ್ ಬ್ಯಾಟರಿ ತೆಗೆದು ಮತ್ತೆ ಹಾಕಿ ಆನ್ ಬಳಸಿ.

 

7. ಸಾಧ್ಯವಾದರೆ ಎಲ್ಲ ಬ್ಯಾಕ್‌ಅಪ್ ತೆಗೆದುಕೊಂಡು ಒಂದು ಸಲ ಫೋನನ್ನು ಪೂರ್ತಿಯಾಗಿ ರಿಸೆಟ್ ಮಾಡಿ.

8. ಫೋನ್ ಚಾರ್ಜ್ ಮಾಡಲು ಕಂಪೆನಿ ಕೊಟ್ಟ ಚಾರ್ಜರ್ ಗಳನ್ನೇ ಉಪಯೋಗಿಸಬೇಕು. ಇದರಿಂದ ಫೊನ್ ಸರಿಯಾಗಿ ಕೆಲಸ ಮಾಡುವುದಿಲ್ಲ.

ಮೂಲ:

9. ಅನವಶ್ಕಕವಾದ ಆಪ್ಗಳನ್ನು ಡಿಲೀಟ್ ಮಾಡುವುದರಿಂದ ಮೆಮೊರಿ ಹೆಚ್ಚಾಗಿ ಫೋನಿನ ವೇಗ ಹೆಚ್ಚುತ್ತದೆ.

10. ಬೇಕಾದಾಗ ಮಾತ್ರ ವೈಫೈ, ಬ್ಲೂಟೂತ್, ಜಿಪಿಎಸ್ ಎಲ್ಲ ಬಳಸಿ, ಬೇಡವಾದಾಗ ಅವುಗಳನ್ನು ಆಫ್ ಮಾಡಿ.