ತಿರುಪತಿ ತಿಮ್ಮಪ್ಪನ ದಿವ್ಯ ದರ್ಶನ ಶೀಘ್ರದಲ್ಲೇ ರದ್ದು ಯಾಕೆ ಅಂದ್ರೆ ಲಡ್ಡು ಕಾರಣ…!

0
1262

ತಿರುಪತಿ ಅಂದ್ರೆ ನಮ್ಗೆಲ್ಲಾ ಬೇಗ ನೆನಪಿಗೆ ಬರೋದು ತಿಮ್ಮಪ್ಪನ ಪ್ರಸಾದ ಅದು ಲಡ್ಡು. ಆದ್ರೆ ಇದೆ ಲಡ್ಡುವಿನ ಸಲುವಾಗಿ ತಿರುಪತಿಯ ದಿವ್ಯ ದರ್ಶನವನ್ನ ರದ್ದು ಮಾಡಲು ಮುಂದಾಗಿದೆ. ಯಾಕೆ ಅನ್ನೋದು ಇಲ್ಲಿದೆ ನೋಡಿ…

Image result for tirupati temple

ತಿಮ್ಮಪ್ಪನ ದಿವ್ಯ ದರ್ಶನವನ್ನು ಪಡೆಯಲು ಭಕ್ತರು ಕಾಲ್ನಡಿಗೆ ಮೂಲಕ ಬೆಟ್ಟ ಹತ್ತಿಕೊಂಡು ದಿವ್ಯ ದರ್ಶನಕ್ಕೆ ಬರುತ್ತಾರೆ.
ಆದ್ರೆ ಇಂತಹ ಭಕ್ತರಿಗೆ ಟಿಟಿಡಿ ಶಾಕ್ ನೀಡಿದೆ. ಇನ್ನಮುಂದೆ ಭಕ್ತರು ಹೆಚ್ಚಾಗುವ ಸಮಯದಲ್ಲಿ ಅಂದ್ರೆ ರಶ್ ಇರುವ ದಿನಗಳಲ್ಲಿ ದಿವ್ಯ ದರ್ಶನ ರದ್ದು ಮಾಡಲಾಗವುದು ಎಂದು ಟಿಟಿಡಿ ಹೇಳಿದೆ.

Image result for tirupati temple bundi

ಇದಕ್ಕೆ ಕಾರಣ ಲಡ್ಡು ಅಂತೇ ಕಾಲ್ನಡಿಗೆ ಮೂಲಕ ದಿವ್ಯದರ್ಶನಕ್ಕೆ ಬರೋ ಭಕ್ತರಿಗೆ ಎರಡು ಲಡ್ಡು ಉಚಿತವಾಗಿ ವಿತರಿಸಲಾಗ್ತಿದೆ. ಇದ್ರಿಂದ ಟಿಟಿಡಿಗೆ ನಷ್ಟ ಆಗುತ್ತಿದೆಯಂತೆ. ಆದ್ರೆ ತಿಮ್ಮಪ್ಪನ ಹುಂಡಿಗೆ ಪ್ರತಿದಿನ ಕೋಟಿಗಟ್ಟಲೆ ಹಣ ಹರಕೆ ರೂಪದಲ್ಲಿ ಬರುತ್ತದೆ. ಆದ್ರೂ ೨ ಲಡ್ಡು ಉಚಿತವಾಗಿ ಕೊಡಲು ನಷ್ಟವಾಗುತ್ತಿದೆ. ಅನ್ನುತ್ತೆ ಟಿಟಿಡಿ.

Related image

ಜುಲೈ 7 ರಿಂದ ಪ್ರತಿ ಶುಕ್ರವಾರ, ಶನಿವಾರ ಮತ್ತು ಭಾನುವಾರ ಕಾಲ್ನಡಿಗೆಯಲ್ಲಿ ಬರೋ ಭಕ್ತರಿಗೆ ದಿವ್ಯ ದರ್ಶನ ಇರೋದಿಲ್ಲ ಎನ್ನಲಾಗ್ತಿದೆ. ಬದಲಿಗೆ ಸಾಮಾನ್ಯರ ದೊಡ್ಡ ಸಾಲಿನಲ್ಲೇ ಸಾಗಬೇಕಾಗಿದೆ. ಇದರಿಂದ ಬೆಟ್ಟ ಹತ್ತಿ ಬರುವ ಭಕ್ತರಿಗೆ ತುಂಬ ಕಷ್ಟವಾಗಲಿದೆ ಅನ್ನೋದು ಸತ್ಯ.