ತಮಿಳುನಾಡಿಗೆ ಮೇಕೆದಾಟು ಯೋಜನೆಗೆ ಕಲ್ಲು ಹಾಕಿದ್ದು ಸಾಕಾಗದೆ ಈಗ ಕೆ.ಸಿ ವ್ಯಾಲಿ ಯೋಜನೆಯ ಮೇಲೂ ವಿವಾದ ಸೃಷ್ಟಿಸಲು ದೃಷ್ಟಿ ನೆಟ್ಟಿದೆ!!

0
273

ಕರ್ನಾಟಕ ಮತ್ತು ತಮಿಳುನಾಡಿನ ನಡುವೆ ಬಹು ದಿನಗಳಿಂದ ಜಲ ವಿವಾದಗಳು ನಡೆಯುತ್ತಾನೆ ಇವೆ. ಈ ಸಂಬಂಧ ಸುಪ್ರಿಂ ಕೋರ್ಟ್ ಹಲವು ಆದೇಶ ಹೊರಡಿಸಿದರು ಸುಮ್ಮನಿರದ ತಮಿಳುನಾಡು. ಸದಾ ಒಂದಿಲ್ಲದೊಂದು ತಗಾದೆ ತಗಿಯುತ್ತಲೇ ಇದೆ. ಅದರಂತೆ ಈಗ ಮತ್ತೊಂದು ಕಿರಿಕ್ ತೆಗೆದು ತನ್ನ ಹಳೇ ಚಾಳಿ ಮುಂದುವರಿಸಿದ್ದು ಕೆ.ಸಿ ವ್ಯಾಲಿ ಜೊತೆಗೆ ಕೋಲಾರದ ಮಾಲೂರು ಬಳಿ ನಿರ್ಮಿಸುತ್ತಿರುವ ಮಾರ್ಕೇಂಡೇಯ ಜಲಾಶಯಕ್ಕೂ ಹುಲಿ ಹಿಂಡುವ ಕೆಲಸ ಮಾಡಲು ಸಜ್ಜಾಗಿದೆ.

Also read: ಬೆಂಗಳೂರು ಮೆಟ್ರೋ ನಿಲ್ದಾಣದಲ್ಲಿ ಬೆಚ್ಚಿ ಬೀಳುವಂತ ಘಟನೆ; ಪಿಸ್ತೂಲ್ ಹಿಡಿದು ಮೆಟ್ರೋ ನಿಲ್ದಾಣಕ್ಕೆ ಬಂದ ಅನುಮಾನಾಸ್ಪದ ವ್ಯಕ್ತಿ..

ಹೌದು ತಮಿಳುನಾಡು ಸರ್ಕಾರ ಆಂಧ್ರ ಪ್ರದೇಶ, ಪುದುಚೇರಿ ನಡುವೆ ಇರುವ ಪೆನ್ನಾರ್ ಮತ್ತು ಪಾಲಾರ್ ನದಿ ನೀರು ಹಂಚಿಕೆ ವಿಚಾರವಾಗಿ ವಿವಾದವನ್ನು ಶುರು ಮಾಡಿದ್ದು, ಕೆ.ಸಿ ವ್ಯಾಲಿ ಜೊತೆಗೆ ಕೋಲಾರದ ಮಾಲೂರು ಬಳಿ ನಿರ್ಮಿಸುತ್ತಿರುವ ಮಾರ್ಕೇಂಡೇಯ ಜಲಾಶಯಕ್ಕೂ ಅಡ್ಡಗಾಲು ಹಾಕುತ್ತಿದೆ. ಎರಡು ಯೋಜನೆಗೆ ಅವಕಾಶ ನೀಡದಂತೆ ತಮಿಳುನಾಡು ಸುಪ್ರೀಂಕೋರ್ಟ್‌ಗೆ ಮನವಿ ಮಾಡಿ ಪೆನ್ನಾರ್ ನದಿ ಕಣಿವೆಯಲ್ಲಿ ಯಾವುದೇ ಯೋಜನೆಗಳಿಗೆ ಅವಕಾಶ ನೀಡದಂತೆ ಸುಪ್ರೀಂಕೋರ್ಟ್‌ಗೆ ಅಫಿಡವಿಟ್ ಸಲ್ಲಿಸಿದೆ.

