ತಿರುಪತಿ ವೆಂಕಟನಿಗೂ ಬಿಡದ ಸಂಕಟ..! ವಿಜ್ಞಾನಿಗಳ ಊಹಿಸಿದಂತೆ ಅಲ್ಲಿ ಭೂಕಂಪನವಾಗಲಿದೆಯೇ..?

0
968

ಕಷ್ಟ ಬಂದಾಗ ಥಟ್ಟನೆ ನೆನಪಾಗುವ ದೇವರೆ ತಿರುಪತಿ ತಿಮ್ಮಪ್ಪ.. ಸ್ವತಃ ದೇವರಿಗೆ ಕಂಟಕ.. ಸಂಕಷ್ಟ ಎದುರಾದ್ರೆ ಏನು ಮಾಡಬೇಕು.. ತನ್ನ ಭಕ್ತರಲ್ಲಿ ಈ ಬಗ್ಗೆ ತಿಳಿಸಬೇಕೆ.. ಅಥವಾ ತಾನೇ ಎಲ್ಲವನ್ನೂ ನುಂಗಿಕೊಂಡು ಸುಮ್ಮನೇ ಇರಬೇಕೆ.. ಇದು ಯಾವುದೋ ಪುರಾಣದ ಕಥೆ ಅಲ್ಲವೇ ಅಲ್ಲ.. ವಿಶ್ವ ಪ್ರಸಿದ್ಧ ತಿರುಪತಿ ತಿಮ್ಮಪ್ಪನ ಸಂಕಟ.

ಹೌದು.. ಐಐಟಿ ರೂರ್ಕಿಯ ಅಧ್ಯಯನ ತಂಡ ಇತ್ತೀಚಿಗೆ ಬಿಡುಗಡೆ ಗೊಳಿಸಿದ ವರದಿಯಲ್ಲಿ ಭಯಾನಕ ಸತ್ಯವೊಂದು ಬಹಿರಂಗವಾಗಿದೆ. ಅದೇನಂದ್ರೆ ತಿಮ್ಮಪ್ಪನ ದೇಗುಲ ಭೂಕಂಪ ವಲಯದಲ್ಲಿದೆ. ಇನ್ನು ಈ ತಂಡದ ಅಂದಾಜಿನ ಪ್ರಕಾರ ಪಾಲಾರ್ ಮತ್ತು ತರಂಗಂಬಾಡಿಗಳ ಕೆಳಗೆ ಟೆಕ್ಟಾನಿಕ್ ಪದರಗಳು ಒದಕ್ಕೊಂದು ಘರ್ಷಣೆಗೀಡಾಗುವ ಸಾಧ್ಯತೆ ಇದ್ದು, ಇದರಿಂದ ಭೂಕಂಪನ ಸಂಭವಿಸಬಹುದು ಎಂದು ವಿಜ್ಞಾನಿಗಳ ಊಹಿಸಿದ್ದಾರೆ.

ಇನ್ನು ದಕ್ಷಿಣ ಭಾರತದಲ್ಲಿ ಸುಮಾರು 6.5 ತೀವ್ರತೆಯಲ್ಲಿ ಭೂಕಂಪ ಆಗಬಹುದೆಂದು ಈ ತಂಡ ತಿಳಸಿದೆ. ಒಂದು ವೇಳೆ ಭೂಕಂಪನ ತಿರುಮಲದಲ್ಲಿ ಆಗಿದ್ದೇ ಆದಲ್ಲಿ, ಹೇಳುವ ಹಾನಿ ಅಷ್ಟಿಷ್ಟಲ್ಲ. ಪಾಲಾರ್ ಅಥವಾ ತರಂಗಂಬಾಡಿಯಲ್ಲಿ ಭೂಕಂಪನ ಸಂಭವಿಸಿದ್ರೆ ಸುತ್ತಲಿನ 200 ಕಿ.ಮಿ ವ್ಯಾಪ್ತಿಯಲ್ಲಿ ಹಾನಿ ಆಗಬಹುದು.

ಈ ತಂಡ ಕೇಂದ್ರ ಸರ್ಕಾರಕ್ಕೆ ಭೂಕಂಪನ ಸಂಭವಿಸಬಹುದಾದ ಸ್ಥಳಗಳ ಬಗ್ಗೆ ಮಾಹಿತಿ ನೀಡಿದೆ. ಇನ್ನು ಇದಕ್ಕೆಂದೆ 2018ರಲ್ಲಿ ದಕ್ಷಿಣದಲ್ಲಿ ಭೂಕಂಪ ಎಂಬ ವೆಬ್ ಪೇಜ್ ರೆಡಿಯಾಗುತ್ತಿದೆ. ಇನ್ನು ಇಂತಹ ವರದಿಗಳನ್ನು ಜಲ ಆಯೋಗ ಆಣೆಕಟ್ಟು ನಿರ್ಮಾಣ, ವಿದ್ಯುತ್ ಘಟಕಗಳ ಸ್ಥಾಪನೆಗೆಂದು ಮಾಡಿಕೊಳ್ಳತ್ತದೆ.

ಭಾರತದಲ್ಲಿ ಭೂಕಂಪ: 1993ರಲ್ಲಿ ಮಹಾರಾಷ್ಟ್ರದ ಲಾತೂರ್‍ನಲ್ಲಿ 6.2ರ ತೀವ್ರತೆಯಲ್ಲಿ ಭೂಕಂಪ ಸಂಭವಿಸಿತ್ತು. ಇನ್ನು ಮಧ್ಯ ಪ್ರದೇಶದಲ್ಲಿ (5.8) 1977ರಲ್ಲಿ ಹಾನಿ ಸಂಭವಿಸಿತ್ತು. ಇದರಿಂದ ಮುಂದೆ ಆಗುವ ಅನಾಹುತಗಳನ್ನು ತಡೆಯಲು ಪ್ಲಾನ್ ಮಾಡಿಕೊಳ್ಳಬೇಕಿದೆ.