ಟಿಪ್ಪು ಖಡ್ಗ ಖರೀದಿಸಿದ ಮಲ್ಯ ಹಾಳಾದ, ಟಿಪ್ಪುವಿನ ಜಯಂತಿ ಮಾಡಲು ಹೊರಟಿರುವ ಸಿದ್ದರಾಮಯ್ಯನವರಿಗೂ ಅದೇ ಗತಿ: ಭವಿಷ್ಯ ನುಡಿದ ಸಂಸದ ಪ್ರತಾಪ್ ಸಿಂಹ!!

0
450

ಕರ್ನಾಟಕ ರಾಜಕಾರಣಕ್ಕೆ ಟಿಪ್ಪು ಕೊಡುಗೇ ಏನು ಎಂದ್ರೆ, ಏನು ತಿಳಿಯದು. ಆದ್ರೆ ರಾಜಕೀಯ ಪಕ್ಷಗಳು ಈ ಹೆಸರನ್ನು ಬಳಸಿಕೊಂಡು ರಾಜಕೀಯ ಮಾಡಲು ಮುಂದಾಗಿದೆ. ಕಾಂಗ್ರೆಸ್​ ಸರ್ಕಾರ ಟಿಪ್ಪು ಜಯಂತಿ ಪರ ಭಾಷಣಗಳನ್ನು ಮಾಡಿದ್ರೆ, ಕೇಸರಿ ಪಾಳಯ ಸರ್ಕಾರದ ವಿರುದ್ಧ ಧ್ವನಿ ಎತ್ತುತ್ತಿದೆ. ಈ ವಾದ ವಿವಾದ ಇಂದು ನಿನ್ನೆಯದು ಅಲ್ಲವೇ ಅಲ್ಲ. ಯಾವುದೇ ಸರ್ಕಾರವಿದ್ದರೂ, ಇಂತಹ ಪ್ರಸಂಗಗಳು ನಡೆಯುವುದು ಸಾಮಾನ್ಯ.


ಟಿಪ್ಪುವಿನ ನೈಜ ಸ್ವರೂಪ ಕಾರ್ಯಕ್ರಮದಲ್ಲಿ ಮಾತನಾಡಿದ, ಲೋಕಸಭಾ ಸದಸ್ಯ ಪ್ರತಾಪ ಸಿಂಹಾ ಸರ್ಕಾರದ ನಡೆಯ ವಿರುದ್ಧ ವಾಗ್ದಾರಳಿ ನಡೆಸಿದ್ರು. ಅಲ್ಲದೆ ಟಿಪ್ಪು ಕುರಿತಾದ ಧಾರವಾಹಿ ಮಾಡಲು ಹೋಗಿ ಸಂಜಯ್​ ಖಾನ್​​ ಸೋತರು, ಟಿಪ್ಪುವಿನ ಖರೀಧಿಸಿದ ಮೇಲೆಯೇ ಉದ್ಯಮಿ ವಿಜಯ್ ಮಲ್ಯರ ತಲೆಯ ಮೇಲಿದ್ದ ಶನಿ ಹೆಗಲ ಮೇಲೆರಿದ್ದು, ಹೀಗೇ ಕರ್ನಾಟಕ ಸರ್ಕಾರ ಸಹ ಟಿಪ್ಪು ಜಯಂತಿ ಮಾಡಲು ಮುಂದಾಗಿ ಅಧಿಕಾರ ಕಳೆದುಕೊಳ್ಳುವುದು ಗ್ಯಾರಂಟಿ ಎಂದು ತಿಳಿಸಿದ್ದಾರೆ.


ಮೈಸೂರು ಹುಲಿ ಟಿಪ್ಪು ಸುಲ್ತಾನ್ ಅವರನ್ನು ಕ್ರೂರಿ ನರಹಂತಕ, ದರಿದ್ರ ಮತಾಂಧ, ಅತ್ಯಾಚಾರಿ ಎಂದು ಕೇಂದ್ರ ಸಚಿನ ಅನಂತ್​ ಕುಮಾರ್​ ಹೆಗ್ಡೆ ವಾಗ್ದಾಳಿ ನಡೆಸಿದ್ದಾರೆ. ಅಲ್ಲದೆ ಟಿಪ್ಪು ಜಯಂತಿ ಕಾರ್ಯಕ್ರಮದ ಆಮಂತ್ರಣ ಪತ್ರಿಕೆಯಲ್ಲಿ ತನ್ನ ಹೆಸರು ಸೇರಿಸಬಾರದು ಎಂದು ತಿಳಿಸಿದ್ದರು. ಇದರು ರಾಜ್ಯದಲ್ಲಿ ಭಾರಿ ವಿವಾದ ಸೃಷ್ಠಿಸಿತ್ತು.


ಟಿಪ್ಪು1789ರಲ್ಲಿ ಮೈಸೂರು ಸಂಸ್ಥಾನದ ರಾಜ ಹಾಗೂ ಭಾರತದಲ್ಲಿ ಬ್ರಿಟೀಷ್ ಸಾಮ್ರಾಜ್ಯಶಾಹಿಯ ವಿರುದ್ಧ ಆಗಿನ ಕಾಲದ ಪ್ರಮುಖ ಹೋರಾಟಗಾರರಲ್ಲಿ ಒಬ್ಬ. ಈ ಹೋರಾಟದ ಪರಿಣಾಮವಾಗಿ ಟೀಪುವಿಗೆ ಶೇರ್-ಎ-ಮೈಸೂರ್ (ಮೈಸೂರ ಹುಲಿ) ಎಂಬ ಬಿರುದು ಉಂಟು. ಕರ್ನಾಟಕ ಸರಕಾರ 2015ನೇ ಇಸವಿಯ ನವೆಂಬರ್ 10ರಂದು ಟಿಪ್ಪು ಸುಲ್ತಾನನ ಜಯಂತಿಯನ್ನು ಆಚರಿಸಿತು. ಈ ಸರಕಾರೀ ಕಾರ್ಯಕ್ರಮವನ್ನು ನಡೆಸಲು ಪ್ರತಿ ಜಿಲ್ಲೆಗೆ ಹಣ ಕಟ್ಟಲಾಯಿತು.