ಈ ಟಿಪ್ಸ್ ಗೃಹಿಣಿಯರಿಗಾಗಿ…

0
2521

ಈ ಟಿಪ್ಸ್ ಗೃಹಿಣಿಯರಿಗಾಗಿ…

ಮನೆಯಲ್ಲಿ ಸ್ಥಳದ ಹೊಂದಾಣಿಕೆ ಕೌಶಲ್ಯಪೂರ್ಣವಾದ ಕಾರ್ಯ. ಒಂದು ಕೋಣೆಗೆ ಯಾವ ವಸ್ತುಗಳು ಬೇಕು ಹಾಗೂ ಅವುಗಳನ್ನು ಎಲ್ಲಿ ಇಡಬೇಕು ಮತ್ತು ಎಲ್ಲಿ ಇಡಬಾರದು ಎಂಬುದು ವಸ್ತುಗಳ ಜೋಡಣೆಯಲ್ಲಿ ಪ್ರಮುಖವಾದ ಅಂಶ. ಅದರಲ್ಲೂ ಅಡುಗೆ ಕೋಣೆಯ ವಿಷಯದಲ್ಲಿ ಇದು ಇನ್ನಷ್ಟು ಕಷ್ಟದ ಕೆಲಸ.

ಅಡುಗೆ ಕೋಣೆ ವಿಶಾಲವಾಗಿ ಕಾಣಿಸಬೇಕಾದರೆ ಅಲ್ಲಿ ಕೆಲವು ವಸ್ತುಗಳನ್ನು ಕ್ರಮಬದ್ಧವಾಗಿ ಜೋಡಿಸಬೇಕು. ಈ ನಿಟ್ಟಿನಲ್ಲಿ ಇಲ್ಲಿದೆ ಕೆಲವು ಸಲಹೆಗಳು.

*ಬೆಳ್ಳ ಪಾತ್ರೆಗಳನ್ನು ಕೊಂಚ ಟೂತ್ ಪೇಸ್ಟ್ ಹಚ್ಚಿ ತೊಳೆದರೆ ಪಾತ್ರೆಗಳ ಹೊಳಪು ಹೆಚ್ಚುತ್ತದೆ.

*ಮೆಂತೆ, ಬಟಾಣಿ ಸೇರಿಸಿ ಪರೋಟ ಮಾಡುವಾಗ ಸ್ವಲ್ಪ ಕಡಲೆ ಹಿಟ್ಟನ್ನು ಸೇರಿಸಿ ಕಲಸಿದರೆ ರುಚಿ ಹೆಚ್ಚುವುದು.

*ಮೊಟ್ಟೆ ಬೇಯಿಸುವಾಗ ನೀರಿಗೆ ಸ್ವಲ್ಪ ಉಪ್ಪು ಹಾಕಿದರೆ ಸಿಪ್ಪೆ ತೆಗೆಯಲು ಸಿಲಭವಾಗುತ್ತದೆ.

*ಹಾಲು ಹುಕ್ಕದಂತಿರಲು ಹಾಲು ಕಯಿಸುವಾಗ ಪಾತ್ರೆಯ ಅಂಚಿಗೆ ಸ್ವಲ್ಪ ತುಪ್ಪ ಹಚ್ಚಬೇಕು.

*ಚಾ ಪೌಡರನ್ನು ಕೋಣೆಯಲ್ಲಿ ಸುಟ್ಟರೆ ಸೊಳ್ಳೆಗಳು ಓಡಿ ಹೋಗುತ್ತವೆ.

*ಟೇಬಲ್ ನೈಫ್, ಚಮಚ ಇತ್ಯಾದಿಗಳ ಹಿಡಿಯ ಬಣ್ಣ ಹಳದಿಯಾಗಿದ್ದರೆ, ಟರ್ಪಂಟೈಯ್ನ್ ಹಚ್ಚಿ ತಿಕ್ಕುವುದರಿಂದ ಮರಳಿಬಬಿಳುಪಾಗುತ್ತದೆ.

*ಬಣ್ಣದ ಬಟ್ಟೆಗಳನ್ನು ಬಿಸಿಲಿನಲ್ಲಿ ಒಣಗಿಸುವುದರಿಂದ ಅವುಗಳ ಬಣ್ಣ ಮಾಸುವುದು. ಆದ್ದರಿಂದ ನೆರಳಿನಲ್ಲಿ ಒಣಗಿಸುವುದು ಒಳಿತು.

