ಹಣಕ್ಕಾಗಿ ಪೀಡಿಸುತ್ತಿದ್ದ ಮಗನನ್ನು ಕಟ್ಟಿಹಾಕಿ, ಪೆಟ್ರೋಲ್ ಸುರಿದು ಜೀವಂತವಾಗಿ ಸುಟ್ಟ ತಂದೆ-ತಾಯಿ.!

0
271

ತಂದೆ-ತಾಯಿಗಳಿಗೆ ಮಕ್ಕಳು ಒಳ್ಳೆಯವರಾಗಿದ್ದರೆ ಸಾಕು ಅದೇ ಒಂದು ರೀತಿಯ ನೆಮ್ಮದಿಯ ಜೀವನವಾಗುತ್ತೆ. ಇಲ್ಲದಿದ್ದರೆ ಸಮಾಜದಲ್ಲಿ ಜೀವನ ಪೂರ್ತಿಯಾಗಿ ಕೊರಗುವ ಪರಿಸ್ಥಿತಿ ಮನೆಯವರರಿಗೆ ಬರುತ್ತದೆ. ಅದರಲ್ಲಿ ಕುಡಿತದ ಚಟವು ವ್ಯಕ್ತಿಯನ್ನು ಎಂತಹ ಕೃತ್ಯ ವೇಸಗಲು ಕಾರಣವಾಗುತ್ತೆ. ಕುಡಿಯಲು ಹಣಕ್ಕಾಗಿ ದಿನನಿತ್ಯವೂ ಮನೆಯವರ ಮೇಲೆ ಹಲ್ಲೆ ಮಾಡುವುದು ಕೂಡ ಕಂಡು ಬರುತ್ತದೆ. ಹೀಗೆ ಮಗನೊಬ್ಬ ಕುಡಿದು ಮನೆಯಲ್ಲಿ ಮಾಡುವ ಗಲಾಟೆಗೆ ಬೇಸತ್ತು ಸ್ವತಃ ತಂದೆ-ತಾಯಿಯೇ ಮಗನನ್ನು ಜೀವಂತವಾಗಿ ಸುಟ್ಟಿರುವ ಭೀಕರ ಘಟನೆ ನಡೆದಿದೆ.

Also read: ಹೃತಿಕ್ ರೋಷನ್ ಎಂದರೆ ಪಂಚಪ್ರಾಣ ಎಂದ ಹೆಂಡತಿಯನ್ನು ಕೊಂದು ಆತ್ಮಹತ್ಯೆ ಮಾಡಿಕೊಂಡ ಪತಿ.!

ಮಗನನ್ನೇ ಜೀವಂತವಾಗಿ ಸುಟ್ಟ ತಂದೆ-ತಾಯಿ?

ಹೌದು ತಂದೆ-ತಾಯಿಗಳೇ ಮಗನನ್ನು ಜೀವಂತವಾಗಿ ಸುಟ್ಟಿದ್ದಾರೆ ಎಂದರೆ ಎಂತಹ ಪಾಪಿಗಳು ಅನಿಸುತ್ತೆ ಆದರೆ ಮಗ ಏನು ಮಾಡಿದ ಎನ್ನುವ ಪ್ರಶ್ನೆ ಎಲ್ಲರಲ್ಲಿ ಮೂಡುವುದು ಸಹಜವಾದರೆ. ಕುಡಿತದ ಚಟಕ್ಕೆ ದಾಸನಾಗಿದ್ದ ಮಗ ಪ್ರತಿದಿನ ಹಣಕ್ಕಾಗಿ ತಂದೆ, ತಾಯಿಯನ್ನು ಪೀಡಿಸುತ್ತಿದ್ದ. ಇದರಿಂದ ರೋಸಿ ಹೋದ ತಂದೆ ಕೆ.ಪ್ರಭಾಕರ್, ತಾಯಿ ವಿಮಲಾ ಮಂಗಳವಾರ ರಾತ್ರಿ ಮಗ ಕೆ. ಮಹೇಶ್ ಚಂದ್ರನನ್ನು(42ವರ್ಷ) ಕಟ್ಟಿಹಾಕಿ, ಪೆಟ್ರೋಲ್ ಸುರಿದು ಬೆಂಕಿಹಚ್ಚಿ ಸುಟ್ಟು ಹಾಕಿರುವುದಾಗಿ ವರದಿ ತಿಳಿಸಿದೆ.