ಅಫಿಡವಿಟ್ ನಲ್ಲಿ ಏನಿದೆ?

ಬೆಂಗಳೂರು ಕಾವೇರಿ ನದಿ ಕಣಿವೆ ವ್ಯಾಪ್ತಿಯಲ್ಲಿದೆ. ಬೆಂಗಳೂರಿನಲ್ಲಿ ಬಳಕೆಯಾಗಿ ಚರಂಡಿ ಸೇರಿದ ನೀರನ್ನು ಶುದ್ಧಗೊಳಿಸಿ ಕಾವೇರಿ ನದಿಗೆ ಮರಳಿ ಬಿಡಬೇಕು. ಆದರೆ ಕೆಸಿ ವ್ಯಾಲಿ ಯೋಜನೆ ಪೆನ್ನಾರ್ ನದಿ ಕಣಿವೆ ಪ್ರದೇಶದಲ್ಲಿದೆ. ಕೆ.ಸಿ ವ್ಯಾಲಿ ಯೋಜನೆಗೆ ಬೆಂಗಳೂರಿನ ಚರಂಡಿ ನೀರನ್ನು ಶುದ್ಧೀಕರಿಸಿ ಬಳಕೆ ಮಾಡಿಕೊಳ್ಳಲಾಗುತ್ತಿದೆ. ಎಂದು ಆರೋಪಿಸಿದ ತಮಿಳುನಾಡು ಈಗ ಕೆ.ಸಿ ವ್ಯಾಲಿಗೆ ನೀರು ಹರಿಸುವುದು ನದಿ ಕಣಿವೆ ಬದಲಾಯಿಸಿದಂತೆ. ಎತ್ತಿನಹೊಳೆ ಯೋಜನೆಗಾಗಿ ನಿರ್ಮಿಸಲು ಹೊರಟಿರುವ ಮಾರ್ಕೇಂಡೇಯ ಜಲಾಶಯ ಪೆನ್ನಾರ್ ನದಿ ನೈಸರ್ಗಿಕ ಹರಿವಿಗೆ ಧಕ್ಕೆ ಮಾಡಲಿದೆ. ಡ್ಯಾಂ ನಿರ್ಮಾಣದಿಂದ ತಮಿಳುನಾಡಿನ ಆರು ಜಿಲ್ಲೆಗೆ ತೊಂದರೆಯಾಗಲಿದೆ.

ಅಷ್ಟೇ ಅಲ್ಲದೆ ಕುಡಿಯುವ ನೀರಿನ ನೆಪದಲ್ಲಿ ಕೃಷಿ ನೀರಾವರಿಗೆ ಕರ್ನಾಟಕ ಯೋಜನೆ ರೂಪಿಸಿದೆ. ಕೆಳ ರಾಜ್ಯಗಳ ಒಪ್ಪಿಗೆ ಇಲ್ಲದೆ ಕೆ.ಸಿ ವ್ಯಾಲಿ ಸೇರಿ ಇನ್ನು ಯಾವ ಯೋಜನೆಗೂ ಅವಕಾಶ ನೀಡಬಾರದು ಎಂದು ಸುಪ್ರೀಂಕೋರ್ಟ್‌ಗೆ ಮನವಿ ಮಾಡಿದೆ. ಹೀಗೆ ಒಂದಿಲ್ಲದೊಂದು ತಗಾದೆ ತೆಗೆಯುತ್ತಿರುವ ತಮಿಳುನಾಡು. ಕೆ.ಸಿ ವ್ಯಾಲಿಗೆ ನೀರಿಗಾಗಿ ವಿವಾದ ಸೃಷ್ಟಿಸಲಿದೆ.

