ಕರೋನ ಬಗ್ಗೆ ಹೆದರೋದನ್ನು ಈಗಲಾದರೂ ಬಿಡಿ, ಕರೊನದಿಂದ ಹುಣಮುಖರಾದ ಈ 101 ವರ್ಷದ ಅಜ್ಜಿಯ ಮಾತನ್ನು ಕೇಳಿ ಆತಂಕ ಬಿಡಿ!!

0
204

ಕಳೆದ ನಾಲ್ಕು ತಿಂಗಳಿನಿಂದ ಪ್ರಪಂಚದ ಮೂಲೆ ಮೂಲೆಯ ಜನ ಸಾಮನ್ಯರನ್ನು ಬಿಚ್ಚಿ ಬೀಳಿಸಿರುವ ಮಹಾಮಾರಿ ಕೊರೋನಾ ವಿರುದ್ಧ ‘ಶತಾಯುಷಿ’ ವೃದ್ಧರೊಬ್ಬರು ಗುಣಮುಖರಾಗಿ ಇತರೆ ಸೋಂಕಿತರಿಗೆ ಸ್ಪೂರ್ತಿಯಾಗಿದ್ದಾರೆ.

ಏನೂ ಆಗಲ್ಲ ಕಣ್ರಪ್ಪ, ಹುಷಾರಾಗ್ತೀರಾ. ಒಂದಿಷ್ಟುಗಟ್ಟಿಮನಸ್ಸು ಮಾಡ್ಕೊಳ್ಳಿ. ಆಸ್ಪತ್ರೆಯಲ್ಲಿ ಖುಷಿಯಾಗಿ ಇರೋದನ್ನು ಕಲೀರಿಕಾಯಿಲೆ ಯಾವುದಾದರೇನು, ವಯಸ್ಸು ಎಷ್ಟಾದರೇನು ವೈದ್ಯರು ನೀಡುವ ಚಿಕಿತ್ಸೆಗೆ ಔಷಧಿಗೆ ಸ್ಪಂಧಿಸಿದರೆ ಎಂತಹ ಕಾಯಿಲೆಯಿಂದ ಬೇಕಾದರು ಗುಣಮುಖರಾಗಬಹುದು ಎಂದು ತೋರಿಸಿ ಕೊಟ್ಟಿದ್ದಾರೆ. ಇದು ಕೋವಿಡ್ ಅನ್ನು ಯಶಸ್ವಿಯಾಗಿ ಗೆದ್ದು ಬಂದಿರುವ ವೃದ್ಧೆಯ ಮಾತು. ಕೊರೋನಾ ಸೋಂಕಿನ ಭೀತಿಗೆ ಎಳೆ ಪ್ರಾಯದ ಆರೋಗ್ಯವಂತ ಯುವಕ, ಯುವತಿಯರೇ ತಲ್ಲಣಕ್ಕೀಡಾಗುತ್ತಿರುವ ಇಂದಿನ ವಿಷಮ ಪರಿಸ್ಥಿತಿಯಲ್ಲಿ ಕೊರೋನಾ ವಿರುದ್ಧದ ಯುದ್ಧವನ್ನು ಗೆದ್ದು ಮನೆಗೆ ವಾಪಸ್ಸಾಗಿದ್ದಾರೆ.

ತಿರುಪತಿಯ ಶ್ರೀ ವೆಂಕಟೇಶ್ವರ ವೈದ್ಯಕೀಯ ವಿಜ್ಞಾನ ಸಂಸ್ಥೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ 101 ವಯಸ್ಸಿನ ವೃದ್ದೆಯೊಬ್ಬರು ಕೋವಿಡ್-19 ನಿಂದ ಚೇತರಿಸಿಕೊಂಡು, ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ. ಮಹಿಳೆಯ ಮಾನಸಿಕ ಸ್ಥೈರ್ಯವೇ ಕೊರೋನ ವಿರುದ್ಧ ಜಯಿಸಲು ಕಾರಣ ಎಂದು ಆಸ್ಪತ್ರೆಯವರು ಹೇಳಿದ್ದಾರೆ.

