ಸಂಗೀತದ ಮೂಲಕ ಜಾತ್ಯತೀತತೆ ಮತ್ತು ಸಾಮಾಜಿಕ ನ್ಯಾಯ ಒದಗಿಸುತ್ತಿರುವ ಟಿ.ಎಂ. ಕೃಷ್ಣರವರ ಬಗ್ಗೆ ಓದಿ, ನಿಮಗೂ ಜೇವನದಲ್ಲಿ ಏನಾದರೂ ಒಳ್ಳೇದು ಮಾಡಬೇಕು ಅನ್ನಿಸುತ್ತದೆ..

0
516

Kannada News | Karnataka Achiecers

ಟಿ.ಎಂ.ಕೃಷ್ಣ… ಒಬ್ಬ ಸಾಧಾರಣ ವ್ಯಕ್ತಿಯಲ್ಲ. ಸಂಗೀತದ ಯುವ ಪ್ರತಿಭಾವಂತ ಗಾಯಕ ಹಾಗೂ ಬಂಡಾಯ ಮನೋಭಾವದ ಚಿಂತಕ.

ಟಿ.ಎಂ ಕೃಷ್ಣ ಎಂಬ ಅಭಿಜಾತ, ಅಪೂರ್ವ, ವಿಶಿಷ್ಟ ಹಾಗೂ ವಿಭಿನ್ನ ಗಾಯಕ ಸಂಗೀತವನ್ನು ತಪಸ್ಸಿನಂತೆ ಉಪಾಸನೆ ಮಾಡುತ್ತ. ಅದರಲ್ಲೇ ಅಲೌಕಿಕ ಆನಂದಾನುಭೂತಿಯನ್ನು ತಾನೂ ಪೂರ್ಣ ಪ್ರಮಾಣದಲ್ಲಿ ಪಡೆಯುತ್ತ, ತನ್ನ ಗಾಯನವನ್ನು ಆಲಿಸುವವರಿಗೂ ಅಂತಹದೇ ಅನುಭವ ಉಂಟಾಗುವಂತೆ ಮಾಡಲು ವಿಶೇಷವಾಗಿ ಪರಿಶ್ರಮಿಸುವವರು, ಇದಕ್ಕಾಗಿ ಹೊಸ ಸಾಧ್ಯಾತೆಗಳನ್ನು ಹುಟ್ಟುಹಾಕುತ್ತಿರುವವರು. ಈ ಯಾನದಲ್ಲಿ ಅವರು ಸಫಲರಾಗುತ್ತ ಬರುತ್ತಿರುವ ಓರ್ವ ಸರಳ, ಸಹಜ ಕಲಾವಿದ.

ಕರ್ನಾಟಕ ಸಂಗೀತವು ನಿಂತ ನೀರಲ್ಲ ಅಥವಾ ಅದು ಯಾರೊಬ್ಬರ, ಯಾವೊಂದು ಸಮುದಾಯದ ಸ್ವತ್ತಲ್ಲ ಎಂದು ಬಲವಾಗಿ ನಂಬಿದವರು ಟಿ.ಎಂ.ಕೃಷ್ಣ. ಸೃಜನಾತ್ಮಕ ಕಲೆಗೆ ಹೆಸರಾಗಿರುವ ಕೃಷ್ಣ ಅವರು ಸಾಮಾಜಿಕ ವಿಷಯಗಳ ಕುರಿತ ಚರ್ಚೆ ಮತ್ತು ಬರವಣಿಗೆಯಲ್ಲಿ ತೊಡಗಿದ್ದಾರೆ. ಚೆನ್ನೈನ ಸಂಪ್ರದಾಯಸ್ಥ ಬ್ರಾಹ್ಮಣ ಕುಟುಂಬದಲ್ಲಿ 1976ರಲ್ಲಿ ಜನಿಸಿದರು. ತಮ್ಮ 6ನೇ ವಯಸ್ಸಿನಿಂದಲೇ ಕರ್ನಾಟಕ ಸಂಗೀತವನ್ನು ಅಭ್ಯಾಸ ಮಾಡಿದರು. ಆರ್ಥಶಾಸ್ತ್ರದಲ್ಲಿ ಪದವಿ ಪಡೆದರು. ಸಂಗೀತಕ್ಕೆ ತಮ್ಮ ಆದ್ಯತೆ ನೀಡಿದ್ರು. ಕೇವಲ ಸಂಗೀತವನ್ನು ಆರಿಸಿಕೊಳ್ಳುವುದಕ್ಕಷ್ಟೇ ಇವರು ಸೀಮಿತವಾಗಲಿಲ್ಲ. ಸಂಗೀತದ ಮೂಲಕ ಇವರ ಹೋರಾಟ ಗಮನಾರ್ಹ.

