ಟಿಪ್ಪು ಜಯಂತಿ ಹಿನ್ನೆಲೆಯಲ್ಲಿ ರಾಜ್ಯದಲ್ಲಿ ಅನೇಕ ಸಂಘಗಳಿಂದ ಭಾರಿ ಹೋರಾಟ!! ಅಭಿವೃದ್ಧಿ ನಡೆಸುವ ಬದಲು, ನಿಜಕ್ಕೂ ಟಿಪ್ಪು ಜಯಂತಿ ಆಚರಣೆಯ ಅವಶ್ಯಕತೆ ಇತ್ತ??

0
459

ಟಿಪ್ಪು ಹಿಂದೂ ಧರ್ಮ ವಿರೋಧಿ , ಇಸ್ಲಾಂ ಬಿಟ್ಟರೆ ಅವನಿಗೆ ಇತರೆ ಧರ್ಮಗಳು ಆಗುತ್ತಿರಲಿಲ್ಲ ಹಾಗೂ ಅವನು ಮಡಿಕೇರಿ , ಮಂಗಳೂರು ಮತ್ತು ದೇಶದ ಇನ್ನು ಹಲವು ಕಡೆಗಳಲ್ಲಿ ಹಿಂದೂಗಳ ಹತ್ಯೆ ಮಾಡಿದ್ದನೆಂಬುದು ಹಲವರ ವಾದ.

ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಕರ್ನಾಟಕ ಸರ್ಕಾರ ಇಂದು ಟಿಪ್ಪು ಜಯಂತಿಯ ಆಚರಣೆ ಮಾಡುತ್ತಿದೆ ಸರ್ಕಾರದ ಈ ನಿರ್ಣಯವನ್ನು ರಾಜ್ಯದ ಜನರು , ವಿವಿಧ ಹಿಂದೂ ಪರ ಸಂಘಟನೆಗಳು , ಕನ್ನಡ ಸಂಘಟನೆಗಳು ಹಾಗೂ ಪ್ರತಿಪಕ್ಷ ಬಿಜೆಪಿ ಮೊದಲಿನಿಂದಲೂ ತೀವ್ರವಾಗಿ ವಿರೋಧಿಸುತ್ತಿದೆ, ಸರ್ವ ಧರ್ಮ ಸಹಬಾಳ್ವೆ ಸಾರಿದ ಸಂತ ಶಿಶುನಾಳ ಶರೀಫ ಹಾಗು ಮಾಜಿ ರಾಷ್ಟ್ರಪತಿ ಎಪಿಜೆ ಅಬ್ದುಲ್ ಕಲಾಂರವರಂತಹ ನಾಯಕರ ಜಯಂತಿ ಆಚರಿಸೋಣ, ಆದರೆ ಟಿಪ್ಪು ಜಯಂತಿ ಆಚರಿಸೋದು ಬೇಡ ಎಂದು ಸರ್ಕಾರಕ್ಕೆ ಕಿವಿಮಾತನ್ನು ಹೇಳಿದ್ದವು. ಆದರೆ ಯಾರ ಮಾತಿಗೂ ಕಿವಿಗೊಡದೆ ತೀವ್ರ ವಿರೋಧದ ನಡುವೆಯೂ ಸರ್ಕಾರ ಟಿಪ್ಪು ಜಯಂತಿ ಆಚರಿಸುತ್ತಿರುವುದು ಕರ್ನಾಟಕದ ಕೆಲವು ಭಾಗದ ಜನರನ್ನು ರೊಚ್ಚಿಗೇಳುವಂತೆ ಮಾಡಿದೆ.

ಸರಕಾರದ ಆದೇಶದಂತೆ ಜಿಲ್ಲಾಡಳಿತದ ವತಿಯಿಂದ ಉಡುಪಿ ಜಿಲ್ಲೆ ಮಣಿಪಾಲನ ಜಿಲ್ಲಾಧಿಕಾರಿಗಳ ಕಚೇರಿ ಆವರಣದಲ್ಲಿ ಇಂದು ನಡೆಯಲಿರುವ ಟಿಪ್ಪು ಜಯಂತಿ ಕಾರ್ಯಕ್ರಮವನ್ನು ವಿರೋಧಿಸಿ ಬಿಜೆಪಿ ಮುತ್ತಿಗೆ ಹಾಕಲು ನಿರ್ಧರಿಸಿದೆ. ಬೆಳಗ್ಗೆ ೧೦ ಗಂಟೆಗೆ ಕಡಿಯಾಳಿ ಬಿಜೆಪಿ ಕಚೇರಿಯಲ್ಲಿ ಕಾರ್ಯಕರ್ತರೆಲ್ಲ ಸೇರಿ ಮಣಿಪಾಲಕ್ಕೆ ತೆರಳಲಿದ್ದೇವೆ ಎಂದು ಬಿಜೆಪಿ ಉಡುಪಿ ಜಿಲ್ಲಾಧ್ಯಕ್ಷ ಮಟ್ಟಾರು ರತ್ನಾಕರ ಹೆಗ್ಡೆ ತಿಳಿಸಿದ್ದಾರೆ. ಟಿಪ್ಪು ಜಯಂತಿ ಆಚರಣಾ ವಿರೋಧಿ ಸಮಿತಿ ಅಧ್ಯಕ್ಷ ಅಭಿಮನ್ಯು ಕುಮಾರ್‌ ಅವರು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಸರಕಾರ ಎಷ್ಟೇ ಬಿಗಿ ಬಂದೋ ಬಸ್ತ್ ಕೈಗೊಂಡರೂ ಟಿಪ್ಪು ಜಯಂತಿ ಆಚರಣೆಗೆ ತೀವ್ರ ಪ್ರತಿರೋಧ ಒಡ್ಡುವುದಾಗಿ ಎಚ್ಚರಿಕೆ ನೀಡಿದರು, ಇವರ ಸಮಿತಿ ನ.೧೦ ರಂದು ಬೆಳಗ್ಗೆ ೬ ರಿಂದ ಸಂಜೆ 6ಗಂಟೆಯವರೆಗೆ ಕೊಡಗು ಬಂದ್‌ಗೆ ಕರೆ ನೀಡಿದೆ.