ವೃದ್ಧೆ ಪಿ. ಮಂಗಮ್ಮ ಸಾಧಾರಣ ಕೊರೋನ ವೈರಸ್ ಲಕ್ಷಣದೊಂದಿಗೆ ಆಸ್ಪತ್ರೆಗೆ ದಾಖಲಾಗಿದ್ದರು. ಅವರು ಜು.14ರಂದು ಆಸ್ಪತ್ರೆಗೆ ದಾಖಲಾಗುವಾಗ ಕಫ ಎಂದು ಹೇಳಿದ್ದರು. ವೃದ್ದೆಯ ಕುಟುಂಬ ಸದಸ್ಯರಿಗೆ ಕೊರೋನ ಪರೀಕ್ಷೆ ನಡೆಸಲಾಗಿದ್ದು, ಯಾರಿಗೂ ಸೋಂಕು ತಗಲಿರುವುದು ಕಂಡುಬಂದಿಲ್ಲ. ವೃದ್ದೆಯನ್ನು ಆಸ್ಪತ್ರೆಯ ಕೋವಿಡ್ ಕೇರ್‌ನ ಜನರಲ್ ಐಸೊಲೇಶನ್ ವಾರ್ಡ್‌ಗೆ ದಾಖಲಿಸಿಕೊಳ್ಳಲಾಗಿತ್ತು ಎಂದು ಆಸ್ಪತ್ರೆಯ ಅಧೀಕ್ಷಕ ಡಾ. ಆರ್. ರಾಮ್ ಹೇಳಿದರು.

ಮಹಿಳೆಯ ವಯಸ್ಸು ತಿಳಿದುಕೊಂಡ ಬಳಿಕ ಅವರ ಸಹಾಯಕ್ಕೆ ಓರ್ವ ಆರೋಗ್ಯ ಕಾರ್ಯಕರ್ತೆಯನ್ನ್ನು ನೇಮಿಸಿದ್ದೆವು. ಆರೋಗ್ಯ ಕಾರ್ಯಕರ್ತೆ ಮಂಜುಳಾ ಅವರು ಮಂಗಮ್ಮರಲ್ಲದೆ, ಇತರ ಇಬ್ಬರು ರೋಗಿಗಳನ್ನು ನೋಡಿಕೊಳ್ಳಬೇಕಾಗಿತ್ತು. ಆದರೆ ಇದಕ್ಕೆ ಮಂಗಮ್ಮ ಸಂಪೂರ್ಣ ಸಹಕಾರ ನೀಡಿದ್ದು,ಒಂದು ದಿನವೂ ದೂರು ನೀಡಿಲ್ಲ ಎಂದು ರಾಮ್ ಹೇಳಿದರು.

ಇನ್ನು ಶತಕದಂಚಿನ ವೃದ್ಧಾಪ್ಯದಲ್ಲೂ ರೋಗ ನಿರೋಧಕತೆಯನ್ನು ಕಾಪಿಟ್ಟುಕೊಂಡಿದ್ದ ಅಜ್ಜಿಗೆ ಸೋಂಕು ತಗುಲಿದ ನಂತರವೂ ಯಾವುದೇ ರೋಗ ಲಕ್ಷಣಗಳು ಅವರನ್ನು ಬಾಧಿಸಿಲ್ಲದಿರುವುದು ಅಚ್ಚರಿಗೆ ಕಾರಣವಾಗಿದೆ. ಅವರು ಸೇವಿಸುವ ಆಹಾರ ಕ್ರಮ, ಜೀವನ ಶೈಲಿ ಹಾಗೂ ತಣ್ಣನೆಯ ಮನಸ್ಥಿತಿಯೇ ಅವರ ಆರೋಗ್ಯದ ಗುಟ್ಟು ಎಂದು ಅವರ ಕುಟುಂಬಸ್ಥರು ತಿಳಿಸಿದ್ದಾರೆ.

ಕೊರೋನಾ ರೋಗದ ತೀವ್ರತೆಗಿಂತಲೂ ಅದರ ಬಗ್ಗೆ ಭೀತಿಗೊಳಗಾಗಿ ಎಳೆ ಪ್ರಾಯದ ಯುವಕ, ಯುವತಿಯರೇ ಪ್ರಾಣ ಭೀತಿಯಿಂದ ಮಾನಸಿಕ ಸಮಸ್ಯೆಗಳಿಗೆ ತುತ್ತಾಗಿ ಮನೋವೈದ್ಯರನ್ನು ಎಡತಾಕುತ್ತಿದ್ದಾರೆ. ಈ ರೋಗಕ್ಕಿಂತಲೂ ಅದರ ಬಗೆಗಿನ ಅತಿ ಎನ್ನಿಸುವಷ್ಟುಭಯವೇ ಹಲವರನ್ನು ಬಲಿ ಪಡೆಯುತ್ತಿದೆಯೆಂಬ ಅಂಶವನ್ನು ಕೂಡಾ ತಜ್ಞ ವೈದ್ಯರು ಬಹಿರಂಗಪಡಿಸಿದ್ದಾರೆ.

Also read: ಅನೇಕ ಬ್ಯುಸಿನೆಸ್-ಗಳು ಕೋವಿಡ್ ಸಮಯದಲ್ಲಿ ನಷ್ಟ ಅನುಭವಿಸುತ್ತಿದ್ದರೂ, ಜಿಯೋ ಒಡೆಯ ಅಂಬಾನಿ ಈಗ ವಿಶ್ವದ 5ನೇ ದೊಡ್ಡ ಶ್ರೀಮಂತ!!