ಇವರು ‘ದಿ ಹಿಂದೂ’ ಪತ್ರಿಕೆಯಲ್ಲಿ ನಿರಂತರವಾಗಿ ಲೇಖನಗಳನ್ನು ಬರೆಯುತ್ತಾ, ಸಂಪ್ರದಾಯ ಮತ್ತು ಶಾಸ್ತ್ರೀಯ ನೆಪದಲ್ಲಿ ತನ್ನ ಸುತ್ತಾ ಗೋಡೆ ಕಟ್ಟಿಕೊಂಡಿದ್ದ ಕರ್ನಾಟಕ ಸಂಗೀತದ ಗೋಡೆಗಳನ್ನು ಕೆಡವಿದವರು. ತಮ್ಮ ಪ್ರಯೋಗಶೀಲತೆಯಿಂದಾಗಿ ತಮಿಳುನಾಡಿನ ಮಡಿವಂತರ ವಿರೋಧವನ್ನು ಕಟ್ಟಿಕೊಂಡಿರುವ ಅವರು, ಟೀಕೆ ಮತ್ತು ವಿಮರ್ಶೆಗಿಂತ ಪ್ರಯೋಗಶೀಲತೆಯಲ್ಲಿ ನಂಬಿಕೆಯುಳ್ಳವರಾಗಿದ್ದಾರೆ.

ಟಿ.ಎಂ. ಕೃಷ್ಣ ರವರು ಬರೆದಿರುವ ‘ಸದರನ್ ಮ್ಯೂಸಿಕ್’ ಎನ್ನುವ ಕೃತಿ ಸಂಗೀತಾಸಕ್ತರು ಓದಲೇ ಬೇಕಾದ ಕೃತಿ. ಈ ಕೃತಿಯ ಕೆಲವು ಆಯ್ದ ಲೇಖನಗಳನ್ನು ಟಿ.ಎಸ್. ವೇಣುಗೋಪಾಲ್ ಮತ್ತು ಶೈಲಜಾ ರವರು ” ಸಹ ಸ್ಪಂದನ” ಎಂಬ ಹೆಸರಿನಲ್ಲಿ ರಾಗ ಮಾಲಾ ಪುಸ್ತಕ ಮಾಲಿಕೆಯಡಿ ಕನ್ನಡಕ್ಕೆ ತಂದಿದ್ದಾರೆ.

ಸಹಸ್ಪಂದನದಲ್ಲಿ ಅವರ ಹಲವು ಪ್ರಮುಖ ಲೇಖನಗಳ ಅನುವಾದವಿದೆ.  ಅವೆಲ್ಲವೂ ಸಂಗೀತಕ್ಕೆ ಸಂಬಂಧಿಸಿದ ಲೇಖನಗಳು ಮಾತ್ರ. ಆದರೆ ಕೃಷ್ಣ ಅವರು ಇತರ ವಿಷಯಗಳ ಬಗ್ಗೆಯೂ ಬರೆದಿದ್ದಾರೆ. 2013ರಲ್ಲಿ ಭಾರತಕ್ಕೆ ನರೇಂದ್ರ ಮೋದಿ ಮತ್ತು ರಾಹುಲ್ ಗಾಂಧಿಗಿಂತ ಉತ್ತಮ ಪ್ರಧಾನಿ ಬೇಕು ಎಂದು ಬರೆದಿದ್ದರು. ಕೃಷ್ಣ ಅವರು ಸ್ವತಃ ಪತ್ರಿಕೋದ್ಯಮಿಯಲ್ಲ ಹಾಗೂ ರಾಜಕೀಯ ಚಿಂತಕರೂ ಅಲ್ಲ ಹಾಗಿದ್ದಾಗ್ಯೂ ಇಂತಹ ಒಂದು ಅಭಿಪ್ರಾಯವನ್ನು ಮುಂದಿಡುವುದು ಅವರಿಗೆ ಸಾಧ್ಯವಾಗಿತ್ತು.

ಕೃಷ್ಣಾರಿಗೆ ಪ್ರಶಸ್ತಿಗಳ ಸರಮಾಲೆಯೇ ಹರಿದು ಬಂದಿದೆ. ರಾಷ್ಟ್ರೀಯ ಭಾವೈಕ್ಯತೆಗೆ 2015-16ನೇ ಸಾಲಿನ ಇಂದಿರಾ ಗಾಂಧಿ ಪ್ರಶಸ್ತಿ ಲಭಿಸಿದೆ. ಸಂಸ್ಕೃತಿಯಲ್ಲಿ ಸಾಮಾಜಿಕ ಅಂತರ್ಗತೆಗೆ ಕೆಲಸ ಮಾಡಿದ್ದಕ್ಕಾಗಿ ಮ್ಯಾಗ್ಸೆಸೆ ಪ್ರಶಸ್ತಿ ಗಳಿಸಿದ್ದಾರೆ.

Also Read: ದಾವಣಗೆರೆಯ ಸಿಇಓ ಅಶ್ವತಿ ಅವರ ಈ ಕಾರ್ಯವನ್ನು ಕಂಡರೆ ಒಬ್ಬ ಅಧಿಕಾರಿ ಮನಸ್ಸು ಮಾಡಿದರೆ ಇಂತಹ ಬದಲಾವಣೆ ಮಾಡೋಕ್ಕೆ ಸಾಧ್ಯ ಅಂತ ಗೊತ್ತಾಗುತ್ತೆ..!