*ನಿಂಬೆ ರಸದಿಂದ ಚರ್ಮದ ವಸ್ತುಗಳನ್ನು ಒರೆಸುವುದರಿಂದ ಅವು ಚೆನ್ನಾಗಿ ಹೋಳೆಯುವವು.

*ಐಸ್ ಟ್ರೇಯಲ್ಲಿ ನೀರು ಹಾಕಿ ಫ್ರಿಜ್ ನಲ್ಲಿಡುವ ಮುನ್ನ ಟ್ರೇಗೆ ಸ್ವಲ್ಪ ಗ್ಲಿಸರಿನ್ ಸವರಿದರೆ ಐಸ್ ತೆಗೆಯಲು ಮತ್ತು ಫ್ರೀಜರ್ ಸ್ವಚ್ಚಗೊಳಿಸಲು ಸುಲಭವಾಗುವುದು.

*ಮೇಣದ ಬತ್ತಿಯ ವ್ಯಾಕ್ಸ್ ನ್ನು ಬ್ಯಾಗಿನ ಜಿಪ್ಪಿನ ಮೇಲೆ ಉಜ್ಜುವುದರಿಂದ ಜಿಪ್ಪು ತೆಗೆಯಲು ಹಾಗೂ ಹಾಕಲು ಸುಲಭವಾಗುವುದು.

*ಈರುಳ್ಳಿಯನ್ನು ಹಚ್ಚುವ ಮುನ್ನ ಬಿಸಿ ಪಾತ್ರೆಯ ಒಳಗೆ ಒಂದು ನಿಮಿಷ ಇಟ್ಟು ಬಳಿಕ ಹೆಚ್ಚಿ ಎಣ್ಣೆಯಲ್ಲಿ ಅಥವಾ ತುಪ್ಪದಲ್ಲಿ ಹಿರಿದರೆ ಪಕ್ಕನೆ ಹುರಿಯುತ್ತದೆ ಮತ್ತು ಅದು ಎಣ್ಣೆ ಅಥವಾ ತುಪ್ಪವನ್ನು ಹೆಚ್ಚು ಹೀರಿಕೊಳ್ಳುವಿದಿಲ್ಲ.

*ಬಟ್ಟೆಗೆ ಎಣ್ಣೆ, ಟಾರ್, ಗ್ರೀನ್ ಇತ್ಯಾದಿ ತಗುಲಿದ್ದರೆ ಪೆಟ್ರೋಲ್ ಅಥಾವ ಇತರ ಸಾಲ್ವೆಂಟ್ ಗಳಿಂದ ಉಜ್ಜಿದರೆ ಕಲೆ ಮಾಯುವುದು.

*ಬಟ್ಟೆ ಇಸ್ತ್ರಿ  ಮಾಡುವಾಗ ಇಸ್ತ್ರೀ ಪೆಟ್ಟಿಗೆಯ ಅಡಿ ಭಾಗಕ್ಕೆ ಪ್ಯಾರಾಫಿನ್ ಹಚ್ಚಿ ಒರೆಸಿದರೆ ಬಟ್ಟೆಯು ಪೆಟ್ಟಿಗೆಯ ಅಡಿ ಭಾಗಕ್ಕೆ ಮಡತ್ತಿಕೊಳ್ಳುವುದಿಲ್ಲ.

* ಹಸಿ ಕೈಯಿಂದಲೇ ಅನೇಕ ವಸ್ತುಗಳನ್ನು ಮುಟ್ಟುವ ಅಭ್ಯಾಸ ಕೆಲವರಿಗಿರುತ್ತದೆ. ಕೈ ನೀಟಾಗಿ ಒರೆಸಿಕೊಂಡು ಮುಂದಿನ ಕೆಲಸಕ್ಕೆ ಅಣಿಯಾದರೆ, ಉಪ್ಪಿನಕಾಯಿಯಂಥ ವಸ್ತು ಕೆಡುವುದು, ವಿದ್ಯುತ್ ಶಾಕ್ ಹೊಡೆಯದಿರುವುದನ್ನು ತಪ್ಪಿಸಬಹುದು. ಅದಕ್ಕೊಂದು ಒಣ ಬಟ್ಟೆ ಇಟ್ಟುಕೊಳ್ಳಿ. ಸೀರಿಗೆ ಕೈಯೊರೆಸುವುದು ಕೆಟ್ಟಚಾಳಿ.