ಟಿಪ್ಪು ಜಯಂತಿ ಆಚರಿಸಲು ರಾಜ್ಯ ಸರಕಾರ ಮುಂದಾಗುತ್ತಿದ್ದಂತೆ , ಟಿಪ್ಪು ಸುಲ್ತಾನ್‌ನಿಂದ ಕ್ರೈಸ್ತ ಸಮಾಜಕ್ಕೆ ಅನ್ಯಾಯವಾಗಿದೆ ಎಂದು ಉಲ್ಲೇಖೀಸಿರುವ ಸರಕಾರದ ಪ್ರಾಯೋಜಿತ “ಮಂಗಳೂರು ದರ್ಶನ’ ಎಂಬ ಪ್ರತಿಷ್ಠಿತ ಪುಸ್ತಕದ ಲೇಖನವೊಂದು ಈಗ ಚರ್ಚೆಗೆ ವೇದಿಕೆ ಒದಗಿಸಿದೆ. ಇತಿಹಾಸದಲ್ಲಿರುವ ದಾಖಲೆಗಳನ್ನು ಪರಾಮರ್ಶಿಸಿ ಈ ಲೇಖನ ಸಿದ್ಧಪಡಿಸಲಾಗಿದೆ ಎಂದು ಹೇಳಲಾಗಿದೆ. ಲೇಖನದಲ್ಲಿ ಇರುವಂತೆ , ಮಂಗಳೂರಿನ ಕ್ರೈಸ್ತರಲ್ಲಿ, ಕೊಡಗಿನ ಕೊಡವರಲ್ಲಿ ಅಥವಾ ಮಲಬಾರಿನ ನಾಯರುಗಳಲ್ಲಿ ಟಿಪ್ಪುವಿನ ಬಗ್ಗೆ ಇರುವ ನೆನಪುಗಳಲ್ಲಿ ಆತನ ಕ್ರೌರ್ಯ ಅಸಹನೆಗಳಿಗೆ ಇದ್ದ ಸ್ಥಾನ ಆತನ ಉದಾರತೆಗೆ ಇಲ್ಲ.

 

ಇಷ್ಟೆಲ್ಲ ಚರ್ಚೆಗೆ , ವಿವಾದಕ್ಕೆ ಕಾರಣವಾಗಿರೋ ಟಿಪ್ಪು ಜಯಂತಿ ಕಾರ್ಯಕ್ರಮದಲ್ಲಿ ತಾವು ಭಾಗವಹಿಸುವುದಿಲ್ಲ , ತಮ್ಮ ಹೆಸರನ್ನು ಆಮಂತ್ರಣ ಪತ್ರಿಕೆಯಲ್ಲಿ ನಮೂದಿಸಬಾರದು ಎಂದು ಕೇಂದ್ರ ಸಚಿವ ಆನಂತಕುಮಾರ ಹೆಗಡೆ ಹಾಗೂ ಬೆಳಗಾವಿ ಸಂಸದ ಸುರೇಶ ಅಂಗಡಿ ಜಿಲ್ಲಾಡಳಿತಕ್ಕೆ ಪತ್ರ ಬರೆದಿದ್ದರು. ಆದರೆ ಜಿಲ್ಲಾಡಳಿತ ಶಿಷ್ಟಾಚಾರದ ಪ್ರಕಾರ ಇಬ್ಬರ ಹೆಸರನ್ನೂ ಆಮಂತ್ರಣ ಪತ್ರಿಕೆಯಲ್ಲಿ ಅದಾಗಲೇ ಮುದ್ರಿಸಿತ್ತು. ಆದರೆ , ಈಗ ಸರಕಾರದ ನಿರ್ದೇಶನದಂತೆ ಜಿಲ್ಲಾಡಳಿತ ಆಮಂತ್ರಣ ಪತ್ರಿಕೆಯನ್ನು ಮರು ಮುದ್ರಿಸಿ ಇಬ್ಬರ ಹೆಸರನ್ನು ಅವರ ಮನವಿಯ ಮೇರೆಗೆ ತೆಗೆಯಲಾಗಿದೆ.

 ಇಷ್ಟೆಲ್ಲಾ ವಿವಾದದ ನಡುವೆಯೂ ಸರ್ಕಾರ ಟಿಪ್ಪು ಜಯಂತಿ ಆಚರಿಸುವುದು ಎಷ್ಟು ಸೂಕ್ತ ನೀವೇ ಯೋಚಿಸಿ..!!!