‘ಅಮ್ಮ’ ಬಗ್ಗೆ ಈ ಎಂಟು ವಿಚಾರಗಳು ನಿಮ್ಗೆ ಗೊತ್ತಿರೋದಕ್ಕೆ ಸಾಧ್ಯಾನೇ ಇಲ್ಲ..

0
1050

ಜಯಲಲಿತಾ ಎಂಬ ಹೆಸರು ಹೇಗೆ ಬಂತು ಗೊತ್ತಾ..?

ಜಯಲಲಿತಾ ಅವರು ಚಿಕ್ಕ ವಯಸ್ಸಿನಲ್ಲಿ ಎರಡು ಮನೆಗಳಲ್ಲಿ ಇದ್ದರಂತೆ. ಒಂದರ ಹೆಸರು ಜಯ ವಿಲಾಸ್, ಇನ್ನೊಂದರ ಹೆಸರು ಲಲಿತಾ ವಿಲಾಸ್.. ಈ ಎರಡು ಹೆಸರನ್ನು ಸೇರಿಸಿ ಕೋಮಲವಲ್ಲಿಗೆ ಜಯಲಲಿತಾ ಎಂದು ಮರುನಾಮಕರಣ ಮಾಡಲಾಯಿತಂತೆ.

ನೃತ್ಯ ಪ್ರವೀಣೆ ಜಯ…

ಮೂರನೇ ವಯಸ್ಸಿನಲ್ಲೇ ಜಯಲಲಿತಾ ಭರತನಾಟ್ಯದ ಶಿಕ್ಷಣ ಪಡೆದರು. ನಂತರ ಮೋಹಿನಿಯಾಟ್ಟಂ, ಕಥಕ್ ನೃತ್ಯದಲ್ಲೂ ಪಟ್ಟು ಸಾಧಿಸಿದರು.

A ಸರ್ಟಿಫಿಕೇಟ್ ಸಿನಿಮಾ ನಟಿ ಜಯ

ವೆನ್ನಿರ ಅದಯ್ ಎಂಬ ತಮಿಳು ಚಿತ್ರದಲ್ಲಿ ಜಯಲಲಿತಾ ಲೀಡ್ ರೋಲ್ನಲ್ಲಿ ನಟಿಸಿದ್ದರು. ಆದರೆ, ಈ ಸಿನಿಮಾಗೆ A ಸರ್ಟಿಫಿಕೆಟ್ ಸಿಕ್ಕ ಕಾರಣ ಆಗ ಜಯಲಲಿತಾಗೆ ವೆನ್ನಿರ ಅದಯ್ ಸಿನಿಮಾ ನೋಡಲಾಗಲಿಲ್ಲ. ಕಾರಣ ಆಗ ಜಯಲಲಿತಾ ವಯಸ್ಸು ಕೇವಲ 15.

ಸ್ಲೀವ್ ಲೆಸ್ ಜಾಕೆಟ್ ಹುಡುಗಿ ಜಯ…

ತಾಯಿ ಸಂಧ್ಯಾ ಒತ್ತಾಯಕ್ಕೆ ಕಟ್ಟುಬಿದ್ದು ಜಯಲಲಿತಾ ಸಿನಿಮಾ ರಂಗಕ್ಕೆ ಬಂದರು. ಚಿನ್ನದ ಗೊಂಬೆ ಕನ್ನಡ ಚಿತ್ರದಲ್ಲಿ ನಾಯಕ ನಟಿಯಾಗಿ ಚಿತ್ರರಂಗಕ್ಕೆ ಪಾದಾರ್ಪಣೆಯಾದ ನಂತರ ಹಲವು ತಮಿಳು ಚಿತ್ರಗಳಲ್ಲಿ ಅಭಿನಯಸಿದರು ತದನಂತರ ಇಜ್ಜತ್ ಎಂಬ ಹಿಂದಿ ಸಿನಿಮಾದಲ್ಲಿ ಧರ್ಮೇಂದ್ರ ಜೊತೆ ನಾಯಕಿಯಾಗಿ ನಟಿಸಿದರು. ತಮಿಳು ಸಿನಿಮಾದ ಹಾಡೊಂದರಲ್ಲಿ ಸ್ಲೀವ್ ಲೆಸ್ ಜಾಕೆಟ್ ಧರಿಸಿ, ಜಲಪಾತದಲ್ಲಿ ಮಿಂದೆದ್ದ ಮೊದಲ ನಟಿ ಎಂಬ ದಾಖಲೆ ಬರೆದರು.