ಹೈದರಾಬ್‍ನಿಂದ 200 ಕಿ.ಮೀ.ದೂರದಲ್ಲಿರುವ ವಾರಂಗಲ್ ಗ್ರಾಮೀಣ ಜಿಲ್ಲೆಯ ಮುಸ್ತಾಯಲಪಳ್ಳಿ ಗ್ರಾಮದಲ್ಲಿ ಘಟನೆ ನಡೆದಿದೆ. ಕುಡಿತದ ಚಟ ಹಾಗೂ ಹಣಕ್ಕಾಗಿ ಕಿರುಕುಳ ನೀಡುತ್ತಿದ್ದ ಮಗನಿಂದ ಬೇಸತ್ತ ಕೆ.ಪ್ರಭಾಕರ್ ಹಾಗೂ ವಿಮಲಾ ಅವರು ತಮ್ಮ ಮಗನಾದ ಕೆ.ಮಹೇಶ ಚಂದ್ರ(42)ನನ್ನು ಕಂಬಕ್ಕೆ ಕಟ್ಟಿ ಹಾಕಿ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿ ಜೀವಂತವಾಗಿ ಸುಟ್ಟಿದ್ದಾರೆ. ಇಬ್ಬರು ಮಕ್ಕಳ ತಂದೆಯಾಗಿರುವ ಮಹೇಶ್, ಕುಡಿತದ ಚಟಕ್ಕೆ ಒಳಗಾಗಿದ್ದ, ಯಾವಾಗಲೂ ಕುಡಿದು ಬಂದು ಕಿರುಕುಳ ನೀಡುತ್ತಿದ್ದನು. ಆತನ ಕಿರುಕುಳ ಸಹಿಸಲು ತಂದೆ, ತಾಯಿಗೆ ಸಾಧ್ಯವಾಗಿಲ್ಲ. ಮಹೇಶ್ ಕಾಟ ತಾಳಲಾರದೇ ಪತ್ನಿ ಎರಡು ತಿಂಗಳ ಹಿಂದೆಯೇ ತವರು ಮನೆಗೆ ಹೋಗಿದ್ದಳು.

Also read: ದೆವ್ವದ ವೇಷ ಧರಿಸಿ ಟಿಕ್ ಟಾಕ್ ಮಾಡಲು ಹೋದ ಇವರಿಗೆ ಯಾವ ಗತಿ ಬಂತು ನೋಡಿ!!

ಅಂದಿನಿಂದ ಈತ ತಂದೆ-ತಾಯಿ ಬಳಿಯೇ ಇದ್ದ. ಅಲ್ಲದೆ ಹಣಕ್ಕಾಗಿ ಅವರನ್ನು ಪೀಡಿಸುತ್ತಿದ್ದ, ರಾತ್ರಿ ಕಂಠಪೂರ್ತಿ ಕುಡಿದು ಬಂದು ಹೆತ್ತವರನ್ನು ಹೊಡೆಯಲು ಪ್ರಾರಂಭಿಸಿದನು. ಈ ಹಿಂಸೆಯನ್ನು ಸಹಿಸಲಾಗದೆ ಆತನ ತಂದೆ, ತಂದೆ-ತಾಯಿ ಮಹೇಶ್‍ನನ್ನು ಕಂಬಕ್ಕೆ ಕಟ್ಟಿ ಪೆಟ್ರೋಲ್ ಸುರಿದು ಜೀವಂತವಾಗಿ ಸುಟ್ಟು ಹಾಕಿದ್ದಾರೆ. ವಾರಂಗಲ್ ಕೃಷಿ ಮಾರುಕಟ್ಟೆಯಲ್ಲಿ ಕ್ಲರ್ಕ್ ಕೆಲಸ ಮಾಡುತ್ತಿದ್ದ ಮಹೇಶ್, ತಂದೆ-ತಾಯಿ ಹಚ್ಚಿದ ಬೆಂಕಿಯಿಂದ ಸ್ಥಳದಲ್ಲೇ ಸಾವನ್ನಪ್ಪಿದ್ದಾನೆ. ಘಟನೆ ಕುರಿತು ಮಾಹಿತಿ ತಿಳಿದ ಪೊಲೀಸರು ದಮೆರಾದಿಂದ ಹಳ್ಳಿಗೆ ಧಾವಿಸಿದ್ದು, ದೇಹವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಿದ್ದಾರೆ. ಪ್ರಕರಣ ದಾಖಲಿಸಿಕೊಂಡು ಮಹೇಶ್ ಪೋಷಕರನ್ನು ಬಂಧಿಸಿದ್ದಾರೆ.