ತಿಮ್ಮಪ್ಪನ ಚಿನ್ನ 33 ಟನ್

0
3136

ತಿಮ್ಮಪ್ಪನ ಚಿನ್ನ ಬರೋಬ್ಬರಿ 33 ಟನ್ ಇದೆ ಅಂತೇ..!

ತಿರುಪತಿ-ತಿರುಮಲದ ತಿಮ್ಮಪ್ಪನೇ ಭಾರತದಲ್ಲಿ ಅತಿ ಶ್ರೀಮಂತ ದೇವರು. ಆತನ ಬೊಕ್ಕಸದಲ್ಲಿ ಕನಿಷ್ಟ 33 ಟನ್ ಚಿನ್ನಾಭರಣಗಳುಂಟು. 13,000 ಕೋಟಿ ನಗದು ಹಣ ಉಂಟು. ಬ್ಯಾಂಕುಗಳಿಂದ ಬರುವ ಬಡ್ಡಿಯೇ ಕೋಟ್ಯಂತರ ರೂಪಾಯಿ.

೨೦೧೫ ರಲ್ಲಿ ದೇವಸ್ಥಾನವನ್ನು ೨೨.೬ ದಶಲಕ್ಷ ಭಕ್ತಾದಿಗಳು ಭೇಟಿ ನೀಡಿದ್ದು ಹುಂಡಿಗೆ ೮೩೧ ಕೋಟಿ ರೂ ಕಾಣಿಕೆ ಸಲ್ಲಿಸಿದ್ದಾರಂತೆ. ಅಲ್ಲದೆ ೨೦೧೪-೨೦೧೫ ರಲ್ಲಿ ಬ್ಯಾಂಕುಗಳಿಂದ ಬಡ್ಡಿಯ ರೂಪದಲ್ಲೇ ದೇವಸ್ಥಾನ ೬೫೫ ಕೋಟಿ ರೂ ಗಳಿಸಿದೆ. ದೇವಸ್ಥಾನ, ಬ್ಯಾಂಕ್ ಖಾತೆಗಳಲ್ಲಿ ೧೨ ಸಾವಿರ ಕೋಟಿ ರೂ ಮತ್ತು ೩೨ ಟನ್ ಚಿನ್ನಾಭರಣಗಳನ್ನು ಇಟ್ಟಿದೆ.

೩೦೦ ವರ್ಷ ಪೂರೈಸಿದ ‘ತಿರುಪತಿ ಲಡ್ಡು’

ವೆಂಕಟೇಶ್ವರನ ಭಕ್ತಾದಿಗಳಿಗೆಲ್ಲ ತಿರುಪತಿ ಲಡ್ಡು ಬಲು ಅಚ್ಚುಮೆಚ್ಚು. ರಿಯಾಯ್ತಿ ದರದಲ್ಲಿ ಎರಡೇ ಲಡ್ಡು ಸಿಕ್ಕಲು ಸಾಧ್ಯ. ಅದಕ್ಕೆ 20 ರೂ. 25 ರೂ.ಗೆ ಒಂದರಂತೆ ಬೇಕಾದಷ್ಟು ಲಡ್ಡು ಕೊಳ್ಳಬಹುದು. ಅಂದ ಹಾಗೆ ಈ ಲಡ್ಡುಗಳಿಗೆ ಈಗ 300 ವರ್ಷ ತುಂಬಿತು. 1715 ಆಗಸ್ಟ್ 2ರಂದು ಮೊದಲಬಾರಿಗೆ ಭಕ್ತರಿಗೆ ಲಡ್ಡು ಪ್ರಸಾದ ಕೊಡುಗೆ ಆರಂಭವಾಯ್ತು. ಅದರ ಗಾತ್ರ ಆಗ ಇನ್ನೂ ದೊಡ್ಡದಾಗಿತ್ತು. 2014ರಲ್ಲಿ ತಿಮ್ಮಪ್ಪನ ದರ್ಶನ ಪಡೆದವರ ಸಂಖ್ಯೆ 2 ಕೋಟಿ 50 ಲಕ್ಷ. 9 ಕೋಟಿಗಿಂತ ಹೆಚ್ಚು ಲಡ್ಡು ವಿತರಣೆ ಆಗಿದೆ. ಪ್ರಸಾದದ ಮಾರಾಟ ದೇವಸ್ಥಾನಕ್ಕೆ ಒಳ್ಳೆಯ ಆದಾಯ ತಂದುಕೊಡುತ್ತಿದೆಯಂತೆ. ೨೦೧೪-೨೦೧೫ರಲ್ಲಿ ಈ ಪ್ರಸಾದ ಬಜೆಟ್ ೨೪೦೧ಕೋಟಿ ರೂ.