Also read: ಐದು ಸಾವಿರ ರೂಪಾಯಿಯಲ್ಲಿ ಗ್ಯಾಸ್ ಏಜನ್ಸಿ ಶುರು ಮಾಡಿದ್ದ ಬಿಸಿನೆಸ್ ಈಗ ನೂರಾರು ಕೋಟಿ ವ್ಯವಹಾರ ಮಾಡುವ ಬಿಸಿನೆಸ್ ಆಗಿ ಬೆಳೆದಿದೆ!!

ಈ ಹಿಂದೆ ಕೂಡ ಮೇಕೆದಾಟು ಅಣೆಕಟ್ಟೆನಿರ್ಮಾಣಕ್ಕೆ ಸಂಬಂಧಿಸಿದಂತೆ ಯೋಜನಾ ವರದಿ ತಯಾರಿಸದಂತೆ ಕರ್ನಾಟಕಕ್ಕೆ ಸೂಚಿಸಬೇಕೆಂದು ಸುಪ್ರೀಂ ಕೋರ್ಟ್‌ನಲ್ಲಿ ಕೋರಿದ್ದ ತಮಿಳುನಾಡು ಸರ್ಕಾರ, ಕೇಂದ್ರೀಯ ಜಲ ಆಯೋಗ, ಕರ್ನಾಟಕ ಸರ್ಕಾರ, ಕಾವೇರಿ ನೀರಾವರಿ ನಿಗಮದ ವಿರುದ್ಧ ಸರ್ವೋಚ್ಚ ನ್ಯಾಯಾಲಯದಲ್ಲಿ ನ್ಯಾಯಾಂಗ ನಿಂದನೆ ಅರ್ಜಿ ಸಲ್ಲಿಸಿತ್ತು. ಕಾವೇರಿ ಅಂತಿಮ ಐತೀರ್ಪು ಹಾಗೂ ಸುಪ್ರೀಂ ಕೋರ್ಟ್‌ ಆದೇಶಗಳಲ್ಲಿ, ನದಿ ಮೇಲ್ಪಾತ್ರದಲ್ಲಿರುವ ರಾಜ್ಯವಾದ ಕರ್ನಾಟಕವು ಕೆಳ ಪಾತ್ರದಲ್ಲಿರುವ ತಮಿಳುನಾಡಿನ ಹರಿಯುವ ನೀರಿಗೆ ಅಡ್ಡಿಯುಂಟು ಮಾಡಬಾರದು ಎಂದು ಸ್ಪಷ್ಟವಾಗಿ ಹೇಳಿದೆ. ಆದರೆ, ಮೇಕೆದಾಟು ಯೋಜನೆಯು ಈ ಆದೇಶದ ನಿಂದನೆಯಾಗಿದೆ’ ಎಂದು ಅರ್ಜಿಯಲ್ಲಿ ಸಲ್ಲಿಸಿತು ಈಗ ಮತ್ತೆ ಅದೇ ರೀತಿಯ ಮತ್ತೊಂದು ಕಿರಿಕ್ ಮಾಡಲು ಮುಂದಾಗಿದೆ.

ಏನಿದು ಮೇಕೆದಾಟು ಯೋಜನೆ?

ಬೆಂಗಳೂರಿನಿಂದ 90 ಕಿ.ಮೀ ದೂರದ ರಾಮನಗರ ಜಿಲ್ಲೆಯಲ್ಲಿರುವ ಸ್ಥಳವೇ ಮೇಕೆದಾಟು. ಕಾವೇರಿ ಮತ್ತು ಅರ್ಕಾವತಿ ನದಿಗಳ ಸಂಗಮ ಸ್ಥಳದಿಂದ 4 ಕಿಲೋಮೀಟರ್ ದೂರದಲ್ಲಿದೆ ಮೇಕೆದಾಟು. ಇಲ್ಲಿ ಕಾವೇರಿ ನದಿ ಮೇಕೆ ಹಾರಿ ದಾಟುವಷ್ಟು ಕಿರು ಜಾಗದಲ್ಲಿ ಹರಿದು ಆಳವಾದ ಕಂದಕಕ್ಕೆ ಧುಮುಕುತ್ತದೆ. ಇಲ್ಲಿಗೆ ಮೇಕೆದಾಟು ಎಂಬ ಹೆಸರು ಬಂದಿದೆ.