* ಅಡುಗೆ ಮಾಡಿದ ನಂತರ ಪಾತ್ರೆ ಬಿಸಿಯಾಗಿರುವಾಗ ಮಕ್ಕಳ ಕೈಗೆ ಸಿಗದಂತೆ ಎತ್ತಿಡಿ. ತಿಳಿಯದೇ ಮುಟ್ಟಿದಾಗ ಪುಟ್ಟ ಕೈಗಳು ಸುಟ್ಟುಹೋದಾವು ಎಚ್ಚರ.

* ಹಾಗೆಯೇ, ಚಾಕು, ಫೋರ್ಕ್, ಕತ್ತರಿ ಮುಂತಾದ ಚೂಪಾದ ಸಾಮಗ್ರಿಗಳು ಮಕ್ಕಳ ಕೈಗೆ ಸಿಗದಂತೆ ಎಚ್ಚರವಹಿಸಿ. ಅದರಲ್ಲೂ ಪುಟಾಣಿಗಳ ಲಕ್ಷ್ಯ ಇಂಥ ವಸ್ತುಗಳೆಗೇ ಇರುತ್ತದೆ.

* ತರಕಾರಿ ಸಿಪ್ಪೆ ತೆಗೆಯುವ ಸಾಧನವನ್ನು ಆಗಾಗ ಬದಲಿಸುತ್ತಿರಿ. ಅತ್ಯುತ್ತಮ ಸ್ಟೀಲಿನದು ಆಗಿರದಿದ್ದರೆ ಜಂಗು ಹಿಡಿದಿರುತ್ತದೆ. ಇಂಥವುಗಳನ್ನು ಬಳಸಿದರೆ ಆರೋಗ್ಯದ ಮೇಲೆ ವ್ಯತಿರಿಕ್ತ ಪರಿಣಾಮ ಬೀರಬಹುದು.

* ದೋಸೆ ಮಾಡುವ ನಾನ್ ಸ್ಟಿಕ್ ತವಾ, ಚಪಾತಿ ಮಾಡುವ ಹೆಂಚು ಬಹಳ ದಿನಗಳಿಂದ ಉಪಯೋಗಿಸುತ್ತಿದ್ದರೆ ಬದಲಿಸುವುದು ಒಳಿತು. ಅದರಲ್ಲೂ ಕಾದಾಗ ಅಂಚಿನಲ್ಲಿ ಗುಳ್ಳೆಗಳು ಬರುತ್ತಿದ್ದರೆ ಅದನ್ನು ಬದಲಿಸಿ ಹೊಸದನ್ನು ಕೊಳ್ಳುವುದು ನಿಮ್ಮ ಆದ್ಯ ಕರ್ತವ್ಯ.

* ನೆಲದ ಮೇಲೆ ಹಾಲು, ಎಣ್ಣೆಯಂಥ ಪದಾರ್ಥಗಳು ಚೆಲ್ಲಿದಾಗ ಎಲ್ಲ ಕೆಲಸ ಬಿಟ್ಟು ಜಿಡ್ಡು ಹೋಗುವ ಹಾಗೆ ನೆಲ ಒರೆಸಿರಿ. ಹಿರಿಜೀವಗಳು ಅಥವಾ ಪುಟ್ಟ ಮಕ್ಕಳು ಓಡಾಡುವಾಗ ಜಾರಿ ಬಿದ್ದಾರು. ಇಂಥ ಪದಾರ್ಥಗಳು ಚೆಲ್ಲಿದಾಗ ಮೊದಲೇ ಎಚ್ಚರಿಸುವುದು ಜಾಣತನ.

* ಅಡುಗೆ ಮಾಡುವಾಗ ಫೋನ್ ಕಾಲ್ ತೆಗೆದುಕೊಳ್ಳುವುದು ಅಥವಾ ಟಿವಿಯನ್ನು ನೋಡುವುದು ಜಾಣ ಗೃಹಿಣಿಯ ಲಕ್ಷಣವಲ್ಲ. ಮೈಮರೆತಾಗ ಏನಾದರೂ ಸಂಭವಿಸಿದರೆ ಅದಕ್ಕೆ ಕಾರಣ ನೀವೇ ಆಗುತ್ತೀರಿ.

* ಎಲ್ಲಕ್ಕಿಂತ ಮಹತ್ವದ್ದೆಂದರೆ, ರಾತ್ರಿ ಮಲಗುವಾಗ ಅಥವಾ ಮನೆಯಿಂದ ಹೊರಗೆ ಹೋಗುವಾಗ ಗ್ಯಾಸ್ ನಾಬ್ ಅನ್ನು ಆಫ್ ಮಾಡಿ ಹೋಗಿರಿ.