ಅತಿ ಹೆಚ್ಚು ಸಂಭಾವನೆ ಪಡೆದ ನಟಿ ಜಯ…

ಚಿತ್ರರಂಗದಲ್ಲಿ ಅತಿ ಹೆಚ್ಚು ಬೇಡಿಕೆಯ ನಟಿಯಾಗಿ ಹಾಗೂ ದೇಶದಲ್ಲಿಯೇ ಅತ್ಯಂತ ಹೆಚ್ಚು ಸಂಭಾವನೆ ಪಡೆಯುತ್ತಿದ್ದ ನಟಿ ಎಂಬ ಗೌರವಕ್ಕೆ ಪಾತ್ರರಾದರು ಜಯಲಲಿತಾ ಒಟ್ಟಾರೆ 140ಕ್ಕೂ ಹೆಚ್ಚು ಚಿತ್ರಗಳಲ್ಲಿ ಅಭಿನಯಿಸಿದ್ದು, ಈ ಪೈಕಿ ಅವರು ಅಭಿನಯಿಸಿದ್ದ 120ಕ್ಕೂ ಹೆಚ್ಚು ಚಿತ್ರಗಳು ಹಿಟ್ ಆಗಿದ್ದವು.

ಲವ್ ಅಫೇರ್ ಇತ್ತು…

1981ರಲ್ಲಿ ಚಿತ್ರರಂಗದಲ್ಲಿ ಬೇಡಿಕೆ ಕುಸಿದಿದ್ದರ ಜೊತೆಗೆ ಗೃಹಸ್ಥ ಶೋಭನ್ ಬಾಬು ಅವರೊಂದಿಗಿನ ಲವ್ ಅಫೇರ್ ಮುರಿದುಬಿದ್ದ ಕಾರಣ ಜಯಲಲಿತಾ ಕುಗ್ಗಿ ಹೋಗಿದ್ದರು. ಒಮ್ಮೆ ಆತ್ಮಹತ್ಯೆಗೂ ಪ್ರಯತ್ನಿಸಿದ್ದರಂತೆ ಜಯಲಲಿತಾ. ಈ ವೇಳೆ ಎಂಟ್ರಿ ಕೊಟ್ಟ ಎಂಜಿಆರ್ ಜಯಲಲಿತಾರನ್ನು ರಾಜಕೀಯ ರಂಗಕ್ಕೆ ಕರೆದೊಯ್ದರು.

ಲೇಖಕಿ ಜಯ…

ಇಂಗ್ಲೀಷ್ ಕಾದಂಬರಿಗಳನ್ನು ಹೆಚ್ಚಾಗಿ ಓದುತ್ತಿದ್ದರು ಜಯಲಲಿತಾ. ಎಲ್ಲೇ ಶೂಟಿಂಗ್-ಗೆ ಹೋದರೂ ಕೈಯಲ್ಲಿ ಕಾದಂಬರಿಯೊಂದು ಕಡ್ಡಾಯವಾಗಿ ಇರುತ್ತಿತ್ತು. ರಾಜಕೀಯಕ್ಕೆ ಬಂದ ಮೇಲೂ ಕಾದಂಬರಿ ಓದುವ ಹವ್ಯಾಸ ಮುಂದುವರೆಸಿದ್ದರು. ತಮಿಳು ಭಾಷೆಯ ಮೇಲೆ ಹಿಡಿತ ಹೊಂದಿದ್ದ ಜಯಲಲಿತಾ ಥಾಯ್ ಎಂಬ ಹೆಸರಲ್ಲಿ ತಮಿಳು ಪತ್ರಿಕೆಗಳಿಗೆ ಲೇಖನಗಳನ್ನು ಬರೆಯುತ್ತಿದ್ದರು. ಒಂದು ಕಾದಂಬರಿ ಕೂಡ ಬರೆದಿದ್ದಾರಂತೆ.

ಉತ್ತಮ ಭಾಷಣಗಾತಿ ಜಯ..

ಭಾಷೆಯ ಬಗ್ಗೆ ಹಿಡಿತ ಹೊಂದಿದ್ದ ಜಯ ಉತ್ತಮ ಭಾಷಣಗಾತಿ ಕೂಡ. ಎಐಎಡಿಎಂಕೆಯಿಂದ ರಾಜ್ಯಸಭೆಗೆ ಆಯ್ಕೆಯಾದ ಜಯಾ, ಸಂಸತ್ನಲ್ಲಿ ಮಾಡಿದ ನಿರರ್ಗಳ ಭಾಷಣಕ್ಕೆ ಅಂದಿನ ಪ್ರಧಾನಿ ಇಂದಿರಾ ಗಾಂಧಿ ತಲೆದೂಗಿದ್ದರು.